ಶೀಘ್ರದಲ್ಲೇ ಬಿಗ್ ಬಾಸ್ ಒಟಿಟಿ (Bigg Boss OTT) ಮುಗಿಯೋ ಹಂತಕ್ಕೆ ಬಂದಿದ್ದು, ಭಾರೀ ಕುತೂಹಲ ಕೆರಳಿಸಿದೆ. ಇನ್ನೊಂದು ವಾರ ಕಳೆದ್ರೆ ಬಿಗ್ಬಾಸ್ ಟಿವಿ ಸೀಸನ್ (Bigg Boss Tv Season) ಆರಂಭಗೊಳ್ಳಲಿದೆ. ಇದೀಗ ಬಿಗ್ ಬಾಸ್ ಒಟಿಟಿಯ 5ನೇ ವಾರದ ಎಲಿಮಿನೇಷನ್ ನಡೆದಿದ್ದು, ಬಿಗ್ ಬಾಸ್ ಮನೆಯಿಂದ ನಂದಿನಿ (Nandini) ಹೊರಗೆ ಹೋಗಿದ್ದಾರೆ. ಈ ಮೂಲಕ ಮನೆಯ ಸದಸ್ಯರ ಸಂಖ್ಯೆ ಮತ್ತಷ್ಟು ಕಡಿಮೆ ಆಗಿದೆ. ಇನ್ನು ಒಂದೇ ವಾರ (One week) ಇರೋದ್ರಿಂದ ಮುಂದೆ ಸ್ಪರ್ಧೆ ಮತ್ತಷ್ಟು ಕಠಿಣ ಆಗಲಿದೆ.
ವಾರದ ಕಥೆ ಕಿಚ್ಚನ ಜೊತೆ
ಪ್ರತಿ ವಾರ ನಡೆಯೋ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಎಲ್ಲರ ಕುತೂಹಲ ಇರೋದು ಈ ವಾರ ಯಾರಿ ಎಲಿಮಿನೇಟ್ ಆಗುವವರ ಅನ್ನೋ ಬಗ್ಗೆ. ಅದರಲ್ಲೂ ಕೊನೆಯ ವಾರ ಸಮೀಪಿಸಿದಾಗ ಯಾರು ಮನೆಯಿಂದ ಹೊರಹೋಗುತ್ತಾರೆ ಎಂದು ನೋಡಲು ಜನರು ಕಾಯ್ತಿರುತ್ತಾರೆ. ಎಲ್ಲರೂ ಸ್ಟ್ರಾಂಗ್ ಸ್ಪರ್ಧಿಗಳೇ ಆದ ಕಾರಣ ಯಾರೇ ಹೊರ ಹೋದರು ಮನೆಯವರಿಗೆ ಹಾಗೂ ವೀಕ್ಷಕರಿಗೆ ಬೇಸರ ಆಗುತ್ತದೆ. ಆದರೂ ಎಲಿಮಿನೇಷನ್ ಆಗಲೇಬೇಕು. ಶೋ ಮುಂದೆ ಸಾಗಲೇಬೇಕು. ಅದರಂತೆ ಐದನೇ ವಾರದ ಎಲಿಮಿನೇಷನ್ ಆಗಿದೆ.
ಕಡಿಮೆ ವೋಟ್ ಪಡೆದು ನಂದಿನಿ ಔಟ್
ಫಿನಾಲೆ ವೀಕ್ಗೆ ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ಈ ಮೊದಲೇ ಹೋಗಿದ್ದರು. ಉಳಿದಂತೆ ಆರ್ಯವರ್ಧನ್ ಗುರೂಜಿ, ಜಶ್ವಂತ್ ಬೋಪಣ್ಣ, ಸೋನು ಶ್ರೀನಿವಾಸ್ ಗೌಡ, ಜಯಶ್ರೀ ಆರಾಧ್ಯ, ಸೋಮಣ್ಣ ಮಾಚಿಮಾಡ ಹಾಗೂ ನಂದಿನಿ ನಾಮಿನೇಷನ್ ಲಿಸ್ಟ್ನಲ್ಲಿ ಇದ್ದರು. ಈ ಪೈಕಿ ಆರ್ಯವರ್ಧನ್ ಮೊದಲು ಸೇವ್ ಆದರು. ಸೋಮಣ್ಣ, ಸೋನು, ಜಯಶ್ರೀ, ಸೋಮಣ್ಣ ನಂತರ ಸೇವ್ ಆದರು. ಕಡಿಮೆ ವೋಟ್ ಪಡೆದು ನಂದಿನಿ ಔಟ್ ಆಗಿದ್ದಾರೆ.
ಲವ್ ಬರ್ಡ್ಸ್ ದೂರ ದೂರ
ಜಶ್ವಂತ್ ಹಾಗೂ ನಂದಿನಿ ನಿಜ ಜೀವನದಲ್ಲಿ ಲವರ್ಸ್. ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಹುಟ್ಟಿದ ಉದಾಹರಣೆ ಇದೆ. ಆದರೆ, ಈ ಬಾರಿ ಲವರ್ಸ್ ಅನ್ನೇ ಮನೆ ಒಳಗೆ ಕಳುಹಿಸಲಾಗಿತ್ತು. ಜಶ್ವಂತ್ ಬಗ್ಗೆ ನಂದಿನಿಗೆ ಸಾಕಷ್ಟು ಪೊಸೆಸಿವ್ನೆಸ್ ಇತ್ತು. ಇದು ಜಶ್ವಂತ್ ಆಟದ ಮೇಲೆ ಪ್ರಭಾವ ಬೀರುತ್ತಲೇ ಇತ್ತು. ನಾನು ಈ ವಾರ ಮನೆಯಿಂದ ಹೊರ ಹೋಗುತ್ತೇನೆ ಎಂದು ನಂದಿನಿ ಈ ವಾರ ಅನೇಕ ಬಾರಿ ಹೇಳಿಕೊಂಡಿದ್ದರು. ಈ ಕಾರಣದಿಂದಲೂ ಅವರು ಔಟ್ ಆಗಿದ್ದಾರೆ. ಈ ಮೂಲಕ ರೂಪೇಶ್, ಸಾನ್ಯಾ, ರಾಕೇಶ್, ಸೋಮಣ್ಣ, ಆರ್ಯವರ್ಧನ್, ಜಯಶ್ರೀ, ಸೋನು, ಜಶ್ವಂತ್ ಫಿನಾಲೆ ವೀಕ್ ತಲುಪಿದ್ದಾರೆ.
ಟಿವಿಯಲ್ಲಿ ಬರಲಿದೆ ಬಿಗ್ ಬಾಸ್ ಸೀಸನ್ 9
ಬಿಗ್ಬಾಸ್ ಸೀಸನ್ ಒಂಭತ್ತು (Bigg Boss Session 9) ನೋಡಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಓಟಿಟಿಯಲ್ಲಿ ಭಾರೀ ಜನಪ್ರಿಯರಾಗಿರೋ ಬಿಗ್ ಬಾಸ್ ಮುಕ್ತಾಯಗೊಳ್ಳಲು ಇನ್ನೂ ಎರಡು ವಾರ ಬಾಕಿ ಇದೆ. ಕಲರ್ಸ್ ಕನ್ನಡ ವಾಹಿನಿ (Colours Kannada) ಪ್ರೇಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಅತಿ ಶೀಘ್ರದಲ್ಲೇ ನಿಮ್ಮ ಟಿವಿ ಪರದೆ ಮೇಲೆ ಪ್ರೇಕ್ಷಕರು ಬಿಗ್ ಬಾಸ್ ಹೊಸ ಸೀಸನ್ ನೋಡಬಹುದಾಗಿದೆ. ಓಟಿಟಿಯಲ್ಲಿ (OTT) ಎಲ್ಲರೂ ಬಿಗ್ ಬಾಸ್ ಸೀಸನ್ ನೋಡಲು ಸಾಧ್ಯವಾಗಿಲ್ಲ. ಇದೀಗ ನಿಮ್ಮ ಮನೆಯ ಟಿವಿ ಪರದೆ ಮೇಲೆಯೇ ಸಖತ್ ಮನರಂಜನೆ (Entertainment) ಸಿಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ