• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Nandamuri Taraka Ratna: ನಂದಮೂರಿ ತಾರಕ ರತ್ನ ಬೆಂಗಳೂರಿಗೆ ಶಿಫ್ಟ್, 40 ಕಾರಿನಲ್ಲಿ ಬಂದ್ರು ಕುಟುಂಬಸ್ಥರು

Nandamuri Taraka Ratna: ನಂದಮೂರಿ ತಾರಕ ರತ್ನ ಬೆಂಗಳೂರಿಗೆ ಶಿಫ್ಟ್, 40 ಕಾರಿನಲ್ಲಿ ಬಂದ್ರು ಕುಟುಂಬಸ್ಥರು

ತಾರಕ ರತ್ನ

ತಾರಕ ರತ್ನ

ತಾರಕ ರತ್ನ ಅವರನ್ನು ಬೆಂಗಳೂರಿನ ಬೊಮ್ಮಸಂದ್ರದ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಮಧ್ಯರಾತ್ರಿ 2 ಗಂಟೆಗೆ ಅವರನ್ನು ಕರೆತರಲಾಗಿದೆ. ಆ್ಯಂಬ್ಯುಲೆನ್ಸ್ ಜೊತೆಗೆ ನಲುವತ್ತು ಕಾರುಗಳಲ್ಲಿ ನಂದಮೂರಿ ತಾರಕ ರತ್ನ ಕುಟುಂಬವೂ ಆಗಮಿಸಿದೆ.

  • News18 Kannada
  • 4-MIN READ
  • Last Updated :
  • Bangalore, India
  • Share this:

ಬೆಂಗಳೂರು(ಜ.28): ರಾಜಕೀಯ ಪಾದಯಾತ್ರೆ ವೇಳೆ ಚಿತ್ರನಟ (Actor) ನಂದಮೂರಿ ತಾರಕರತ್ನ (Nandamuri Taraka Ratna) ಅವರಿಗೆ ಹೃದಯಾಘಾತ (Heart Attack) ಸಂಭವಿಸಿದ್ದು ಈಗ ಅವರನ್ನು ಬೆಂಗಳೂರಿಗೆ (Bengaluru) ಶಿಫ್ಟ್ ಮಾಡಲಾಗಿದೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆ್ಯಂಬ್ಯುಲೆನ್ಸ್ (Ambulance) ಮೂಲಕ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದ್ದು ಕುಪ್ಪಂ ನಿಂದ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಕರೆತಂದಿದ್ದಾರೆ. ಬೆಂಗಳೂರಿನ ಬೊಮ್ಮಸಂದ್ರದ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಮಧ್ಯರಾತ್ರಿ 2 ಗಂಟೆಗೆ ಅವರನ್ನು ಕರೆತರಲಾಗಿದೆ. ಆ್ಯಂಬ್ಯುಲೆನ್ಸ್ ಜೊತೆಗೆ ನಲುವತ್ತು ಕಾರುಗಳಲ್ಲಿ ನಂದಮೂರಿ ತಾರಕ ರತ್ನ ಕುಟುಂಬವೂ ಆಗಮಿಸಿದೆ.


ನಾರಾಯಣ ಹೃದಯಾಲಯದ ಐಸಿಯುನಲ್ಲಿ ತಾರಕ ರತ್ನಗೆ ಚಿಕಿತ್ಸೆ ನೀಡಲಾಗಿದೆ. ನಾರಾಯಣ ಹೃದಯಾಲಯ ಆಸ್ಪತ್ರೆ ಐಸಿಯು ನಲ್ಲಿ ನಂದಮೂರಿ ತಾರಕರತ್ನಗೆ ಚಿಕಿತ್ಸೆ ಮುಂದುವರಿದಿದೆ.




ಆರ್‌ಆರ್‌ಆರ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಅವರ ಸೋದರ ಸಂಬಂಧಿಯೂ ಆಗಿರುವ ನಟ ನಂದಮೂರಿ ತಾರಕ ರತ್ನ ಅವರು ಶುಕ್ರವಾರ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ರಾಜಕೀಯ ಪಾದಯಾತ್ರೆಯ ವೇಳೆ ಕುಸಿದುಬಿದ್ದಿದ್ದರು. ಅವರಿಗೆ ಹೃದಯಾಘಾತವಾಗಿದ್ದು ತಕ್ಷಣದ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು.


ಮಾಜಿ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಅವರು ಆರಂಭಿಸಿದ ರಾಜಕೀಯ ರ್ಯಾಲಿಯಲ್ಲಿ ರತ್ನಾ ಭಾಗವಹಿಸಿದ್ದರು. ನಂದಮೂರಿ ತಾರಕ ರತ್ನ ಅವರು ಲಕ್ಷ್ಮಿಪುರಂ ಶ್ರೀ ವರದರಾಜ ಸ್ವಾಮಿ ದೇವಸ್ಥಾನದಲ್ಲಿ ಪೂಜೆಯಲ್ಲಿ ಪಾಲ್ಗೊಂಡರು.


ನಂತರ ಅವರು ಮಸೀದಿಯಲ್ಲಿ ಪ್ರಾರ್ಥನೆಯನ್ನೂ ಮಾಡಿದ್ದರು. ಮಸೀದಿಯಿಂದ ಹೊರಬರುವ ವೇಳೆ ಕುಸಿದು ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಿದ ವಿಡಿಯೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿವೆ.


ಇದನ್ನೂ ಓದಿ: Nandamuri Taraka Ratna: ನಂದಮೂರಿ ತಾರಕ ರತ್ನಗೆ ಹೃದಯಾಘಾತ! ಪಾದಯಾತ್ರೆ ವೇಳೆ ಕುಸಿದು ಬಿದ್ದ ನಟ ತೀವ್ರ ಅಸ್ವಸ್ಥ


ನಂದಮೂರಿ ಬಾಲಕೃಷ್ಣ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಅವರು ಪ್ರಥಮ ಚಿಕಿತ್ಸೆ ನೀಡಲಾಗಿದೆ. ಅವರಿಗೆ ಸಾಧ್ಯವಾದಷ್ಟು ಕಾಳಜಿ ವಹಿಸಿದ್ದಾರೆ. ಚಿಂತೆ ಮಾಡಲು ಏನೂ ಇಲ್ಲ. ವೈದ್ಯರು ಕೂಡ ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ ಎಂದಿದ್ದರು.


ರತ್ನ ಅವರು ಪ್ರಸ್ತುತ ಐಸಿಯುನಲ್ಲಿದ್ದಾರೆ ಎಂದು ವರದಿ ತಿಳಿಸಿದೆ. ರತ್ನ ಅವರು ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ತಾರಕ ರತ್ನ ಅವರಿಗೆ ಆಂಜಿಯೋಗ್ರಾಮ್ ಮಾಡಿ ಹೃದಯಕ್ಕೆ ಸ್ಟೆಂಟ್ ಹಾಕಲಾಗಿದೆ ಎಂದು ವರದಿಯಾಗಿದೆ. ಅಗತ್ಯವಿದ್ದರೆ ಚಾಪರ್ ಮೂಲಕ ಬೆಂಗಳೂರಿಗೆ ಸ್ಥಳಾಂತರಿಸಲಾಗುವುದು ಎನ್ನಲಾಗಿತ್ತು.


39 ವರ್ಷ ವಯಸ್ಸಿನ ನಟ 2002 ರ ತೆಲುಗು ಸಿನಿಮಾ ಒಕಾಟೊ ನಂಬರ್ ಕುರ್ರಾಡು ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಅವರು ತಾರಕ್, ಭದ್ರಿ ರಾಮುಡು, ಮನಮಂತ ಮತ್ತು ರಾಜಾ ಚೆಯ್ಯಿ ವೇಷದಂತಹ ಸಿನಿಮಾಗಳ ಮೂಲಕ ಫೇಮಸ್ ಆದರು. ಅವರು ಇತ್ತೀಚೆಗೆ ಡಿಸ್ನಿ+ ಹಾಟ್‌ಸ್ಟಾರ್‌ನ ತೆಲುಗು ವೆಬ್ ಸಿರೀಸ್ 9 ಅವರ್ಸ್‌ನಲ್ಲಿ ಕಾಣಿಸಿಕೊಂಡರು.

Published by:Divya D
First published: