• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Balayya-Rashmika: ಕೊಡಗಿನ ಕುವರಿಗೆ ಕನ್ನಡದಲ್ಲೇ ಕವನ ಹೇಳಿದ ಬಾಲಯ್ಯ: ವ್ಹಾವ್​.. ಎಷ್ಟು ಚೆಂದ ನಂದಮೂರಿ ಬಾಲಕೃಷ್ಣ!

Balayya-Rashmika: ಕೊಡಗಿನ ಕುವರಿಗೆ ಕನ್ನಡದಲ್ಲೇ ಕವನ ಹೇಳಿದ ಬಾಲಯ್ಯ: ವ್ಹಾವ್​.. ಎಷ್ಟು ಚೆಂದ ನಂದಮೂರಿ ಬಾಲಕೃಷ್ಣ!

ರಶ್ಕಿಕಾ ಮಂದಣ್ಣ, ಬಾಲಯ್ಯ

ರಶ್ಕಿಕಾ ಮಂದಣ್ಣ, ಬಾಲಯ್ಯ

ರಶ್ಮಿಕಾಗಾಗಿ ಬಾಲಯ್ಯ ಕನ್ನಡದಲ್ಲಿ ಕವನ ಹೇಳಿದ್ದು ವಿಶೇಷವಾಗಿತ್ತು. ಇಷ್ಟು ಸೂಪರ್​ ಆಗಿ ಕನ್ನಡದಲ್ಲಿ ಬಾಲಯ್ಯ ಕವನ ಹೇಳಿದ್ದನ್ನು ಕೇಳಿ ಕನ್ನಡಿಗರು ಫುಲ್​ ದಿಲ್​ಖುಷ್​ ಆಗಿದ್ದಾರೆ. ರಶ್ಮಿಕಾ ಅವರೇ ನೋಡಿ ಅವರು ಹೇಗೆ ಕನ್ನಡ ಹೇಗೆ ಮಾತನಾಡುತ್ತಿದ್ದಾರೆ. ನೋಡಿ ಕಲಿತುಕೊಳ್ಳಿ ಎಂದು ರಶ್ಮಿಕಾ ಅವರ ಕಾಲೆಳೆದಿದ್ದಾರೆ.

ಮುಂದೆ ಓದಿ ...
  • Share this:

ಕರುನಾಡ ಕ್ರಶ್​, ಕಿರಿಕ್​ ಬೆಡಗಿ ರಶ್ಮಿಕಾ ಮಂದಣ್ಣ(Rashmika Mandanna) ಅವರ ರೇಂಜ್ (Range)​ ಈಗ ಬದಲಾಗಿದೆ. ಕಿರಿಕ್​ ಪಾರ್ಟಿ (Kirik Party) ಸಿನಿಮಾ ಮೂಲಕ ತೆರೆಗೆ ಬಂದ ನಟಿ ರಶ್ಮಿಕಾ, ಈಗ ಭಾರತದ ಟಾಪ್​ ಹೀರೋಯಿನ್ (Top Heroin)​ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ದೊಡ್ಡ ದೊಡ್ಡ ಹೆಸರಾಂತ ನಟಿಯರಿಗೆ ಸೆಡ್ಡು ಹೊಡೆದು, ತಮ್ಮ ಸ್ಥಾನವನ್ನು ಬಿಗಿ ಪಡಿಸಿಕೊಂಡಿದ್ದಾರೆ. ಕರುನಾಡ ಕ್ರಶ್​ ಆಗಿದ್ದ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್​ ಕ್ರಶ್ (National Crush)​. ಈಕೆ ಸಿನಿಮಾ ಮಾಡಲು ನಿರ್ಮಾಪಕರು ತಾ ಮುಂದೆ.. ನಾ ಮುಂದೆ ಎಂದು ಕ್ಯೂನಲ್ಲಿ ಕಾಯುತ್ತಿದ್ದಾರಂತೆ. ಕೆಲವು ದಿನಗಳ ಹಿಂದೆ ತಮ್ಮ 'ಆರ್‌ಆರ್‌ಆರ್‌'(RRR)  ಸಿನಿಮಾದ ಪ್ರಚಾರಕ್ಕೆ ಬೆಂಗಳೂರಿಗೆ ನಂದಿದ್ದ ನಟ ಜೂ ಎನ್‌ಟಿಆರ್ ಸಂದರ್ಶನದಲ್ಲಿ ಕನ್ನಡದಲ್ಲಿಯೇ ಮಾತನಾಡಿ ಗಮನ ಸೆಳೆದರು. ಈಗ ಅವರ ಚಿಕ್ಕಪ್ಪ ನಂದಮೂರಿ ಬಾಲಕೃಷ್ಣ(Nandamuri Balakrishna) ಕನ್ನಡ ಮಾತನಾಡಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇದೀಗ ತೆಲುಗು ಶೋನಲ್ಲೇ ಲೆಜೆಂಡ್(Legend Balayya)​ ಬಾಲಯ್ಯ ರಶ್ಮಿಕಾ ಮಂದಣ್ಣ ಅವರಿಗೆ ಕನ್ನಡದಲ್ಲೇ ಕವನ ಹೇಳಿ ವೆಲ್​ಕಮ್​ ಮಾಡಿದ್ದಾರೆ. ಇದು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. 


‘ಅನ್​ಸ್ಟಾಪೆಬಲ್​ ಬಾಲಯ್ಯ’ ಶೋಗೆ ಬಂದಿದ್ದ ‘ಪುಷ್ಪ’ ತಂಡ!


ನಂದಮೂರಿ ಬಾಲಕೃಷ್ಣ ಇದೇ ಮೊದಲ ಬಾರಿಗೆ ಆಹಾ ಒಟಿಟಿಗೆ ಟಾಕ್ ಶೋ ಒಂದರ ನಿರೂಪಕರಾಗಿದ್ದಾರೆ. ಶೋನ ಹೆಸರು 'ಅನ್‌ಸ್ಟಾಪೆಬಲ್ ಬಾಲಯ್ಯ'. ಈ ಶೋಗೆ ತೆಲುಗು ಚಿತ್ರರಂಗದ ಗಣ್ಯರು, ಸಿನಿಮಾ ನಟರು, ನಟಿಯರು ಆಗಮಿಸಿ ಬಾಲಕೃಷ್ಣ ಜೊತೆ ಮಾತುಕತೆ ಜೊತೆಗೆ ಆಟಗಳನ್ನು ಆಡಿ ತೆರಳುತ್ತಾರೆ. ಈ ಬಾರಿ ಬಾಲಯ್ಯ ಟಾಕ್‌ಶೋಗೆ ಕನ್ನಡತಿ ರಶ್ಮಿಕಾ ಆಗಮಿಸಿದ್ದರು. ಈ ಸಮಯ ರಶ್ಮಿಕಾಗಾಗಿ ಬಾಲಯ್ಯ ಕನ್ನಡದಲ್ಲಿ ಕವನ ಹೇಳಿದ್ದು ವಿಶೇಷವಾಗಿತ್ತು. ಇಷ್ಟು ಸೂಪರ್​ ಆಗಿ ಕನ್ನಡದಲ್ಲಿ ಬಾಲಯ್ಯ ಕವನ ಹೇಳಿದ್ದನ್ನು ಕೇಳಿ ಕನ್ನಡಿಗರು ಫುಲ್​ ದಿಲ್​ಖುಷ್​ ಆಗಿದ್ದಾರೆ. ರಶ್ಮಿಕಾ ಅವರೇ ನೋಡಿ ಅವರು ಹೇಗೆ ಕನ್ನಡ ಹೇಗೆ ಮಾತನಾಡುತ್ತಿದ್ದಾರೆ. ನೋಡಿ ಕಲಿತುಕೊಳ್ಳಿ ಎಂದು ರಶ್ಮಿಕಾ ಅವರ ಕಾಲೆಳೆದಿದ್ದಾರೆ.


ಇದನ್ನು ಓದಿ: ನಿರೂಪಕಿ ಅನುಪಮಾ ಗೌಡ ವರ್ಕೌಟ್​ ಟಿಪ್ಸ್​! ಪ್ರತಿದಿನ ಇವ್ರು ಏನೆಲ್ಲಾ ಮಾಡ್ತಾರೆ ನೋಡಿ..


ಬಾಲಕೃಷ್ಣ ಕನ್ನಡ ಕವನ ಸಖತ್​ ಸೂಪರ್​!


‘ಚೆಲುವಲ್ಲಿ ಬೇಲೂರ ಬಾಲೆ, ಮನಸಲ್ಲಿ ಮೈಸೂರು ಮಲ್ಲೆ, ನುಡಿಯಲ್ಲಿ ಕಸ್ತೂರಿ, ನಡೆಯಲ್ಲಿ ಕಾವೇರಿ, ಸೊಬಗಲ್ಲಿ ಮಡಿಕೇರಿ, ನಾಟ್ಯದಲ್ಲಿ ಮಯೂರಿ, ಕೊಡಗಿನ ಬೆಡಗಿ, ಕರ್ನಾಟಕದ ಹುಡುಗಿ'' ಎಂದು ರಶ್ಮಿಕಾ ಮಂದಣ್ಣಗೆ ಕವನ ಹೇಳಿದ್ದಾರೆ ಬಾಲಕೃಷ್ಣ. ಬಾಲಯ್ಯ ಕನ್ನಡದಲ್ಲಿ ಕವನ ಹೇಳಿದ್ದನ್ನು ಕೇಳಿ, ರಶ್ಮಿಕಾ ಮಂದಣ್ಣ ಅವರ ಕೆನ್ನೆ ಕೆಂಪಾಗಿತ್ತು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಮತ್ತೊಂದೆಡೆ ಈ ವಿಡಿಯೋ ಇಟ್ಟುಕೊಂಡು ಸೋಷಿಯಲ್​ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಟ್ರೋಲ್​ ಮಾಡಲಾಗುತ್ತಿದೆ.


ಇದನ್ನು ಓದಿ : ಅಪ್ಪು ಹೇಳಿದ್ದನ್ನೇ ಸ್ಪೂರ್ತಿಯಾಗಿ ತೆಗೆದುಕೊಂಡ ಈ ನಿರ್ದೇಶಕ ಮಾಡಿದ್ದೇನು ಗೊತ್ತಾ? ನೀವೇ ನೋಡಿ...


ಕನ್ನಡ ಮಾತನಾಡಿದ ವಿಡಿಯೋ ಸೇರಿಸಿ ಟ್ರೋಲ್​!


ಈ ಹಿಂದೆ ರಶ್ಮಿಕಾ, ತಮಗೆ ಕನ್ನಡ ಸರಿಯಾಗಿ ಬರುವುದಿಲ್ಲವೆಂದು ಮಾಧ್ಯಮಗಳ ಬಳಿ ಹೇಳಿದ್ದಾಗ ಜೂ.ಎನ್‌ಟಿಆರ್, ಬಾಲಕೃಷ್ಣ, ತಮಿಳಿನ ವಿಶಾಲ್, ಮೆಗಾಸ್ಟಾರ್ ಚಿರಂಜೀವಿ, ನಟ ಅಮಿತಾಬ್ ಬಚ್ಚನ್ ಅವರುಗಳು ಕರ್ನಾಟಕಕ್ಕೆ ಬಂದಾಗ ಕನ್ನಡ ಮಾತನಾಡುತ್ತಿದ್ದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಇವರನ್ನು ನೋಡಿ ರಶ್ಮಿಕಾ ಕಲಿಯಬೇಕೆಂದು ಹೇಳಿ ಟ್ರೋಲ್ ಮಾಡಲಾಗಿತ್ತು. ಈಗ ಬಾಲಕೃಷ್ಣ ತೆಲುಗಿನ ಕಾರ್ಯಕ್ರಮದಲ್ಲಿ ಕನ್ನಡ ಮಾತನಾಡಿ ರಶ್ಮಿಕಾಗೆ ನೇರ ಉದಾಹರಣೆಯನ್ನು ನೀಡಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಟಿ ಆಲಿಯಾ ಭಟ್​ ಕೂಡ ಕನ್ನಡದಲ್ಲಿ​ ಬ್ರಹ್ಮಾಸ್ತ್ರ ಬಗ್ಗೆ ಟ್ವೀಟ್ ಮಾಡಿದ್ದರು.

top videos
    First published: