ಟಾಲಿವುಡ್’ನ (Tollywood) ಹಿರಿಯ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಅಭಿನಯದ ಅಖಂಡ (Akhanda) ಸಿನಿಮಾ ರಿಲೀಸ್ ಆಗಿ ಹೊಸ ದಾಖಲೆಯನ್ನು ಬರೆದಿತ್ತು. ಹಿಂದೆಂದು ಮಾಡಿರದ ಪಾತ್ರದಲ್ಲಿ ನಟ ನಂದಮೂರಿ ಬಾಲಕೃಷ್ಣ ನಟಿಸಿದ್ದರು. ಕೊರೊನಾದಿಂದ ಕಂಗೆಟ್ಟಿದ್ದ ತೆಲುಗು ಚಿತ್ರರಂಗಕ್ಕೆ ಬಾಲಯ್ಯ ಹೊಸ ಹುರುಪು ನೀಡಿದ್ದರು. ಬೋಯಪಾಟಿ ಶ್ರೀನು (Boyapati Srinu) ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಬಾಲಯ್ಯ ಸಖತ್ ಸ್ಟಂಟ್ ಮಾಡಿದ್ದರು. ಅಘೋರಿ ಗೆಟಪ್’ನಲ್ಲಿ ಕಾಣಿಸಿಕೊಂಡಿದ್ದ ಬಾಲಕೃಷ್ಣ, ತಮ್ಮ ಅಭಿನಯದಿಂದ, ಖಡಕ್ ಡೈಲಾಗ್’ನಿಂದಲೇ ಅಭಿಮಾನಿಗಳಿಗೆ ಮೋಡಿ ಮಾಡಿದ್ದರು. ಕಲೆಕ್ಷನ್ ವಿಚಾರದಲ್ಲೂ ಸಿನಿಮಾ ಸೌಂಡ್ ಮಾಡಿತ್ತು. ಇದೀಗ ಈ ಸಿನಿಮಾ ಟೆಲಿವಿಶನ್ನಲ್ಲಿ ಬರುತ್ತಿದೆ. ಅದೂ ಕನ್ನಡದಲ್ಲೇ ಬರ್ತಿದೆ. ಯಾವಾಗ? ಎಲ್ಲಿ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೆಲ್ಸ್.
ಸ್ಟಾರ್ ಸುವರ್ಣದಲ್ಲಿ ಬರ್ತಿದೆ 'ಅಖಂಡ' ಕನ್ನಡ ವರ್ಶನ್!
ಸ್ಟಾರ್ ಸುವರ್ಣ ವಾಹಿನಿಯಲ್ಲಿ ನಂದಮೂರಿ ಬಾಲಕೃಷ್ಣ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ 'ಅಖಂಡ' ಪ್ರಸಾರವಾಗುತ್ತಿದೆ. ಪ್ರಗ್ಯಾ ಜೈಸ್ವಾಲ್, ಜಗಪತಿ ಬಾಬು, ಶ್ರೀಕಾಂತ್ ಮೊದಲಾದ ದೊಡ್ಡ ತಾರಾಗಣವಿರುವ ಅಖಂಡ ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ ದ್ವಿಪಾತ್ರದಲ್ಲಿ ಅಭಿನಯಿಸಿರುವುದು ವಿಶೇಷ. ಎಸ್.ತಮನ್ ಅಖಂಡ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ , ಮೇ. 15ರಂದು ಸಂಜೆ 5.30ಕ್ಕೆ ಪ್ರಸಾರವಾಗಲಿದೆ. ಕನ್ನಡದಲ್ಲೇ ಅಖಂಡ ಸಿನಿಮಾ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.
200 ಕೋಟಿ ಕ್ಲಬ್ ಸೇರಿದ್ದ ಬಾಲಯ್ಯನ ಮೊದಲ ಸಿನಿಮಾ!
ಡಿಸೆಂಬರ್ 2ರಂದು ಹೈದ್ರಾಬಾದ್ ಸೇರಿದಂತೆ ಭಾರತದ ಪ್ರಮುಖ ನಗರಗಳು ಹಾಗೂ ವರ್ಲ್ಡ್ ವೈಡ್ ಸಿನಿಮಾ ರಿಲೀಸ್ ಆಗಿತ್ತು. ಮೊದಲ ದಿನದಿಂದಲೇ ಬಾಕ್ಸ್ ಆಫೀಸ್’ನಲ್ಲಿ ಅಖಂಡ ಕಮಾಲ್ ಮಾಡಿತ್ತು. ಮೊದಲ ದಿನವೇ 15.39 ಕೋಟಿ ಕಲೆಕ್ಷನ್ ಮಾಡಿತ್ತು. ಆಗಿನಿಂದಲೂ ಗಲ್ಲಾಪೆಟ್ಟಿಗೆಯಲ್ಲಿ ಅಖಂಡ ಧೂಳೆಬ್ಬಿಸುತ್ತಲೇ ಇದ್ದಾನೆ. ಇದೀಗ 50ನೇ ದಿನಕ್ಕೆ ಕಾಲಿಟ್ಟಿದ್ದು, ಸಿನಿಮಾ 200 ಕೋಟಿ ಕ್ಲಬ್ ಸೇರಿತ್ತು. 2022ರಲ್ಲಿ ವಿದೇಶದಲ್ಲಿ ಹೆಚ್ಚು ಗಳಿಕೆ ಮಾಡಿದ ತೆಲುಗು ಸಿನಿಮಾ ಎಂಬ ಖ್ಯಾತಿ ಅಖಂಡನ ಮುಡಿಗೇರಿಸಿಕೊಂಡಿದೆ.
ಇದನ್ನೂ ಓದಿ: ಮಹೇಶ್ ಸಿನಿಮಾ ನೋಡಿ ಅಯ್ಯೋ, ಹಿಂಗಾಗೋಯ್ತಲ್ಲ ಎಂದ ಫ್ಯಾನ್ಸ್! ಮೊದಲ ದಿನವೇ ಇಷ್ಟೊಂದು ಹಣನಾ?
ಅಖಂಡನ ಆರ್ಭಟಕ್ಕೆ ಶೇಕ್ ಆಗಿದ್ದ ಬಾಕ್ಸಾಫೀಸ್!
ಬರೀ Action ಪ್ರಿಯರಷ್ಟೇ ಅಲ್ಲದೇ ಎಲ್ಲಾ ವರ್ಗದ ಜನರೂ ಅಖಂಡಕ್ಕೆ ಮನಸೋತಿದ್ದರು. ಪ್ರಾರಂಭದಲ್ಲಿ ಸಾಹಸಪ್ರಿಯರು ಹಾಗೂ ಬಾಲಯ್ಯ ಅಭಿಮಾನಿಗಳನ್ನು ಆಕರ್ಷಿಸಿತ್ತು. ಬಳಿಕ ದಿನ ಕಳೆದಂತೆ ಫ್ಯಾಮಿಲಿ ಆಡಿಯನ್ಸ್’ಗೂ ಸಿನಿಮಾ ಇಷ್ಟವಾಯ್ತು. ಖುದ್ದು ಅಘೋರಿಗಳೇ ಬಂದು ಸಿನಿಮಾ ನೋಡಿದ್ದಾರೆ ಎನ್ನುವುದು ‘ಅಖಂಡ’ದ ಹೆಗ್ಗಳಿಕೆ. ಇನ್ನು ಬಾಲಯ್ಯ ಅಖಂಡನಾಗಿ ಇಡೀ ಚಿತ್ರದ ತುಂಬಾ ಆವರಿಸಿಕೊಂಡಿದ್ದಾರೆ. ಇವರಿಗೆ ಜೋಡಿಯಾಗಿ ಪ್ರಜ್ಞಾ ಜೈಸ್ವಾಲ್ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಜಗಪತಿಬಾಬು, ಶ್ರೀಕಾಂತ್ ಪ್ರಮುಖ ಪಾತ್ರದಲ್ಲಿದ್ದಾರೆ.
ಇದನ್ನೂ ಓದಿ: ಮನೆಯಲ್ಲೇ ಕೂತು ನೋಡಿ 'ಆರ್ಆರ್ಆರ್'! ತಾರಕ್ ಹುಟ್ಟುಹಬ್ಬದ ದಿನವೇ ಒಟಿಟಿಗೆ ಎಂಟ್ರಿ
ಯುಎಸ್ನಲ್ಲೂ ಅಬ್ಬರಿಸಿದ್ದ 'ಅಖಂಡ'!
ಅಮೆರಿಕದಲ್ಲೂ ಬಾಕ್ಸಾಫೀಸ್‌ನಲ್ಲೂ ಬಾಲಣ್ಣನ 'ಅಖಂಡ' ಭರ್ಜರಿ ಕಲೆಕ್ಷನ್ ಮಾಡಿತ್ತು. ಬಾಲಣ್ಣನ ಸಿನಿಮಾ ವಿದೇಶದಲ್ಲಿ ಈ ಮಟ್ಟಿಗೆ ಪ್ರತಿಕ್ರಿಯೆ ಸಿಕ್ಕಿದ್ದು ಇದೇ ಮೊದಲು. 2021ರಲ್ಲಿ ಅಮೆರಿಕದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ತೆಲುಗು ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಯುಸ್‌ನಲ್ಲಿ 'ಅಖಂಡ' ಮೊದಲ ದಿನ ಗಳಿಸಿದ್ದು ಬರೋಬ್ಬರಿ 3.24 ಕೋಟಿ ಎನ್ನಲಾಗಿತ್ತು. ಇದೀಗ ಈ ಸಿನಿಮಾ ಟಿವಿಯಲ್ಲಿ ಬರ್ತಿದೆ. ಈ ಸಿನಿಮಾ ನೋಡಲು ಬಾಲಯ್ಯನನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ