Nandamuri Balakrishna-AR Rahman: ಎ.ಆರ್​. ರೆಹಮಾನ್​ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ನಟ ಬಾಲಕೃಷ್ಣ

ಎ.ಆರ್​. ರೆಹಮಾನ್​ ಹಾಗೂ ಬಾಲಕೃಷ್ಣ

ಎ.ಆರ್​. ರೆಹಮಾನ್​ ಹಾಗೂ ಬಾಲಕೃಷ್ಣ

Nandamuri Balakrishna-AR Rahman: ನಂದಮುರಿ ಬಾಲಕೃಷ್ಣ (Nandamuri Balakrishna) ಅವರ ಅಭಿನಯದ 1998ರಲ್ಲಿ ತೆರೆಕಂಡಿರುವ ನಿಪ್ಪು ರವ್ವ ಸಿನಿಮಾಗೆ ಎ. ಆರ್ ರೆಹಮಾನ್ (AR Rahman)​ ಅವರೇ ಹಿನ್ನಲೆ ಸಂಗೀತ ನೀಡಿದ್ದಾರೆ. ಇನ್ನು ಬಾಲಕೃಷ್ಣ ಅವರು ನೀಡಿರುವ ಸಂದರ್ಶನ ಪ್ರಸಾರವಾಗುತ್ತಿದ್ದಂತೆಯೇ ರೆಹಮಾನ್​ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದಾರೆ. 

ಮುಂದೆ ಓದಿ ...
  • Share this:

ಟಾಲಿವುಡ್​ ನಟ ಹಾಗೂ ರಾಜಕಾರಣಿ ನಂದಮುರಿ ಬಾಲಕೃಷ್ಣ (Nandamuri Balakrishna) ಅವರು ಮತ್ತೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮತ್ತೆ ಚರ್ಚೆಯ ವಿಷಯವಾಗಿದ್ದಾರೆ. ತೆಲುಗು ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಬಾಲಕೃಷ್ಣ ಅವರು ಎ.ಆರ್. ರೆಹಮಾನ್  (AR Rahman)​ ಅವರ ಬಗ್ಗೆ ಮಾತನಾಡಿದ್ದಾರೆ. ಈಗ ಬಾಲಕೃಷ್ಣ ಅವರು ಕೊಟ್ಟಿರುವ ಹೇಳಿಕೆ ವಿವಾದಕ್ಕೀಡಾಗಿದೆ. ಹೌದು, ಸಂದರ್ಶನದಲ್ಲಿ ಬಾಲಕೃಷ್ಣ ಅವರು ತನಗೆ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ಗೊತ್ತೇ ಇಲ್ಲ. ಯಾರು ಅವರು ಎಂದಿದ್ದಾರಂತೆ. ಅಷ್ಟೇಅಲ್ಲ ಮಾತನ್ನು ಮುಂದುವರೆಸಿ ಭಾರತರತ್ನ ಪ್ರಶಸ್ತಿ ಬಗ್ಗೆಯೀ ವಿವಾದಾತ್ಮ ಹೇಳಿಕೆ ನೀಡಿದ್ದಾರಂತೆ.


ಬಾಲಕೃಷ್ಣ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡಲು ಖ್ಯಾತರಾದವರು. ತೆಲುಗು ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಅವರು ಯಾರು ಅಂತ ಗೊತ್ತಿಲ್ಲ. ಅವರಿಗೆ ಆಸ್ಕರ್ ಬಂದಿದೆ, ಆದರೂ ಅವರ ಬಗ್ಗೆ ನನಗೆ ತಿಳಿದಿಲ್ಲ. ದಶಕದಲ್ಲಿ ಒಮ್ಮೆ ಹಿಟ್​ ಹಾಡುಗಳನ್ನು ಕೊಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.



ನಂದಮುರಿ ಬಾಲಕೃಷ್ಣ ಅವರ ಅಭಿನಯದ 1998ರಲ್ಲಿ ತೆರೆಕಂಡಿರುವ ನಿಪ್ಪು ರವ್ವ ಸಿನಿಮಾಗೆ ಎ. ಆರ್ ರೆಹಮಾನ್​ ಅವರೇ ಹಿನ್ನಲೆ ಸಂಗೀತ ನೀಡಿದ್ದಾರೆ. ಇನ್ನು ಬಾಲಕೃಷ್ಣ ಅವರು ನೀಡಿರುವ ಸಂದರ್ಶನ ಪ್ರಸಾರವಾಗುತ್ತಿದ್ದಂತೆಯೇ ರೆಹಮಾನ್​ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದಾರೆ.









ಬಾಲಕೃಷ್ಣ ಅವರು ಕೊಟ್ಟಿರುವ ಹೇಳಿಕೆಯನ್ನು ಖಂಡಿಸುತ್ತಿರುವ ಟ್ರೋಲಿಗರು, ಬಾಲಕೃಷ್ಣ ಅವರ ಸಿನಿಮಾಗೆ ರೆಹಮಾನ್ ಅವರು ಸಂಗೀತ ನೀಡಿರುವ ಬಗ್ಗೆ ಉಲ್ಲೇಖಿಸುತ್ತಿದ್ದಾರೆ.


ಇದನ್ನೂ ಓದಿ: Bigg Boss Kannada Season 8: ಅರವಿಂದ್​-ದಿವ್ಯಾ ಉರುಡುಗ ಸ್ನೇಹದಲ್ಲಿ ಬಿರುಕು: ಕಾರಣವಾಯ್ತಾ ಆ ಒಂದು ಮಾತು..!


ಇನ್ನು ರೆಹಮಾನ್ ಯಾರು ಆದರೆ ಏನು, ನಾನು ತಲೆಕೆಡಸಿಕೊಳ್ಳುವುದಿಲ್ಲ ಎಂದಿರುವ ಬಾಲಕೃಷ್ಣ ಅವರನ್ನು ಕೆಲ ನೆಟ್ಟಿಗರು ಬಾಲಕೃಷ್ಣ ಯಾರೆಂದು ಇದೇ ಮೊದಲ ಸಲ ಕೇಳುತ್ತಿರುವುದು ಎನ್ನುತ್ತಿದ್ದಾರೆ.



ಇನ್ನು ಇದೇ ಸಂದರ್ಶನದಲ್ಲಿ ನಂದಮುರಿ ಬಾಲಕೃಷ್ಣ ಅವರು ತಮ್ಮನ್ನ ತಾವು ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಅವರಿಗೆ ಹೋಲಿಸಿಕೊಂಡಿದ್ದಾರಂತೆ. ಜೊತೆಗೆ ಸಾಕಷ್ಟು ಸೆಲೆಬ್ರಿಟಿಗಳ ಬಗ್ಗೆ ವ್ಯಂಗ್ಯ ಮಾಡುವ ಮಾತುಗಳನ್ನಾಡಿದ್ದಾರಂತೆ. ಇನ್ನು ಬಾಲಕೃಷ್ಣ ಅವರ ಅಭಿನಯದ ಸಾಕಷ್ಟು ಹಳೇ ಸಿನಿಮಾಗಳು ವಿಡಿಯೋಗಳು ಆಗಾಗ ಟ್ರೋಲ್ ಆಗುತ್ತಿರುತ್ತವೆ. ಈಗ ಮತ್ತದೇ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.


ಇದನ್ನೂ ಓದಿ: Bigg Boss Kannada Season 8: ದಿವ್ಯಾ ಸುರೇಶ್​ಗೆ ಒಂಟಿತನ ಕಾಡುತ್ತಿದೆ ಎಂದರೂ ಮಂಜು ಮನಸ್ಸು ಮಾತ್ರ ಕರಗುತ್ತಿಲ್ಲ..!

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

Published by:Anitha E
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು