ಮಹೇಶ್ ಬಾಬು ಸಿನಿಮಾಗಳಲ್ಲಿ ತಮ್ಮ ಬಾಡಿಯನ್ನು ಶೋ ಆಫ್ ಮಾಡುವುದು ತೀರಾ ವಿರಳ. ಆ್ಯಕ್ಷನ್ ಸಿನಿಮಾಗಳಲ್ಲಿ ನಟಿಸಿದರೂ ಅವರು ಬಾಡಿ ಬಿಲ್ಡ್ ಮಾಡುವ ಗೋಜಿಗೆ ಹೋಗುವುದಿಲ್ಲ. ಸಿಂಪಲ್ ಆಗಿ ಫಿಟ್ನೆಸ್ ಕಾಯ್ದು ಕೊಳ್ಳುತ್ತಾರೆ ಅಷ್ಟೆ.
ಮಹೇಶ್ ಬಾಬು ಅವರ ಸಿಂಪಲ್ ಸ್ಟೈಲ್, ಲುಕ್ಸ್ ಅವರ ಅಭಿಮಾನಿಗಳಿಗೆ ತುಂಬಾ ಇಷ್ಟ. ಇದೇ ಕಾರಣದಿಂದ ಇರಬೇಕು ಅವರು ಜಿಮ್ನಲ್ಲಿ ಗಂಟೆಗಟ್ಟಲೆ ಬೆವರಿಳಿಸಲು ಇಲ್ಲಿಯವರೆಗೂ ಮುಂದಾಗಿಲ್ಲ. ಆದರೆ ಲಾಕ್ಡೌನ್ನಲ್ಲಿ ಮಹೇಶ್ ಬಾಬು ಅವರ ಫಿಟ್ನೆಸ್ ಗುಟ್ಟು ರಟ್ಟಾಗಿದೆ.
ಮಹೇಶ್ ಮನೆಯಲ್ಲಿ ಸ್ವಿಮ್ಮಿಂಗ್ ಹಾಗೂ ಟ್ರೆಡ್ಮಿಲ್ ಮೇಲೆ ರನ್ನಿಂಗ್ ಮಾಡುತ್ತಾರೆ. ಫಿಟ್ನೆಸ್ಗೆ ಅಗತ್ಯವಿರುವಷ್ಟು ಭಾರ ಎತ್ತುವ ವ್ಯಾಯಾಮಗಳನ್ನು ಮಾಡುತ್ತಾರಂತೆ. ನಿನ್ನೆಯಷ್ಟೆ ಪ್ರಿನ್ಸ್ ಪತ್ನಿ ನಮ್ರತಾ ಮಹೇಶ್ ಬಾಬು ರನ್ನಿಂಗ್ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇನ್ನು ಕೆಲವೇ ದಿನಗಳ ಹಿಂದೆಯಷ್ಟೆ ಮಹೇಶ್ ಬಾಬು ವ್ಯಾಯಾಮ ಮಾಡುವ ಕೋಣೆಯನ್ನು ಪ್ರಿನ್ಸ್ ಇರುವ ಗುಹೆ ಎಂದು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದರು ನಮ್ರತಾ.
ಇನ್ನು ಮಹೇಶ್ ದಿನೇ ದಿನೇ ಸಖತ್ ಯಂಗ್ ಆಗಿ ಕಾಣಿಸುತ್ತಿದ್ದು, ಯುವಕರೂ ನಾಚುವಂತೆ ಫಿಟ್ನೆಸ್ನೆಸ್ ಕಾಯ್ದುಕೊಳ್ಳುತ್ತಿದ್ದಾರೆ. ಮಗಳೊಂದಿಗೆ ಕನ್ನಡಿ ಮುಂದೆ ಸೆಲ್ಫಿ ತೆಗೆದುಕೊಂಡಿದ್ದು, ಆ ಫೋಟೋವನ್ನು ಮಹೇಶ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಚಿತ್ರ ಈಗ ವೈರಲ್ ಆಗುತ್ತಿದೆ.
Shah Rukh Khan: ಈಗ ವೈರಲ್ ಆಗುತ್ತಿದೆ ಶಾರುಖ್ ಖಾನ್ರ ಶಾಲಾ ದಿನಗಳ ಫೋಟೋ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ