ಮಕ್ಕಳೊಂದಿಗೆ ಸೈಕಲ್​ ತುಳಿಯುತ್ತಾ ಎಂಜಾಯ್​ ಮಾಡಿದ ಪ್ರಿನ್ಸ್​ ಹೆಂಡತಿ ನಮ್ರತಾ ಶಿರೋಡ್ಕರ್​..!

Namratha Shirodkar: ಲಾಕ್​ಡೌನ್​ನಲ್ಲಂತೂ ನಮ್ರತಾ ಕೊಂಚ ಹೆಚ್ಚಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಕಳೆದ ಎರಡು ತಿಂಗಳಿನಲ್ಲಿ ಮನೆಯಲ್ಲಿನ ಅಪ್ಡೇಟ್​ಗಳ ಜೊತೆಗೆ ತಮ್ಮ ಹಳೇ ವಿಡಿಯೋಗಳನ್ನೂ ಹಂಚಿಕೊಳ್ಳುತ್ತಿದ್ದಾರೆ.

ನಟ ಮಹೇಶ್​ ಬಾಬು ಕುಟುಂಬ

ನಟ ಮಹೇಶ್​ ಬಾಬು ಕುಟುಂಬ

  • Share this:
ಪ್ರಿನ್ಸ್ ಮಹೇಶ್ ಬಾಬು ಅವರ ಮೊದಲ ಕ್ರಶ್​ ಹಾಗೂ ಅವರ ಹೆಂಡತಿ ನಮ್ರತಾ ಶಿರೋಡ್ಕರ್​ ಕುಟುಂಬ ಹಾಗೂ ಮಕ್ಕಳಿಗಾಗಿ ಬಣ್ಣದ ಲೋಕದಿಂದ ದೂರ ಉಳಿದವರು. ಯಶಸ್ವೀ ಪುರುಷನ ಹಿಂದೆ ಒಬ್ಬ ಹೆಣ್ಣು ಇರುತ್ತಾಳೆ ಅನ್ನೋ ಮಾತು ನಮ್ರತಾರಿಗೆ ಸರಿಹೊಂದುತ್ತದೆ. 

ನಮ್ರತಾ ಶಿರೋಡ್ಕರ್​ ಸಿನಿಮಾ ಬಿಟ್ಟು ಕುಟುಂಬ ಹಾಗೂ ಮಕ್ಕಳ ಜವಾಬ್ದಾರಿ ವಹಿಸಿಕೊಂಡಿದ್ದೇ ಮಹೇಶ್​ ಇಂದು ಈ ಸ್ಥಿತಿಯಲ್ಲಿರಲು ಕಾರಣ. ಈ ಬಗ್ಗೆ ಪ್ರಿನ್ಸ್ ಈ ಹಿಂದೆ ಸಾಕಷ್ಟು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಈಗಲೂ ನಮ್ರತಾ ತಮ್ಮ ಗಂಡನ ಸಿನಿಮಾಗಳು ಹಾಗೂ ಪ್ರಿನ್ಸ್ ಕುರಿತಾದ ಅಪ್ಡೇಟ್ ಅನ್ನು ಸಾಮಾಜಿಕ ಜಾಲತಾಣದ ಮೂಲಕ ಕೊಡುತ್ತಲೇ ಇರುತ್ತಾರೆ. 
View this post on Instagram
 

@urstrulymahesh @gautamghattamaneni


A post shared by Namrata Shirodkar (@namratashirodkar) on


ಲಾಕ್​ಡೌನ್​ನಲ್ಲಂತೂ ನಮ್ರತಾ ಕೊಂಚ ಹೆಚ್ಚಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಕಳೆದ ಎರಡು ತಿಂಗಳಿನಲ್ಲಿ ಮನೆಯಲ್ಲಿನ ಅಪ್ಡೇಟ್​ಗಳ ಜೊತೆಗೆ ತಮ್ಮ ಹಳೇ ವಿಡಿಯೋಗಳನ್ನೂ ಹಂಚಿಕೊಳ್ಳುತ್ತಿದ್ದಾರೆ.
ಈಗಲೂ ಸಹ ಮಕ್ಕಳೊಂದಿಗೆ ಜರ್ಮನಿಯ ಖಾಲಿ ರಸ್ತೆಗಳಲ್ಲಿ ಸೈಕಲ್​ ತುಳಿದ ವಿಡಿಯೋವನ್ನು ಹಂಚಿಕೊಂಡಿದ್ದು, ಮಗಳು ಸಿತಾರಾಗೆ ಒಂದು ಟಿಪ್ ಸಹ ಕೊಟ್ಟಿದ್ದಾರೆ.
ಈ ವಿಡಿಯೋದಲ್ಲಿ ಸಿತಾರಾ ಸೈಕಲ್ ತುಳಿಯುವಾಗ ಹಿಂದುಳಿಯುತ್ತಾರೆ. ಮುಂದಿನ ಸಲ ಕೊಂಚ ಸ್ಪೀಡ್​ ಹೆಚ್ಚಿಸುವಂತೆ ಹೇಳಿ ನಮ್ರತಾ ಮಗಳ ಕಾಲೆಳೆದಿದ್ದಾರೆ. ಈ ವಿಡಿಯೋದಲ್ಲಿ ನಮ್ರತಾ, ಗೌತಮ್​ ಹಾಗೂ ಸಿತಾರಾ ಸೈಕಲ್​ ತುಳಿಯುತ್ತಾ ಎಂಜಾಯ್​ ಮಾಡಿದ್ದಾರೆ.

ಇದನ್ನೂ ಓದಿ: ನಾಗ್​ ಅಶ್ವಿನ್​ ನಿರ್ದೇಶನದ ಸಿನಿಮಾದಲ್ಲಿ ಪ್ರಭಾಸ್​ಗೆ ಜೊತೆಯಾದ ಕನ್ನಡತಿ..!

ಮಹೇಶ್ ಬಾಬು ಆಗಾಗ ತಮ್ಮ ಕುಟುಂಬದೊಂದಿಗೆ ವಿದೇಶಕ್ಕೆ ಪ್ರವಾಸಕ್ಕೆಂದು ಹಾರುತ್ತಲೇ ಇರುತ್ತಾರೆ. ಈ ಹಿಂದೆ ಮಹರ್ಷಿ ಸಿನಿಮಾ ಮುಗಿದ ನಂತರವೂ ಪ್ರಿನ್ಸ್​ ಹೆಂಡತಿ ಹಾಗೂ ಮಕ್ಕಳೊಂದಿಗೆ ವಿದೇಶಕ್ಕೆ ಹೋಗಿದ್ದರು. ಅಲ್ಲಿನ ಅಪ್ಡೇಟ್​ಗಳನ್ನೂ ನಮ್ರತಾ ಆಗಾಗ ಕೊಡುತ್ತಿದ್ದರು.

Rashmika Mandanna: 18ನೇ ವರ್ಷಕ್ಕೆ ಕಾಲಿರಿಸಿದಾಗಿನ ದಿನಗಳ ಬಗ್ಗೆ ರಶ್ಮಿಕಾ ಹೇಳಿದ್ದು ಹೀಗೆ..!


 First published: