ಟಾಲಿವುಡ್ ಸೂಪರ್ಸ್ಟಾರ್ ಮಹೇಶ್ ಬಾಬು (Mahesh Babu) ಪತ್ನಿ ನಮ್ರತಾ ಶಿರೋಡ್ಕರ್ (Namrata Shirodkar) ಸ್ಟಾರ್ ನಟಿಯಾಗಿ ಸಿನಿ ಜಗತ್ತಿನಲ್ಲಿ ಹೆಸರು ಮಾಡಿದವರು. ತಮ್ಮ ಸಿನಿ ಜೀವನದ ಉತ್ತುಂಗದಲ್ಲಿದ್ದ ಸಮಯದಲ್ಲಿಯೇ ಮಹೇಶ್ ಬಾಬು ಅವರೊಂದಿಗೆ ವಿವಾಹವಾದ ನಮೃತಾ ಬಳಿಕ ಮಕ್ಕಳ ಲಾಲನೆ ಪಾಲನೆ ಪೋಷಣೆ ಯಲ್ಲಿ ಬ್ಯುಸಿ ಆದ್ರು. ಬಳಿಕ ಸಿನಿಮಾ ಲೋಕದಿಂದ ಮರೆಯಾಗಿ ಸಂಪೂರ್ಣವಾಗಿ ಗೃಹಿಣಿಯಾದರು.
ಮೊದಲ ನೋಟದಲ್ಲಿಯೇ ಪ್ರೀತಿ ಆರಂಭ
ಮಹೇಶ್ ಹಾಗೂ ನಮೃತಾ ಪ್ರೀತಿ ಆರಂಭವಾಗಿದ್ದೇ ಫಿಲ್ಮ್ ಸೆಟ್ ಒಂದರಲ್ಲಿ. ತೆಲುಗು ಚಿತ್ರ ವಂಶಿಯ ಮುಹೂರ್ತದ ಸಮಯದಲ್ಲಿ ಇವರಿಬ್ಬರೂ ಮೊತ್ತ ಮೊದಲಿಗೆ ಭೇಟಿಯಾಗಿದ್ದರು. ಮೊದಲ ನೋಟಕ್ಕೆ ಮನಸೋತ ಪ್ರಿನ್ಸ್ ಮಹೇಶ್ ಬಾಬು, ಮೊದಲ ಭೇಟಿಯಂದೇ ನಮೃತಾರಿಗೆ ತಮ್ಮ ಮನಸ್ಸನ್ನು ಒಪ್ಪಿಸಿದ್ದರು. ಸಿನಿಮಾ ಚಿತ್ರೀಕರಣ ಆರಂಭವಾಗುತ್ತಿದ್ದಂತೆಯೇ ಇವರ ಪ್ರೀತಿ ಕೂಡ ಚಿಗುರಲಾರಂಭಿಸಿತು. ತಮ್ಮ ಮೊದಲ ಭೇಟಿಯ ಸಮಯದಲ್ಲಿ ಇಬ್ಬರೂ ಆಪ್ತ ಸ್ನೇಹಿತರು ಆಗಿದ್ದರು.
ನಮೃತಾ ಇಂದಿಗೂ ಫೇಮಸ್ ಪರ್ಸನಾಲಿಟಿ
ಅದಾಗ್ಯೂ ಸಿನಿಮಾ ಜಗತ್ತಿನಲ್ಲಿ ನಮೃತಾ ಪ್ರಸ್ತುತಿ ಇಲ್ಲದೇ ಇದ್ದರೂ ಕೆಲವೊಂದು ಚ್ಯಾರಿಟಿಗಳು, ಜಾಹೀರಾತುಗಳಲ್ಲಿ ನಮೃತಾ ಇಂದಿಗೂ ತಮ್ಮ ಚಾಪು ಮೂಡಿಸಿದ್ದಾರೆ ಹಾಗೂ ಸೂಪರ್ಸ್ಟಾರ್ ಪತ್ನಿ ಎಂಬ ಹೆಸರಿನಿಂದಲೂ ಹೆಚ್ಚಾಗಿ ನಮೃತಾ ಶಿರೋಡ್ಕರ್ ಎಂಬ ತಮ್ಮ ಹೆಸರಿನಿಂದ ಖ್ಯಾತರಾದವರು. ಇತ್ತೀಚೆಗೆ ನಟಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದು ಮಹೇಶ್ರೊಂದಿಗಿನ ವೈವಾಹಿಕ ಜೀವನ, ಆಕೆ ಹಾಗೂ ಮಹೇಶ್ ನಡುವಿನ ಭಿನ್ನತೆಗಳು, ಹುಸಿ ಮುನಿಸುಗಳು ಹೀಗೆ ಮನಬಿಚ್ಚಿ ಕೆಲವೊಂದು ಅಂಶಗಳನ್ನು ವ್ಯಕ್ತಪಡಿಸಿದ್ದಾರೆ.
ಅನುರೂಪ ದಂಪತಿಗಳು
ಇಂದಿನ ದಿನಗಳಲ್ಲಿ ಅದೆಷ್ಟೋ ದಂಪತಿಗಳು ವಿವಾಹಿತರಾಗಿ ಕೆಲವೇ ವರ್ಷಗಳಲ್ಲಿ ಬೇರ್ಪಡುತ್ತಾರೆ ಆದರೆ ಮಹೇಶ್ ಹಾಗೂ ನಮೃತಾ ಇಂದಿಗೂ ಟಾಲಿವುಡ್ನ ಖ್ಯಾತ ಜೋಡಿಗಳು ಎಂದೇ ಹೆಸರುವಾಸಿಯಾಗಿದ್ದಾರೆ ಹಾಗೂ ಅನುರೂಪ ದಂಪತಿಗಳು ಎಂದೇ ಕರೆಯಿಸಿಕೊಂಡಿದ್ದಾರೆ.
ಮಹೇಶ್ಗಾಗಿ ಸಿನಿಲೋಕಕ್ಕೆ ವಿದಾಯ
ಮಾಡೆಲಿಂಗ್ ಮಾಡುತ್ತಿದ್ದ ನಮತ್ರಾ ತರುವಾಯ ಸಿನಿಮಾ ಲೋಕಕ್ಕೆ ಪಾದಾರ್ಪಣೆಗೈದರು. ಮಹೇಶ್ ಬಾಬು ಅವರನ್ನು ಪ್ರೀತಿಸಿ ವಿವಾಹವಾದ ನಮ್ರತಾ ರಿಗೆ ಮಹೇಶ್ ಜೀವನ ಸಂಗಾತಿ ಹೇಗಿರಬೇಕೆಂಬ ಕಲ್ಪನೆಯನ್ನು ಹೊಂದಿದ್ದರು ಎಂದು ತಿಳಿಸಿದ್ದಾರೆ. ಅದರಂತೆಯೇ ಮಹೇಶ್ ಅವರ ಬಾಳಸಂಗಾತಿಯಾದ ನಂತರ ನಮೃತಾ ಸಿನಿಮಾ ಕ್ಷೇತ್ರಕ್ಕೆ ವಿದಾಯ ಹೇಳಬೇಕಾಯಿತು ಎಂದು ತಿಳಿಸಿದ್ದಾರೆ.
ಮಕ್ಕಳ ಕುರಿತಾಗಿ ಭಿನ್ನಾಭಿಪ್ರಾಯ
ವಿವಾಹದ ನಂತರ ಕೂಡ ನಮ್ರತಾರಿಗೆ ಸಾಕಷ್ಟು ಆಫರ್ಗಳು ಬಂದಿದ್ದವು ಆದರೆ ಸಿನಿಮಾದಲ್ಲಿ ನಟಿಸುವ ಇರಾದೆ ತಮಗಿರಲಿಲ್ಲ ಎಂದು ತಿಳಿಸಿದ್ದಾರೆ. ಹಾಗಾಗಿ ಒಳ್ಳೊಳ್ಳೆಯ ಸಿನಿಮಾಗಳನ್ನು ನಾನು ತಿರಸ್ಕರಿಸಿದೆ ಎಂದು ನಟಿ ತಿಳಿಸಿದ್ದಾರೆ. ಮಹೇಶ್ ಹಾಗೂ ನಮೃತಾ ನಡುವಿನ ಬಾಂಧವ್ಯ, ಮುನಿಸು ಜಗಳದ ಬಗ್ಗೆ ಕೇಳಿದಾಗ ನಟಿ ತಾವಿಬ್ಬರೂ ಸಾಮಾನ್ಯವಾಗಿ ಜಗಳವಾಡುವುದಿಲ್ಲ ಮತ್ತು ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ತಿಳಿಸಿದ್ದಾರೆ. ಆದರೆ ಮಕ್ಕಳಾದ ಗೌತಮ್ ಹಾಗೂ ಸಿತಾರಾ ವಿಷಯದಲ್ಲಿ ನಾವು ಸಾಮಾನ್ಯವಾಗಿ ಜಗಳಾಡುತ್ತೇವೆ ಅಂತೆಯೇ ನಮ್ಮ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿವೆ ಎಂಬುದನ್ನು ಸಮ್ಮತಿಸಿದ್ದಾರೆ.
ದೇವರ ಕೊಡುಗೆ ಮಗಳು ಸಿತಾರಾ
ನಾನು ಮತ್ತು ಮಹೇಶ್ ಸಿತಾರಾಗಾಗಿ ಯಾವುದೇ ಪ್ಲಾನಿಂಗ್ ಮಾಡಿದವರಲ್ಲ ಗೌತಮ್ ನಂತರ ಇನ್ನೊಂದು ಕಂದನ ಬಗ್ಗೆ ಯೋಚಿಸಿದವರಲ್ಲ ಆದರೆ ದೇವರ ಕೊಡುಗೆ ಎಂಬಂತೆ ನಮ್ಮ ಬಾಳಿನಲ್ಲಿ ಸಿತಾರಾ ಪ್ರವೇಶವಾಗಿದೆ. ಈಗ ಸಿತಾರಾ ಇಲ್ಲದೆ ನಮ್ಮ ಜೀವನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ನಮೃತಾ ಮಾತಾಗಿದೆ. ಅವಧಿಗೂ ಮುನ್ನವೇ ಗೌತಮ್ರನ್ನು ನಮೃತಾ ಪ್ರಸವಿಸಿದ್ದರು ಆ ಸಮಯದಲ್ಲಿ ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ಗೌತಮ್ ಎದುರಿಸಬೇಕಾಯಿತು ಆ ದಿನಗಳು ನಮಗಿಬ್ಬರಿಗೂ ಸವಾಲುಗಳನ್ನು ನೀಡಿತ್ತು ಹಾಗೂ ಸಾಕಷ್ಟು ಉದ್ವಿಗ್ನತೆಗಳನ್ನು ಎದುರಿಸಬೇಕಾಯಿತು ಎಂದು ನಮ್ರತಾ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ