ಸಮನ್ವಿ ಇಲ್ಲದೇ ತಾಯಿ ಅಮೃತಾ Maternity Photoshoot, ಬರುವ ಕಂದನಲ್ಲಿ ಕಳೆದ ಜೀವದ ಹುಡುಕಾಟ

ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಆರಂಭವಾಗಿ ಜನಮೆಚ್ಚುಗೆ ಗಳಿಸಿತ್ತು. ಅದರಲ್ಲಿ ತಾಯಿ-ಮಗಳು ಅಮೃತಾ ನಾಯ್ಡು ಮತ್ತು ಸಮನ್ವಿ ಸ್ಪರ್ಧಿಗಳಾಗಿ ತೆರಳಿದ್ದರು.

Amrutha Naidu's Maternity photoshoot

Amrutha Naidu's Maternity photoshoot

 • Share this:
  ಇತ್ತೀಚೆಗೆ ಕನ್ನಡದ ಖಾಸಗಿ ಮನರಂಜನಾ ವಾಹಿನಿಯಲ್ಲಿ ನಮ್ಮಮ್ಮ ಸೂಪರ್ (Nammamma Super Star) ಸ್ಟಾರ್ ರಿಯಾಲಿಟಿ ಶೋ ಆರಂಭವಾಗಿ ಜನಮೆಚ್ಚುಗೆ ಗಳಿಸಿತ್ತು. ಅದರಲ್ಲಿ ತಾಯಿ-ಮಗಳು ಅಮೃತಾ ನಾಯ್ಡು (Amrutha Naidu) ಮತ್ತು ಸಮನ್ವಿ ಸ್ಪರ್ಧಿಗಳಾಗಿ ತೆರಳಿದ್ದರು. ನಂತರ ಅಮೃತಾ ಅವರು ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ ಶೋನಿಂದ ಅರ್ಧಕ್ಕೆ ನಿರ್ಗಮಿಸಿದ್ದರು. ಶೋನಲ್ಲಿ ಸ್ಪರ್ಧಿಸಿದಷ್ಟು ದಿನ ಚಟುವಟಿಕೆಯಿಂದ ಭಾಗವಹಿಸಿ ತೀರ್ಪುಗಾರರ, ಸಹಸ್ಪರ್ಧಿಗಳ, ವೀಕ್ಷಕರ ಜನಮೆಚ್ಚುಗೆ ಗಳಿಸಿದ್ದರು ಈ ತಾಯಿ-ಮಗಳು.  ಈ ನಡುವೆ ಹೊಟ್ಟೆಯಲ್ಲಿರುವ ಮಗುವಿಗೋಸ್ಕರ ಅಮೃತಾ ಹಾಗೂ ರೂಪೇಶ್ (Roopesh) ದಂಪತಿ ಫೋಟೋಶೂಟ್ (Photoshoot) ಮಾಡಿಸಿಕೊಂಡಿದ್ದಾರೆ. ಈ ಫೋಟೋಶೂಟ್ ಮಾಡಿಸೋದು ಎಷ್ಟು ಕಷ್ಟವಾಯ್ತು, ಸವಾಲಾಗಿತ್ತು ಎಂದು ಫೋಟೋಗ್ರಾಫರ್ ಕರುಣಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

  ಮೆಟರ್ನಿಟಿ ಶೂಟ್ ಫೋಟೋಗ್ರಾಫರ್ ಕರುಣಾ ಹೇಳಿದ್ದೇನು

  ಇನ್ಸ್ಟಾಗ್ರಾಂ ಖಾತೆಯಲ್ಲಿ ಅಮೃತಾ ನಾಯ್ಡು ಅವರ ಮೆಟರ್ನಿಟಿ ಶೂಟ್ ನಾ ಫೋಟೋ ಹಂಚಿಕೊಂಡು ಫೋಟೋಗ್ರಾಫರ್ ಮನಕಲುಕುವ ಸಾಲುಗಳನ್ನು ಬರೆದಿದ್ದಾರೆ.
  ಕೆಲವು ತಿಂಗಳುಗಳ ಹಿಂದೆ ಸಮನ್ವಿ ಜೊತೆಗೆ ಈ ಫೋಟೋಶೂಟ್ ಮಾಡಬೇಕು ಎಂದುಕೊಂಡಿದ್ದೆವು. ಆದರೆ ದುರಂತ ನಡೆಯಿತು, ಅವರ ಜಗತ್ತು ನಡುಗಿತು. ನನಗೆ ಬೆಳ್ಳಂಬೆಳಗ್ಗೆ ಫೋನ್ ಮಾಡಿ ಸಮನ್ವಿ ಇಲ್ಲದೆ ನಾನು ಹೇಗೆ ಬದುಕಲಿ ಎಂದು ಅಮೃತಾ ಫೋನ್ ಮಾಡಿ ಅತ್ತರು, ಸಮನ್ವಿ ಬಗ್ಗೆ ಯೋಚನೆ ಮಾಡಿ ನನಗೆ ದುಃಖ ತಡೆದುಕೊಳ್ಳಲಾಗುತ್ತಿರಲಿಲ್ಲ. ಹೀಗಿರುವಾಗ ನಾನು ಅಮೃತಾರಿಗೆ ಹೇಗೆ ಧೈರ್ಯ ತುಂಬಲಿ? ಈಗ ಅವರಿಗೆ ಇರುವ ಒಂದೇ ಒಂದು ಧೈರ್ಯವೆಂದರೆ ಅದು ಅವರ ಹೊಟ್ಟೆಯಲ್ಲಿರುವ ಪುಟ್ಟ ಕಂದ. ಸಾಕಷ್ಟು ತೊಳಲಾಟದ ಮಧ್ಯೆ ನಾನು ಈ ಫೋಟೋಶೂಟ್‌ಗಾಗಿ ಕೆಲಸ ಮಾಡೋದು ಭಾರೀ ಸವಾಲಾಗಿತ್ತು. ಹೀಗಾಗಿ ಇದು ವಿಶೇಷವಾದುದು.

  ಇದನ್ನೂ ಓದಿ: Kaustubha Mani: ಟಾಲಿವುಡ್ ಅಂಗಳದಲ್ಲಿ ಮಿಂಚಲು ತಯಾರಾದ ನನ್ನರಸಿ ರಾಧೆಯ ಇಂಚರಾ

  ಈ ಪುಟ್ಟ ಮಗುವಿಗಾಗಿ ಈ ಜೋಡಿಯ ಉಪಸ್ಥಿತಿಯಲ್ಲಿ ನಾನು ಮಾಡಿದ ಕೆಲಸ, ಅದಕ್ಕೆ ಸಿಕ್ಕ ಪ್ರತಿಫಲವು ಸರಿಯಾದ ನ್ಯಾಯ ಒದಗಿಸಿದೆ ಎಂದು ಭಾವಿಸುವೆ. ಪ್ರೀತಿಯು ನೆನಪುಗಳ ಮೂಲಕ ಇರುವುದು, ನೆನಪುಗಳು ಫೋಟೋಗಳ ಸಮೇತ ಇರುವುದು. ಅದನ್ನೇ ಫೋಟೋಗ್ರಫಿ ಎಂದು ನಾನು ಕರೆಯುತ್ತೇನೆ.

  ಮನನೊಂದಿರುವ ಜೀವಕ್ಕೆ, ದೇಹದ ಮೇಲೆ ಇರುವ ಗಾಯ ಇನ್ನೂ ಮಾಗದಿರುವಾಗ, ಯಾರಿಗಾದರೂ ನಗಲು ಧೈರ್ಯ ಬೇಕಾಗುತ್ತದೆ. ಕಣ್ಣೀರು ಸ್ವಲ್ಪ ಕಡಿಮೆಯಾಗುತ್ತಿದೆ, ಅಮೃತಾರಿಗೆ ನಗಲು ಕಾರಣ ಏನಾದರೂ ಬೇಕು. ಎಲ್ಲ ದುಷ್ಟ ಶಕ್ತಿಗಳ ಮಧ್ಯೆ ಒಂದು ಸೂಪರ್ ಪವರ್ ಅವರನ್ನು ಕಾಪಾಡುತ್ತಿದೆ. ದೇವರಿಗೂ ಕೂಡ ಅವರ ನಗು ಮಾಸುವುದು ಬೇಡ ಅಂತಲೇ ಇದೆ. ಅಮೃತಾಗೆ ನಗಲು, ಹೊಸ ಜೀವನಕ್ಕೆ ದೇವರು ದೊಡ್ಡ ಕಾರಣ ನೀಡಿದ್ದಾನೆ. ಹೊಟ್ಟೆಯಲ್ಲಿರುವ ಪುಟ್ಟ ಜೀವಕ್ಕಾಗಿ ತಾಯಿ, ದೊಡ್ಡ ಶಕ್ತಿಯಾಗಿ ನಿಂತು ಅವಳ ಮಗುವನ್ನು ಕಾಪಾಡಿಕೊಳ್ಳುತ್ತಾಳೆ. ಜಗತ್ತು ದುಷ್ಟ ಶಕ್ತಿ ಅಲ್ಲ ಎಂದು ತಾಯಿ ಮಗುವಿಗೆ ತೋರಿಸಲು ಬಯಸುತ್ತಾಳೆ. ಆ ಮಗುವಿಗೆ ಎಲ್ಲರೂ ಪ್ರೀತಿ ನೀಡುತ್ತಾರೆ.

  ಇದನ್ನೂ ಓದಿ: HBD Umashree: ಇಂದು ಉಮಾಶ್ರೀ ಜನ್ಮದಿನ, 'ಪದ್ದಿ'ಯಿಂದ 'ಪುಟ್ಟಕ್ಕ'ನವರೆಗೆ ಹಿರಿಯ ನಟಿ ಹೆಜ್ಜೆಗುರುತು

  ಅಮೃತಾ ಕೂಡ ಈ ಮಿರಾಕಲ್ ಆಗಲಿ ಎಂದು ಬಯಸುತ್ತಾರೆ. ಕೆಲ ಕ್ಷಣ ನಾನು ಅಮೃತಾ ಮುಖದಲ್ಲಿ ನಗು ತರಿಸುವ ಅದೃಷ್ಟವೂ ಸಿಕ್ಕಿತು. ನಿಮ್ಮ ಹೊಟ್ಟೆಯಲ್ಲಿರುವ ಮಗುವಿಗೆ ಎಲ್ಲ ಖುಷಿ ಪಡೆಯುವ ಅರ್ಹತೆಯಿದೆ. ಪ್ರಾರ್ಥನೆ, ಹಾರೈಕೆ ಅಮೃತಾಗೆ ಬೇಕಿದೆ. ಅಮೃತಾ ಮುಖದಲ್ಲಿ ನಗು ತರಿಸಲು ಏನೂ ಬೇಕಾದರೂ ಮಾಡುವೆ.

  ಸಮನ್ವಿ ಹಾಗೂ ಅಮೃತಾ 'ನನ್ನಮ್ಮ ಸೂಪರ್ ಸ್ಟಾರ್' ಶೋನಲ್ಲಿ ಭಾಗವಹಿಸಿದ್ದರು

  ಅಮೃತಾ 25ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಗಂಗೋತ್ರಿ' ಧಾರಾವಾಹಿ ಅವರಿಗೆ ಒಳ್ಳೆಯ ಖ್ಯಾತಿ ತಂದುಕೊಟ್ಟಿತ್ತು. 'ಪುಣ್ಯಕೋಟಿ', 'ಕುಸುಮಾಂಜಲಿ', 'ಮನೆಯೊಂದು ಮೂರು ಬಾಗಿಲು', 'ಅಮೃತ ವರ್ಷಿಣಿ', 'ನಾಗಿಣಿ', 'ಗೀತಾ' ಮುಂತಾದ ಧಾರಾವಾಹಿಗಳಲ್ಲಿ ಅವರು ನಟಿಸಿದ್ದರು. ಕನ್ನಡದ ಜೊತೆಗೆ ಪರಭಾಷೆಯಲ್ಲಿಯೂ ಅಮೃತಾ ಬಣ್ಣ ಹಚ್ಚಿದ್ದಾರೆ. ಸಮನ್ವಿ ಹಾಗೂ ಅಮೃತಾ 'ನನ್ನಮ್ಮ ಸೂಪರ್ ಸ್ಟಾರ್' ಶೋನಲ್ಲಿ ಭಾಗವಹಿಸಿದ್ದರು.

  ಮಗಳನ್ನು ಕಳೆದುಕೊಂಡಿದ್ದ ಅಮೃತಾ

  ಬೆಂಗಳೂರಿನ ಕೋಣನಕುಂಟೆಯ ವಾಜರಹಳ್ಳಿಯಲ್ಲಿ ಕಳೆದ ಜನವರಿಯಲ್ಲಿ ರಸ್ತೆ ಅಪಘಾತದಲ್ಲಿ 6 ವರ್ಷದ ಸಮನ್ವಿ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಖ್ಯಾತ ಹರಿಕಥೆ ದಾಸ ಗುರುರಾಜ ನಾಯ್ಡುರ ಮೊಮ್ಮಗಳು ಅಮೃತಾ ನಾಯ್ಡು. ಅಮ್ಮ-ಮಗಳು ಸ್ಕೂಟಿಯಲ್ಲಿ ಹೋಗುತ್ತಿರುವಾಗ ಬಂದ ಲಾರಿಯೊಂದು ಡಿಕ್ಕಿ ಹೊಡೆದಿತ್ತು.
  First published: