ಸ್ಟಾರ್ ಸುವರ್ಣದಲ್ಲಿ (Star Suvarna) ಜನರಿಗೆ ಮನರಂಜನೆ ನೀಡಲು ಹೊಸ ಹೊಸ ಧಾರಾವಾಹಿಗಳನ್ನು (Serials) ತೆರೆಗೆ ತುರುತ್ತಿದೆ. ರಾತ್ರಿ 8 ಗಂಟೆಗೆ ನಮ್ಮ ಲಚ್ಚಿ ಎನ್ನುವ ಹೊಸ ಧಾರಾವಾಹಿ ಪ್ರಸಾರವಾಗ್ತಿದೆ. ಅಪ್ಪ-ಮಗಳ ಬಾಂಧವ್ಯದ ಕಥೆಯೇ ನಮ್ಮ ಲಚ್ಚಿ ಕಥೆ. ಅಪ್ಪ ದೊಡ್ಡ ಸಿಂಗರ್ (Singer). ಆದ್ರೆ ಇವರ ಜೊತೆಗೆ ಇಲ್ಲ. ಮಗಳಿಗೂ ಅಪ್ಪನಂತೆ ಹಾಡುವ ಗುಣ ಬಂದಿದೆ. ಗಿರಿಜಾ ಪಾತ್ರವನ್ನು ಲಕ್ಷ್ಮಿ ಬಾರಮ್ಮ ಖ್ಯಾತಿಯ ನೇಹಾ ಗೌಡ ಮಾಡ್ತಿದ್ದಾರೆ. ಸಂಗಮ್ ಮತ್ತು ಗಿರಿಜಾ ಇಬ್ಬರು ಪ್ರೀತಿ ಮಾಡ್ತಾ ಇರ್ತಾರೆ. ಮದುವೆ ಆಗಬೇಕು ಎಂದುಕೊಂಡಿರುತ್ತಾರೆ. ಆಗ ಸಂಗಮ್ ಸಿಂಗರ್ ಆಗಲು ಸಿಟಿಗೆ ಹೋಗ್ತಾನೆ. ವಾಪಸ್ ಬಂದಿಲ್ಲ. ಇಬ್ಬರ ಪ್ರೀತಿಯ (Love) ಸಂಕೇತವಾಗಿ ಲಚ್ಚಿ ಹುಟ್ಟಿದ್ದಾಳೆ. ಗಿರಿಜಾಗೆ ಕ್ಯಾನ್ಸರ್ ಆಗಿದ್ದು, ಆಸ್ಪತ್ರೆ (Hospital) ಸೇರಿದ್ದಾಳೆ. ಅದೇ ಆಸ್ಪತ್ರೆಗೆ ಸಂಗಮ್ ಬಂದಿದ್ದಾರೆ.
ಗಿರಿಜಾಗೆ ಕ್ಯಾನ್ಸರ್
ಈ ಧಾರಾವಾಹಿಯಲ್ಲಿ ಗಿರಿಜಾ ಪಾತ್ರವನ್ನು ನೇಹಾ ಗೌಡ ಅವರು ಅದ್ಭುತವಾಗಿ ಮಾಡುತ್ತಿದ್ದಾರೆ. ಗಿರಿಜಾ, ಸಂಗಮ್ ಇಬ್ಬರು ಪ್ರೀತಿ ಮಾಡಿ ಮದುವೆ ಆಗಿರುತ್ತಾರೆ. ಆದ್ರೆ ಹಾಡುತ್ತೇನೆ ಎಂದು ಸಿಟಿಗೆ ಹೋದ ಸಂಗಮ್ ವಾಪಸ್ ಬಂದಿಲ್ಲ. ಗಿರಿಜಾಗೆ ಲಚ್ಚಿ ಎನನುವ ಮಗಳಿದ್ದಾಳೆ. ಸದ್ಯ ಗಿರಿಜಾಗೆ ಕ್ಯಾನ್ಸರ್ ಆಗಿ ಆಸ್ಪತ್ರೆ ಸೇರಿದ್ದಾಳೆ. ಗಿರಿಜಾ ವಾಸಿಯಾಗಲು ಲಕ್ಷ ಲಕ್ಷ ದುಡ್ಡು ಬೇಕಿದೆ. ಆದ್ರೆ ಅದನ್ನು ಜೋಡಿಸಲು ಆಕೆಯ ಅಣ್ಣನಿಗೆ ಆಗುತ್ತಿಲ್ಲ.
ಸಂಪಿಗೆಹಳ್ಳಿಗೆ ಬಂದ ಸಂಗಮ್
ಸಂಗಮ್ ಹಾಡಿನ ಕಾರ್ಯಕ್ರಮವೊಂದಕ್ಕೆ ಮಂಡ್ಯಗೆ ಬಂದಿದ್ದಾರೆ. ಅಲ್ಲಿ ಸಂಪಿಗೆಹಳ್ಳಿ ಎನ್ನುವ ಬೋರ್ಡ್ ನೋಡಿ, ಹಳೆಯ ನೆನಪುಗಳು ಬಂದಿವೆ. ನಾನು ಗಿರಿಜಾಗೆ ಮೋಸ ಮಾಡಿದೆ ಎಂದು ನೊಂದುಕೊಂಡು, ಕುಡಿದು ಗಾಡಿ ಡ್ರೈವ್ ಮಾಡ್ತಾ ಇರ್ತಾರೆ. ಆಗ ಅಪಘಾತವಾಗುತ್ತೆ. ಗಿರಿಜಾ ಸೇರಿರುವ ಆಸ್ಪತ್ರೆಗೆ ಸಂಗಮ್ ಸೇರಿಕೊಂಡಿದ್ದಾನೆ. ಗಿರಿಜಾ ಅವನನ್ನು ನೋಡಿದ್ದಾಳೆ. ಸಂಗಮ್ ನೋಡಿಲ್ಲ.
ಜೊತೆಯಾಗ್ತಾರಾ ಸಂಗಮ್-ಗಿರಿಜಾ
ಗಿರಿಜಾಗೆ ಮಾತನಾಡಲು ಸಹ ಆಗುತ್ತಿಲ್ಲ. ಅದಕ್ಕೆ ಕೈ ಸನ್ನೆ ಮೂಲಕ ಸಂಗಮ್ ನನ್ನು ಕರೆಯುವ ಪ್ರಯತ್ನ ಮಾಡ್ತಾ ಇದ್ದಾಳೆ. ಆದ್ರೆ ಸಂಗಮ್‍ಗೆ ಗೊತ್ತಾಗುತ್ತಿಲ್ಲ. ಒಂದು ವೇಳೆ ಸಂಗಮ್ ಗಿರಿಜಾಳನ್ನು ನೋಡಿದ್ರೆ, ಇಬ್ಬರು ಜೊತೆಯಾಗ್ತಾರಾ ಎನ್ನುವ ಪ್ರಶ್ನೆಗಳು ಎದ್ದಿವೆ. ಲಚ್ಚಿಗೆ ಅಪ್ಪ ಸಿಕ್ಕಂತೆ ಆಗುತ್ತೆ.
ಲಚ್ಚಿಗೆ ಪದೇ ಪದೇ ಅವಮಾನ
ಲಚ್ಚಿಗೂ ಅಪ್ಪ ಸಂಗಮ್‍ನಂತೆ ಹಾಡುವ ಗುಣ ಬಂದಿದೆ. ಆದ್ರೆ ಸಂಗಮ್ ತನಗೆ ಮೋಸ ಮಾಡಿದ ಎಂದು ಗಿರಿಜಾ ಲಚ್ಚಿಗೆ ಹಾಡು ಹೇಳಲು ಬಿಡುತ್ತಿಲ್ಲ. ಅಲ್ಲದೇ ಗಿರಿಜಾ ಅತ್ತಿಗೆ ಪದೇ ಪದೇ ಅವಮಾನ ಮಾಡ್ತಾ ಇರುತ್ತಾಳೆ. ಅಪ್ಪ ಇಲ್ಲದೇ ಇರುವ ಮಗಳು. ನಿನಗಾದ್ರೂ ಗೊತ್ತೋ? ಇಲ್ವೋ ಎಂದು ಪದೇ ಪದೇ ಹಿಂಸೆ ನೀಡುತ್ತಿದ್ದಾಳೆ. ಗಿರಿಜಾ ಎಲ್ಲವನ್ನೂ ಸಹಿಸಿಕೊಂಡಿದ್ದಾಳೆ.
ಸಂಗಮ್‍ಗೆ ಬೇರೆ ಮದುವೆ
ಸಂಗಮ್ ಪಾತ್ರವನ್ನು ವಿಜಯ್ ಸೂರ್ಯ ಮಾಡ್ತಾ ಇದ್ದಾರೆ. ಸಿಟಿಗೆ ಹೋಗಿ ದೊಡ್ಡ ಸಿಂಗರ್ ಆದ ಮೇಲೆ ಸಂಗಮ್‍ಗೆ ದೀಪಿಕಾ ಎನ್ನುವವರ ಜೊತೆ ಮದುವೆ ಆಗಿದೆ. ದೀಪಿಕಾ ಪಾತ್ರವನ್ನು ಕನ್ನಡತಿಯ ವರೂಧಿನಿ ಅಂದ್ರೆ ಸಾರಾ ಅಣ್ಣಯ್ಯ ನಿರ್ವಹಿಸುತ್ತಿದ್ದಾರೆ. ಸಂಗಮ್‍ಗೆ ರಿಯಾ ಎನ್ನುವ ಮಗಳು ಹುಟ್ಟಿದ್ದಾಳೆ. ತುಂಬಾ ಪ್ರೀತಿ ಮಾಡ್ತಾ ಇದ್ದ ಗಿರಿಜಾಳನ್ನು ಮರೆತು ಸಂಗಮ್ ದೀಪಿಕಾಳನ್ನು ಮದುವೆ ಆಗಿದ್ದಾನೆ.
ಇದನ್ನೂ ಓದಿ: Divya Uruduga: ಊಟಕ್ಕೆ ರೆಡೀನಾ? ಸೀರೆ ಉಟ್ಟು ದಿವ್ಯಾ ಉರುಡುಗ ಕೊಟ್ಟ ಎಕ್ಸ್ಪ್ರೆಷನ್ ನೋಡಿ
ಸಂಗಮ್ ಅವರ ಹೆಂಡ್ತಿ ದೀಪಿಕಾ ಮತ್ತು ಮಗುವಿಗೆ ತುಂಬಾ ಗೌರವ ಸಿಗುತ್ತಿದೆ. ಎಲ್ಲಾ ಕಡೆ ಇವರನ್ನು ತುಂಬಾ ಪ್ರೀತಿಯಿಂದ ಕಾಣ್ತಾರೆ. ಸಂಗಮ್ ಅವರ ಒಬ್ಬ ಮಗಳಿಗೆ ಸನ್ಮಾನ ಆಗ್ತಿದ್ರೆ, ಇನ್ನೊಬ್ಬ ಮಗಳು ಲಚ್ಚಿಗೆ ದಿನ ಅವಮಾನ ಆಗ್ತಿದೆ. ಅಪ್ಪ ಗೊತ್ತಿಲ್ಲದ ಮಗಳು ನೀನು ಎಂದು ನೋವು ಕೊಡ್ತಾ ಇದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ