ಸ್ಟಾರ್ ಸುವರ್ಣದಲ್ಲಿ (Star Suvarna) ಜನರಿಗೆ ಮನರಂಜನೆ ನೀಡಲು ಹೊಸ ಹೊಸ ಧಾರಾವಾಹಿಗಳನ್ನು (Serials) ತೆರೆಗೆ ತುರುತ್ತಿದೆ. ರಾತ್ರಿ 8 ಗಂಟೆಗೆ ನಮ್ಮ ಲಚ್ಚಿ ಎನ್ನುವ ಹೊಸ ಧಾರಾವಾಹಿ ಪ್ರಸಾರವಾಗ್ತಿದೆ. ಅಪ್ಪ-ಮಗಳ ಬಾಂಧವ್ಯದ ಕಥೆಯೇ ನಮ್ಮ ಲಚ್ಚಿ (Namma Lachhi) ಕಥೆ. ಅಪ್ಪ ದೊಡ್ಡ ಸಿಂಗರ್ (Singer). ಆದ್ರೆ ಇವರ ಜೊತೆಗೆ ಇಲ್ಲ. ಮಗಳಿಗೂ ಅಪ್ಪನಂತೆ ಹಾಡುವ ಗುಣ ಬಂದಿದೆ. ಗಿರಿಜಾ ಪಾತ್ರವನ್ನು ಲಕ್ಷ್ಮಿ ಬಾರಮ್ಮ ಖ್ಯಾತಿಯ ನೇಹಾ ಗೌಡ ಮಾಡ್ತಿದ್ದಾರೆ. ಸಂಗಮ್ ಮತ್ತು ಗಿರಿಜಾ ಇಬ್ಬರು ಪ್ರೀತಿ ಮಾಡ್ತಾ ಇರ್ತಾರೆ. ಮದುವೆ ಆಗಬೇಕು ಎಂದುಕೊಂಡಿರುತ್ತಾರೆ. ಆಗ ಸಂಗಮ್ ಸಿಂಗರ್ ಆಗಲು ಸಿಟಿಗೆ ಹೋಗ್ತಾನೆ. ವಾಪಸ್ ಬಂದಿಲ್ಲ. ಇಬ್ಬರ ಪ್ರೀತಿಯ ಸಂಕೇತವಾಗಿ ಲಚ್ಚಿ ಹುಟ್ಟಿದ್ದಾಳೆ. ಸಂಗಮ್ 2ನೇ ಹೆಂಡ್ತೊ ದೀಪಿಕಾ ಗಿರಿಜಾಗೆ ಅಪಘಾತ ಮಾಡಿ ಕೊಂದಿದ್ದಾಳೆ (Murder). ನೇಹಾ ಗೌಡ ಪಾತ್ರ ಇಷ್ಟು ಬೇಗ ಅಂತ್ಯವಾಯ್ತಾ ಎಂದು ಜನ ಕೇಳ್ತಾ ಇದ್ದಾರೆ.
ಗಿರಿಜಾಗೆ ಕ್ಯಾನ್ಸರ್
ಈ ಧಾರಾವಾಹಿಯಲ್ಲಿ ಗಿರಿಜಾ ಪಾತ್ರವನ್ನು ನೇಹಾ ಗೌಡ ಅವರು ಅದ್ಭುತವಾಗಿ ಮಾಡುತ್ತಿದ್ದಾರೆ. ಗಿರಿಜಾ, ಸಂಗಮ್ ಇಬ್ಬರು ಪ್ರೀತಿ ಮಾಡಿ ಮದುವೆ ಆಗಿರುತ್ತಾರೆ. ಆದ್ರೆ ಹಾಡುತ್ತೇನೆ ಎಂದು ಸಿಟಿಗೆ ಹೋದ ಸಂಗಮ್ ವಾಪಸ್ ಬಂದಿಲ್ಲ. ಗಿರಿಜಾಗೆ ಲಚ್ಚಿ ಎನ್ನುವ ಮಗಳಿದ್ದಾಳೆ. ಸದ್ಯ ಗಿರಿಜಾಗೆ ಕ್ಯಾನ್ಸರ್ ಆಗಿ ಆಸ್ಪತ್ರೆ ಸೇರಿದ್ದಳು, ಊರಿಗೆ ಬಂದ ಸಂಗಮ್‍ನನ್ನು ಮಾತನಾಡಿಸಲು ಹೋಗಿ ಹೆಣವಾಗಿದ್ದಾಳೆ.
ಸಂಗಮ್‍ನನ್ನು ಸೇರುವ ಮೊದಲೇ ಸಾವು
ಗಿರಿಜಾ ಮತ್ತು ಸಂಗಮ್ ಇಬ್ಬರು ಮತ್ತೆ ಜೊತೆಯಾಗ್ತಾರೆ. ಲಚ್ಚಿಗೆ ಒಂದು ಒಳ್ಳೆ ಜೀವನ ಸಿಗಬಹುದು ಎಂದು ಅಭಿಮಾನಿಗಳು ಎಂದುಕೊಂಡಿದ್ರು. ಆದ್ರೆ ಧಾರಾವಾಹಿ ತಿರುವು ಪಡೆದುಕೊಂಡಿದೆ. ಸಂಗಮ್ ನನ್ನು ಮಾತನಾಡಿಸಬೇಕು. ಲಚ್ಚಿಯನ್ನು ಅವನ ಬಳಿ ಸೇರಿಸಬೇಕು ಎಂದು ಓಡಿ ಬರುತ್ತಿರುವಾಗ ಅಪಘಾತವಾಗಿ ಗಿರಿಜಾ ಸಾವನ್ನಪ್ಪಿದ್ದಾಳೆ.
ದೀಪಿಕಾಳಿಂದ ಅಪಘಾತ
ದೀಪಿಕಾ ಸಂಗಮ್ ಎರಡನೇ ಹೆಂಡ್ತಿ. ಈ ಪಾತ್ರವನ್ನು ಕನ್ನಡತಿಯ ವರೂಧಿನಿ ಮಾಡ್ತಾ ಇದ್ದಾರೆ. ದೀಪಿಕಾ ಸಂಗಮ್ ಹಾಡಿನ ಕಾರ್ಯಕ್ರಮ ನೋಡಲು ಅದೇ ಊರಿಗೆ ಬರುತ್ತಿದ್ದಳು. ಫಾಸ್ಟ್ ಆಗಿ ಕಾರು ಓಡಿಸಿಕೊಂಡು ಬಂದು ಗಿರಿಜಾಗೆ ಗುದ್ದಿದ್ದಾಳೆ. ಅದರಿಂದ ಗಿರಿಜಾಗೆ ಹೆಚ್ಚು ರಕ್ತ ಹೋಗಿ ಸಾವನ್ನಪ್ಪಿದ್ದಾಳೆ. ಗಿರಿಜಾ ಕಳೆದುಕೊಂಡು ಅಣ್ಣ ಗೋಳಾಡುತ್ತಿದ್ದಾನೆ.
ಲಚ್ಚಿಗೆ ಆಘಾತವಾಗುತ್ತಾ?
ಲಚ್ಚಿ ಇನ್ನು ಚಿಕ್ಕ ಮಗು. ಆಕೆಗೆ ಅಮ್ಮನೇ ಪ್ರಪಂಚ. ಅಮ್ಮನ ಕಾಯಿಲೆ ಸರಿ ಮಾಡೋಣ ಎಂದು ರಾತ್ರಿಯೆಲ್ಲಾ ಹಾಡು ಹೇಳಿ ದುಡ್ಡು ತಂದಿರುತ್ತಾಳೆ. ಆದ್ರೆ ಅಷ್ಟರಲ್ಲಿ ಅಮ್ಮ ಸತ್ತು ಹೋಗಿದ್ದಾಳೆ. ಅಮ್ಮ ಸತ್ತಿರುವ ವಿಚಾರ ಸಹ ಆ ಕಂದನಿಗೆ ಗೊತ್ತಾಗುತ್ತಿಲ್ಲ. ಅವ್ವ ಏಕೆ ಮಲಗಿದ್ದೀಯಾ ಎಂದು ಕೇಳ್ತಾ ಇದ್ದಾಳೆ. ನಾನು ನಿನಗೆ ಸೀರೆ, ಬಳೆ ತಂದಿದ್ದೇನೆ ಎಂದು ಹೇಳ್ತಾ ಇದ್ದಾಳೆ. ಸುತ್ತ ನೆರೆದವರೆಲ್ಲಾ ಕಣ್ಣೀರಿಡುತ್ತಿದ್ದಾರೆ.
ನೇಹಾ ಗೌಡ ಪಾತ್ರ ಅಂತ್ಯ?
ಬಹಳ ವರ್ಷಗಳ ನಂತರ ನೇಹಾ ಗೌಡ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ರು. ಗೊಂಬೆಯಾಗಿ ಪರಿಚಯವಾಗಿದ್ದ ನೇಹಾ, ಗಿರಿಜಾ ಪಾತ್ರವನ್ನೂ ಅಚ್ಚುಕಟ್ಟಾಗಿ ನಿಭಾಯಿಸ್ತಿದ್ರು. ಆದ್ರೆ ಆ ಪಾತ್ರ ಬೇಗ ಮುಗಿಸಿದ್ದಾರೆ. ಏಕೆ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ. ಅಲ್ಲದೇ ಲಚ್ಚಿಯೇ ಬೆಳೆದು ದೊಡ್ಡವಳಾದ ಮೇಲೆ ಅಮ್ಮನ ರೂಪವನ್ನೇ ಪಡೆಯುತ್ತಾಳಾ ನೋಡಬೇಕು.
ಇದನ್ನೂ ಓದಿ: Bhagya Lakshmi: ಪತ್ರ ಬರೆದಿಟ್ಟು ಮದುವೆ ಮನೆಯಿಂದ ಹೊರಟ ಲಕ್ಷ್ಮಿ, ವೈಷ್ಣವ್ ಹೋಗಿದ್ದು ಎಲ್ಲಿಗೆ?
ಅಮ್ಮನಿಲ್ಲದ ಲಚ್ಚಿ ಕಥೆ ಏನು? ಅಪ್ಪನ ಮಡಿಲು ಸೇರ್ತಾಳಾ ಮುದ್ದು ಮಗಳು? ಮುಂದೇನಾಗುತ್ತೆ ಅಂತ ನೋಡೋಕೆ ನಮ್ಮ ಲಚ್ಚಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ