Namita: ಖಿನ್ನತೆಯಿಂದಾಗಿ ಆತ್ಮಹತ್ಯೆಯ ಆಲೋಚನೆ ಮನಸ್ಸಿಗೆ ಬಂದಿತ್ತು ಎಂದ ನಟಿ ನಮಿತಾ..!

Namita Weight Loss Journey: ನಮಿತಾ ಅವರಿಗೆ ಖಿನ್ನತೆ ಬಹಳ ಸಮಯ ಕಾಡಿತ್ತಂತೆ. ಆದರೆ ಅವರಿಗೆ ಅದರ ಬಗ್ಗೆ ಕೊಂಚವೂ ಅರಿವಿರಲಿಲ್ಲವಂತೆ. ಸದಾ ಒಂದು ರೀತಿಯ ಬೇಸರ ಹಾಗೂ ಯಾವುದರಲ್ಲೂ ಆಸಕ್ತಿ ಇಲ್ಲದಂತ ಭಾವನೆ. ಇತ್ತಂತೆ. ಅದು ಖಿನ್ನತೆಯಿಂದಾಗುತ್ತಿದೆ ಎಂದು ಅವರಿಗೆ ತಿಳಿಯಲೇ ಇಲ್ಲವಂತೆ. ಅದಕ್ಕೆ ಕಾರಣ ಅವರ ಹೆಚ್ಚಿದ ದೇಹದ ತೂಕವಂತೆ. ಹೌದು ಸ್ಥೂಲಕಾಯದಿಂದಾಗಿ ಅವರಿಗೆ ಖಿನ್ನತೆ ಕಾಡುತ್ತಿತ್ತಂತೆ. ಹೀಗೆಂದು ಅವರಿಗೆ ಇಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ದೇಹದ ತೂಕ ಇಳಿಸಿಕೊಂಡ ನಟಿ ನಮಿತಾ

ದೇಹದ ತೂಕ ಇಳಿಸಿಕೊಂಡ ನಟಿ ನಮಿತಾ

  • Share this:
ಖಿನ್ನತೆಯಿಂದಾಗಿ ಸಾಕಷ್ಟು ಮಂದಿ ಬಳಲುತ್ತಿರುತ್ತಾರೆ. ಅದರಲ್ಲೂ ಈ ಬಣ್ಣದ ಲೋಕದಲ್ಲಿ ಅಂದರೆ ಸಿನಿ ಜಗತ್ತು ಮಾಡೆಲಿಂಗ್​ ಕ್ಷೇತ್ರದಲ್ಲಿರುವವರು ತುಂಬಾ ಜನ ಖಿನ್ನತೆಯಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿರುತ್ತಾರೆ. ಕೆಲವರು ತಮಗಿರುವ ಈ ಮಾನಸಿಕ ಖಿನ್ನತೆ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳುತ್ತಾರೆ. ಮತ್ತೆ ಕೆಲವರು ಮುಚ್ಚಿಡುತ್ತಾರೆ. ಇದರಿಂದಲೇ ಸಾಕಷ್ಟು ಮಂದಿ ಆತ್ಮಹತ್ಯೆ ಸಹ ಮಾಡಿಕೊಂಡಿದ್ದೂ ಇದೆ. ಇತ್ತೀಚೆಗಷ್ಟೆ ಕನ್ನಡದ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಈ ನಿರ್ಧಾರಕ್ಕೆ ಖಿನ್ನತೆಯೇ ಕಾರಣ ಎನ್ನಲಾಗುತ್ತಿದೆ. ಈಗ ಕನ್ನಡ ಸೇರಿದಂತೆ ತೆಲುಗು, ತಮಳಿ ಹಾಗೂ ಇತರೆ ಭಾಷೆಗಳಲ್ಲಿ ನಟಿಸಿರುವ ಖ್ಯಾತ ನಟಿಯೊಬ್ಬರು ತಾನೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮಗಿದ್ದ ಖಿನ್ನತೆ ಹಾಗೂ ಅದರಿಂದಾಗಿ ಅವರು ಆತ್ಮಹತ್ಯೆಯ ಆಲೋಚನೆ ಸಹ ಮಾಡಿದ್ದರು ಎಂದು ಆ ನಟಿ ಬಹಿರಂಗ ಪಡಿಸಿದ್ದಾರೆ. ಅಷ್ಟಕ್ಕೂ ಯಾರು ಆ ನಟಿ,,? ಅವರಿಗೆ ಖಿನ್ನತೆ ಕಾಡಲು ಕಾರಣವೇನೆಂದು ಮುಂದೆ ವಿವರ ನೀಡುತ್ತೇವೆ. 

ದಕ್ಷಿಣ ಭಾರತದ ಖ್ಯಾತ ಹಾಗೂ ಹಾಟ್ ನಟಿಯರಲ್ಲಿ ಒಬ್ಬರಾದ ನಮಿತಾ, ಸದ್ಯ ಇನ್​ಸ್ಟಾಗ್ರಾಂನಲ್ಲಿ ಮಾಡಿರುವ ಪೋಸ್ಟ್​ನಿಂದಾಗಿ ಸುದ್ದಿಯಲ್ಲಿದ್ದಾರೆ. ಹೌದು, ಈ ನಟಿಯೂ ಖಿನ್ನತೆಯಿಂದ ಬಳಲುತ್ತಿದ್ದಂತೆ. ಇದರಿಂದಾಗಿ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಭಾವನೆ ಬರುತ್ತಿತ್ತಂತೆ. ಹೀಗೆಂದು ನಮಿತಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

Namita Weight loss, Namita was suffering from Depression, highly Suicidal, Veerendra Chowdhray, Namita, Namita Vankawala Chowdhary, ನಮಿತಾ, ನಮಿತಾ ವೀರೇಂದ್ರ ಚೌಧರಿ, ನಮಿತಾ ಹಾಗೂ ಗಂಡ ವೀರೇಂದ್ರ ಚೌಧರಿ, ಕಾಲಿವುಡ್ ನಟಿ ನಮಿತಾ, ಟಾಲಿವುಡ್​ ನಟಿ ನಮಿತಾ, namitha,namitha twitter,namitha instagram,namitha gym workout,namitha gym workout video,namitha hot navel photos,namitha hot videos,telugu cinema, Namitha, heroine namitha, namitha bowwow, namitha bow wow, namitha latest stills,namitha photoshoot,south siren namitha,actress namitha hot,namitha hot stills,namitha hot pics,namitha hot photoshoot,namitha unseen stills,namitha new stills,namitha hot gallery,hot namitha,namitha exclusive photoshoot,namitha full movie tamil,namitha film songs,namitha full song,namitha full name,namitha telugu, tollywood news, telugu cinemas, ದೇಹದ ತೂಕ ಇಳಿಸಿಕೊಂಡ ನಮಿತಾ, 97ಕೆಜಿ ತೂಕ ಇದ್ದ ನಮಿತಾ
ನಮಿತಾ ಅವರ ಇನ್​ಸ್ಟಾಗ್ರಾಂ ಪೋಸ್ಟ್​


ನಮಿತಾ ಅವರಿಗೆ ಖಿನ್ನತೆ ಬಹಳ ಸಮಯ ಕಾಡಿತ್ತಂತೆ. ಆದರೆ ಅವರಿಗೆ ಅದರ ಬಗ್ಗೆ ಕೊಂಚವೂ ಅರಿವಿರಲಿಲ್ಲವಂತೆ. ಸದಾ ಒಂದು ರೀತಿಯ ಬೇಸರ ಹಾಗೂ ಯಾವುದರಲ್ಲೂ ಆಸಕ್ತಿ ಇಲ್ಲದಂತ ಭಾವನೆ. ಇತ್ತಂತೆ. ಅದು ಖಿನ್ನತೆಯಿಂದಾಗುತ್ತಿದೆ ಎಂದು ಅವರಿಗೆ ತಿಳಿಯಲೇ ಇಲ್ಲವಂತೆ. ಅದಕ್ಕೆ ಕಾರಣ ಅವರ ಹೆಚ್ಚಿದ ದೇಹದ ತೂಕವಂತೆ. ಹೌದು ಸ್ಥೂಲಕಾಯದಿಂದಾಗಿ ಅವರಿಗೆ ಖಿನ್ನತೆ ಕಾಡುತ್ತಿತ್ತಂತೆ. ಹೀಗೆಂದು ಅವರಿಗೆ ಇಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
10 ವರ್ಷಗಳ ಹಿಂದೆ ನಮಿತಾ ಅವರ ದೇಹದ ತೂಕ ಹೆಚ್ಚಾಗಿದ್ದು, ಇಲ್ಲಿಯವರೆಗೂ ಅವರು ಹಾಗೆಯೇ ಇದ್ದರು. ಸ್ಥೂಲಕಾಯಿಯಾಗಿದ್ದರೂ ಅವರು ಹಾಟ್ ಫೋಟೋಶೂಟ್​ಗಳಿಗೆ ಪೋಸ್​ ಕೊಡುತ್ತಿದ್ದರು. ಇದರಿಂದಾಗಿ ಅವರನ್ನು ಟ್ರೋಲ್​ ಸಹ ಮಾಡಲಾಗುತ್ತಿತ್ತು. ಅಲ್ಲದೆ ಅವರ ಹೆಚ್ಚಿದ ದೇಹದ ತೂಕದ ಬಗ್ಗೆ ಹಾಗೂ ಅವರು ಮದ್ಯ ವ್ಯಸನಿಯಾಗಿದ್ದಾರೆ ಎಂದೆಲ್ಲ ಸುಳ್ಳು ಸುದ್ದಿಗಳು ಹರಿದಾಡಲು ಶುರುವಾಗಿತ್ತು. ಈ ಎಲ್ಲ ಕಾರಣಗಳಿಂದಾಗಿ ನಮಿತಾ ಅವರಿಗೆ ಆತ್ಮಹತ್ಯೆಯ ಆಲೋಚನೆ ಸಹ ಬಂದಿತ್ತಂತೆ.


ನಮಿತಾ ಅವರಿಗೆ ದೇಹದ ತೂಕ ಹೆಚ್ಚಲು ಕಾರಣ ಅವರ ಆಹಾರ ಪದ್ಧತಿ ಹಾಗೂ ಇದ್ದ ಆರೋಗ್ಯದ ಸಮಸ್ಯೆಗಳು. ಅವರಿಗೆ ಪಿಸಿಒಡಿ ಹಾಗೂ ಥೈರಾಯ್ಡ್​ ಇತ್ತಂತೆ. ಇದರಿಂದಾಗಿ ಅವರ ದೇಹದ ತೂಕ ಹಚ್ಚಾಗಿತ್ತಂತೆ. ಜೊತೆಗೆ ಹೆಚ್ಚು ಆಹಾರ ಸೇವನೆ ಸಹ ಆರಂಭಿಸಿದ್ದರಂತೆ. ಇದರಿಂದಾಗಿ ಒಂದು ಸಮಯದಲ್ಲಿ ಅವರು ನಿತ್ಯ ಪಿಜ್ಜಾ ಆರ್ಡರ್​ ಮಾಡುತ್ತಿದ್ದರಂತೆ. ಆಗ ಅವರ ದೇಹದ ತೂಕ 97 ಕೆಜಿ ಆಗಿತ್ತಂತೆ.

ಆದರೆ, ಆಗ ನಮಿತಾ ಯಾವ ವೈದ್ಯರ ಬಳಿಯೂ ಚಿಕಿತ್ಸೆಗಾಗಿ ಹೋಗಲಿಲ್ಲವಂತೆ. ಬದಲಾಗಿ ಧ್ಯಾನ ಮಾಡಲಾರಂಭಿಸಿದರಂತೆ. ಇದರಿಂದಾಗಿ ಅವರಿಗೆ ಮಾನಸಿಕ ಶಾಂತಿ ಹಾಗೂ ಎಲ್ಲವನ್ನೂ ಎದುರಿಸುವ ಆತ್ಮಸ್ಥೈರ್ಯ ಬಂದಿತಂತೆ. ನಂತರ ಕಳೆದ ಕೆಲವು ತಿಂಗಳಿನಿಂದ ನಮಿತಾ ದೇಹದ ತೂಕ ಇಳಿಸಿಕೊಳ್ಳುವತ್ತಾ ಸಹ ಗಮನ ಹರಿಸಿದ್ದಾರೆ. ಮನೆಯಲ್ಲೇ ನಿತ್ಯ ವ್ಯಾಯಾಮ ಹಾಗೂ ಆರೋಗ್ಯಕರ ಆಹಾರ ಸೇವನೆ ಆರಂಭಿಸಿದ್ದು, ಗಮನಾರ್ಹ ರೀತಿಯಲ್ಲಿ ಅವರು ದೇಹದ ತೂಕ ಇಳಿಸಿಕೊಂಡಿದ್ದಾರೆ.
Published by:Anitha E
First published: