HOME » NEWS » Entertainment » NAGATHIHALLI CHANDRASHEKHARS AMERICA AMERICA MOVIE CELEBRATING SILVER JUBILEE AND KICHCHA SUDEEP WAS REPLACED BY AKSHAY ANAND AE

America America: ಅಮೆರಿಕಾ ಅಮೆರಿಕಾ ಚಿತ್ರಕ್ಕೆ 25ರ ಸಂಭ್ರಮ: ಸುದೀಪ್​ ಕೈ ತಪ್ಪಿತ್ತು ಈ ಚಿತ್ರದಲ್ಲಿ ನಟಿಸುವ ಅವಕಾಶ..!

Nagathihalli Chandrashekhar-Kichcha Sudeep: ಮನೋಮೂರ್ತಿ ಅವರು ಅಮೆರಿಕಾ ಅಮೆರಿಕಾ ಸಿನಿಮಾದ ಮೂಲಕ ಸಂಗೀತ ನಿರ್ದೇಶಕರಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಇನ್ನು ಈ ಸಿನಿಮಾಗೆ ಈಗ ಬೆಳ್ಳಿ ಹಬ್ಬದ ಸಂಭ್ರಮ. ಈ ಖುಷಿಯನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್​ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Anitha E | news18-kannada
Updated:June 18, 2021, 4:21 PM IST
America America: ಅಮೆರಿಕಾ ಅಮೆರಿಕಾ ಚಿತ್ರಕ್ಕೆ 25ರ ಸಂಭ್ರಮ: ಸುದೀಪ್​ ಕೈ ತಪ್ಪಿತ್ತು ಈ ಚಿತ್ರದಲ್ಲಿ ನಟಿಸುವ ಅವಕಾಶ..!
ಅಮೆರಿಕಾ ಅಮೆರಿಕಾ ಸಿನಿಮಾಗೆ ಬೆಳ್ಳಿ ಹಬ್ಬದ ಸಂಭ್ರಮ
  • Share this:
ತ್ರಿಕೋನ ಪ್ರೇಮಕಥೆಯ ಸಿನಿಮಾ ಅಮೆರಿಕಾ ಅಮೆರಿಕಾ ಚಿತ್ರಕ್ಕೆ ಈಗ 25ರ ಸಂಭ್ರಮ. ಹೌದು, ನಿರ್ದೇಶಕ ನಾಗತಹಳ್ಳಿ ಚಂದ್ರಶೇಖರ್​ ಅವರ ನಿರ್ದೇಶನದ ಈ ಚಿತ್ರದಲ್ಲಿ ನಾಯಕರಾಗಿ ರಮೇಶ್ ಅರವಿಂದ್, ​ಅಕ್ಷಯ್​ ಆನಂದ್​ ಹಾಗೂ ನಾಯಕಿಯಾಗಿ ಹೇಮಾ ಪಂಚಮುಖಿ ನಟಿಸಿದ್ದಾರೆ. ವಿಶ್ವಪ್ರಿಯ ಫಿಲಂಸ್​ ಬ್ಯಾನರ್​ ಅಡಿಯಲ್ಲಿ ನಂದಕುಮಾರ್​ ನಿರ್ಮಿಸಿದ ಈ ಸಿನಿಮಾ ಅಮೆರಿಕದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗದೆ. ಜೂನ್​ 16ರಂದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ರವೀಂದ್ರನಾಥ್​ ಹಾಗೂ ಸಂಧ್ಯಾ ಎಂಬುವರ ಮನೆಯಲ್ಲಿ ಚಿತ್ರೀಕರಣ ಆರಂಭವಾಗಿತ್ತು. ಈ ಸಿನಿಮಾ ರಾಷ್ಟರಮಟ್ಟದಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ಎಂಬ ಹೆಗ್ಗಳಿಕೆಯ ಜೊತೆಗೆ ರಾಜ್ಯದಲ್ಲಿ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿತ್ತು. ಅತ್ಯುತ್ತಮ ನಟ, ಸಿನಿಮಾ ಹಾಗೂ ಕಥೆ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು. 

ಮನೋಮೂರ್ತಿ ಅವರು ಅಮೆರಿಕಾ ಅಮೆರಿಕಾ ಸಿನಿಮಾದ ಮೂಲಕ ಸಂಗೀತ ನಿರ್ದೇಶಕರಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಇನ್ನು ಈ ಸಿನಿಮಾಗೆ ಈಗ ಬೆಳ್ಳಿ ಹಬ್ಬದ ಸಂಭ್ರಮ. ಈ ಖುಷಿಯನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್​ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.





ಇನ್ನು ಈ ಸಿನಿಮಾದಲ್ಲಿ ನಾಯಕನ ಪಾತ್ರಕ್ಕೆ ನಾಗತಿಹಳ್ಳಿ ಚಂದ್ರಶೇಖರ್​ ಅವರ ಮೊದಲ ಹಾಗೂ ಕೊನೆಯ ಆಯ್ಕೆ ರಮೇಶ್​ ಅರವಿಂದ್​ ಅವರೇ ಆಗಿದ್ದರಂತೆ. ಆದರೆ ಅಕ್ಷಯ್​ ಆನಂದ್ ಪಾತ್ರಕ್ಕೆ ಪ್ರಕಾಶ್​ ರೈ ಅವರು ಎಂದು ನಿರ್ಧರಿಸಿದ್ದರಂತೆ. ಆಗ ಪ್ರಕಾಶ್​ ರೈ ಅವರು ತಮಿಳು ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರಂತೆ. ಈ ಕಾರಣದಿಂದ ಮತ್ತೆ ಆ ಪಾತ್ರಕ್ಕೆ ಹುಡುಕಾಟ ಆರಂಭವಾಗಿ ಸುದೀಪ್​ ಅವರನ್ನು ಪರಿಗಣಿಸಲಾಗಿತ್ತು. ಆದರೆ ಸುದೀಪ್​ ಕೈಯಿಂದ ಈ ಅವಕಾಶ ತಪ್ಪಿತ್ತು.

ಇದನ್ನೂ ಓದಿ: Tamannaah Bhatia: ಮುಖಕ್ಕೆ ಎಂಜಲು ಹಚ್ಚಿಕೊಳ್ತಾರಂತೆ ತಮನ್ನಾ ಭಾಟಿಯಾ: ತ್ವಚೆಯ ಸೀಕ್ರೆಟ್ ಬಿಚ್ಚಿಟ್ಟ ಮಿಲ್ಕಿ ಬ್ಯೂಟಿ..!

ಹೌದು, ಸುದೀಪ್​ ಸಹ ಆಗ ಸಿನಿಮಾಗಳಲ್ಲಿ ಭವಿಷ್ಯ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದರು. ನಾಗತಿಹಳ್ಳಿ ಚಂದ್ರಶೇಖರ್​ ಅವರೂ ಸಹ ತಮ್ಮ ಸಿನಿಮಾಗಳಲ್ಲಿ ಮೊದಲು ಕನ್ನಡಿಗರಿಗೆ ಆದ್ಯತೆ ನೀಡುವುದಾಗಿ ಸಾಕಷ್ಟು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಅಂತೆಯೇ ಅಕ್ಷಯ್ ಆನಂದ್​ ಪಾತ್ರಕ್ಕೆ ಸುದೀಪ್​ ಅವರನ್ನು ಆಯ್ಕೆ ಮಾಡುವಾಗ ಒಂದು ತಾಂತ್ರಿಕ ಸಮಸ್ಯೆ ಎದುರಾಗಿತ್ತು.

Sudeep, Sudeep help, Sudeep helps for senior actors, Sudeep writes letter for senior actors, ಸುದೀಪ್, ಸುದೀಪ್ ಸಹಾಯ, ಸುದೀಪ್ ಟ್ರಸ್ಟ್, ಹಿರಿಯ ಕಲಾವಿದರಗೆ ಸುದೀಪ್ ಸಹಾಯ, ಹಿರಿಯ ಕಲಾವಿದರ ಯೋಗಕ್ಷೇಮ ವಿಚಾರಿಸಿದ ಸುದೀಪ್, Kichcha Sudeep, Kotigobba 3 new poster, Kichcha Sudeepa Instagram, Kotigobba 3 movie, Kotigobba 3 Movie update, ಕಿಚ್ಚ ಸುದೀಪ್​, ಕೋಟಿಗೊಬ್ಬ 3 ಅಪ್ಡೇಟ್​, ಚಿತ್ರೀಕರಣ ಮುಗಿಸಿದ ಕೋಟಿಗೊಬ್ಬ 3 ಚಿತ್ರತಂಡ, ತೆರೆಗೆ ಬರಲು ಸಿದ್ಧವಾಗುತ್ತಿದೆ ಕೋಟಿಗೊಬ್ಬ 3 ಸಿನಿಮಾ, ಸ್ಯಾಂಡಲ್​ವುಡ್​ ನಟ ಕಿಚ್ಚ ಸುದೀಪ್​, sudeep, kotigobba 3, sandalwood, ಸುದೀಪ್, ಕೋಟಿಗೊಬ್ಬ 3, ಸ್ಯಾಂಡಲ್ ವುಡ್, ಕೋಟಿಗೊಬ್ಬ, ಕೋಟಿಗೊಬ್ಬ 3 ಅಪ್‌ಡೇಟ್, Kichcha sudeep update about kotigobba 3, kotigobba 3 post production, ಕೋಟಿಗೊಬ್ಬ3, ಕೋಟಿಗೊ್ಬ 3 ಹೊಸ ಪೋಸ್ಟರ್​, ಸುದೀಪ್​, ಕಿಚ್ಚ ಸುದೀಪ್​, ಸೂರಪ್ಪಬಾಬು , ನಿರ್ಮಾಪಕ ಸೂರಪ್ಪ ಬಾಬು ಹುಟ್ಟುಹಬ್ಬ, Kichcha Sudeep helps Kannada industry senior artists by providing necessary things ae
ಕಿಚ್ಚ ಸುದೀಪ್​


ಅಮೆರಿಕಾ ಅಮೆರಿಕಾ ಸಿನಿಮಾದ ಕ್ಯಾಮೆರಾ ಮೆನ್​ ಸನ್ನಿ ಜೋಸೆಫ್ ಅವರು ರಮೇಶ್​, ಹೇಮಾ ಹಾಗೂ ಸುದೀಪ್​ ಅವರನ್ನು ಒಂದೇ ಫ್ರೇಮಿನಲ್ಲಿ ತೋರಿಸುವಾದ ಸುದೀಪ್​ ಅವರ ಎತ್ತರ ಕೊಂಚ ಸಮಸ್ಯೆಯಾಗಿ ಕಾಡಿತ್ತಂತೆ. ಈ ಕಾರಣದಿಂದಾಗಿ ನಿರ್ದೇಶಕರು ಸುದೀಪ್​ ಅವರನ್ನು ಕೈ ಬಿಟ್ಟು ಅಕ್ಷಯ್ ಆನಂದ್​ ಅವರನ್ನು ಈ ಪಾತ್ರಕ್ಕೆ ತೆಗೆದುಕೊಂಡಿದ್ದರಂತೆ. ಈ ನಿರ್ಧಾರದ ಹಿಂದೆ ಯಾವ ವೈಯಕ್ತಿಕ ಕಾರಣಗಳೂ ಇರಲಿಲ್ಲ ಎಂದು ನಾಗತಿಹಳ್ಳಿ ಚಂದ್ರಶೇಖರ್ ಸಂದರ್ಶನವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:  Darshan: ದರ್ಶನ್​ ಮನವಿಗೆ ಕೈ ಜೋಡಿಸಿದ ಸ್ಯಾಂಡಲ್​ವುಡ್​ ತಾರೆಯರು..!

ಇನ್ನೇನು ಅಮೆರಿಕಾಗೆ ಶೂಟಿಂಗ್​ಗೆಂದು ತೆರಳುವ ಸಮಯದಲ್ಲಿ ಈ ಸಮಸ್ಯೆ ಎದುರಾಗಿ ಆಗ ಸುದೀಪ್ ​ಅವರನ್ನು ಕೈ ಬಿಡಲಾಗಿತ್ತಂತೆ. ಅದರಿಂದಾಗಿ ಸುದೀಪ್​ ಅವರಿಗೆ ತುಂಬಾ ನಿರಾಶೆಯಾಗಿತ್ತು. ಅದೊಂದು ಅಸಹಾಯಕ ಕ್ಷಣ. ನನಗೂ ತುಂಬಾ ನೋವಾಗಿತ್ತು. ಅದಾದ ನಂತರ ಮಾತಾಡ್​ ಮಾತಾಡ್ ಮಲ್ಲಿಗೆ ಸಿನಿಮಾದಲ್ಲಿ ವಿಷ್ಣುವರ್ಧನ್​ ಅವರ ಎದುರು ಸುದೀಪ್​ ಅವರಿಗೆ ಪ್ರಮುಖಪಾತ್ರದಲ್ಲಿ ನಟಿಸಲು ನಾನೇ ಮುಂದೆ ನಿಂತು ಒಪ್ಪಿಸಿದ್ದೆ. ಅದು ನನ್ನ ಸಮಾಧಾನಕ್ಕಾಗಿ ಎಂದು ನಿರ್ದೇಶಕರು ಹೇಳಿದ್ದಾರೆ.

1996ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಸಿನಿಮಾ ಈಗ ಕಿರುತೆರೆಯಲ್ಲಿ ಪ್ರಸಾರವಾದರೂ ಜನರು ಕಾದು ಕುಳಿತು ನೋಡುತ್ತಾರೆ. ಈ ಚಿತ್ರಕ್ಕೆ ತನ್ನದೇ ಆದ ಪ್ರೇಕ್ಷಕವರ್ಗವಿದೆ.
Published by: Anitha E
First published: June 18, 2021, 4:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories