Divorce: ನಾಗ ಚೈತನ್ಯ, ಸಮಂತಾ ವಿಚ್ಛೇದನ ಕುರಿತು ನಾಗಾರ್ಜುನ ಬಿಚ್ಚಿಟ್ಟ‌ ಶಾಕಿಂಗ್ ರಹಸ್ಯ!

Divorce: ಮದುವೆಯ ನಂತರ ತಾನು ನಟಿಸುತ್ತಿರುವ ಚಲನಚಿತ್ರಗಳಲ್ಲಿ ಬೋಲ್ಡ್ ಪಾತ್ರಗಳನ್ನು ತೆಗೆದುಕೊಳ್ಳುವ ಸಮಂತಾ ನಿರ್ಧಾರದ ಬಗ್ಗೆ ನಾಗ ಚೈತನ್ಯ ಅಸಮಾಧಾನ ಹೊಂದಿದ್ದಾರೆ ಎಂಬ ವದಂತಿಗಳೂ ಇದ್ದವು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈಗಾಗಲೇ ತೆಲುಗು ನಟ ನಾಗ ಚೈತನ್ಯ (Naga Chaitanya) ಮತ್ತು ಅವರ ಹೆಂಡತಿಯಾಗಿದ್ದ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರ ವೈವಾಹಿಕ ಜೀವನದಿಂದ ಹೊರ ಬಂದು ಮೂರು ತಿಂಗಳುಗಳೇ ಕಳೆದಿದ್ದರೂ ಸಹ ಇವರಿಬ್ಬರ ಬೇರ್ಪಡುವಿಕೆಯ ಬಗ್ಗೆ ಇನ್ನೂ ಕುತೂಹಲಕಾರಿ ಸುದ್ದಿಗಳು ಇವತ್ತಿನವರೆಗೂ ಹೊರ ಬರುತ್ತಲೇ ಇವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಸ್ಟಾರ್ ದಂಪತಿಗಳು ಅಕ್ಟೋಬರ್ 2021ರಲ್ಲಿ ತಮ್ಮ ಬೇರ್ಪಡುವಿಕೆಯನ್ನು (Separation) ಘೋಷಿಸಿದರು. ಅಂದಿನಿಂದ ಅವರಿಬ್ಬರು ಬೇರೆ ಬೇರೆ ಆಗಿರುವುದಕ್ಕೆ ಅನೇಕ ಸುದ್ದಿಗಳು ಆನ್‌ಲೈನ್ (Online Media) ಮಾಧ್ಯಮಗಳಲ್ಲಿ ಹರಿದಾಡಿದ್ದವು. ಅಭಿಮಾನಿಗಳಿಗೆ ಇವರ ಬೇರ್ಪಡುವಿಕೆಗೆ ಸ್ಪಷ್ಟವಾದ ಕಾರಣ ಏನು ಎಂದು ತಿಳಿದುಕೊಳ್ಳುವುದಕ್ಕೆ ಸಾಧ್ಯವೇ ಆಗಲಿಲ್ಲ.

ವಿಚ್ಛೇದನಕ್ಕೆ ಕಾರಣ
ಸಮಂತಾ ಮತ್ತು ನಾಗ ಚೈತನ್ಯ ತಮ್ಮ ವಿಚ್ಛೇದನದ ಕಾರಣದ ಬಗ್ಗೆ ಎಲ್ಲಿಯೂ ಬಾಯಿ ಬಿಟ್ಟಿರಲಿಲ್ಲ, ಆದರೆ ನಟ ನಾಗ ಚೈತನ್ಯ ಅವರ ತಂದೆ ಮತ್ತು ಹಿರಿಯ ನಟ ನಾಗಾರ್ಜುನ ಅವರು ಇವರಿಬ್ಬರ ವಿಚ್ಛೇದನಕ್ಕೆ ಕಾರಣವಾದ ಅಂಶವನ್ನು ಎಲ್ಲರ ಮುಂದೆಯೇ ತೆರೆದಿಟ್ಟಿದ್ದಾರೆ ಎಂದು ಹೇಳಬಹುದು.

ಮನೋರಂಜನಾ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟ ನಾಗಾರ್ಜುನ ಅವರು “ನಟಿ ಸಮಂತಾ ಅವರೇ ಮೊದಲು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ಎಂದು ಬಹಿರಂಗಪಡಿಸಿದ್ದಾರೆ. ನಂತರ ನನ್ನ ಮಗ ನಾಗ ಚೈತನ್ಯ ಅವಳ ನಿರ್ಧಾರವನ್ನು ಒಪ್ಪಿಕೊಂಡನು. ಆದರೆ ಅವನು ನನ್ನ ಬಗ್ಗೆ ಹೆಚ್ಚು ಚಿಂತಿತನಾಗಿದ್ದನು, ನಾನು ಏನು ಯೋಚಿಸುತ್ತೇನೆ ಮತ್ತು ಕುಟುಂಬದ ಒಳ್ಳೆಯ ಹೆಸರಿಗೆ ಎಲ್ಲಿ ಧಕ್ಕೆ ಬರುತ್ತದೆಯೋ ಎಂದು ಅವನು ಚಿಂತಿತನಾಗಿದ್ದನು" ಎಂದು ಅವರು ಹೇಳಿದರು.

ವೈವಾಹಿಕ ಜೀವನದಲ್ಲಿ ಸಮಸ್ಯೆ
ನಾನು ಈ ವಿಷಯ ಕೇಳಿ ಚಿಂತಿತನಾಗುತ್ತೇನೆ ಎಂದು ನಾಗ ಚೈತನ್ಯ ಭಾವಿಸಿದ್ದರಿಂದ ನನ್ನನ್ನು ತುಂಬಾ ಸಮಾಧಾನಪಡಿಸಿದನು. ಅವರಿಬ್ಬರೂ ಮದುವೆಯ ಜೀವನದಲ್ಲಿ ಒಟ್ಟಾಗಿ 4 ವರ್ಷಗಳನ್ನು ಕಳೆದಿದ್ದು, ಅವರ ನಡುವೆ ಈ ರೀತಿಯ ಯಾವುದೇ ಸಮಸ್ಯೆ ಬರಲಿಲ್ಲ.

ಇದನ್ನೂ ಓದಿ: Samantha: `ಊ ಅಂಟವಾ‘ ಬಳಿಕ ಸಮಂತಾಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು, ಮತ್ತೊಂದು ಐಟಂ ಸಾಂಗ್​ನಲ್ಲಿ ಬ್ಯೂಟಿ ಕ್ವೀನ್​!

ಇಬ್ಬರೂ ತುಂಬಾ ಹತ್ತಿರವಾಗಿದ್ದರು ಮತ್ತು ಅದು ಇಬ್ಬರೂ ಈ ನಿರ್ಧಾರವನ್ನು ಹೇಗೆ ತೆಗೆದುಕೊಂಡರು ಎಂದು ನನಗೆ ತಿಳಿದಿಲ್ಲ. ಅವರು 2021ರ ಹೊಸ ವರ್ಷವನ್ನು ಒಟ್ಟಿಗೆ ಆಚರಿಸಿದರು, ಅದರ ನಂತರವೇ ಅವರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಒಂದೊಂದಾಗಿ ಶುರು ಆಗಿವೆ ಎಂದು ತೋರುತ್ತದೆ" ಎಂದು ನಟ ನಾಗಾರ್ಜುನ ಸಂದರ್ಶನದಲ್ಲಿ ಹೇಳಿದರು.

ಮದುವೆಯ ನಂತರ ತಾನು ನಟಿಸುತ್ತಿರುವ ಚಲನಚಿತ್ರಗಳಲ್ಲಿ ಬೋಲ್ಡ್ ಪಾತ್ರಗಳನ್ನು ತೆಗೆದುಕೊಳ್ಳುವ ಸಮಂತಾ ನಿರ್ಧಾರದ ಬಗ್ಗೆ ನಾಗ ಚೈತನ್ಯ ಅಸಮಾಧಾನ ಹೊಂದಿದ್ದಾರೆ ಎಂಬ ವದಂತಿಗಳೂ ಇದ್ದವು. ವಾಸ್ತವವಾಗಿ, ಕೆಲವು ದೃಢೀಕರಿಸದ ವರದಿಗಳು ನಾಗ ಚೈತನ್ಯ ಮಾತ್ರವಲ್ಲ, ಅವರ ತಂದೆ ನಾಗಾರ್ಜುನ ಅಕ್ಕಿನೇನಿ ಅವರು ಸಮಂತಾ ಅವರ ಚಿತ್ರಗಳಲ್ಲಿ ಬೋಲ್ಡ್ ದೃಶ್ಯಗಳು ಮತ್ತು ಐಟಂ ನಂಬರ್ ಹಾಡಿಗೆ ಡ್ಯಾನ್ಸ್ ಮಾಡುವ ನಿರ್ಧಾರದಿಂದ ಸಂತೋಷವಾಗಿರಲಿಲ್ಲ ಎಂದು ಹೇಳಿವೆ.

ವದಂತಿಗಳು ಹೆಚ್ಚು
ಸಮಂತಾ ಅವರು ಚೈತನ್ಯ ಅವರಿಂದ ಬೇರ್ಪಟ್ಟ ಬಗ್ಗೆ ಹಲವಾರು ಸಂದರ್ಭಗಳಲ್ಲಿ ಮಾತನಾಡಿದ್ದಾರೆ. ಅವರಿಬ್ಬರು ಬೇರೆ ಬೇರೆಯಾದ ಮೇಲೆ ಸಮಂತಾ ಅವರು ಬೇರೆಯವರ ಜೊತೆ ಸಂಬಂಧವನ್ನು ಹೊಂದಿದ್ದಾರೆ ಎಂಬ ಅನೇಕ ತರಹದ ವದಂತಿಗಳು ಹರಿದಾಡಿದವು.

ಇದನ್ನೂ ಓದಿ: Pushpa: ಗಣೇಶ್​ ಮಾಸ್ಟರ್​ ಭರ್ಜರಿ ಸ್ಟೆಪ್ಸ್​ ಕಂಡು ಸಮಂತಾ ಕೆನ್ನೆ ಕೆಂಪಾಗಿದ್ದೇಕೆ? ಸಖತ್​ ಕ್ಯೂಟ್​ ಇದೆ ವಿಡಿಯೋ!

ಕೆಲವು ವರದಿಗಳು ಈ ತೆಲುಗು ನಟಿ ವಿವಾಹದ ನಂತರ ತನಗೆ ಮಕ್ಕಳು ಬೇಡ ಎಂದು ಹೇಳಿ ಗರ್ಭಪಾತ ಮಾಡಿಸಿಕೊಂಡಿದ್ದಾರೆ ಎಂದು ಹೇಳಿವೆ. ಸಮಂತಾ ಮತ್ತು ನಾಗ ಚೈತನ್ಯ ಅವರು ಅಕ್ಟೋಬರ್ 2, 2021 ರಂದು ಜಂಟಿ ಹೇಳಿಕೆ ನೀಡುವ ಮೂಲಕ ತಮ್ಮ ವಿಭಜನೆಯನ್ನು ಘೋಷಿಸಿದರು. ಅವರು ತಮ್ಮ ಮದುವೆಯನ್ನು ಕೊನೆಗೊಳಿಸುವ ಬಗ್ಗೆ ಅಧಿಕೃತ ಘೋಷಣೆ ಮಾಡಿದಾಗಿನಿಂದ, ನಟಿ ಸಮಂತಾ ಬಗ್ಗೆಯೇ ಹೆಚ್ಚು ವದಂತಿಗಳು ಕೇಳಿ ಬಂದಿದ್ದವು ಎಂದು ಹೇಳಬಹುದು.
Published by:vanithasanjevani vanithasanjevani
First published: