HOME » NEWS » Entertainment » NAGARJUNA AKKINENI GOT HIS FIRST DOSE OF COVID VACCINE HTV AE

Nagarjuna Akkineni: ಕೋವಿಡ್ ವ್ಯಾಕ್ಸಿನ್​ ಪಡೆದ ಕಿಂಗ್ ನಾಗಾರ್ಜುನ: ಲಸಿಕೆ ಪಡೆದ ಟಾಲಿವುಡ್‍ನ ಮೊದಲ ಸ್ಟಾರ್!

Wild Dog: ಲಾಕ್‍ಡೌನ್ ಹಾಗೂ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಶೂಟಿಂಗ್‍ಗೆ ಅವಕಾಶ ಸಿಕ್ಕಿದ್ದೂ ತಡವಾಗಿಯೇ. ಹೀಗಾಗಿಯೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ರಂಗಕ್ಕೆ ಎಂಟ್ರಿಕೊಟ್ಟ ನಾಗಾರ್ಜುನ ಈಗಾಗಲೇ ಒಂದು ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ್ದು, ಸದ್ಯ ರಿಲೀಸ್‍ಗೆ ಎದುರು ನೋಡುತ್ತಿದ್ದಾರೆ.

news18-kannada
Updated:March 17, 2021, 6:33 PM IST
Nagarjuna Akkineni: ಕೋವಿಡ್ ವ್ಯಾಕ್ಸಿನ್​ ಪಡೆದ ಕಿಂಗ್ ನಾಗಾರ್ಜುನ: ಲಸಿಕೆ ಪಡೆದ ಟಾಲಿವುಡ್‍ನ ಮೊದಲ ಸ್ಟಾರ್!
ನಾಗಾರ್ಜುನ ಅಕ್ಕಿನೇನಿ
  • Share this:
ಟಾಲಿವುಡ್ ಕಿಂಗ್ ನಾಗಾರ್ಜುನ ಇಂದು ಕೋವಿಡ್ ಲಸಿಕೆ ಪಡೆದಿದ್ದಾರೆ. ಮಾತ್ರವಲ್ಲ ಯಾರಿಗೆಲ್ಲ ಕೋವಿಡ್ ಲಸಿಕೆ ಪಡೆಯುವ ಮಾರ್ಗಸೂಚಿ ಅನ್ವಯಿಸುತ್ತದೆಯೋ ಅವರೆಲ್ಲರೂ ತಪ್ಪದೇ ಲಸಿಕೆ ಪಡೆಯಿರಿ ಎಂದೂ ಮನವಿ ಮಾಡಿದ್ದಾರೆ. 61 ವರ್ಷದ ಅಕ್ಕಿನೇನಿ ನಾಗಾರ್ಜುನ ಹೈದರಾಬಾದ್‍ನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಈ ಲಸಿಕೆ ಪಡೆದಿದ್ದಾರೆ. ಆ ಮೂಲಕ ಕೋವಿಡ್ ಲಸಿಕೆ ಪಡೆದ ತೆಲುಗು ಚಿತ್ರರಂಗದ ಮೊದಲ ಸೂಪರ್​ ಸ್ಟಾರ್​ ಎಂಬ ದಾಖಲೆ ಸಹ ಬರೆದಿದ್ದಾರೆ. ಕೊವ್ಯಾಕ್ಸಿನ್‍ನ ಮೊದಲ ಡೋಸ್ ಪಡೆದ ಬಳಿಕ ಟ್ವೀಟ್​ ಮಾಡಿರುವ ಕಿಂಗ್ ನಾಗಾರ್ಜುನ, ಯಾವುದೇ ಗೊಂದಲ, ಸಮಸ್ಯೆಯಿಲ್ಲದೇ ಕೋವಿಡ್ ಲಸಿಕೆ ಪಡೆದಿದ್ದೇನೆ ಎಂದು ಸಂತಸದಿಂದಲೇ ಮಾಹಿತಿ ಹಂಚಿಕೊಂಡಿದ್ದಾರೆ.  ಇನ್ನು ನಾಗಾರ್ಜುನ ಅವರ ಸಿನಿಮಾ ವಿಷಯಕ್ಕೆ ಬರುವುದಾದರೆ 2019ರಲ್ಲಿ ಅವರು ನಟಿಸಿದ್ದ ಮನ್ಮಥುಡು ರಿಲೀಸ್ ಬಳಿಕ ಮತ್ತೆ ಯಾವ ಸಿನಿಮಾ ಕೂಡ ರಿಲೀಸ್ ಆಗಿರಲಿಲ್ಲ. ಇನ್ನು ಕೊರೊನಾ ಹಾವಳಿಯಿಂದಾಗಿ 2020 ಎಲ್ಲರ ಜೀವನದಲ್ಲೂ 2020 ಆಡಿಕೊಂಡೇ ವರ್ಷಕ್ಕೆ ಅಂತ್ಯ ಹಾಡಿತ್ತು.

ಇನ್ನು, ಲಾಕ್‍ಡೌನ್ ಹಾಗೂ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಶೂಟಿಂಗ್‍ಗೆ ಅವಕಾಶ ಸಿಕ್ಕಿದ್ದೂ ತಡವಾಗಿಯೇ. ಹೀಗಾಗಿಯೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ರಂಗಕ್ಕೆ ಎಂಟ್ರಿಕೊಟ್ಟ ನಾಗಾರ್ಜುನ ಈಗಾಗಲೇ ಒಂದು ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ್ದು, ಸದ್ಯ ರಿಲೀಸ್‍ಗೆ ಎದುರು ನೋಡುತ್ತಿದ್ದಾರೆ.

Got my #covaxin jab yesterday .. absolutely no down time👍😊I urge whoever is eligible to take the vaccine!!

ಹೌದು, ಕಿಂಗ್ ನಾಗಾರ್ಜುನ ನಟಿಸಿರುವ ಆಕ್ಷನ್ ಥ್ರಿಲ್ಲರ್ ಸಿನಿಮಾ ವೈಲ್ಡ್ ಡಾಗ್, ಇದೇ ಏಪ್ರಿಲ್ 2ರಂದು ರಿಲೀಸ್ ಆಗಲಿದೆ. ಇತ್ತೀಚೆಗಷ್ಟೇ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ನಾಗಾರ್ಜುನ ಹಾಗೂ ವೈಲ್ಡ್ ಡಾಗ್ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ವಿಜಯ್ ವರ್ಮಾ ಅಲಿಯಾಸ್ ವೈಲ್ಡ್ ಡಾಗ್ ಎಂಬ ಎನ್‍ಐಎ ಅರ್ಥಾತ್ ನ್ಯಾಷನಲ್ ಇನ್ವಿಸ್ಟಿಗೇಟಿವ್ ಏಜೆನ್ಸಿಯ ಏಜೆಂಟ್ ಪಾತ್ರದಲ್ಲಿ ಮಿಂಚಿದ್ದಾರೆ ಕಿಂಗ್ ನಾಗಾರ್ಜುನ.ಅಹಿಶೋರ್ ಸೊಲೊಮನ್ ನಿರ್ದೇಶನದ ವೈಲ್ಡ್ ಡಾಗ್ ಈಗಾಗಲೇ ಟ್ರೇಲರ್​ ಮೂಲಕವೇ ಸಾಕಷ್ಟು ಸಿನಿಪ್ರಿಯರನ್ನು ಸೆಳೆಯುವಲ್ಲಿ ಸಕ್ಸಸ್ ಆಗಿದೆ. ವಿಶೇಷ ಅಂದರೆ ಕೇವಲ 70 ದಿನಗಳಲ್ಲಿ ಬರೋಬ್ಬರಿ 300 ಲೊಕೇಷನ್‍ಗಳಲ್ಲಿ ಶೂಟಿಂಗ್ ಮಾಡಿದ್ದಾರೆ ಚೊಚ್ಚಲ ಬಾರಿಗೆ ನಿರ್ದೇಶಿಸುತ್ತಿರುವ ಸೊಲೊಮನ್.

ಹೈದರಾಬಾದ್ ಬಾಂಬ್ ಬ್ಲಾಸ್ಟ್ ಕುರಿತ ಕಥೆ

ವೈಲ್ಡ್ ಡಾಗ್, 2007ರ ಆಗಸ್ಟ್ 25ರಂದು ಹೈದರಾಬಾದ್‍ನಲ್ಲಿ ನಡೆದ ಅವಳಿ ಬಾಂಬ್ ಬ್ಲ್ಯಾಸ್ಟ್​ ಘಟನೆಯಾಧಾರಿತ ಸಿನಿಮಾ ಎನ್ನಲಾಗುತ್ತಿದೆ. ಲುಂಬಿಣಿ ಪಾರ್ಕ್ ಹಾಗೂ ಗೋಕುಲ್ ಚಾಟ್ ಭಂಡಾರ್​ಗಳಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಬರೋಬ್ಬರಿ 40ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪಾಕಿಸ್ತಾನ ಮೂಲದ ಭಯೋತ್ಪಾದಕರು ಈ ಬಾಂಬ್ ದಾಳಿ ನಡೆಸಿರುವುದು ಗೊತ್ತಾಗಿ, ಹೈದರಾಬಾದ್ ಪೊಲೀಸರು ಉಗ್ರರ ಬೆನ್ನುಹತ್ತಿದರು. ಈ ಎಲ್ಲ ಬೆಳವಣಿಗೆಗಳ ಸುತ್ತ ವೈಲ್ಡ್ ಡಾಗ್ ಕಥೆ ಹೆಣೆಯಲಾಗಿದ್ದು, ಪ್ರಕರಣದ ತನಿಖಾಧಿಕಾರಿ ಪಾತ್ರದಲ್ಲಿ ನಾಗಾರ್ಜುನ್ ನಟಿಸಿದ್ದಾರೆ.

ಇದನ್ನೂ ಓದಿ: Raveena Tandon: 16ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಟಿಪ್​ ಟಿಪ್​ ಹುಡುಗಿ ರವೀನಾ ಟಂಡನ್​ ಮಗಳು ರಾಶಾ ತದಾನಿ..!

ವೈಲ್ಡ್ ಡಾಗ್ ಚಿತ್ರದಲ್ಲಿ ನಾಗಾರ್ಜುನ ನಟಿಸಿರುವ ವಿಜಯ್ ವರ್ಮಾ ಪತ್ನಿ ಪ್ರಿಯಾ ವರ್ಮಾ ಪಾತ್ರದಲ್ಲಿ ಬಾಲಿವುಡ್ ನಟಿ ದಿಯಾ ಮಿರ್ಜಾ ನಟಿಸಿದ್ದಾರೆ. ಮತ್ತೊಬ್ಬ ಎನ್‍ಐಎ ಅಧಿಕಾರಿ ಆರ್ಯ ಪಂಡಿತ್ ಪಾತ್ರದಲ್ಲಿ ಸಯಾಮಿ ಖೇರ್, ಡಿಜಿಪಿ ಹೇಮಂತ್ ಪಾತ್ರದಲ್ಲಿ ಅತುಲ್ ಕುಲಕರ್ಣಿ, ಅಲಿ ರೆಜಾ, ಅವ್ಜಿತ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ವೈಲ್ಡ್ ಡಾಗ್ ಚಿತ್ರವನ್ನು ಓಟಿಟಿಯಲ್ಲಿ ನೇರವಾಗಿ ರಿಲೀಸ್ ಮಾಡುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಆ ಸುದ್ದಿಗೆ ಬ್ರೇಕ್ ಹಾಕಿದ ಚಿತ್ರತಂಡ ಏಪ್ರಿಲ್ 2ರಂದು ಥಿಯೇಟರ್ ರಿಲೀಸ್ ಮಾಡಲಿದ್ದೇವೆ ಎಂದು ಡೇಟ್ ಅನೌನ್ಸ್ ಮಾಡಿತ್ತು.

ಆದರೆ ಈಗ ಮಹಾರಾಷ್ಟ್ರ, ಕೇರಳ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಈಗೀಗ ಕೊರೋನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಕಠಿಣ ಕ್ರಮ ಕೈಗೊಳ್ಳುವ ಎಲ್ಲ ಸೂಚನೆಗಳೂ ಇವೆ. ಹೀಗಾಗಿಯೇ ಇತ್ತೀಚೆಗಿನ ಬೆಳವಣಿಗೆಗಳು ಮತ್ತೊಮ್ಮೆ ಚಿತ್ರರಂಗಗಳಲ್ಲಿ ಆತಂಕ ಮೂಡಿಸಿದೆ.
Published by: Anitha E
First published: March 17, 2021, 6:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories