ನಾಗರಹಾವು: ಮೂರನೇ ದಿನಕ್ಕೆ ಹಾಕಿದ್ದ ಹಣ ವಾಪಸ್​!

news18
Updated:July 23, 2018, 3:10 PM IST
ನಾಗರಹಾವು: ಮೂರನೇ ದಿನಕ್ಕೆ ಹಾಕಿದ್ದ ಹಣ ವಾಪಸ್​!
news18
Updated: July 23, 2018, 3:10 PM IST
ಆನಂದ್ ಸಾಲುಂಡಿ, ನ್ಯೂಸ್​ 18 ಕನ್ನಡ

ಒಂದೊಳ್ಳೆ ಸಿನಿಮಾಗೆ ಯಾವತ್ತೂ ಸಾವಿಲ್ಲ ಅನ್ನೋದು 'ನಾಗರಹಾವು' ಮೂಲಕ ಸಾಬೀತಾಗಿದೆ. 46 ವರ್ಷಗಳ ನಂತರ ಬಂದ ಈ ಚಿತ್ರಕ್ಕೆ ಮೊದಲ ಮೂರು ದಿನ ಅಭೂತಪೂರ್ವ ಜನಬೆಂಬಲ ಸಿಕ್ಕಿದೆ.

ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕ್ಲಾಸಿಕ್ ಕಲ್ಟ್ `ನಾಗರಹಾವು' 46 ವರ್ಷಗಳ ನಂತರ ಹೊಸರೂಪದಲ್ಲಿ ಬಂದಿದೆ. ತಾಂತ್ರಿಕತೆಯ ನವ ನಾವಿನ್ಯತೆ ತುಂಬಿಕೊಂಡಿರೋ 'ನಾಗರಹಾವು' ನೋಡಲು ವಿಷ್ಣುವರ್ಧನ್ ಅಭಿಮಾನಿಗಳು ಮುಗಿ ಬೀಳುತ್ತಿದ್ದಾರೆ.

ವಿಷ್ಣುವರ್ಧನ್ ಅಭಿಮಾನಿಗಳ ಪಾಲಿಗೆ 'ನಾಗರಹಾವು' ಮತ್ತೆ ಬಂದಿರೋದು ಅಷಾಢದಲ್ಲೂ ಹಬ್ಬದ ವಾತವಾರಣವನ್ನ ಮೂಡಿಸಿದೆ. ಪರಿಣಾಮ ಮೊದಲ ಮೂರು ದಿನದಲ್ಲೇ ಹೊಸ ರೂಪಕ್ಕಾಗಿ ಖರ್ಚು ಮಾಡಿರೋ ಬಜೆಟ್ ವಾಪಸ್ ಆಗಿರುವ ಸುದ್ದಿ ಕೇಳಿ ಬರುತ್ತಿದೆ.

ಚಿತ್ರರಸಿಕರಷ್ಟೇ ಅಲ್ಲದೇ ಚಿತ್ರೋದ್ಯಮದ ಮಂದಿ ಕೂಡ 'ನಾಗರಹಾವು' ಕಂಡು ಸಂಭ್ರಮಿsಸುತ್ತಿದ್ದು, ನಿನ್ನೆ ಮಧ್ಯಾಹ್ನ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ನರ್ತಕಿ ಚಿತ್ರಮಂದಿರದಲ್ಲಿ ಚಿತ್ರ ನೋಡಿದ್ದಾರೆ. ಒಟ್ಟಾರೆ ಒಂದೊಳ್ಳೆ ಚಿತ್ರಕ್ಕೆ ಪ್ರೇಕ್ಷಕರ ಕೊರೆತೆ ಎಂದಿಗೂ ಆಗದು ಅನ್ನೋದನ್ನ 'ನಾಗರಹಾವು' ಮತ್ತೆ ಸಾಬೀತು ಮಾಡಿದೆ ಅಂದರೆ ತಪ್ಪಾಗದು.

 
First published:July 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...