• Home
  • »
  • News
  • »
  • entertainment
  • »
  • ಕಾಲೇಜಿನಲ್ಲಿ ಆರತಿಯನ್ನ ಚುಡಾಯಿಸುತ್ತಿದ್ದ ಅಂಬಿ: ನಾಗರಹಾವು ಚಿತ್ರದಲ್ಲಿ ಅದೇ ದೃಶ್ಯಕ್ಕೆ ಸಾಕ್ಷಿಯಾಯಿತು ಈ ಜೋಡಿ

ಕಾಲೇಜಿನಲ್ಲಿ ಆರತಿಯನ್ನ ಚುಡಾಯಿಸುತ್ತಿದ್ದ ಅಂಬಿ: ನಾಗರಹಾವು ಚಿತ್ರದಲ್ಲಿ ಅದೇ ದೃಶ್ಯಕ್ಕೆ ಸಾಕ್ಷಿಯಾಯಿತು ಈ ಜೋಡಿ

ಆರತಿ ಹಾಗೂ ಅಂಬರೀಷ್​

ಆರತಿ ಹಾಗೂ ಅಂಬರೀಷ್​

ಒಂದೇ ಕ್ಯಾಂಪಸ್​ನಲ್ಲಿ ಆಗಾಗ ಎದುರಾಗುತ್ತಿದ್ದ ಆರತಿ ಹಾಗೂ ಅಂಬಿಗೆ ಮುಖ ಪರಿಚಯವಿತ್ತಂತೆ. ಆರತಿ ಅವರಿಗೆ ಅಂಬರೀಷ್​ ಕೇವಲ ಚುಡಾಯಿಸುವ ಉಡಾಳನಾಗಿ ನೆನಪಿನಲ್ಲಿದ್ದರು.

  • Share this:

ರೆಬೆಲ್​ಸ್ಟಾರ್​​ ಅಂಬರೀಷ್​ ಅವರ ಜನ್ಮದಿನ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಶುಭಾಶಯದ ಮಹಾಪೂರವೇ ಹರಿದು ಬರುತ್ತಿದೆ. ಚಾಲೆಂಜಿಂಗ್​​ ಸ್ಟಾರ್​ ದರ್ಶನ್, ಸುದೀಪ್​, ರಮೇಶ್ ಅರವಿಂದ್​ ಸೇರಿದಂತೆ ಇತರೆ ಸೆಲೆಬ್ರಿಟಿಗಳು ಅಂಬರೀಷ್​ ಅವರ ಹುಟ್ಟುಹಬ್ಬಕ್ಕೆ ಟ್ವಿಟ್ಟರ್​ನಲ್ಲಿ ಶುಭಾಶಯ ಕೋರಿದ್ದಾರೆ. ರೆಬೆಲ್​ ಸ್ಟಾರ್​ ಅಂಬರೀಶ್​ ಕನ್ನಡ ಚಿತ್ರರಂಗದ ಮೇರು ನಟ. 1971 ರಲ್ಲಿ ಪುಟ್ಟಣ್ಣ ಕಣಗಾಲ್​ ನಿರ್ದೇಶನದ ನಾಗರಹಾವು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರು ಅವರು, ರಾಜಕೀಯದಲ್ಲಿ ಸಕ್ರಿಯವಾಗಿದ್ದರು. ಮಂಡ್ಯದ ಗಂಡು ಎಂದೇ ಜನಪ್ರಿಯವಾಗಿದ್ದ ಅಂಬಿ ಹಾಗೂ ಆರತಿ ಅವರು ಸಿನಿಮಾ ರಂಗಕ್ಕೆ ಬರುವ ಮೊದಲೇ ಪರಿಚಯವಿತ್ತು. 


ಒರಟು ನಡೆ, ಗಡುಸು ಮಾತು, ಯಾರ ಮಾತು ಕೇಳದ ರೆಬೆಲ್​ ಅಂಬಿಯ ಮನಸ್ಸು ಕಲ್ಮಶವಿಲ್ಲದ ಪ್ರೀತಿಯಿಂದ ತುಂಬಿತ್ತು. ಅದಕ್ಕೆ ಅವರನ್ನು ಕಂಡರೆ ಹೆದರುವವರೂ ಅಂಬಿಯನ್ನು ಇಷ್ಟಪಡುತ್ತಿದ್ದರು. ಅಂಬಿ ಹಾಗೂ ಆರತಿ ಮೈಸೂರಿನಲ್ಲಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರಂತೆ. ಆಗ ಒಬ್ಬರಿಗೊಬ್ಬರು ಪರಿಚಯವೇ ಇರಲಿಲ್ಲ. ಆಗಲೇ ತನ್ನ ಪೋಲಿ ಸ್ನೇಹಿತರೊಂದಿಗೆ ಸೇರಿ ಅಂಬಿ ಹುಡುಗಿಯರನ್ನು ಚುಡಾಯಿಸುತ್ತಿದ್ದರಂತೆ.


29th wedding anniversary of sumalatha and Ambareesh, Sumalath penned an letter, emotional letter from sumalatha, Ambareesh, Ambareesh death anniversary, Ambareesh death date, Rebel star ambareesh, rebel star ambarish, ambareesh date of birth, Sumalatha ambareesh, Abhishek Ambareesh, Darshan, D Boss Darshan, Darshan tweet on ambareesh, ಅಂಬರೀಶ್, ಅಂಬರೀಶ್ ಪುಣ್ಯ ತಿಥಿ, ಸುಮಲತಾ ಅಂಬರೀಶ್, ಅಭಿಷೇಕ್​ ಅಂಬರೀಶ್, ದರ್ಶನ್​, ಅಂಬಿ ಸಮಾದಿ, ರೆಬೆಲ್​ ಸ್ಟಾರ್​ ಅಂಬರೀಶ್, ಸುಮಲತಾ ಬರೆದ ಪತ್ರ, ಭಾವುಕರಾಗಿ ಅಂಬಿಗಾಗಿ ಪತ್ರ ಬರೆದ ಸುಮಲತಾ, 29ನೇ ವಿವಾಹ ವಾರ್ಷಿಕೋತ್ಸವ, ಅಂಬಿಯನ್ನು ನೆನೆದ ಸುಮಲತಾ, ಅಭಿಷೇಕ್​ ಅಂಬರೀಷ್​
ಅಂಬರೀಷ್​


ಒಂದೇ ಕ್ಯಾಂಪಸ್​ನಲ್ಲಿ ಆಗಾಗ ಎದುರಾಗುತ್ತಿದ್ದ ಆರತಿ ಹಾಗೂ ಅಂಬಿಗೆ ಮುಖ ಪರಿಚಯವಿತ್ತಂತೆ. ಆರತಿ ಅವರಿಗೆ ಅಂಬರೀಷ್​ ಕೇವಲ ಚುಡಾಯಿಸುವ ಉಡಾಳನಾಗಿ ನೆನಪಿನಲ್ಲಿದ್ದರು. ಪುಟ್ಟಣ್ಣ ಕಣಗಾಲರ 'ನಾಗಹಾವು' ಸಿನಿಮಾಗೆ ಅಂಬರೀಷ್​ ಆಯ್ಕೆಯಾದಗಲೇ ಅಂಬಿ ಹುಡುಗಿಯರನ್ನು ಚುಡಾಯಿಸುತ್ತಿದ್ದ ವಿಷಯ ಗೊತ್ತಾಗಿದ್ದು.


ಇದನ್ನೂ ಓದಿ: ತಮ್ಮೊಂದಿಗೆ ಕಾರಲ್ಲೇ ಕುಳಿತ್ತಿದ್ದ ನಟ ಅಶ್ವತ್ಥ್​​ಗೆ ಗದರಿಸಿದ್ದ ಅಂಬರೀಷ್​: ದಾರಿ ಮಧ್ಯೆ ಇಳಿದು ಬಸ್​ ಏರಿದ್ದ ಹಿರಿಯ ನಟ..!


ಈ ಕುರಿತಂತೆ ನಟಿ ಆರತಿ ಸಾಕಷ್ಟು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಸಿನಿಮಾದ ಚಿತ್ರೀಕರಣದ ಸೆಟ್​ನಲ್ಲಿ ಮೊದಲ ಬಾರಿಗೆ ಅಂಬಿಯನ್ನು ಎದುರು ಕಂಡ ಆರತಿ ಅವರ ಪ್ರತಿಕ್ರಿಯೆ ಇವನಾ... ಈ ಸಿನಿಮಾಗೆ ಆಯ್ಕೆಯಾಗಿರೋದು... ಕಾಲೇಜಿನಲ್ಲಿ ನನ್ನ ಚುಡಾಯಿಸುತ್ತಿದ್ದವ ಅಂತ ಹುಬ್ಬೇರಿಸಿದ್ದರಂತೆ.


ಕಾಕತಾಳೀಯವೆಂಬಂತೆ ಅವರ ಕಾಲೇಜು ಜೀವನದ ಈ ಘಟನೆ ಅಂಬಿ ಅಭಿನಯದ 'ನಾಗರಹಾವು' ಮೊದಲ ಸಿನಿಮಾದಲ್ಲೂ ಮರುಕಳಿಸಿತ್ತು. ಕಾಲೇಜಿಗೆ ಹೋಗುವಾಗ ಅಂಬಿ, ಆರತಿಯನ್ನು ಏನ್​ ಬುಲ್​ ಬುಲ್​ ಮಾತಾಡ್ಕಿಲ್ವಾ ಎಂದು ಚುಡಾಯಿಸುತ್ತಾರೆ. ಆದರೆ ಇಲ್ಲಿ ಬೈಕ್​ ಬದಲಾಗಿ ಸೈಕಲ್​ ಇರುತ್ತೆ ಅಷ್ಟೆ ಅದಕ್ಕೆ ಅನ್ನಿಸುತ್ತೆ ಅಷ್ಟು ಸುಲಭವಾಗಿ ಅವರು 'ನಾಗರಹಾವು' ಸಿನಿಮಾದ ಆ ದೃಶ್ಯದಲ್ಲಿ ಅಭಿನಯಿಸಿದ್ದು


ಇಂದು ಅಂಬರೀಷ್​ ಅವರ 69ನೇ ಹುಟ್ಟುಹಬ್ಬ. ಅಂಬಿ ಅಗಲಿದ ನಂತರ ಆಚರಿಸಲಾಗುತ್ತಿರುವ ಮೂರನೇ ಹುಟ್ಟುಹಬ್ಬ ಇದಾಗಿದ್ದು, ಕಳೆದ ವರ್ಷದ ಸಹ ಕೊರೋನಾ ಲಾಕ್​ಡೌನ್​ನಿಂದಾಗಿ ಸಾರ್ವಜನಿಕವಾಗಿ ಅಂಬರೀಷ್​ ಅವರ ಹುಟ್ಟುಹಬ್ಬ ಆಚರಿಸಲಾಗಲಿಲ್ಲ. ಈ ಸಲವೂ ಸಹ ಅಭಿಮಾನಿಗಳು ತಮ್ಮ ಮನೆ ಹಾಗೂ ಮನದಲ್ಲಿ ನೆಚ್ಚಿನನಟ ಹುಟ್ಟುಹಬ್ಬ ಆಚರಿಸುವಂತೆ ಮನವಿ ಮಾಡಿದ್ದಾರೆ.


ಇದನ್ನೂ ಓದಿ: Ambareesh Birthday: ನಿಜಕ್ಕೂ ಮಿಸ್​ ಮಾಡುತ್ತಿದ್ದೇವೆ ಅಂಬಿ ಮಾಮ ಎಂದ ಸುದೀಪ್​..!


ಇನ್ನು ಬೆಳಿಗ್ಗೆಯಷ್ಟೆ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅಂಬರೀಷ್​ ಅವರ ಸ್ಮಾರಕಕ್ಕೆ ಭೇಟಿ ಕೊಟ್ಟು ಅಲ್ಲಿ ಪೂಜೆ ಸಲ್ಲಿಸಿಸದ್ದಾರೆ. ನಂತರ ಮಂಡ್ಯಕ್ಕೆ ಸಹ ಹೋಗಿ ಅಲ್ಲಿಯೂ ಪೂಜೆ ಮಾಡಿದ್ದಾರೆ. ಇನ್ನು ಕಳೆದ ವರ್ಷ ಅಂಬರೀಷ್​ ಅವರ ಹುಟ್ಟುಹಬ್ಬದಂದು ಸಮಾಧಿ ಬಳಿಯೇ ಕೇಕ್​ ಕತ್ತರಿಸಿದ ಅಭಿಷೇಕ್​ ಅಂಬರೀಷ್, ತಮ್ಮ​ ಅಭಿನಯದ ಎರಡನೇ ಸಿನಿಮಾ ಬ್ಯಾಡ್​ ಮ್ಯಾನರ್ಸ್​ ಚಿತ್ರದ ಪೋಸ್ಟರ್​ ರಿಲೀಸ್​ ಮಾಡಲಾಗಿತ್ತು. ಅಭಿಷೇಕ್​ ಅಂಬರೀಷ್​ ಅವರ ಮೊದಲ ಸಿನಿಮಾ ಅಮರ್​ ರಿಲೀಸ್ ಆಗುವ ಮುನ್ನವೇ ಇಹಲೋಕ ತ್ಯಜಿಸಿದ್ದರು.

Published by:Anitha E
First published: