2011ರಲ್ಲಿ ‘ಕ್ರಿಕೆಟ್, ಗರ್ಲ್ಸ್ ಮತ್ತು ಬಿಯರ್’ ಚಿತ್ರದ ಮೂಲಕ ತೆಲುಗು (Tollywood) ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ಅಂತ ಹೇಳಿದರೆ ಹೆಚ್ಚು ಸಿನಿ ಪ್ರೇಕ್ಷಕರಿಗೆ ಬಹುಶಃ ಅರ್ಥವಾಗಲಿಕ್ಕಿಲ್ಲ. ಅದೇ 2014 ರಲ್ಲಿ ಬಿಡುಗಡೆಯಾದ ‘ಊಹಲು ಗುಸುಗುಸುಲಾಡೆ’ ಎಂಬ ಚಿತ್ರದ ನಾಯಕ ಅಂತ ಹೇಳಿದರೆ ಸಾಕು, ಥಟ್ಟನೆ ಎಲ್ಲರ ಕಣ್ಮುಂದೆ ಬರುವುದು ತೆಲುಗು ನಟ ನಾಗ ಶೌರ್ಯ (Naga shourya) ಅವರ ಮುಖ. ನಂತರ ಅವರು ಅದೇ ವರ್ಷ ಎಂದರೆ 2014 ರಲ್ಲಿ ಬಿಡುಗಡೆಯಾದ ‘ಚಂದಮಾಮ ಕಥಾಲು’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಹ ಬಂತು.
ಹೌದು.. ಈ ಚಿತ್ರದಲ್ಲಿ ತುಂಬಾನೇ ಸರಳವಾಗಿ ನಟಿಸಿದ್ದ ನಾಗ ಶೌರ್ಯ ಅವರ ಪಾತ್ರ ಸಿನಿ ಪ್ರೇಕ್ಷಕರಿಗೆ ತುಂಬಾನೇ ಇಷ್ಟವಾಗಿತ್ತು ಅಂತ ಹೇಳಬಹುದು. ಇವರ ಬಗ್ಗೆ ಈಗೇಕೆ ಮಾತಾಡುತ್ತಿದ್ದೇವೆ ಅಂತ ನಿಮಗೆ ಅನ್ನಿಸಬಹುದು ಅಲ್ಲವೇ? ವಿಷಯ ಇಲ್ಲಿದೆ ನೋಡಿ.. ಈ ನಟ ಇನ್ನೂ ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದಾರಂತೆ (Marriage) ಎಂದು ತಿಳಿದು ಬಂದಿದೆ.
ಸಾಮಾನ್ಯವಾಗಿ ಈ ಚಲನಚಿತ್ರ ನಟರು ಮತ್ತು ನಟಿಯರು ಮದುವೆ ಆಗಲಿದ್ದಾರೆ ಎಂಬ ಸುದ್ದಿ ಸ್ವಲ್ಪ ಹರಿದಾಡಿದರೂ ಸಾಕು, ಅಭಿಮಾನಿಗಳಿಗೆ ಯಾರನ್ನು ಮದುವೆಯಾಗುತ್ತಿದ್ದಾರೆ? ಎಲ್ಲಿ ಮದುವೆ ಆಗುತ್ತಿದ್ದಾರೆ? ಮದುವೆಯಾಗೋ ಸಂಗಾತಿ ಏನು ಕೆಲಸ ಮಾಡಿಕೊಂಡಿದ್ದಾರೆ? ಅಂತೆಲ್ಲಾ ಪ್ರಶ್ನೆಗಳು ಮನಸ್ಸಿನಲ್ಲಿ ಸುಳಿದಾಡುತ್ತಿರುತ್ತವೆ .
ನಟ ನಾಗ ಶೌರ್ಯ ಮದುವೆಯಾಗಿದ್ದು ಯಾರನ್ನು?
ನಟ ನಾಗ ಶೌರ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ‘ಕೃಷ್ಣ ವೃಂದಾ ವಿಹಾರಿ’ ಚಿತ್ರದ ಯಶಸ್ಸಿನ ಗುಂಗಿನಲ್ಲಿ ಇರುವಾಗಲೇ, ತಮ್ಮ ಜೀವನದ ಮತ್ತೊಂದು ಮುಖ್ಯವಾದ ಘಟ್ಟವಾದ ಮದುವೆಯ ಬಗ್ಗೆ ಒಳ್ಳೆಯ ಸುದ್ದಿಯನ್ನು ಕೊಟ್ಟಿದ್ದರು ನಟ. ಒಟ್ಟಿನಲ್ಲಿ ಈ ವಿವಾಹ ಅಭಿಮಾನಿಗಳಿಗೆ ಸಂತೋಷವನ್ನುಂಟು ಮಾಡಿದೆ ಅಂತ ಹೇಳಬಹುದು. ನಟ ಬೆಂಗಳೂರು ಮೂಲದ ಇಂಟೀರಿಯರ್ ಡಿಸೈನರ್ ಆದ ಅನುಷಾ ಶೆಟ್ಟಿ ಅವರನ್ನು ಮದುವೆಯಾಗಿದ್ದಾರೆ.
ಅನುಷಾ ಶೆಟ್ಟಿ ಜೊತೆ ನಾಗ ಶೌರ್ಯ ಮದುವೆ ಯಾವಾಗ?
ನಟಿ ಸಮಂತಾ ಅವರೊಂದಿಗೆ ನಾಗ ಶೌರ್ಯ ಅವರ ‘ಓಹ್ ಬೇಬಿ’ ಅಭಿಮಾನಿಗಳಿಂದ ಸಾಕಷ್ಟು ಪ್ರೀತಿಯನ್ನು ಗಳಿಸಿದ್ದು ನಮಗೆಲ್ಲಾ ಗೊತ್ತೇ ಇದೆ. ಈ ನಟ ಇದನ್ನು ಹೊರತುಪಡಿಸಿ ಸಹ ಕೆಲವು ಯಶಸ್ವಿ ಚಿತ್ರಗಳನ್ನು ತೆಲುಗು ಚಿತ್ರೋದ್ಯಮಕ್ಕೆ ನೀಡಿದ್ದಾರೆ.
ನಾಗ ಶೌರ್ಯ ನವೆಂಬರ್ 20, 2022 ರಂದು ಅನುಷಾ ಶೆಟ್ಟಿ ಅವರನ್ನು ಮದುವೆಯಾಗಿದ್ದಾರೆ. ಈ ವಿವಾಹವು ಸ್ನೇಹಿತರು, ಕುಟುಂಬ ಮತ್ತು ಸಹೋದ್ಯೋಗಿಗಳೊಂದಿಗೆ ಅದ್ಧೂರಿಯಾಗಿ ನಡೆಯಿತು. ಬೆಂಗಳೂರಿನ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್ ನಲ್ಲಿ ಮದುವೆಗೂ ಮುಂಚಿತವಾಗಿರುವ ಮತ್ತು ಮದುವೆಯ ಎಲ್ಲಾ ಸಂಭ್ರಮಾಚರಣೆಗಳು ನಡೆದಿವೆ.
Naga Shaurya Marriage: ಬೆಂಗಳೂರಲ್ಲಿ ತೆಲುಗು ನಟನ ಅದ್ಧೂರಿ ವಿವಾಹ! ಅನುಷಾ ಶೆಟ್ಟಿಯ ಕೈ ಹಿಡಿದ ನಾಗ ಶೌರ್ಯ
ನವೆಂಬರ್ 19 ರಂದು ಮೆಹೆಂದಿ ಕಾರ್ಯಕ್ರಮ ಪ್ರಾರಂಭವಾಗಿತ್ತು. ನವೆಂಬರ್ 20 ರಂದು ಬೆಳಿಗ್ಗೆ 11.25 ಕ್ಕೆ ಮದುವೆ ನಡೆದಿದೆ. ಮದುವೆಯ ಡ್ರೆಸ್ ಕೋಡ್ ಭಾರತೀಯ ಸಾಂಪ್ರದಾಯಿಕ ಉಡುಗೆಯಾಗಿದೆ. ಮದುವೆಯ ಇತರೆ ಕಾರ್ಯಕ್ರಮಗಳಿಗೆ ಬೇರೆ ಬೇರೆ ರೀತಿಯ ಡ್ರೆಸ್ ಕೋಡ್ ಸಹ ಇತ್ತು.
ಇದೀಗ ತಮ್ಮ 24ನೇ ಚಿತ್ರಕ್ಕೆ ಸಹಿ ಹಾಕಿದ್ದಾರೆ ನಟ ನಾಗ ಶೌರ್ಯ
ನಾಗ ಶೌರ್ಯ ಕೊನೆಯದಾಗಿ ‘ಕೃಷ್ಣ ವೃಂದ ವಿಹಾರಿ’ ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರವು ವಿಮರ್ಶಕರಿಗೆ ಮತ್ತು ಅಭಿಮಾನಿಗಳಿಗೆ ತುಂಬಾನೇ ಇಷ್ಟವಾಯಿತು. ನಟ ಇತ್ತೀಚೆಗೆ ತಮ್ಮ 24ನೇ ಚಿತ್ರಕ್ಕೆ ಸಹಿ ಹಾಕಿದ್ದು, ಈ ಚಿತ್ರದ ಚಿತ್ರೀಕರಣವು ಕೆಲವು ದಿನಗಳ ಹಿಂದೆಯಷ್ಟೆ ಪ್ರಾರಂಭಿಸಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ