ನಾಯಕ ನಟರು ತೆರೆ ಮೇಲೆ ಮಾತ್ರವಲ್ಲ ರಿಯಲ್ ಆಗಿಯೂ ಒಮ್ಮೆ ಹೀರೋಗಳಾಗ್ತಾರೆ. ನಡು ಬೀದಿಯಲ್ಲಿ ಯುವತಿಯೊಬ್ಬಳ (Girl) ಮೇಲೆ ಪುಂಡನೊಬ್ಬ ಕೈ ಮಾಡಿದ್ದಾನೆ. ಅದನ್ನು ನೋಡಿದ ಟಾಲಿವುಡ್ ನಟ ನಾಗ ಶೌರ್ಯ (Actor Naga Shaurya) ಅವರು ಕೂಡಲೇ ಕಾರಿನಿಂದ ಇಳಿದು ಬಂದು ಹುಡುಗನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಯುವತಿ ಬಳಿ ಕ್ಷಮೆ ಕೇಳುವಂತೆ ನಾಗ ಶೌರ್ಯ ಹೇಳಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಬ್ಬರು ಲವರ್ಸ್ಗಳ ಜಗಳಕ್ಕೆ ಇದೀಗ ಹೀರೋ ಎಂಟ್ರಿ ಆಗಿದ್ದು, ರಸ್ತೆಯಲ್ಲಿ ಬುದ್ದಿ ಹೇಳಿದ್ದಾರೆ.
ಯುವಕನಿಗೆ ಕ್ಷಮೆ ಕೇಳುವಂತೆ ಹೇಳಿದ ನಾಗ ಶೌರ್ಯ
ರಸ್ತೆಯಲ್ಲಿ ಕಾರ್ನಲ್ಲಿ ಹೋಗ್ತಿದ್ದ ವೇಳೆ ನಾಗ ಶೌರ್ಯ ಪ್ರೇಮಿಗಳಿಬ್ಬರು ರಸ್ತೆ ಮಧ್ಯೆ ಜಗಳವಾಡುತ್ತಿದ್ದ ದೃಶ್ಯ ನೋಡಿದ್ದಾರೆ. ಯುವಕನೊಬ್ಬ ಯುವತಿ ಮೇಲೆ ಕೈ ಮಾಡಿದ್ದಾನೆ. ಇದನ್ನು ಕಂಡು ಸಿಟ್ಟಿಗೆದ್ದ ನಾಗ ಶೌರ್ಯ, ಕಾರಿನಿಂದ ಇಳಿದಿದ್ದಾರೆ. ಯುವತಿ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಕ್ಷಮೆ ಕೇಳುವಂತೆ ಹುಡುಗನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಹುಡುಗ ಹಾಗೂ ನಟ ನಾಗ ಶೌರ್ಯ ನಡುವೆ ಮಾತಿನ ಚಕಮಕಿ ನಡೆದಿದೆ.
ಲವರ್ ಆಗಿಬಿಟ್ಟರೆ ಹಲ್ಲೆ ಮಾಡ್ಬೋದಾ?
ಯುವತಿ ಜೊತೆ ಇದ್ದ ಹುಡುಗ ನಾನು ಯಾಕೆ ಕ್ಷಮೆ ಕೇಳಲಿ ಎಂದು ನಾಗ ಶೌರ್ಯ ಅವರನ್ನು ಪ್ರಶ್ನಿಸಿದ್ದಾನೆ. ಆಕೆ ನನ್ನ ಲವರ್ ಎಂದು ಹೇಳಿದ್ದಾನೆ. ಇದರಿಂದ ಮತ್ತಷ್ಟು ಕೋಪಗೊಂಡ ನಾಗ ಶೌರ್ಯ, 'ಲವರ್ ಆಗಿಬಿಟ್ಟರೆ, ಹೆಣ್ಣು ಮಕ್ಕಳ ಮೇಲೆ ರಸ್ತೆಯಲ್ಲೇ ಕೈ ಮಾಡಬಹುದಾ ಮೊದಲು ಹುಡುಗಿ ಬಳಿ ಕ್ಷಮೆ ಕೇಳುವಂತೆ ಸಿಟ್ಟಾದರು. ಆ ಹುಡುಗನ ಮೇಲೆ ನಾಗ ಶೌರ್ಯ ಗರಂ ಆಗಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
#nagashaurya reel lone kadu real life lo kuda hero anipinchukunaru sir 🙏🙏🙏 pic.twitter.com/R3J8sObOq6
— ks Raju (@ksRaju58119364) February 28, 2023
ಕಳೆದ ವರ್ಷವಷ್ಟೇ ಮದುವೆಯಾದ ನಾಗ ಶೌರ್ಯ
ಕಳೆದ ವರ್ಷ ಬೆಂಗಳೂರಿನಲ್ಲಿ ನಟ ನಾಗ ಶೌರ್ಯ ಅವರ ಮದುವೆ ನಡೆದಿತ್ತು. ಬೆಂಗಳೂರಿನ ಅನುಷಾ ಶೆಟ್ಟಿ ಅವರ ಜೊತೆಗೆ ಸಪ್ತಪದಿ ತುಳಿದಿದ್ದರು ನಾಗ ಶೌರ್ಯ. ಕಳೆದ 12 ವರ್ಷಗಳಿಂದ ಟಾಲಿವುಡ್‌ನಲ್ಲಿ ಗುರುತಿಸಿಕೊಂಡಿರುವ ನಾಗ ಶೌರ್ಯ, 'ಛಲೋ' ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಅವರು ನಟಿಸಿರುವ 'ಫಲಾನಾ ಅಬ್ಬಾಯಿ ಫಲಾನಾ ಅಮ್ಮಾಯಿ' ಸಿನಿಮಾ ತೆರೆಗೆ ಬರಬೇಕಿದೆ. ಈ ಸಿನಿಮಾವನ್ನು ಶ್ರೀನಿವಾಸ್ ಅವಸರಾಳ ನಿರ್ದೇಶನ ಮಾಡಿದ್ದು, ಮಾಳವಿಕಾ ನಾಯರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಈ ಸಿನಿಮಾದ ಟೀಸರ್, ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಇದಾದ ಬಳಿಕ 'ನರಿ ನರಿ ನಡುಮಾ ಮುರಾರಿ', 'ಪೊಲೀಸ್ ವಾರಿ ಎಚ್ಚರಿಕ' ಸಿನಿಮಾಗಳಲ್ಲೂ ಅವರು ನಟಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ