• Home
  • »
  • News
  • »
  • entertainment
  • »
  • Thank You Movie: ನಾಗ ಚೈತನ್ಯ ಅಭಿನಯಿಸಿರುವ ‘ಥ್ಯಾಂಕ್ಯೂ’ ಚಿತ್ರದ ಡೈಲಾಗ್ ಗಳಲ್ಲಿ ಸಮಂತಾಳನ್ನು ಟಾರ್ಗೆಟ್ ಮಾಡಿದ್ಯಾ?

Thank You Movie: ನಾಗ ಚೈತನ್ಯ ಅಭಿನಯಿಸಿರುವ ‘ಥ್ಯಾಂಕ್ಯೂ’ ಚಿತ್ರದ ಡೈಲಾಗ್ ಗಳಲ್ಲಿ ಸಮಂತಾಳನ್ನು ಟಾರ್ಗೆಟ್ ಮಾಡಿದ್ಯಾ?

ನಾಗ ಚೈತನ್ಯ ಮತ್ತು ಸಮಂತಾ

ನಾಗ ಚೈತನ್ಯ ಮತ್ತು ಸಮಂತಾ

ಟೀಸರ್ ಚಿತ್ರದ ಮೇಕಿಂಗ್ ಬಗ್ಗೆ, ಕಥೆ ಬಗ್ಗೆ ಸುದ್ದಿಯಾಗುವ ಬದಲು ಅದರಲ್ಲಿರುವ ಒಂದು ಡೈಲಾಗ್ ವಿಷಯವಾಗಿ ಭಾರಿ ಚರ್ಚೆಯಾಗುತ್ತಿದೆ. ಇತ್ತೀಚೆಗಷ್ಟೇ ಸಮಂತಾಳಿಂದ ಬೇರೆಯಾದ ನಾಗ ಚೈತನ್ಯ ತಮ್ಮ ಮಾಜಿ ಹೆಂಡತಿಗೆ ಹೇಳಿದ ಡೈಲಾಗ್ ಎಂದು ತೆಲುಗು ಚಿತ್ರರಂಗ ಸೇರಿ ಅಭಿಮಾನಿಗಳಲ್ಲಿ ಈ ಗಾಸಿಪ್ ಗುಲ್ಲಾಗಿದೆ.

ಮುಂದೆ ಓದಿ ...
  • Share this:

‘ಜೋಶ್’ (Josh) ಚಿತ್ರದ ಮೂಲಕ ಟಾಲಿವುಡ್ ಗೆ (Tollywood) ಪಾದಾರ್ಪಣೆ ಮಾಡಿದ ನಾಗ ಚೈತನ್ಯ (Naga Chaitanya) ಅವರು ಪ್ರಸ್ತುತ ಬಹುಬೇಡಿಕೆಯ ನಟ. ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಚಾಯ್ ಗೆ ಬಿಗ್ ಬ್ರೇಕ್ ಕೊಟ್ಟಿದ್ದೇ ವಿಕ್ರಮ್ ಕುಮಾರ್ ನಿರ್ದೇಶನದ ಮನಂ ಚಿತ್ರ. ಇದೀಗ ಈ ಹಿಟ್ ಜೋಡಿ ಮತ್ತೊಮ್ಮೆ ‘ಥ್ಯಾಂಕ್ಯೂ’ ಚಿತ್ರದ ಮೂಲಕ ಒಂದಾಗಿದ್ದು ಮತ್ತೊಮ್ಮೆ ಕಮಾಲ್ ಮಾಡಲು ಹೊರಟ್ಟಿದ್ದಾರೆ. ಥ್ಯಾಂಕ್ಯೂ (Thank you) ಚಿತ್ರತಂಡವು ನಿನ್ನೆ ಅಷ್ಟೇ ಚಿತ್ರದ ಟೀಸರ್ (Teaser) ಒಂದನ್ನು ಬಿಡುಗಡೆ ಮಾಡಿದೆ. ಚಿತ್ರದಲ್ಲಿ ನಾಗ ಚೈತನ್ಯ ಯಾವಾಗಲೂ ತನ್ನ ಬಗ್ಗೆ, ತನ್ನಿಂದಲೇ ಎಲ್ಲಾ ಎಂದು ಯೋಚಿಸುವ ಸೊಕ್ಕಿನ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದ ಟೀಸರ್ ಅದ್ಭುತವಾಗಿ ಮೂಡಿ ಬಂದಿದೆ.


ಟೀಸರ್ ಚಿತ್ರದ ಮೇಕಿಂಗ್ ಬಗ್ಗೆ, ಕಥೆ ಬಗ್ಗೆ ಸುದ್ದಿಯಾಗುವ ಬದಲು ಅದರಲ್ಲಿರುವ ಒಂದು ಡೈಲಾಗ್ ವಿಷಯವಾಗಿ ಭಾರಿ ಚರ್ಚೆಯಾಗುತ್ತಿದೆ. ಇತ್ತೀಚೆಗಷ್ಟೇ ಸಮಂತಾಳಿಂದ ಬೇರೆಯಾದ ನಾಗ ಚೈತನ್ಯ ತಮ್ಮ ಮಾಜಿ ಹೆಂಡತಿಗೆ ಹೇಳಿದ ಡೈಲಾಗ್ ಎಂದು ತೆಲುಗು ಚಿತ್ರರಂಗ ಸೇರಿ ಅಭಿಮಾನಿಗಳಲ್ಲಿ ಈ ಗಾಸಿಪ್ ಗುಲ್ಲಾಗಿದೆ.


ಒಂದು ಡೈಲಾಗ್ ಸಮಂತಾಳನ್ನು ಟಾರ್ಗೆಟ್ ಮಾಡಿದ್ಯಾ
ಟೀಸರ್ ನಲ್ಲಿ ಒಂದು ಡೈಲಾಗ್ ಇದ್ದು ಅದನ್ನು ಪರೋಕ್ಷವಾಗಿ ತಮ್ಮ ಎಕ್ಸ್ ವೈಫ್ ಸಮಂತಾಳನ್ನು ಟಾರ್ಗೆಟ್ ಮಾಡಿ ಹೇಳಲಾಗಿದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.


ಥ್ಯಾಂಕ್ಯೂ ಚಿತ್ರದಲ್ಲಿ ‘ಲೈಫ್ ಲೋ ಕಾಂಪ್ರಮೈಸ್ ಅಯ್ಯದೇ ಲೇದು, ಯೆನ್ನೋ ವಡುಲುಕೋನಿ ಇಕ್ಕದಾಕ ವಾಚಹ್ಯಾನು’ ಎಂಬ ಎಂಬ ಡೈಲಾಗ್ ಇದೆ. ಅಂದರೆ ‘ಜೀವನದಲ್ಲಿ ಯಾವದಕ್ಕೂ ರಾಜಿ ಮಾಡಿಕೊಳ್ಳಲ್ಲ, ಏನೆಲ್ಲಾ ಬಿಟ್ಟುಬಂದಮೇಲೆಯೇ ಈ ಸ್ಥಾನಕ್ಕೆ ಬಂದಿದ್ದು’ ಎಂಬ ಅರ್ಥ ಕೊಡುವ ಡೈಲಾಗ್ ಅನ್ನು ಚಿತ್ರದಲ್ಲಿ ನಾಯಕ ನಟ ನಾಗ ಚೈತನ್ಯ ಹೇಳುತ್ತಾರೆ. ಆದರೆ ಈದೀಗ ಈ ಡೈಲಾಗ್ ಬೇರೆಯದ್ದೇ ಅರ್ಥ ಪಡೆದುಕೊಂಡಿದ್ದು, ಸಮಂತಾಳನ್ನೇ ಟಾರ್ಗೆಟ್ ಮಾಡಿ ಹೇಳಲಾಗಿದಿಯಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.


ಅಭಿಮಾನಿಗಳಿಗೆ ಟಾಂಗ್ ನೀಡುತ್ತಿರುವ ಸಮಂತಾ
ಟಾಲಿವುಡ್ ನ ಮುದ್ದಾದ ಜೋಡಿ ಎಂದೇ ಖ್ಯಾತರಾಗಿದ್ದ ನಟ ನಾಗ ಚೈತನ್ಯ ಹಾಗೂ ಸಮಂತಾ ಇಬ್ಬರೂ ದೂರ ಆಗಿ ತಿಂಗಳುಗಳೇ ಕಳೆದಿವೆ. ಆದರೆ ಇವರಿಬ್ಬರ ಅಭಿಮಾನಿಗಳ ಜಟಾಪಟಿ ಮಾತ್ರ ನಿಂತಿಲ್ಲ. ಚಾಯ್-ಸ್ಯಾಮ್ ವಿಚ್ಛೇದನ ಸಂಭವಿಸಿದಾಗಿನಿಂದ, ಎರಡೂ ಕಡೆಯ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಒಬ್ಬರಿಗೊಬ್ಬರು ಸಣ್ಣ ಸಣ್ಣ ವಿಚಾರಕ್ಕೂ ಪೈಪೋಟಿಗಿಳಿಯುತ್ತಿದ್ದಾರೆ.


ಇದನ್ನೂ ಓದಿ:  Siri Ravikumar: ಮಹರ್ಷಿಯನ್ನು ವರಿಸಿದ ಮಾತಿನ ಮಲ್ಲಿ! ಆರ್‌ಜೆ ಸಿರಿ ಮದುವೆ ಫೋಟೋಗಳು ವೈರಲ್


ಈಗ ಚಾಯ್ ಅಭಿಮಾನಿಗಳ ಸರದಿ ಬಂದಿದ್ದು ಅವರು ಥ್ಯಾಂಕ್ಯೂ ಚಿತ್ರದ ‘ಲೈಫ್ ಲೋ ಕಾಂಪ್ರಮೈಸ್ ಅಯ್ಯದೇ ಲೇದು, ಯೆನ್ನೋ ವಡುಲುಕೋನಿ ಇಕ್ಕದಾಕ ವಾಚಹ್ಯಾನು” ಡೈಲಾಗ್‌ ಅನ್ನು ವಿಶ್ಲೇಷಿಸುತ್ತಾ ಸಮಂತಾ ಅಭಿಮಾನಿಗಳಿಗೆ ಟಾಂಗ್ ನೀಡುತ್ತಿದ್ದಾರೆ. ಚಾಯ್ ತನ್ನ ಮಾಜಿ ಪತ್ನಿ ಸಮಂತಾ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಕೆಲವು ಚಾಯ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಈ ಅಂಶದ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ.


'ಪರವಾಗಿಲ್ಲ, ಸಮಂತಾ ಖುಷಿಯಾಗಿದ್ದರೆ, ನಾನು ಖುಷಿಯಾಗಿದ್ದೇನೆ
ಸಾಮಾಜಿಕ ಜಾಲತಾಣಗಳಿಂದ ಹೆಚ್ಚು ದೂರವಿರುವ ನಾಗ ಚೈತನ್ಯ, ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಲು ತಲೆಕೆಡಿಸಿಕೊಂಡಿಲ್ಲ.ಈ ಹಿಂದೆ ವಿಚ್ಛೇಧನ ಕುರಿತು ನಾಗ ಚೈತನ್ಯ 'ಪರವಾಗಿಲ್ಲ, ಸಮಂತಾ ಖುಷಿಯಾಗಿದ್ದರೆ, ನಾನು ಖುಷಿಯಾಗಿದ್ದೇನೆ. ನಮ್ಮಿಬ್ಬರಿಗೂ ಇದೊಂದು ಒಳ್ಳೆಯ ನಿರ್ಧಾರವಾಗಿತ್ತು. ನಮ್ಮಿಬ್ಬರ ಹಿತದೃಷ್ಟಿಯಿಂದಲೂ ಅದು ಮುಖ್ಯವಾಗಿತ್ತು. ನಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮಗಳು ನಮ್ಮನ್ನು ಬೆಂಬಲಿಸಲು ನಾವು ವಿನಂತಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ನಮಗೆ ಗೌಪ್ಯತೆಯನ್ನು ನೀಡಿ ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು." ಎಂದು ತಿಳಿಸಿದ್ದರು.


ಇದನ್ನೂ ಓದಿ:  Sandalwood: ಕನ್ನಡದ ನಟರ ಹೆಸರಲ್ಲಿರುವ ರಸ್ತೆಗಳ ಬಗ್ಗೆ ನಿಮಗೆಷ್ಟು ಗೊತ್ತು? ಏಷ್ಯಾದಲ್ಲೇ ಉದ್ದನೆಯ ರಸ್ತೆ ಇವರ ಹೆಸರಲ್ಲಿದೆ!


2017ರ ಅಕ್ಟೋಬರ್ 7ರಂದು ಮದುವೆಯಾಗಿದ್ದ ಈ ಜೋಡಿ 4 ವರ್ಷಗಳ ದಾಂಪತ್ಯ ಜೀವನವನ್ನು 2021ರ ಅಕ್ಟೋಬರ್ ನಲ್ಲಿ ಅಂತ್ಯಗೊಳಿಸಿದರು.. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿಯನ್ನು ಅಭಿಮಾನಿಗಳು ತುಂಬಾ ಇಷ್ಟಪಟ್ಟಿದ್ದರು. ಆದರೆ ಕೆಲವು ಅವರದ್ದೇ ಆದ ಹಲವಾರು ವೈಯಕ್ತಿಕ ಕಾರಣಗಳಿಂದ ಇಬ್ಬರು ವಿಚ್ಛೇಧನ ಪಡೆದು ಪರಸ್ಪರ ದೂರವಾಗಿದ್ದಾರೆ.

Published by:Ashwini Prabhu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು