ಸಮಂತಾ ವಿಷಯದಲ್ಲಿ ಯೂ ಟರ್ನ್​ ಹೊಡೆದ ನಾಗ ಚೈತನ್ಯ..!

news18
Updated:September 12, 2018, 2:26 PM IST
ಸಮಂತಾ ವಿಷಯದಲ್ಲಿ ಯೂ ಟರ್ನ್​ ಹೊಡೆದ ನಾಗ ಚೈತನ್ಯ..!
  • News18
  • Last Updated: September 12, 2018, 2:26 PM IST
  • Share this:
ನ್ಯೂಸ್​ 18 ಕನ್ನಡ 

ಟಾಲಿವುಡ್​ನ ಹಾಟ್​ ಜೋಡಿ ನಾಗ ಚೈತನ್ಯ ಹಾಗೂ ಸಮಂತಾ ಕಳೆದ ಅಕ್ಟೋಬರ್​ನಲ್ಲಿ ವಿವಾಹವಾಗಿದ್ದರು. ಆದರೆ ವರ್ಷ ತುಂಬುವ ಮೊದಲೇ ನಾಗ ಚೈತನ್ಯ ಸಮಂತಾ ವಿಷಯದಲ್ಲಿ 'ಯೂ ಟರ್ನ್​' ಹೊಡೆದಿದ್ದಾರೆ. ಏನಿದು ಅಂತ ತಿಳಿಯೋಕೆ ಈ ವರದಿ ಓದಿ...

ತೆರೆ ಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲೂ ಸೂಪರ್​ ಜೋಡಿ ಎಂದೇ ಖ್ಯಾತರಾಗಿರುವ ನಾಗ ಚೈತನ್ಯ-ಸಮಂತಾ ಅವರ ಎರಡು ಸಿನಿಮಾಗಳು ನಾಳೆ ತೆರೆ ಕಾಣಲಿದೆ. ನಾಗ ಚೈತನ್ಯ ಅಭಿನಯದ 'ಶೈಲಜಾ ರೆಡ್ಡಿ ಅಲ್ಲುಡು' ಹಾಗೂ ಸಮಂತಾ ಅಭಿನಯದ 'ಯೂ ಟರ್ನ್​' ಸಿನಿಮಾ ಸೆ.13ರಂದು ತೆರೆ ಕಾಣಲಿದೆ.

ಈ ಕುರಿತು ಮಾತನಾಡಿದ ನಾಗ ಚೈತನ್ಯ, 'ಈ ಸಲ ಸಮಂತಾ ಅಭಿನಯದ ಸಿನಿಮಾ ಅಲ್ಲದೆ ನಾನು ಅಭಿನಯಿಸಿರುವ ಸಿನಿಮಾವನ್ನು ಮೊದಲು ನೋಡಿ ಎಂದಿದ್ದಾರೆ. ಇದು ಈ ವರ್ಷ ನನ್ನ ಮೊದಲ ಸಿನಿಮಾ. ಸಮಂತಾ ಈಗಾಗಲೇ 'ಮಹಾನಟಿ' ಹಾಗೂ 'ರಂಗಸ್ಥಳಂ'ನಂತಹ ಬ್ಲಾಕ್​ ಬಾಸ್ಟರ್​ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹೀಗಾಗಿ ನನ್ನ ಸಿನಿಮಾವನ್ನು ಮೊದಲು ನೋಡಿ ಎಂದು ಮನವಿ ಮಾಡಿದ್ದಾರೆ.
First published: September 12, 2018, 2:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading