Naga Chaitanya ‘ಲಾಲ್ ಸಿಂಗ್ ಚಡ್ಡಾ’ ಚಿತ್ರದಲ್ಲಿ ನಟಿಸಲು ಇಷ್ಟೊಂದು ಸಂಭಾವನೆ ಪಡೆದರಾ?

ಟಾಲಿವುಡ್ ನ ಅತ್ಯಂತ ಪ್ರಸಿದ್ಧ ನಟರಲ್ಲಿ ನಾಗ ಚೈತನ್ಯ ಕೂಡ ಒಬ್ಬರು ಅಂತ ಹೇಳಿದರೆ ತಪ್ಪಾಗುವುದಿಲ್ಲ. ತಮ್ಮ 13 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ, ನಟ ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇಂದು, ಅವರು ತೆಲುಗು ಚಲನಚಿತ್ರೋದ್ಯಮದಲ್ಲಿ ಬ್ಯಾಂಕೇಬಲ್ ಸ್ಟಾರ್ ಆಗಿದ್ದಾರೆ. ಸುಮಾರು ಒಂದು ದಶಕದ ನಂತರ, ನಟ ಈಗ ಬಾಲಿವುಡ್ ನಟ ಅಮೀರ್ ಖಾನ್ ಅವರ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದಲ್ಲಿ ನಟಿಸುವುದರ ಮೂಲಕ ಬಾಲಿವುಡ್ ಗೆ ಗ್ರ್ಯಾಂಡ್ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

ನಾಗ ಚೈತನ್ಯ

ನಾಗ ಚೈತನ್ಯ

  • Share this:
ಟಾಲಿವುಡ್ ನ (Tollywood) ಅತ್ಯಂತ ಪ್ರಸಿದ್ಧ ನಟರಲ್ಲಿ ನಾಗ ಚೈತನ್ಯ (Naga Chaitanya) ಕೂಡ ಒಬ್ಬರು ಅಂತ ಹೇಳಿದರೆ ತಪ್ಪಾಗುವುದಿಲ್ಲ. ತಮ್ಮ 13 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ, ನಟ ಹಲವಾರು ಸೂಪರ್ ಹಿಟ್ ಚಿತ್ರಗಳನ್ನು (Super hit Movies) ನೀಡಿದ್ದಾರೆ. ಇಂದು, ಅವರು ತೆಲುಗು ಚಲನಚಿತ್ರೋದ್ಯಮದಲ್ಲಿ ಬ್ಯಾಂಕೇಬಲ್ ಸ್ಟಾರ್ ಆಗಿದ್ದಾರೆ. ಸುಮಾರು ಒಂದು ದಶಕದ ನಂತರ, ನಟ ಈಗ ಬಾಲಿವುಡ್ ನಟ ಅಮೀರ್ ಖಾನ್ ಅವರ ‘ಲಾಲ್ ಸಿಂಗ್ ಚಡ್ಡಾ’ (Lal Singh Chaddha) ಚಿತ್ರದಲ್ಲಿ ನಟಿಸುವುದರ ಮೂಲಕ ಬಾಲಿವುಡ್ ಗೆ ಗ್ರ್ಯಾಂಡ್ ಪಾದಾರ್ಪಣೆ ಮಾಡಿದ್ದಾರೆ. ಇದು ನಾಗ ಚೈತನ್ಯ ಅವರಿಗೆ ಇನ್ನೂ ಹೊಸ ಹೊಸ ಮಾರ್ಗಗಳನ್ನು ತೆರೆಯಲು ಸಹಾಯ ಮಾಡುತ್ತದೆ.

ಪೋಷಕ ಪಾತ್ರದಲ್ಲಿ ನಾಗ ಚೈತನ್ಯ
ಅಮೀರ್ ಖಾನ್ ಅವರ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದಲ್ಲಿ ನಾಗ ಚೈತನ್ಯ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರು ಅಮೀರ್ ಅವರ ಸ್ನೇಹಿತ ಬಾಲಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಾಣಿಜ್ಯ ವಿಶ್ಲೇಷಕ ರಮೇಶ್ ಬಾಲಾ ಅವರ ಪ್ರಕಾರ, ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿನ ಪಾತ್ರಕ್ಕಾಗಿ ನಟ ಸುಮಾರು 5 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ.

‘ಜೋಶ್’ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ 
ನಾಗ ಚೈತನ್ಯ ಅವರು ಸಿನೆಮಾ ಕುಟುಂಬದಿಂದ ಬಂದವರು. ಅವರು ನಾಗಾರ್ಜುನ ಅಕ್ಕಿನೆನಿ ಮತ್ತು ಲಕ್ಷ್ಮಿ ದಗ್ಗುಬಾಟಿ ಅವರ ಮಗ. ಅವರ ಅಭಿಮಾನಿಗಳು ಇವರನ್ನು ಪ್ರೀತಿಯಿಂದ ಚಾಯ್ ಎಂದು ಕರೆಯುತ್ತಾರೆ. 2009 ರಲ್ಲಿ, ಅವರು ‘ಜೋಶ್’ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದರು. ಗೌತಮ್ ಮೆನನ್ ಅವರ 'ಯೇ ಮಾಯಾ ಚೆಸಾವೆ' ಅವರನ್ನು ಒಬ್ಬ ಲವರ್ ಬಾಯ್ ಅಂತ ಸಿನೆಮಾ ಜಗತ್ತಿಗೆ ಪರಿಚಯ ಮಾಡಿಕೊಟ್ಟ ಚಿತ್ರ ಅಂತ ಹೇಳಬಹುದು.

ಪ್ರತಿ ಚಿತ್ರಕ್ಕೆ ನಾಗ ಚೈತನ್ಯ ಪಡೆಯುವ ಸಂಭಾವನೆ
ಒಂದು ದಶಕದ ಕಾಲ ಕೆಲಸ ಮಾಡಿದ ನಂತರ, ನಾಗ ಚೈತನ್ಯ ಈಗ ಪ್ರತಿ ಚಿತ್ರಕ್ಕೆ 5 ರಿಂದ 10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಸುದ್ದಿ ಮಾಧ್ಯಮದ ಜೊತೆ ಮಾತನಾಡಿದ ವಾಣಿಜ್ಯ ವಿಶ್ಲೇಷಕ ರಮೇಶ್ ಬಾಲಾ ಅವರು "ನಾಗ ಚೈತನ್ಯ ಅವರು ಸುಮಾರು 8 ಕೋಟಿ ರೂಪಾಯಿಗಳನ್ನು ಪ್ರತಿ ಚಿತ್ರದಲ್ಲಿ ಗಳಿಸುತ್ತಾರೆ ಮತ್ತು ಈ ಮೊತ್ತ ಅವರ ಕೊನೆಯ ಎರಡು ಚಿತ್ರಗಳಿಗೆ ಅವರು ವಿಧಿಸಿದ ಶುಲ್ಕವನ್ನು ಆಧರಿಸಿದೆ. ಗಲ್ಲಾಪೆಟ್ಟಿಗೆಯಲ್ಲಿ ಅವರ ಚಿತ್ರವು ಮಾಡುವ ವ್ಯವಹಾರವನ್ನು ಪರಿಗಣಿಸಿದರೆ, ಈ ಸಂಖ್ಯೆಯು ವಾಸ್ತವಕ್ಕೆ ಹತ್ತಿರವಾಗಿದೆ ಎಂದು ಹೇಳಬಹುದು.

ನಟ ಕೆಲವು ಹಿಟ್ ಗಳು ಮತ್ತು ಫ್ಲಾಪ್ ಗಳನ್ನು ನೀಡಿದ್ದಾರೆ ಮತ್ತು ಸ್ಥಿರವಾಗಿಲ್ಲ. ಆದ್ದರಿಂದ, ಅವರು ಇನ್ನೂ ಅಲ್ಲು ಅರ್ಜುನ್ ಅಥವಾ ಮಹೇಶ್ ಬಾಬು ಅವರಂತೆ ಮಾಸ್ ಅಥವಾ ಆಕ್ಷನ್ ಹೀರೋ ಆಗುವ ಹಾದಿಯಲ್ಲಿ ತುಂಬಾ ದೂರ ಹೋಗಬೇಕು. ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ಮೂಲಕ ನಾಗ ಚೈತನ್ಯ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ. ಅಂತೆಯೇ, ಅವರು ನಿರ್ದೇಶಕ ವೆಂಕಟ್ ಪ್ರಭು ಅವರೊಂದಿಗೆ ತಮಿಳು-ತೆಲುಗು ದ್ವಿಭಾಷಾ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

ನಾಗಚೈತನ್ಯ ಅವರ ಆದಾಯದ ಮೂಲಗಳು ಗೊತ್ತೇ?


ಚಲನಚಿತ್ರಗಳು ಮತ್ತು ಜಾಹೀರಾತುಗಳು ನಾಗ ಚೈತನ್ಯ ಅವರ ಪ್ರಾಥಮಿಕ ಆದಾಯದ ಮೂಲಗಳಾಗಿವೆ. ಆದಾಗ್ಯೂ, ನಟ ಶೋಯು ಎಂಬ ತನ್ನ ಕ್ಲೌಡ್ ಕಿಚನ್ ಅನ್ನು ಪ್ರಾರಂಭಿಸುವ ಮೂಲಕ ತನ್ನ ಉದ್ಯಮಶೀಲತೆಗೆ ಪಾದಾರ್ಪಣೆ ಮಾಡಿದ್ದಾರೆ. ಏಷ್ಯನ್ ಪಾಕಪದ್ಧತಿಯ ಬಗ್ಗೆ ತಮಗೆ ಹೆಚ್ಚಿನ ಒಲವಿದೆ ಮತ್ತು ಆ ಅನುಭವವನ್ನು ಹೈದರಾಬಾದ್ ಗೆ ತರಲು ನಿರ್ಧರಿಸಿರುವುದಾಗಿ ಅವರು ಹೇಳುತ್ತಾರೆ.

ಇದನ್ನೂ ಓದಿ:  Naga Chaitanya: ಸಮಂತಾ ಎದುರಿಗೆ ಸಿಕ್ಕರೆ ಏನ್ ಮಾಡ್ತೀರಾ? ನಾಗ ಚೈತನ್ಯ ಕೊಟ್ರು ಸಖತ್​ ಉತ್ತರ!

ಅಂತೆಯೇ, ನಾಗ ಚೈತನ್ಯ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳಿಂದಲೂ ಸಹ ಹಣ ಗಳಿಸುತ್ತಾರೆ. ಹಲವಾರು ಸಂದರ್ಶನಗಳಲ್ಲಿ, ಅವರು ತಂತ್ರಜ್ಞಾನಕ್ಕೆ ಅಷ್ಟಾಗಿ ಅಂಟಿಕೊಂಡಿಲ್ಲ ಎಂದು ಬಹಿರಂಗಪಡಿಸಿದರೂ, ಚಾಯ್ ಕೆಲವು ವಿನಾಯಿತಿಗಳನ್ನು ನೀಡುತ್ತಾರೆ ಮತ್ತು ಸಾಂದರ್ಭಿಕವಾಗಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಕೆಲವು ಅನುಮೋದನೆಗಳನ್ನು ಮಾಡುತ್ತಾರೆ.

ರಮೇಶ್ ಬಾಲಾ ಅವರು ಮಾತನಾಡಿ "ಚಾಯ್ ಅವರು ಹೇಳಿದಂತೆ ಟೆಕ್ ನಲ್ಲಿ ತುಂಬಾ ಬುದ್ಧಿವಂತರಲ್ಲ. ನೀವು ಮಹೇಶ್ ಬಾಬು ಅಥವಾ ಅಲ್ಲು ಅರ್ಜುನ್ ಅವರನ್ನು ನೋಡಿದರೆ, ಚಾಯ್ ಸಾಮಾಜಿಕ ಮಾಧ್ಯಮದ ವಿಷಯಕ್ಕೆ ಬಂದಾಗ ಅವರಿಗಿಂತಲೂ ಒಂದು ಹೆಜ್ಜೆ ಮುಂದು. ಇವರು ಮಿಂತ್ರಾ, ಏರಿಯಲ್ ಮತ್ತು ಇತರ ಹಲವಾರು ಕಂಪನಿಗಳಿಗಾಗಿ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ" ಎಂದು ಹೇಳಿದರು.

ಇದನ್ನೂ ಓದಿ: KBC: ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ ಹಣ ಗೆದ್ದ ಬಳಿಕ ಇವರಿಗೆ ಬ್ಯಾಡ್‌ ಟೈಮ್‌ ಸ್ಟಾರ್ಟ್ ಆಯ್ತಂತೆ! ಯಾಕೆ ನೋಡಿ

ನಾಗಚೈತನ್ಯ ಅವರಿಗೆ ಕಾರು ಮತ್ತು ಬೈಕ್ ಗಳೆಂದರೆ ತುಂಬಾನೇ ಇಷ್ಟವಂತೆ!
ನಾಗ ಚೈತನ್ಯ ಅವರಿಗೆ ಈ ಕಾರು ಮತ್ತು ಬೈಕ್ ಗಳೆಂದರೆ ತುಂಬಾನೇ ಇಷ್ಟವಂತೆ. ಅವರು ಹಲವಾರು ಲಕ್ಷ ಮತ್ತು ಕೋಟಿ ಮೌಲ್ಯದ ಬೈಕುಗಳು ಮತ್ತು ಕಾರುಗಳ ಸಂಗ್ರಹವನ್ನೇ ಹೊಂದಿದ್ದಾರೆ. ಅವರ ಬಳಿ 19 ಲಕ್ಷ ರೂಪಾಯಿಯ ಬಿಎಂಡಬ್ಲ್ಯೂ ಆರ್9ಟಿ, 13 ಲಕ್ಷ ರೂಪಾಯಿಯ ಟ್ರಯಂಫ್ ಥ್ರುಕ್ಸ್ಟನ್ ಆರ್ ಬೈಕ್, 1.75 ಕೋಟಿ ರೂಪಾಯಿಯ ಫೆರಾರಿ ಎಫ್ 430, 1 ಕೋಟಿ ರೂಪಾಯಿಯ ಮರ್ಸಿಡಿಸ್ ಬೆಂಝ್ ಜಿ-ಕ್ಲಾಸ್ ಜಿ63 ಮತ್ತು 26 ರಿಂದ 35 ಲಕ್ಷ ರೂಪಾಯಿಯ ಎಂವಿ ಅಗಸ್ಟಾ ಎಫ್ 4 ಇವೆ.
Published by:Ashwini Prabhu
First published: