• Home
 • »
 • News
 • »
 • entertainment
 • »
 • Samantha-Naga Chaitanya: ಸಮಂತಾರನ್ನು ಮದ್ವೆಯಾಗದೇ ಬೇರೆ ದಾರಿಯೇ ಇರಲಿಲ್ಲ! ಹೀಗ್ಯಾಕಂದ್ರು ನಾಗಚೈತನ್ಯ?

Samantha-Naga Chaitanya: ಸಮಂತಾರನ್ನು ಮದ್ವೆಯಾಗದೇ ಬೇರೆ ದಾರಿಯೇ ಇರಲಿಲ್ಲ! ಹೀಗ್ಯಾಕಂದ್ರು ನಾಗಚೈತನ್ಯ?

ಸಮಂತಾ-ನಾಗಚೈತನ್ಯ

ಸಮಂತಾ-ನಾಗಚೈತನ್ಯ

"ನಾಗ ಚೈತನ್ಯ ಅನೇಕ ಹುಡುಗಿಯರ ಹಿಂದೆ ಓಡುತ್ತಿದ್ದರು ಮತ್ತು ನನ್ನ ಟೋಕನ್ ಸಂಖ್ಯೆ ಏಳು ವರ್ಷಗಳ ನಂತರ ಮಾತ್ರ ಬಂದಿತು!" ಹೀಗಂತ ಸಮಂತಾ ಹೇಳಿದ್ದಾರೆ. ಅದಕ್ಕೂ ಮುನ್ನ ನಾಗಚೈತನ್ಯ ಕೂಡ ಇದೇ ವಿಚಾರವಾಗಿ ಮಾತನಾಡಿದ್ದರು.

 • Trending Desk
 • 2-MIN READ
 • Last Updated :
 • Hyderabad, India
 • Share this:

  ಈ ಚಿತ್ರೋದ್ಯಮದಲ್ಲಿರುವ (film industry) ಸ್ಟಾರ್ ದಂಪತಿಗಳ (star couple) ವೈಯುಕ್ತಿಕ ಬದುಕಿನಲ್ಲಿ ಏನೆಲ್ಲಾ ನಡೀತಾ ಇದೆ ಅಂತ ತಿಳಿದುಕೊಳ್ಳುವುದಕ್ಕೆ ಯಾರಿಗೆ ತಾನೇ ಕುತೂಹಲ ಇರುವುದಿಲ್ಲ ಹೇಳಿ? ಅದರಲ್ಲೂ ತುಂಬಾನೇ ಮುದ್ದಾದ ಜೋಡಿಗಳ ಬಗ್ಗೆ ಅಭಿಮಾನಿಗಳಿಗೆ ಸ್ವಲ್ಪ ಕುತೂಹಲ ಜಾಸ್ತಿನೆ ಇರುತ್ತದೆ. ತೆಲುಗು ಚಿತ್ರೋದ್ಯಮದಲ್ಲಿನ (Telugu film industry) ಒಂದು ಸ್ಟಾರ್ ನಟ-ನಟಿಯ ಜೋಡಿ ಕಳೆದ ಒಂದು ವರ್ಷದಲ್ಲಿ ತುಂಬಾನೇ ಸುದ್ದಿಯಲ್ಲಿತ್ತು ಮತ್ತು ಆ ಸುದ್ದಿಯಾಗುವುದಕ್ಕೆ ಮುಖ್ಯ ಕಾರಣವೆಂದರೆ ಅವರಿಬ್ಬರ ವೈವಾಹಿಕ ಜೀವನದಿಂದ (married life) ಬೇರ್ಪಟ್ಟಿರುವುದು ಅಂತ ಹೇಳಬಹುದು. ತೆಲುಗು ಸಿನಿ ಪ್ರೇಕ್ಷಕರು ಹೆಚ್ಚು ಇಷ್ಟ ಪಡುತ್ತಿದ್ದ ಜೋಡಿ ಎಂದರೆ ಅದು ಸಮಂತಾ ರುತ್ ಪ್ರಭು ಮತ್ತು ನಾಗಚೈತನ್ಯ (Samantha Ruth Prabhu and Naga Chaitanya) ಅವರದು. ಆದರೆ ಅವರು ತಮ್ಮ ಮದುವೆಯನ್ನು ಕೊನೆಗೊಳಿಸುವುದಾಗಿ ಜಂಟಿ ಹೇಳಿಕೆಯಲ್ಲಿ ಘೋಷಿಸಿದಾಗ ಅಭಿಮಾನಿಗಳು ಒಂದು ಕ್ಷಣ ದಿಗ್ಭ್ರಮೆಗೊಂಡರು.


  ಬೇರೆಯಾದರೂ ಇಬ್ಬರ ಬಗ್ಗೆಯೂ ಪರಸ್ಪರ ಅಭಿಮಾನ


  ಇವರಿಬ್ಬರು ಜೊತೆಯಲ್ಲಿದ್ದಾಗ ಅವರಿಬ್ಬರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿರುವ ಪುಟಗಳು ಅವರ ಸಿನೆಮಾ, ಪರಸ್ಪರರ ಬಗ್ಗೆ ಮೆಚ್ಚುಗೆ ಮಾತುಗಳು, ಇಬ್ಬರು ಕೂಡಿ ಕಳೆದ ಮಧುರ ಕ್ಷಣಗಳ ಬಗ್ಗೆ ಫೋಟೋಗಳನ್ನು ಅಪ್ಲೋಡ್ ಮಾಡಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೆ ಇವರಿಬ್ಬರು ಬೇರ್ಪಟ್ಟಾಗಲೂ ಸಹ ಇನ್ನೂವರೆಗೆ ನಟಿ ಸಮಂತಾ ತನ್ನ ಗಂಡ ನಾಗ ಚೈತನ್ಯ ಬಗ್ಗೆ ಮತ್ತು ನಾಗ ಚೈತನ್ಯ ಹೆಂಡತಿ ಸಮಂತಾ ಬಗ್ಗೆ ಏನಾದರೊಂದು ವಿಷಯವನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ.


  Actress Samantha Ruth Prabhu has been hospitalized in Hyderabad report says
  ನಟಿ ಸಮಂತಾ


  ಈಗ ಮತ್ತೊಮ್ಮೆ ನಾಗ ಚೈತನ್ಯ ಅವರು ಸಮಂತಾ ಅವರನ್ನು ಎಲ್ಲಿ ಭೇಟಿಯಾದರು ಮತ್ತು ಅವರನ್ನು ಹೇಗೆ ಪ್ರಪೋಸ್ ಮಾಡಿದರು ಅಂತ ಹಿಂದೊಮ್ಮೆ ಹೇಳಿಕೊಂಡಿದ್ದು ಸುದ್ದಿಯಾಗಿದೆ ನೋಡಿ.


  ಸಮಂತಾ ಅಭಿನಯದ ಯಶೋಧಾ ಚಿತ್ರ


  ನಾಗ ಚೈತನ್ಯ ಮತ್ತು ಸಮಂತಾಳ ಮಧ್ಯೆ ಪ್ರೀತಿ ಹೇಗೆ ಹುಟ್ಟಿತು ಗೊತ್ತೇ?


  ಹಿಂದೊಮ್ಮೆ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ರವೀಂದ್ರನ್ ಅವರೊಂದಿಗಿನ ಸಂಭಾಷಣೆಯಲ್ಲಿ, ಸಮಂತಾ ರುತ್ ಪ್ರಭು ಅವರೊಂದಿಗಿನ ತಮ್ಮ ಸಂಬಂಧದ ಬಗ್ಗೆ ತೆಲುಗು ನಟ ತೆರೆದಿಟ್ಟರು. "ಸುಮಾರು 10 ವರ್ಷಗಳ ಹಿಂದೆ, ನಾವು ‘ಯೇ ಮಾಯಾ ಚೆಸಾವೆ’ ಚಿತ್ರದ ಚಿತ್ರೀಕರಣದಲ್ಲಿ ಭೇಟಿಯಾದೆವು ಮತ್ತು ಕಳೆದ ಏಳು ವರ್ಷಗಳಿಂದ ನಾನು ಸಮಂತಾಳನ್ನು ಮೆಚ್ಚಿಸಲು ನನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದ್ದೇನೆ. ಅವಳನ್ನು ಮದುವೆಯಾಗುವುದನ್ನು ಬಿಟ್ಟು ನನಗೆ ಬೇರೆ ದಾರಿಯೇ ಇರಲಿಲ್ಲ" ಎಂದು ನಟ ಹೇಳಿದ್ದಾರೆ.


  ಸಮಂತಾ-ನಾಗಚೈತನ್ಯ ಸಂಗ್ರಹ ಚಿತ್ರ


  ಇದನ್ನೂ ಓದಿ: Naga Chaitanya: ಯುವ ನಟಿ ಜೊತೆ ನಾಗಚೈತನ್ಯ ಡೇಟಿಂಗ್! ರೂಮರ್ಸ್‌ಗೆ ಸಿಕ್ಕೇ ಬಿಡ್ತಾ ಸಾಕ್ಷ್ಯ?


  ನಂತರ, ರಾಹುಲ್ ಸಮಂತಾ ಅವರನ್ನು ಸಹ ಅದೇ ಪ್ರಶ್ನೆಯನ್ನು ಕೇಳಿದರು, ಅದಕ್ಕೆ ಸಮಂತಾ ಅವರು "ನಾಗ ಚೈತನ್ಯ ಅನೇಕ ಹುಡುಗಿಯರ ಹಿಂದೆ ಓಡುತ್ತಿದ್ದರು ಮತ್ತು ನನ್ನ ಟೋಕನ್ ಸಂಖ್ಯೆ ಏಳು ವರ್ಷಗಳ ನಂತರ ಮಾತ್ರ ಬಂದಿತು" ಎಂದು ಹೇಳಿದರು.


  ಶೋಭಿತಾ ಜೊತೆ ನಾಗಚೈತನ್ಯ?


  ಗಂಡ-ಹೆಂಡತಿ ಮಧ್ಯೆ ಎಲ್ಲವೂ ಸರಿಯಿಲ್ಲ ಅಂತ ಹೇಳಿದ್ರಂತೆ ಸಮಂತಾ !


  ಆದಾಗ್ಯೂ, ಅವರ ಪ್ರತ್ಯೇಕತೆಯ ಘೋಷಣೆಯ ಸ್ವಲ್ಪ ಸಮಯದ ನಂತರ, ಸಮಂತಾ ತನ್ನ ಮಾಜಿ ಪತಿಯೊಂದಿಗೆ ಪೋಸ್ಟ್ ಮಾಡಿದ ಹೆಚ್ಚಿನ ಫೋಟೋಗಳನ್ನು ತೆಗೆದು ಹಾಕಿದ್ದರು. ಒಂದೊಮ್ಮೆ ‘ಕಾಫಿ ವಿತ್ ಕರಣ್’ ಶೋ ಗೆ ಬಂದ ನಟಿ ಗಂಡ-ಹೆಂಡತಿಯ ನಡುವೆ ವಿಷಯಗಳು ಸೌಹಾರ್ದಯುತವಾಗಿಲ್ಲ ಎಂದು ಬಹಿರಂಗಪಡಿಸಿದ್ದರು. ಮತ್ತೊಂದೆಡೆ, ನಾಗಚೈತನ್ಯ ಶೋಭಿತಾ ಧೂಳಿಪಾಲ ಅವರೊಂದಿಗೆ ಸಂಬಂಧದಲ್ಲಿದ್ದಾರೆ ಎಂಬ ವದಂತಿಗಳು ಸಹ ಹರಡಿವೆ.


  ಇದನ್ನೂ ಓದಿ: Samantha Ruth Prabhu: ಮಾಜಿ ಮಾವನಷ್ಟೇ ಸಂಭಾವನೆ ಪಡೆಯುತ್ತಾರೆ ಸಮಂತಾ! ನಾಗಾರ್ಜುನ-ಸ್ಯಾಮ್ ಸ್ಯಾಲರಿ ಸೇಮ್ ಸೇಮ್!


  ಚೈ ಅವರು ‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದಾಗ ಕೊನೆಯ ಬಾರಿಗೆ ಪರದೆಯ ಮೇಲೆ ಕಾಣಿಸಿಕೊಂಡಿದ್ದರು. ಮತ್ತೊಂದೆಡೆ, ನಟಿ ಸಮಂತಾ ಅಪರೂಪದ ಚರ್ಮದ ಕಾಯಿಲೆಯಿಂದ ಬಳಲುತ್ತಿದ್ದಾರೆ ಮತ್ತು ಯುಎಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  Published by:Annappa Achari
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು