Naga Chaitanya-Samantha: ಸಮಂತಾ ಜೊತೆಗಿನ ವಿಚ್ಛೇದನದ ಬಗ್ಗೆ ಏನಂದ್ರು ನಾಗ ಚೈತನ್ಯ

ಅಭಿಮಾನಿಗಳು ಏನೇ ಮಾತಾಡಿದರೂ, ಯಾವುದೇ ಪ್ರಶ್ನೆ ಕೇಳಿದರೂ ನಾಗ ಚೈತನ್ಯ ಮೌನದಿಂದ ಇರುತ್ತಿದ್ದರು. ಅಭಿಮಾನಿಗಳಿಗೆ ತಮ್ಮ ವಿಚ್ಛೇದನದ ವಿಷಯವಾಗಿ ಯಾವ ಮಾಹಿತಿಯನ್ನು ನೀಡಿರಲಿಲ್ಲ ಹಾಗೂ ಅದರ ಗಮನವನ್ನು ಅಭಿಮಾನಿಗಳಿಂದ ದೂರವಿರಿಸಲು ಯಾವಾಗಲೂ ಪ್ರಯತ್ನ ಪಡುತ್ತಿದ್ದರು. ಆದರೆ ಈಗ ಏಕೋ ತಮ್ಮ ಮೌನವನ್ನು ಮುರಿದು, ತಮ್ಮ ಮತ್ತು ಸಮಂತಾ ರುತ್ ಪ್ರಭು ಅವರ ನಡುವಿನ ವಿಚ್ಛೇದನದ ಕುರಿತು ಮುಕ್ತವಾಗಿ ಮಾತಾಡಿದ್ದಾರೆ.

ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು

ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು

  • Share this:
ಟಾಲಿವುಡ್‌ನಲ್ಲಿ (Tollywood) ಹಾಗೂ ದಕ್ಷಿಣ ಭಾರತದಲ್ಲಿ ಅತ್ಯಂತ ಹೆಚ್ಚು ಸುದ್ದಿಯಾಗಿದ್ದು ಮತ್ತು ಈಗಲೂ ಆಗುತ್ತಿರುವುದು ನಾಗ ಚೈತನ್ಯ (Naga Chaitanya) ಮತ್ತು ಸಮಂತಾ ರುತ್ ಪ್ರಭು (Samantha Ruth Prabhu) ಅವರ ವಿಚ್ಛೇದನ ವಿಷಯ. ಈ ವಿಚಾರ ಯಾವಾಗಲೂ ಚರ್ಚೆ ಆಗುತ್ತಲೇ ಇರುತ್ತದೆ. ದಿನವೂ ಅವರ ವಿಚ್ಛೇದನ ಕುರಿತ ವಿಷಯ ವೈರಲ್‌ ಆಗುವುದರ ಜೊತೆಗೆ ನಾಗ ಚೈತನ್ಯ ಮತ್ತು ಸಮಂತಾ ರುತು ಪ್ರಭು ಏನೇ ಹೇಳಿಕೆ ನೀಡಿದರೂ ಅಭಿಮಾನಿಗಳು ಆ ಮಾತುಗಳನ್ನು ಇವರಿಬ್ಬರ ವಿಚ್ಚೇದನಕ್ಕೆ (Divorce) ಜೋಡಿಸುತ್ತಿದ್ದಾರೆ. ಇವರು ಅಕ್ಟೋಬರ್ 2021 ರಲ್ಲಿ ತಮ್ಮ ವಿಚ್ಛೇದನದ ವಿಷಯವನ್ನು ಘೋಷಿಸಿದರು. ಇದು ಅವರ ಅಭಿಮಾನಿಗಳಿಗೆ (Fans) ಎಷ್ಟು ಆಘಾತ ನೀಡಿತು ಎಂದರೆ ಇವರಿಬ್ಬರೂ ಪ್ರೀತಿಸಿ ಮದುವೆಯಾಗಿ ಇಂದು ಬೇರ್ಪಡುವುದು ಯಾರಿಗೂ ಇಷ್ಟವಿರಲಿಲ್ಲ. 

ವಿಚ್ಛೇದನದ ಕುರಿತು ಮುಕ್ತವಾಗಿ ಮಾತನಾಡಿದ ನಾಗ ಚೈತನ್ಯ
ಅಭಿಮಾನಿಗಳು ಏನೇ ಮಾತಾಡಿದರೂ, ಯಾವುದೇ ಪ್ರಶ್ನೆ ಕೇಳಿದರೂ ನಾಗ ಚೈತನ್ಯ ಮೌನದಿಂದ ಇರುತ್ತಿದ್ದರು. ಅಭಿಮಾನಿಗಳಿಗೆ ತಮ್ಮ ವಿಚ್ಛೇದನದ ವಿಷಯವಾಗಿ ಯಾವ ಮಾಹಿತಿಯನ್ನು ನೀಡಿರಲಿಲ್ಲ ಹಾಗೂ ಅದರ ಗಮನವನ್ನು ಅಭಿಮಾನಿಗಳಿಂದ ದೂರವಿರಿಸಲು ಯಾವಾಗಲೂ ಪ್ರಯತ್ನ ಪಡುತ್ತಿದ್ದರು. ಆದರೆ ಈಗ ಏಕೋ ತಮ್ಮ ಮೌನವನ್ನು ಮುರಿದು, ತಮ್ಮ ಮತ್ತು ಸಮಂತಾ ರುತ್ ಪ್ರಭು ಅವರ ನಡುವಿನ ವಿಚ್ಛೇದನದ ಕುರಿತು ಮುಕ್ತವಾಗಿ ಮಾತಾಡಿದ್ದಾರೆ. ತಮ್ಮ ಮೌನದ ಹಿಂದಿನ ಕಾರಣವನ್ನು ಕೂಡ ಎಲ್ಲರ ಮುಂದೆ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: Chandan Kumar: ತೆಲುಗು ಶೂಟಿಂಗ್ ಸೆಟ್‌ನಲ್ಲಿ ಕಿರಿಕ್ ಆಗಿದ್ದೇಕೆ? ಗಲಾಟೆ ಬಗ್ಗೆ ಚಂದನ್ ಕುಮಾರ್ ರಿಯಾಕ್ಷನ್

 ನಾಗ ಚೈತನ್ಯ ಇತ್ತಿಚೀಗೆ ನೀಡಿದ ಸಂದರ್ಶನವೊಂದರಲ್ಲಿ “ನಾನು ಮತ್ತು ಸಮಂತಾ ಯಾವ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳದಿದ್ದರೂ, ವಿಚ್ಛೇದನದ ವಿಷಯ ಎಲ್ಲರಿಗೂ ತಿಳಿಸಿದ್ದೇವೆ. ನಮ್ಮ ವಿಚ್ಛೇದನವು ಸೌಹಾರ್ದಯುತವಾಗಿ ನಡೆದಿಲ್ಲ. ಒಪ್ಪಿಕೊಳ್ಳುತ್ತೇನೆ. ನಾನು ನನ್ನ ಅಭಿಮಾನಿಗಳು ಮತ್ತು ಮಾಧ್ಯಮಗಳ ಮುಂದೆ ನನ್ನ ವೈಯಕ್ತಿಕ ಜೀವನದ ಒಳ್ಳೆಯ ಮತ್ತು ಕೆಟ್ಟ ವಿಷಯಗಳನ್ನು ಯಾವಾಗಲೂ ಹಂಚಿಕೊಂಡಿರುವಂತೆ ಈ ವಿಚಾರವನ್ನು ಹೇಳಿಕೊಂಡಿದ್ದೇನೆ. ಈ ವಿಚಾರವಾಗಿ ನಾನು ಸಾಕಷ್ಟು ಮಾತನಾಡಿರಲಿಲ್ಲ. ಆದರೆ ಈ ವಿಚ್ಛೇದನದ ಕುರಿತು ಸಮಂತಾ ಈಗಾಗಲೇ ಸಾಕಷ್ಟು ಮುಂದುವರಿದಿದ್ದಾರೆ, ನಾನು ಕೂಡ ಆ ವಿಷಯದಿಂದ ದೂರ ಬಂದಿದ್ದೇನೆ. ಅದರ ಬಗ್ಗೆ ಮತ್ತೆ ಮತ್ತೆ ಜಗತ್ತಿಗೆ ತಿಳಿಸುವ ಅಗತ್ಯ ಖಂಡಿತ ಇಲ್ಲ” ಎಂದು ವಿಚ್ಛೇದನದ ಕುರಿತು ಮೌನ ಮುರಿದು ಮಾತನಾಡಿದ್ದಾರೆ.

ವಿಚ್ಛೇದನದ ಊಹಾಪೋಹಗಳ ಬಗ್ಗೆ ನಟ ಹೇಳಿದ್ದು ಹೀಗೆ
ನಾಗ ಚೈತನ್ಯ ತಮ್ಮ ಮಾತು ಮುಂದುವರಿಸುತ್ತಾ “ನನ್ನ ಸ್ನೇಹಿತರು, ಕುಟುಂಬ ಮತ್ತು ಪ್ರಮುಖ ವ್ಯಕ್ತಿಗಳು ಎಲ್ಲರಿಗೂ ನಮ್ಮ ವಿಚಾರ ತಿಳಿದಿದೆ. ನೀವು ಸುದ್ದಿಯನ್ನು ನೋಡಿರುತ್ತಿರಿ. ನಮ್ಮ ವಿಚ್ಛೇದನದ ಸುದ್ದಿಗಳು ದಿನವು ಬದಲಾಗುತ್ತಲೇ ಇವೆ. ಈ ಎಲ್ಲಾ ಊಹಾಪೋಹಗಳು ಮತ್ತು ಊಹೆಗಳೆಲ್ಲವೂ ಬಹಳ ತಾತ್ಕಾಲಿಕ. ನಾನು ಈ ವಿಚಾರಗಳಿಗೆ ಹೆಚ್ಚು ಪ್ರತಿಕ್ರಿಯೆ ಮಾಡುತ್ತಾ ಹೋದರೆ ಇನ್ನು ಈ ವಿಚಾರ ಹೆಚ್ಚು ಸುದ್ದಿ ಮಾಡುತ್ತದೆ. ಹಾಗಾಗಿ ನಾನು ಶಾಂತ ರೀತಿಯಿಂದ ಯಾವುದಕ್ಕೂ ಪ್ರತಿಕ್ರಿಯೆ ನೀಡದೇ ಸುಮ್ಮನಿರುವುದು. ಅದಕ್ಕೂ ರೆಕ್ಕೆ -ಪುಕ್ಕಗಳನ್ನು ಕಟ್ಟುವುದು ಸುದ್ದಿಗಳ ಕೆಲಸ ಆಗಿದೆ. ಹಾಗೆಯೇ ಈ ಸುದ್ದಿ ಸ್ವಲ್ಪ ದಿನಗಳ ನಂತರ ತೆರೆ ಮರೆಗೆ ಸರಿಯುವುದು ಕೂಡ ಅಷ್ಟೆ ಸತ್ಯ” ಎಂದು ಹೇಳಿದರು.

ವಿಚ್ಛೆದನದ ನಂತರ ಭಾರೀ ಟ್ರೊಲ್ ಗೆ ಒಳಗಾದ ಸಮಂತಾ 
ಕಳೆದ ವರ್ಷ ಸಮಂತಾ ನಾಗ ಚೈತನ್ಯ ಹೆಸರು ತೆಗೆದು ಹಾಕಿ ತಮ್ಮ ತಂದೆ ಹೆಸರನ್ನು ಸೇರಿಸಿಕೊಂಡಾಗಲೇ ವಿಚ್ಛೇದನದ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದ್ದರು. ಆದರೆ ನಂತರ ಇಬ್ಬರೂ ವಿಚ್ಛೆದನವನ್ನು ಘೋಷಿಸಿದರು. ವಿಚ್ಛೆದನದ ನಂತರ, ಸಮಂತಾ ಭಾರೀ ಟ್ರೋಲಿಂಗ್‌ಗೆ ಒಳಗಾಗಿದ್ದರು.

ಇದನ್ನೂ ಓದಿ:  Neetha Ashok: ವಿಕ್ರಾಂತ್ ರೋಣ ನಟಿ ನೀತಾ ಆಯ್ಕೆಯಾಗಿದ್ದು ಹೀಗಂತೆ, ಈ ಸುಂದರಿ ಬಗ್ಗೆ ನಿಮಗೆಷ್ಟು ಗೊತ್ತು?

ಆದರೆ ನಾಗ ಚೈತನ್ಯ ಅಭಿಮಾನಿಗಳ ಕಮೆಂಟ್‌ಗಳಿಗೆ ವಿಚ್ಛೇದನದ ವಿಚಾರವನ್ನು ಸ್ಪಷ್ಟ ಪಡಿಸಿದ್ದಾರೆ. ಸಮಂತಾ ಅವರು ಇತ್ತಿಚೀಗೆ ಕಾಫಿ ವಿತ್ ಕರಣ್ 7 ಶೋ ನಲ್ಲಿ ಕಾಣಿಸಿಕೊಂಡರು ಮತ್ತು ವಿಚ್ಛೇದನದ ನಂತರದ ಸಮಂತಾ ತಮ್ಮ ಜೀವನದ ಬಗ್ಗೆ ಮಾತನಾಡಿದರು. ವಿಚ್ಛೇದನ ಪಡೆಯಲು ನಿರ್ಧಾರ ಮಾಡಿದ್ದಾಗಿನಿಂದ ಜೀವನ ಬಹಳ ಕಷ್ಟವಾಗಿತ್ತು. ಆದರೆ ಈಗ ನಾನು ಉತ್ತಮವಾಗಿ ಇದ್ದೇನೆ ಎಂದು ಸಮಂತಾ ಹೇಳಿದ್ದರು.
Published by:Ashwini Prabhu
First published: