Rashmika Mandanna: ನಾಗಚೈತನ್ಯಗೆ ಜೊತೆಯಾದ ರಶ್ಮಿಕಾ: ಹೊಸ ಸಿನಿಮಾದ ಟೈಟಲ್​ ಔಟ್​..!

Naga Chaitanya and Rashmika Mandanna: ನಾಗ ಚೈತನ್ಯ ಹಾಗೂ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್​ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇದರ ನಡುವೆಯೇ ಈ ಜೋಡಿಯ ಹೊಸ ಸಿನಿಮಾ ಪ್ರಕಟವಾಗಿದೆ.

Anitha E | news18-kannada
Updated:September 13, 2019, 1:32 PM IST
Rashmika Mandanna: ನಾಗಚೈತನ್ಯಗೆ ಜೊತೆಯಾದ ರಶ್ಮಿಕಾ: ಹೊಸ ಸಿನಿಮಾದ ಟೈಟಲ್​ ಔಟ್​..!
ಅದೇ ನುವ್ವು ಅದೇ ನೇನು ಸಿನಿಮಾದಲ್ಲಿ ರಶ್ಮಿಕಾ ನಾಗಚೈತನ್ಯ
  • Share this:
ಕಳೆದ ಕೆಲವ ವರ್ಷಗಳಿಂದ ಹಿಟ್​ ಸಿನಿಮಾಗಾಗಿ ಕಾಯುತ್ತಿದ್ದ ನಟ ನಾಗ ಚೈತನ್ಯ ಇತ್ತೀಚೆಗಷ್ಟೆ ತೆರೆಕಂಡ 'ಮಜಿಲಿ'ಸಿನಿಮಾದಿಂದಾಗಿ ಮತ್ತೆ ಟ್ರ್ಯಾಕ್​ಗೆ ಮರಳಿದ್ದಾರೆ. ಈ ಸಿನಿಮಾದಲ್ಲಿ ಹೆಂಡತಿ ಸಮಂತಾ ಜತೆ ಅಭಿನಯಿಸಿದ್ದು, ಬಾಕ್ಸಾಫಿಸ್​ನಲ್ಲಿ ಇದು ತಕ್ಕ ಮಟ್ಟಿಗೆ ಸದ್ದು ಮಾಡಿತ್ತು. 

ಇದಾದ ನಂತರ ನಾಗ ಚೈತನ್ಯ ತನ್ನ ಮಾವ ವೆಂಕಟೇಶ್​ ಜತೆ 'ವೆಂಕಿ ಮಾವ' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇದರಲ್ಲಿ ಸೇನಾಧಿಕಾರಿಯ ಪಾತ್ರದಲ್ಲ ಕಾಣಿಸಿಕೊಳ್ಳಿದ್ದಾರಂತೆ ನಾಗ್​. ಇದರ ಜತೆ ಜತೆಗೆ ಮೂರ್ನಾಲ್ಕು ಸಿನಿಮಾಗಳಿಗೆ ನಾಗ್ ಓಕೆ ಹೇಳಿದ್ದಾರೆ. ಹೌದು ರೌಡಿ ಬೇಬಿ ಸಾಯಿ ಪಲ್ಲವಿ ಜತೆ ಹೊಸ ಸಿನಿಮಾಗೆ ನಾಂದಿ ಹಾಡಿರುವ ನಾಗ ಚೈತನ್ಯ ಹಿಂದಿಯ ಹಿಟ್​ ಸಿನಿಮಾ 'ಬದಾಯಿ ಹೋ' ತೆಲುಗು ರಿಮೇಕ್​ನಲ್ಲೂ ನಟಿಸಲಿದ್ದಾರಂತೆ.

నాగ చైతన్య, రష్మిక మండన్న నటించిన అధే నువ్వు అధే నేను యొక్క ఉపగ్రహ హక్కులను జెమిని టివి సొంతం చేసుకుంది. #GeminiTV@chay_akkineni @iamRashmika pic.twitter.com/250nleEzk7
ಈ ಸುದ್ದಿಗಳ ನಡುವೆಯೇ ನಾಗ ಚೈತನ್ಯ ದಿಲ್​ ರಾಜು ನಿರ್ಮಾಣದ ಹೊಸ ಸಿನಿಮಾದಲ್ಲಿ ಅಭಿನಬಯಿಸುತ್ತಿದ್ದು, ಇದರಲ್ಲಿ ಇವರಿಗೆ ಜೊತೆಯಾಗಿ ರಶ್ಮಿಕಾ ನಟಿಸಲಿದ್ದಾರೆ. ಈ ವಿಷಯವನ್ನು ಜೆಮಿನಿ ಟಿವಿ ತನ್ನ ಅಧಿಕೃತ ಟ್ವಿಟರ್​ ಪುಟದಲ್ಲಿ ಪ್ರಕಟಿಸಿದೆ.

ಇದನ್ನೂ ಓದಿ: Pailwaan: ಪೈಲ್ವಾನ್​ ಬೆಡಗಿ ಆಕಾಂಕ್ಷಾ ಸಿಂಗ್​ರ ಜಾಲಿ ಜಾಲಿ ಟಿಕ್​ಟಾಕ್​ ವಿಡಿಯೋ..! ​ಈ ಚಿತ್ರಕ್ಕೆ 'ಅದೇ ನುವ್ವು ಅದೇ ನೇನು' ಎಂದು ಶೀರ್ಷಿಕೆ ನೀಡಲಾಗಿದ್ದು, ಹೊಸ ನಿರ್ದೇಶಕರೊಬ್ಬರು ಟಾಲಿವುಡ್​ಗೆ ಪರಿಚಯಿಸಲಾಗುತ್ತಿದೆ. ಅದರಲ್ಲೂ ಇದೇ ಮೊದಲ ಬಾರಿಗೆ ಈ ಸಿನಿಮಾ ಕುರಿತಾಗಿ ಸ್ಯಾಟಲೈಟ್​ ಹಕ್ಕುಗಳನ್ನು ಖರೀದಿಸಿರುವ ಟಿವಿ ಚಾನೆಲ್​ ಈ ಪ್ರಕಟಿಸಿರುವುದು ವಿಶೇಷ.

'ಅದೇ ನುವ್ವು ಅದೇ ನೇನು' ಚಿತ್ರ ಯಾವಾಗಿನಿಂದ ಆರಂಭವಾಗಲಿದೆ, ತಾರಾಬಳಗದಲ್ಲಿ ಯಾರಿದ್ದಾರೆ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಸದ್ಯಕ್ಕೆ ಮೂಲಗಳ ಪ್ರಕಾರ ನಾಗ ಚೈತನ್ಯ ಕೈಯಲ್ಲಿರುವ ಸಿನಿಮಾಗಳ ಚಿತ್ರೀಕರಣ ಪೂರ್ಣಗೊಂಡ ನಂತರ ಈ ಚಿತ್ರ ಸೆಟ್ಟೇರಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ವಿವಾಹದ ನಂತರ ನಾಯಕಿಯಾಗಿ ಮಿಂಚಿದ 'ಪೈಲ್ವಾನ್'​​ ನಟಿ: ಆಕಾಂಕ್ಷಾಗೆ ಸಿಕ್ತು ಕನ್ನಡಿಗರ ಪ್ರೀತಿ​..!

 

Akanksha Singh: 'ಪೈಲ್ವಾನ್'​ ಬ್ಯೂಟಿ ಆಕಾಂಕ್ಷಾರ ಆಫ್​ಸ್ಕ್ರೀನ್​ ರೊಮ್ಯಾನ್ಸ್​..! ​


First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading