ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರು ‘ಅಕ್ಕಿನೇನಿ ತೊಕ್ಕಿನೇನಿ’ ಎಂಬ ಪದ ಪ್ರಯೋಗ ಮಾಡಿ ಅಕ್ಕಿನೇನಿ ನಾಗೇಶ್ವರ್ ರಾವ್ (Nageshwar Rao) ಕುಟುಂಬಕ್ಕೆ ಬೇಸರ ಮಾಡಿರುವ ವಿಚಾರ ವಿವಾದ ರೂಪಕ್ಕೂ ತಿರುಗಿತ್ತು. ಈ ಬಗ್ಗೆ ಅಕ್ಕಿನೇನಿ ಕುಟುಂಬ ಮತ್ತು ಬಾಲಯ್ಯ ಪ್ರತಿಕ್ರಿಯೆ ಸಹ ನೀಡಿದ್ದರು.
ವಿವಾದದ ನಂತರ ಒಂದೇ ವೇದಿಕೆಯಲ್ಲಿ ಬಾಲಯ್ಯ ಮತ್ತು ನಾಗ ಚೈತನ್ಯ
ಸದ್ಯ ವಿವಾದದ ನಂತರ ಒಂದೇ ವೇದಿಕೆಯಲ್ಲಿ ತೆಲುಗು ಸ್ಟಾರ್ ನಾಗ ಚೈತನ್ಯ ಮತ್ತು ನಂದಮೂರಿ ಬಾಲಕೃಷ್ಣ ಭೇಟಿಯಾಗಿದ್ದಾರೆ. ಇಬ್ಬರು ಎದುರು ಬದುರಾದ ಈ ಸಂದರ್ಭದಲ್ಲಿ ನಟರು ಯಾವುದೇ ವಿವಾದ, ಬೇಸರ ಇಟ್ಟುಕೊಟ್ಟದೇ ಪರಸ್ಪರ ಆಲಂಗಿಸಿಕೊಳ್ಳುವ ಮೂಲಕ ಸ್ವಾಗತಿಸಿಕೊಂಡಿದ್ದಾರೆ.
ಶನಿವಾರ ಹೈದರಾಬಾದ್‌ನಲ್ಲಿ ನಡೆದ ಎನ್‌ಟಿಆರ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಹಲವರು ಗಣ್ಯರು, ನಟರು ನೆರೆದಿದ್ದರು. ಇದೇ ಕಾರ್ಯಕ್ರಮದಲ್ಲಿ ನಾಗ ಚೈತನ್ಯ ಮತ್ತು ಬಾಲಕೃಷ್ಣ ಸಹ ಪಾಲ್ಗೊಂಡಿದ್ದರು. ಈ ಸಮಾರಂಭದ ವಿಡಿಯೋ ಮತ್ತು ಫೋಟೋ ವೈರಲ್ ಆಗಿದ್ದು, ಚೈತನ್ಯ ಮತ್ತು ಬಾಲಕೃಷ್ಣ ಅಪ್ಪಿಕೊಳ್ಳುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.
ಬಾಲಕೃಷ್ಣ ಅವರೊಂದಿಗೆ ವೇದಿಕೆಯಲ್ಲಿದ್ದ ಎನ್.ಚಂದ್ರಬಾಬು ನಾಯ್ಡು ಅವರನ್ನು ಸ್ವಾಗತಿಸುವ ಮೊದಲು ನಾಗ ಚೈತನ್ಯ ಬಾಲಕೃಷ್ಣ ಅವರನ್ನು ಅಪ್ಪಿಕೊಂಡು ಎಲ್ಲವೂ ಸರಿ ಇದೆ ಎಂಬ ಸೂಚನೆ ನೀಡಿದರು.
ಇನ್ನೂ ಸಮಾರಂಭದಲ್ಲಿ ಮಾತನಾಡಿದ ಚೈತನ್ಯ, ಬಾಲಕೃಷ್ಣ ಅವರನ್ನು ಆಹ್ವಾನಿಸಿದ್ದಕ್ಕೆ ಧನ್ಯವಾದ ಹೇಳಿದರು. “ಈ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಬಾಲಕೃಷ್ಣ ಅವರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ.
ನಂದಮೂರಿ ತಾರಕ ರಾಮರಾವ್ ಅವರ ನಟನೆ, ಸೌಂದರ್ಯ ಮತ್ತು ವಾತ್ಸಲ್ಯದ ಬಗ್ಗೆ ನಾನು ಪ್ರತ್ಯೇಕವಾಗಿ ಮಾತನಾಡುವ ಅಗತ್ಯವಿಲ್ಲ," ಎಂದು ಹೇಳಿದ್ದಾಗಿ ತೆಲುಗು ಸ್ಟಾಪ್ ಡಾಟ್ ಕಾಮ್ ವರದಿ ಮಾಡಿದೆ.
ನಾಗ ಚೈತನ್ಯ ಜೊತೆಗೆ ಈ ಸಮಾರಂಭದಲ್ಲಿ ರಾಮ್ ಚರಣ್ ಕೂಡ ಭಾಗವಹಿಸಿದ್ದರು.
ಏನಿದು ಅಕ್ಕಿನೇನಿ ತೊಕ್ಕಿನೇನಿ ವಿವಾದ?
ಬಾಲಯ್ಯ ಅವರು ಇತ್ತೀಚಿನ ಸಿನಿಮಾ ‘ವೀರಸಿಂಹರೆಡ್ಡಿ’ ಸಕ್ಸಸ್ ಮೀಟ್‌ನಲ್ಲಿ ಬಾಯಿತಪ್ಪಿನ ಎಡವಟ್ಟಿನಿಂದ ಈ ಪದ ಪ್ರಯೋಗ ಮಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಲ್ಲದೇ, ಅಕ್ಕಿನೇನಿ ಕುಟುಂಬದ ಕೆಂಗಣ್ಣಿಗೂ ಗುರಿಯಾಗಿದ್ದರು.
ಸಕ್ಸಸ್ ಮೀಟ್ ವೇದಿಕೆ ಮೇಲೆ ಮಾತನಾಡುವಾಗ ಹಿರಿಯ ಕಲಾವಿದರಾದ ಎಸ್.ವಿ. ರಂಗರಾವ್, ಅಕ್ಕಿನೇನಿ ನಾಗೇಶ್ವರ ರಾವ್ ಅವರ ಕುರಿತು ನಂದಮೂರಿ ಬಾಲಕೃಷ್ಣ ಲಘುವಾಗಿ ಮಾತನಾಡಿದ್ದಾರೆ.
‘ನಮ್ಮ ತಂದೆಗೆ (ನಂದಮೂರಿ ತಾರಕ ರಾಮರಾವ್) ಅನೇಕ ಸ್ಪರ್ಧಿಗಳಿದ್ದರು, ಎಂದು ಹೇಳುವಾಗ, ‘ಅಕ್ಕಿನೇನಿ ತೊಕ್ಕಿನೇನಿ’ ಎಂಬ ಪದ ಪ್ರಯೋಗ ಮಾಡಿದ್ದಾರೆ.
ಅಕ್ಕಿನೇನಿ ಕುಟುಂಬ ಹೇಗೆ ಪ್ರತಿಕ್ರಿಯಿಸಿತ್ತು?
ಈ ಹೇಳಿಕೆಗೆ ಹಲವು ಕಲಾವಿದರು ಬೇಸರ ವ್ಯಕ್ತಪಡಿಸಿದ್ದರು. ಹಳೆಯ ಲೆಜೆಂಡರಿ ಕಲಾವಿದರ ಬಗ್ಗೆ ಬಾಲಯ್ಯ ಮಾತನಾಡಿದ್ದು ಸರಿ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಹೇಳಿಕೆಯನ್ನು ಅಕ್ಕಿನೇನಿ ಕುಟುಂಬ ಸಹ ವಿರೋಧಿಸಿತ್ತು. ನಾಗ ಚೈತನ್ಯ ಹೇಳಿಕೆಯನ್ನು ಖಂಡಿಸಿದ್ದರು. ಯಾವುದೇ ಹೆಸರು ಉಲ್ಲೇಖಿಸಿದ ಇವರು "ನಂದಮೂರಿ ತಾರಕ ರಾಮರಾವ್ ಅವರು, ಅಕ್ಕಿನೇನಿ ನಾಗೇಶ್ವರ ರಾವ್ ಅವರು ಮತ್ತು ಎಸ್.ವಿ. ರಂಗರಾವ್ ಅವರು ತೆಲುಗು ಚಿತ್ರರಂಗದ ಹೆಮ್ಮೆ ಮತ್ತು ಆಧಾರಸ್ತಂಭಗಳು. ಅವರ ಸೃಜನಶೀಲ ಕೊಡುಗೆ ಅಪಾರವಾಗಿದೆ. ಅವರಿಗೆ ಅಗೌರವ ತೋರುವುದು ನಮ್ಮನ್ನು ನಾವೇ ಕೀಳಾಗಿಸಿಕೊಂಡಂತೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: Pavitra Lokesh: ಪವಿತ್ರಾ ಲೋಕೇಶ್ ಅವರನ್ನು ಈ ನಟ ಮುದ್ದಾಗಿ ಏನೆಂದು ಕರೀತಾರೆ ಗೊತ್ತಾ? ನಾಟಿ ನರೇಶ್ ಎಂದ ನೆಟ್ಟಿಗರು
ನಾಗ ಚೈತನ್ಯ ಸೇರಿ ಅಕ್ಕಿನೇನಿ ಕುಟುಂಬ ಹೇಳಿಕೆ ನಂತರ ಬಾಲಯ್ಯ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದರು. "ನಾಗೇಶ್ವರ್ ಅವರ ಮಕ್ಕಳಿಗಿಂತ ಜಾಸ್ತಿ ನನ್ನನ್ನು ಅವರು ಪ್ರೀತಿ ಮಾಡುತ್ತಿದ್ದರು. ನಾನು ಅವರನ್ನು ಅಂಕಲ್ ಅಂತ ಕರೆಯುತ್ತಿದ್ದೆ" ಎಂದು ನಂದಮೂರಿ ಬಾಲಕೃಷ್ಣ ಹೇಳಿದ್ದರು. ಈ ಮೂಲಕ ವಿವಾದಕ್ಕೆ ಪೂರ್ಣವಿರಾಮ ಹಾಕುವ ಪ್ರಯತ್ನ ಮಾಡಿದ್ದರು. ಮೊನ್ನೆಯ ಸಮಾರಂಭದಲ್ಲಿ ಇಬ್ಬರ ನಡೆಯೂ ವಿವಾದ ತಣ್ಣಗಾಗಿದೆ ಎಂಬ ಸೂಚನೆ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ