Samantha ಸೆಕ್ಸ್​ ಸೀನ್​ ಕಂಡು ಶಾಕ್​ ಆಗಿದ್ರಂತೆ ನಾಗಚೈತನ್ಯ: ಡಿವೋರ್ಸ್​ಗೆ ಇದೇ ಕಾರಣನಾ?

ನಾಗ ಚೈತನ್ಯ ಮಾತ್ರವಲ್ಲ, ಅವರ ಪೋಷಕರು ನಾಗಾರ್ಜುನ ಅಕ್ಕಿನೇನಿ ಮತ್ತು ಇತರರು ಸಹ ತಮ್ಮ ಕುಟುಂಬದ ಸೊಸೆ ಸಿನಿಮಾಗಳಲ್ಲಿ ಬೋಲ್ಡ್ ದೃಶ್ಯಗಳು ಮತ್ತು ಐಟಂ ಸಾಂಗ್‌ಗಳನ್ನು ಮಾಡುವುದನ್ನು ಮುಂದುವರಿಸುವುದು ಇಷ್ಟವಿರಲಿಲ್ಲ.

ಸಮಂತಾ, ನಾಗಚೈತನ್ಯ

ಸಮಂತಾ, ನಾಗಚೈತನ್ಯ

  • Share this:
ಟಾಲಿವುಡ್​ ಕ್ಯೂಟ್​ ಕಪಲ್ ​(Cute Couple) ಆಗಿದ್ದ ಸಮಂತಾ (Samantha) ಹಾಗೂ ನಾಗಚೈತನ್ಯ (Naga Chaitanya) ಡಿವೋರ್ಸ್ (Divorce)​ ಆಗಿ ದೂರ ದೂರ ಆಗಿದ್ದಾರೆ. ಆದರೆ ಇಂದಿನಿವರೆಗೂ ಇವರಿಬ್ಬರೂ ದೂರವಾಗಲು ಕಾರಣವೇನು ಎಂದು ತಿಳಿದುಬಂದಿಲ್ಲ. ಹೀಗಾಗಿ ಅವರ ಅಭಿಮಾನಿಗಳು ಸಖತ್​ ಕ್ಯೂರಿಯಾಸಿಟಿಯಿಂದ ಪ್ರತಿದಿನ ವಿಚ್ಛೇದನದ ಕಾರಣ ಹುಡುಕಿತ್ತಿದ್ದಾರೆ. ನಾಗಚೈತನ್ಯ ಹಾಗೂ ಸಮಂತಾ ವಿಚ್ಚೇದನೆಯಾಗಿ ತಿಂಗಳುಗಳು ಕಳೆದರೂ ಇವರಿಬ್ಬರ ನಡುವಿನ ಸಂಬಂಧ, ಬಿರುಕು, ದಾಂಪತ್ಯ ಜೀವನದ ಕುರಿತ ಚರ್ಚೆ ಮಾತ್ರ ಮುಗಿದಿಲ್ಲ. ಇವರ ವಿಚ್ಚೇದನೆಗೆ ಸಂಬಂಧಿಸಿ ಬಹಳಷ್ಟು ಸುದ್ದಿಗಳು ಓಡಾಡುತ್ತಿವೆ. ಅಸಲಿ ಕಾರಣ ಏನಿತ್ತೋ ಎಂಬುದು ರಿವೀಲ್ ಆಗದಿದ್ದರೂ ಸಮಂತಾರ ಬೋಲ್ಡ್ ಸೀನ್ (Bold Scene) ಮಾಡೋ ನಿರ್ಧಾರ ಅವರ ಪತಿಯ ಮನೆಯವರಿಗೆ ದೊಡ್ಡ ಶಾಕ್ (Big Shock) ಆಗಿತ್ತು ಎಂದು ಸುದ್ದಿಯಾಗುತ್ತಿದೆ. ಈ ಹಿಂದಿನಿಂದಲೂ ಫ್ಯಾಮಿಲಿ ಮ್ಯಾನ್​ 2 (The Family Man 2) ಸೀರೀಸ್​ನಲ್ಲಿ ಸಮಂತಾ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದೇ ವಿಚ್ಛೇದನಕ್ಕೆ ಕಾರಣ ಅಂತ ಹೇಳಲಾಗುತ್ತಿತ್ತು. ಇದೀಗ ಆ ಸುದ್ದಿ ನಿಜ ಎನ್ನುವಂತೆ ಆಗಿದೆ. ನಾಗಚೈತನ್ಯಗೆ ಸಮಂತಾ ಸೆಕ್ಸ್​ ಸೀನ್ (Sex Scene)​ ಕಂಡು ಶಾಕ್​ ಆಗಿದ್ದರಂತೆ. ತನ್ನ ಪತ್ನಿಯನ್ನು ಈ ರೀತಿಯ ದೃಶ್ಯಗಳಲ್ಲಿ ನೋಡುತ್ತೇನೆ ಎಂದು ಅಂದುಕೊಂಡಿರಲಿಲ್ಲ ಎಂದು ನಾಗಚೈತನ್ಯ ತನ್ನ ಕುಟುಂಬಸ್ಥರ ಮುಂದೆ ಹೇಳಿಕೊಂಡಿದ್ದರಂತೆ. ಇಂಥದ್ದೊಂದು ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ನಾಗಚೈತನ್ಯ ಫ್ಯಾಮಿಲಿಗೂ ಆಗಿತ್ತು ಇರುಸು ಮುರುಸು!

ಫ್ಯಾಮಿಲಿ ಮ್ಯಾನ್​ 2 ಸಖತ್​ ಹಿಟ್​ ಆದ ಸೀರೀಸ್​. ಈ ಸೀರೀಸ್​ನಲ್ಲಿ ಸಮಂತಾ ಅವರದ್ದೇ ಮುಖ್ಯ ಪಾತ್ರ. ಸಖತ್​ ಬೋಲ್ಡ್ ಅವತಾರದಲ್ಲಿ ಸಮಂತಾ ಕಾಣಿಸಿಕೊಂಡಿದ್ದರು. ಮೂಲಗಳ ಪ್ರಕಾರ, ಇದು ನಾಗ ಚೈತನ್ಯ ಮಾತ್ರವಲ್ಲ, ಅವರ ಪೋಷಕರು ನಾಗಾರ್ಜುನ ಅಕ್ಕಿನೇನಿ ಮತ್ತು ಇತರರು ಸಹ ತಮ್ಮ ಕುಟುಂಬದ ಸೊಸೆ ಸಿನಿಮಾಗಳಲ್ಲಿ ಬೋಲ್ಡ್ ದೃಶ್ಯಗಳು ಮತ್ತು ಐಟಂ ಸಾಂಗ್‌ಗಳನ್ನು ಮಾಡುವುದನ್ನು ಮುಂದುವರಿಸುವುದು ಇಷ್ಟವಿರಲಿಲ್ಲ. ಮದುವೆ ನಂತರ ಈ ರೀತಿಯ ಪಾತ್ರಗಳಲ್ಲಿ ನಟಿಸುವುದು ಬೇಡ ಎಂದು ಸಮಂತಾಗೆ ಹೇಳಿದ್ದರಂತೆ

ಇದನ್ನುಓದಿ:`ಲವ್​ ಯೂ ರಚ್ಚು’ ಟ್ರೈಲರ್​ ಲಾಂಚ್​: ಹಾಟ್​ ಲುಕ್​ನಲ್ಲಿ ರಚಿತಾ, ಕಾರ್ಯಕ್ರಮಕ್ಕೆ ಬಾರದ ಅಜಯ್​ ರಾವ್​!

ದ್ರೋಹ ಬರೆದಿದ್ದಾರೆ ಎಂದು ನೊಂದಿದ್ದರಂತರೆ ನಾಗಚೈತನ್ಯ!

'ದಿ ಫ್ಯಾಮಿಲಿ ಮ್ಯಾನ್ 2' ನಲ್ಲಿ ಸಮಂತಾ ಅವರ ಸೆಕ್ಸ್ ದೃಶ್ಯವನ್ನು ನೋಡಿ ನಾಗ ಚೈತನ್ಯ ಮತ್ತು ಅವರ ಕುಟುಂಬ ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದಾರೆ. ಸಮಂತಾ ತಮಗೆ ದ್ರೋಹ ಬಗೆದಿದ್ದಾರೆ ಎಂದು ನೊಂದಿದ್ದರು ಎನ್ನಲಾಗಿದೆ. ಬೋಲ್ಡ್​ ದೃಶ್ಯದಲ್ಲಿ ನಟಿಸುವುದಿಲ್ಲ ಎಂದ ಸಮಂತಾ  ಕೂಡ, ನಾಗಚೈತನ್ಯ ಬಳಿ ಹೇಳಿದ್ದರಂತೆ. ಆದರೆ, ಫ್ಯಾಮಿಲಿ ಮ್ಯಾನ್​ 2 ಸೀರೀಸ್​ನಲ್ಲಿ ಸಮಂತಾ ಅವರ ಸೆಕ್ಸ್​ ಸೀನ್​ ಕಂಡು ನಾಗಚೈತನ್ಯಗೆ ಬರಸಿಡಿಲೇ ಬಡಿದಂತಾಗಿತ್ತು.

ಇದನ್ನು ಓದಿ: ಬ್ರಾ, ಸೊಂಟದ ಸೈಜ್ ಕೇಳ್ತಾರೆ..ಶಿವರಾಜ್​ಕುಮಾರ್​ ಹಿರೋಯಿನ್​ ಗರಂ!

ನಾಗಚೈತನ್ಯಗೆ ಟಾಂಗ್​ ಕೊಡಲೆಂದೇ ಐಟಂ ಸಾಂಗ್​!?

ಇನ್ನೂ ಡಿವೋರ್ಸ್ ಆದ ಕೂಡಲೇ ಸಾಲು ಸಾಲು ಸಿನಿಮಾವನ್ನು ಸಮಂತಾ ಒಪ್ಪಿಕೊಂಡು. ಈ ನಡುವೆ ಪುಷ್ಪ ಸಿನಿಮಾದಲ್ಲಿ ಮೊದಲ ಬಾರಿಗೆ ಐಟಂ ಸಾಂಗ್​ವೊಂದರಲ್ಲಿ ಸಮಂತಾ ಸಖತ್​ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಬೋಲ್ಡ್​ ಪಾತ್ರದಲ್ಲಿ ನಟಿಸಬೇಡ ಎಂದಿದ್ದ ಮಾಜಿ ಪತಿ ನಾಗಚೈತನ್ಯಗೆ ಟಾಂಗ್​ ಕೊಟ್ಟಿದ್ದಾರೆ ಅಂತ ಅವರ ಫ್ಯಾನ್ಸ್​ ಮಾತನಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಪ್ರೀತಿಸಿ ಮದುವೆಯಾದ ಜೋಡಿ, ಹೀಗೆ ದೂರವಾಗಿರುವುದು ಅವರ ಅಭಿಮಾನಿಗಳಿಗೆ ಬೇಸರ ತರಿಸಿರುವುದಂತೂ ಸುಳ್ಳಲ್ಲ.
Published by:Vasudeva M
First published: