ಸಮಂತಾ(Samantha) - ನಾಗಚೈತನ್ಯ(Naga Chaitanya) ಪ್ರೀತಿಸಿ ಮದುವೆಯಾಗಿದ್ದವರು. ಆದರೆ, ಕೆಲ ದಿನಗಳ ಹಿಂದೆ ಇಬ್ಬರು ಡಿವೋರ್ಸ್(Divorce) ಪಡೆದು ದೂರಾಗಿದ್ದಾರೆ. ಇದಾದ ಬಳಿಕ ಸಮಂತಾ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ಅಭಿನಯದ ಮೊದಲ ಐಟಂ ಸಾಂಗ್(Item Song) ‘ಪುಷ್ಪ’ ಸಿನಿಮಾದ ‘ಊ ಅಂಟಾವಾ ಮಾಮ’ ಸಾಂಗ್ ಯೂಟ್ಯೂಬ್(Youtube)ನಲ್ಲಿ ನಂಬರ್ ಒನ್ ಪಟ್ಟಕೇರಿದೆ. ಇಷ್ಟೆ ಅಲ್ಲ ಹಾಲಿವುಡ್ (Hollywood) ಸಿನಿಮಾದಲ್ಲೂ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ ನಟಿ ಸಮಂತಾ. ಇತ್ತ ನಾಗಚೈತನ್ಯ ಕೂಡ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ, ಬೇರೆ ವಿಷಯಕ್ಕೆ ಚೈತನ್ಯ ಸುದ್ದಿಯಾಗುತ್ತಿದ್ದಾರೆ. ಮೊನ್ನೆಯಷ್ಟೇ ನಿರೂಪಕಿ (Anchor) ಲಹರಿ ಶಿರಿ ನಾಗಚೈತನ್ಯ ಅವರ ಪ್ರೈವೇಟ್ ಜೆಟ್ನಲ್ಲಿ ಪ್ರಯಾಣಿಸಿದ್ದ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ವಿಚಾರಕ್ಕೆ ನಾಗಚೈತನ್ಯ ಸುದ್ದಿಯಲ್ಲಿದ್ದರು. ಇದೀಗ ಮತ್ತೊಂದು ಯುವನಟಿ ಜೊತೆ ನಾಗಚೈತನ್ಯ ಕಣ್ಣಿನಲ್ಲೇ ಮಾಡತನಾಡಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಟಾಲಿವುಡ್(Tollywood) ಮನ್ಮಥ ನಾಗಾರ್ಜುನ ಪುತ್ರನ ಬಗ್ಗೆ ಇಷ್ಟೊಂದು ಚರ್ಚೆಯಾಗುವುದಕ್ಕೆ ಕಾರಣ ಹೊಸ 'ಬಂಗಾರ್ರಾಜು' ಆಗಿದ್ದರೂ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದೇ ವಿಡಿಯೋ ಈಗ ಟಾಲಿವುಡ್ ಗುಸು ಗುಸು ಅಂತ ಮಾತಾಡಿಕೊಳ್ಳುತ್ತಿದೆ.
ಯುವ ನಟಿ ಲುಕ್ಗೆ ಫಿದಾ ಆದ್ರಾ ನಾಗಚೈತನ್ಯ!
ಇದೇ ಸಂಕ್ರಾಂತಿಗೆ ನಾಗಾರ್ಜುನ ಹಾಗೂ ನಾಗಚೈತನ್ಯ ನಟಿಸಿರುವ ಸಿನಿಮಾ ತೆರೆಮೇಲೆ ಮೋಡಿ ಮಾಡಲು ಸಜ್ಜಾಗಿ ನಿಂತಿದೆ. ಥಿಯೇಟರ್ 50 ಪರ್ಸೆಂಟ್ ಇರಲಿ. ಟಿಕೆಟ್ ಬೆಲೆ ಕಡಿಮೆ ಆಗಲಿ. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ ಅಂತ ಅಪ್ಪ- ಮಗ ನಿರ್ಧರಿಸಿದಂತಿದೆ. ಅದಕ್ಕೆ ನಾಗಾರ್ಜುನ ಹಾಗೂ ನಾಗಚೈತನ್ಯ ಇಬ್ಬರೂ ತಮ್ಮ ಹೊಸ ಸಿನಿಮಾ 'ಬಂಗಾರ್ರಾಜು' ಚಿತ್ರವನ್ನು ಬಿಡದ ಹಾಗೆ ಪ್ರಚಾರ ಮಾಡುತ್ತಿದ್ದಾರೆ. ಇದೀಗ ಈ ಸಿನಿಮಾದ ನಟಿ ಹಾಗೂ ನಾಗಾರ್ಜುನ್ ನಡುವಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇದನ್ನು ಓದಿ : Samantha ಜೊತೆ ಡಿವೋರ್ಸ್ ನಂತ್ರ ನಾಗಚೈತನ್ಯ ಜೊತೆ ಕಾಣಿಸಿಕೊಂಡ ಈ ಚೆಲುವೆ ಯಾರು? ಪ್ರೈವೇಟ್ ಜೆಟ್ನಲ್ಲಿ ಇಬ್ರು ಮಾಡಿದ್ದೇನು?
ಪ್ರಚಾರದ ವೇಳೆ ಇಬ್ಬರ ನಡುವೆ ಕಣ್ಣಲ್ಲೇ ಮಾತುಕತೆ!
ಇದು ಬಂಗಾರ್ರಾಜು ನಟಿ ದಕ್ಷ ನಗರ್ಕರ್ ಹಾಗೂ ನಟ ನಾಗಚೈತನ್ಯ ನಡುವಿನ ವಿಡಿಯೋ ಸುದ್ದಿಯಲ್ಲಿದೆ. ಸಿನಿಮಾ ಪ್ರಚಾರಕ್ಕೆ ಎಲ್ಲರೂ ಒಟ್ಟಿಗೆ ಸೇರಿದ್ದರು. ಇದೇ ವೇಳೆ ಇಬ್ಬರ ಕಣ್ಣಿನ ನೋಟಗಳು ಬದಲಾದವು. ನಾಗಚೈತನ್ಯ ನೋಡಿ ದಕ್ಷ ಸ್ಮೈಲ್ ಕೊಟ್ಟಿದ್ದರು. ಆ ನಗು ನೋಡಿ ನಾಗಚೈತನ್ಯ ಕರಗಿ ನೀರಾಗಿ ಬಿಟ್ಟರು. ನಟಿಯ ನಗುವಿಗೆ ನಾಗಚೈತನ್ಯ ಕ್ಲೀನ್ ಬೋಲ್ಡ್ ಆದಂತೆ ಕಂಡಿದ್ದಾರೆ. ಇದಕ್ಕೆ ನೆಟ್ಟಿಗರು ಡಿಫರೆಂಟ್ ಆಗಿ ಕಮೆಂಟ್ ಮಾಡುತ್ತಾ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಗಂಡಸರ ಬುದ್ಧಿ ಎಲ್ಲಿಗೆ ಹೋಗುತ್ತೆ ಅಂತ ಕೆಲವರು ನಾಗಚೈತನ್ಯ ಕಾಲೆಳೆಯುತ್ತಿದ್ದಾರೆ.
ಇದನ್ನು ಓದಿ : ನೋಡನೋಡುತ್ತಲೇ ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ ಪುತ್ರಿಗೆ 1 ವರ್ಷ ಆಗೇ ಹೋಯ್ತು.. ವಮಿಕಾ ಫಸ್ಟ್ ಬರ್ತ್ಡೇ ಸೆಲೆಬ್ರೆಷನ್ ಹೇಗಿತ್ತು ನೋಡಿ..
ಯಾರು ಈ ಚೆಲುವೆ ದಕ್ಷ ನಗರ್ಕರ್?
26 ವರ್ಷದ ನಟಿ ದಕ್ಷ ನಗರ್ಕರ್ ಹುಟ್ಟಿದ್ದು ಮುಂಬೈ, ಆದರೆ ದೆಹಲಿಯಲ್ಲಿ ನೆಲೆಸಿದ್ದಾರೆ. 2015ರಲ್ಲಿ ಹೋರಾ ಹೋರಿ ಎನ್ನುವ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದರು. ಬಳಿಕ 2018ರಲ್ಲಿ ಹುಷಾರು ಸಿನಿಮಾ ಹೊಸ ಇಮೇಜ್ ತಂದುಕೊಟ್ಟಿದೆ. 2021ರಲ್ಲಿ ಹಿಟ್ ಚಿತ್ರ ‘ಜೋಂಬಿ ರೆಡ್ಡಿ’ಗೆ ನಾಯಕಿಯಾಗಿದ್ದರು. ಈಗ ‘ಬಂಗಾರ್ರಾಜು’ ಚಿತ್ರದಲ್ಲಿ ನಟಿಸಿದ್ದು, ಟಾಲಿವುಡ್ನಲ್ಲಿ ಗಮನ ಸೆಳೆಯುತ್ತಿದ್ದಾರೆ. ನಾಗಚೈತನ್ಯ ಹಾಗೂ ದಕ್ಷ ನಗರ್ಕರ್ ಇಬ್ಬರೂ ಯಾರಿಗೂ ತಿಳಿಯದ ಹಾಗೇ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ