ಕಳೆದ ವರ್ಷ ‘ಲವ್ ಸ್ಟೋರಿ’(Love Story) ಎಂಬ ಸೂಪರ್ ಹಿಟ್ ಸಿನಿಮಾ ನೀಡಿದ ನಾಗ ಚೈತನ್ಯ(Naga Chaitanya) 2022ರಲ್ಲಿ ‘ಬಂಗಾರ್ರಾಜು’ (Bangarraju) ಸಿನಿಮಾದೊಂದಿಗೆ ಮತ್ತೊಂದು ಅಗ್ನಿಪರೀಕ್ಷೆಗೆ ಸಿದ್ಧರಾಗಿದ್ದಾರೆ. ಅವರ ತಂದೆ, ನಟ ನಾಗಾರ್ಜುನ ಅಕ್ಕಿನೇನಿ(Nagarjuna Akkineni), ರಮ್ಯಾ ಕೃಷ್ಣನ್(Ramya Krishnan) ಮತ್ತು ಕೃತಿ ಶೆಟ್ಟಿ ಸಹ ನಟಿಸಿದ್ದಾರೆ. ಈ ಕಲ್ಯಾಣ್ ಕೃಷ್ಣಾ ಕುರಸಾಲ ನಿರ್ದೇಶನವು ‘ಸೊಗ್ಗಾಡೆ ಚಿನ್ನಿ ನಯನಾ’ ಚಿತ್ರದ ಮುಂದುವರಿದ ಭಾಗವಾಗಿದೆ. 2021 ಅವರಿಗೆ ಯಶಸ್ಸನ್ನು ತಂದರೆ, ಮತ್ತೊಂದು ಕಡೆ ವೈಯಕ್ತಿಕ ಬದುಕಿನಲ್ಲಿ ಬಿರುಕು ಕಾಣಿಸಿಕೊಂಡಿತು. ಹೌದು ಸಮಂತಾ(Samantha) ಮತ್ತು ನಾಗಚೈತನ್ಯ ವಿಚ್ಚೇದನಕ್ಕೆ ಸಮ್ಮತಿ ಸೂಚಿಸಿದ್ದರು. ಈ ಬಗ್ಗೆ ಇಬ್ಬರು ಖುದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಚ್ಛೇದನ(Divorce)ದ ವಿಚಾರವನ್ನು ಬಹಿರಂಗಪಡಿಸಿದ್ದರು. ಇದೆಲ್ಲದರಿಂದ ಹೊರಬಂದಿರುವ ಇವರಿಬ್ಬರು ತಮ್ಮ ಪ್ರಾಜೆಕ್ಟ್ನಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಚೈತನ್ಯ ‘ಬಂಗಾರ್ರಾಜು’ ಸಿನಿಮಾದ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ಖುದ್ದಾಗಿ ನಾಗಚೈತನ್ಯ ಅವರೇ ಮಾತನಾಡಿದ್ದಾರೆ.
ಮನಂ ಚಿತ್ರದ ನಂತ್ರ ಒಂದೇ ಸಿನಿಮಾದಲ್ಲಿ ಅಪ್ಪ-ಮಗ!
‘ಮನಂ’ ಚಿತ್ರದ ಶೂಟಿಂಗ್ನಲ್ಲಿದ್ದಾಗ ಅಪ್ಪನ ಮುಂದೆ ನಟಿಸಲು ಸ್ವಲ್ಪ ಭಯವಿತ್ತು. ‘ಬಂಗಾರ್ರಾಜು’ ಸಿನಿಮಾದಲ್ಲಿ ಅವರೊಂದಿಗೆ ಹೆಚ್ಚು ಮುಕ್ತವಾಗಿ ಕೆಲಸ ಮಾಡಲು ಹಿಂದಿನ ಸಿನಿಮಾದ ಅನುಭವ ನೆರವಾಯಿತು. ಚಿತ್ರೀಕರಣ ಪ್ರಾರಂಭವಾಗುವ ಮೊದಲು, ನನಗೆ ಚಿತ್ರದ ಬಗ್ಗೆ ಮತ್ತು ನನ್ನ ಪಾತ್ರದ ಬಗ್ಗೆ ತುಂಬಾ ಪ್ರಶ್ನೆಗಳಿದ್ದವು. ಆದರೆ, ಅಪ್ಪ ಮತ್ತು ನಿರ್ದೇಶಕ ಕಲ್ಯಾಣ್ ಕೃಷ್ಣಾ ನನಗೆ ತುಂಬಾ ಸಹಾಯ ಮಾಡಿದ್ದಾರೆ. ಸೊಗ್ಗಡೆ ಚಿನ್ನಿ ನಯನ ಪಾತ್ರಗಳ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳಲು ಹಲವು ಬಾರಿ ಪ್ರಯತ್ನಿಸಿದ್ದೇನೆ ಎಂದು ನಾಗಚೈತನ್ಯ ಹೇಳಿದ್ದಾರೆ.
ಇದನ್ನು ಓದಿ : ಮೀಟೂ ಕೇಸ್ನಲ್ಲಿ ಅರ್ಜುನ್ ಸರ್ಜಾಗೆ ಬಿಗ್ ರಿಲೀಫ್.. 3 ವರ್ಷಗಳ ಹೋರಾಟದಲ್ಲಿ ಗೆದ್ದ `ಆ್ಯಕ್ಷನ್ ಕಿಂಗ್’!
ಸಮಂತಾ ಖುಷಿಯಿಂದ ಇದ್ದರೆ ಸಾಕು ಎಂದ ನಟ!
ಇನ್ನೂ ಇದೇ ವೇಳೆ ನಾಗಚೈತನ್ಯ ಅವರ ವೈಯಕ್ತಿಕ ವಿಚಾರದ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಇದಕ್ಕೆ ಉತ್ತರಿಸಿದ ನಾಗಚೈತನ್ಯ ,‘ಇದು ನಮ್ಮಿಬ್ಬರ ಒಳಿತಿಗಾಗಿ ತೆಗೆದುಕೊಂಡ ನಿರ್ಧಾರ. ಆಕೆ (ಸಮಂತಾ) ಖುಷಿಯಾಗಿದ್ದರೆ ನನಗೂ ಖುಷಿ. ಆ ಪರಿಸ್ಥಿತಿಯಲ್ಲಿ ಅದು ಅತ್ಯುತ್ತಮ ನಿರ್ಧಾರವಾಗಿತ್ತು ಎಂದು ನಾಗಚೈತನ್ಯ ಹೇಳಿದ್ದಾರೆ. ಇನ್ನೂ ಈ ಸಿನಿಮಾದಲ್ಲಿ ಅಪ್ಪನಿಗೆ ಮೊಮ್ಮಗನಾಗಿ ನಟಿಸಿದ್ದೇನೆ. ನನ್ನ ಪಾತ್ರದ ಚಿನ್ನ ಬಂಗಾರರಾಜು. ಹಠಮಾರಿ ಮತ್ತು ಚೇಷ್ಟೆ ಸ್ವಭಾವದ ಹುಡುಗನ ಪಾತ್ರ. ಆದ್ದರಿಂದ, ಅವನನ್ನು ಹಿಡಿತದಲ್ಲಿಟ್ಟುಕೊಳ್ಳಲು, ಪೆದ್ದ ಬಂಗಾರರಾಜು (ನಾಗಾರ್ಜುನ) ಸ್ವರ್ಗದಿಂದ ಇಳಿದು ಬರುತ್ತಾರೆ. ದೇವಾಲಯಕ್ಕೆ ಸಂಬಂಧಿಸಿದ ಸಂಘರ್ಷವು ಕಥೆಯ ತಿರುಳನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ರಾತ್ರಿ ಕೈಯಲ್ಲಿ ವೈನ್ ಬಾಟಲಿ ಹಿಡಿದು ಸಿನಿಮಾ ಸೋಲಿಗೆ ಕಾರಣ ಹುಡುಕಿದ್ದರಂತೆ ಸುಶಾಂತ್: ಕಹಿ ಘಟನೆ ನನೆದ ನಟಿ!
ಕೆಲವೇ ತಿಂಗಳಿನಲ್ಲಿ ರೆಡಿಯಾಗಿತ್ತು ‘ಬಂಗಾರ್ರಾಜು’
ಇನ್ನೂ ಈ ಚಿತ್ರತಂಡ ಕೆಲವೇ ತಿಂಗಳಲ್ಲೇ ಸಿನಿಮಾ ನಿರ್ಮಾಣ ಮಾಡಿದೆಯಂತೆ!
‘ನಾಲ್ಕು ವರ್ಷಗಳ ಹಿಂದೆ, ಅಪ್ಪ ಬಂಗಾರ್ ರಾಜು ಬಗ್ಗೆ ಯೋಚಿಸಿದ್ದರು. ಆದರೆ, ಡೇಟ್ಸ್ ಅಲಭ್ಯತೆ ಮತ್ತು ಇತರ ಕಮಿಟ್ಮೆಂಟ್ಗಳಿಂದಾಗಿ ಚಿತ್ರ ತಡವಾಯಿತು. ನಾವು ಚಿತ್ರೀಕರಣ ಪ್ರಾರಂಭಿಸಲು ಯೋಚಿಸಿದಾಗ, ಕೋವಿಡ್ -19 ನಮ್ಮ ಯೋಜನೆಗಳನ್ನು ಸ್ಥಗಿತಗೊಳಿಸಿತು. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಪ್ರಾರಂಭವಾದ ಶೂಟಿಂಗ್ ಅನ್ನು ನಿರಂತರವಾಗಿ ಯಾವುದೇ ವಿರಾಮ ಇಲ್ಲದೇ ಪೂರೈಸಿದ್ದೇವೆ ಎಂದು ಅವರು ಹೇಳಿದ್ದಾರೆ.ಇನ್ನೂ ನಾನು ಅಮೆಜಾನ್ ಪ್ರೈಮ್ಗಾಗಿ ಭಯಾನಕ ವೆಬ್ ಸರಣಿಯಲ್ಲಿ ನಟಿಸುತ್ತಿದ್ದೇನೆ. ಇದನ್ನು ವಿಕ್ರಮ್ ಕೆ ಕುಮಾರ್ ನಿರ್ದೇಶನ ಮಾಡಲಿದ್ದಾರೆ ಎಂದು ನಾಗಚೈತನ್ಯ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ