• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Rahul Sipligunj: ಹೈದರಾಬಾದ್‌ ಓಲ್ಡ್‌ ಸಿಟಿಯಿಂದ ಆಸ್ಕರ್‌ ವೇದಿಕೆವರೆಗೆ, ಇದು ಗಾಯಕ ರಾಹುಲ್‌ ಸಿಪ್ಲಿಗಂಜ್‌ ಸಾಧನೆ ಹಾದಿ

Rahul Sipligunj: ಹೈದರಾಬಾದ್‌ ಓಲ್ಡ್‌ ಸಿಟಿಯಿಂದ ಆಸ್ಕರ್‌ ವೇದಿಕೆವರೆಗೆ, ಇದು ಗಾಯಕ ರಾಹುಲ್‌ ಸಿಪ್ಲಿಗಂಜ್‌ ಸಾಧನೆ ಹಾದಿ

ಗಾಯಕ ರಾಹುಲ್ ಸಿಪ್ಲಿಗುಂಜ್ ಸಾಧನೆ ಹಾದಿ

ಗಾಯಕ ರಾಹುಲ್ ಸಿಪ್ಲಿಗುಂಜ್ ಸಾಧನೆ ಹಾದಿ

ಹೈದರಾಬಾದ್‌ನ ಓಲ್ಡ್ ಸಿಟಿಯಿಂದ ಬಂದಂತಹ ರಾಹುಲ್‌ ಅವರ ಈ ಸಾಧನೆ ಹಿಂದೆ ದೊಡ್ಡ ಕಥೆಯೇ ಇದೆ. ಪ್ರತಿ ಸಾಧಕನೂ ಕನಸು ಕಾಣುವಂಥ ಆಸ್ಕರ್‌ ಪ್ರಶಸ್ತಿ ಪಡೆಯುವವರೆಗಿನ ಸಾಧನೆ ಅಲ್ಪ ಸಮಯದಲ್ಲಿ ಸಾಧಿಸಿದ ಅದ್ಭುತವಲ್ಲ!

  • Share this:

ಇತ್ತೀಚೆಗೆ ಲಾಸ್ ಏಂಜಲೀಸ್‌ನಲ್ಲಿ ನಡೆದ ಆಸ್ಕರ್‌ (Oscars) ಪ್ರಶಸ್ತಿ ಪ್ರಧಾನ ಸಮಾರಂಭದ ಬಳಿಕ ಇಡೀ ಜಗತ್ತೇ ನಾಟು ನಾಟು ಹಾಡಿಗೆ ಹೆಜ್ಜೆ ಹಾಕುತ್ತಿದೆ. ತೆಲುಗು ಚಲನಚಿತ್ರ RRR ನ ಜನಪ್ರಿಯ ಹಾಡು ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿಯನ್ನು ಗೆದ್ದು ಭಾರತಕ್ಕೆ ಆಸ್ಕರ್‌ ಪದಕ ತಂದುಕೊಟ್ಟಿದೆ. ಈ ಮಧ್ಯೆ ನಾಟು ನಾಟು ಗಾಯಕ ರಾಹುಲ್ ಸಿಪ್ಲಿಗಂಜ್‌ (Rahul Sipligunj) ವಿಶ್ವ ಪ್ರಸಿದ್ಧ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ.


ಆದ್ರೆ ತೆಲಂಗಾಣದ ಹೈದರಾಬಾದ್‌ನ ಓಲ್ಡ್ ಸಿಟಿಯಿಂದ ಬಂದಂತಹ ರಾಹುಲ್‌ ಅವರ ಈ ಸಾಧನೆ ಹಿಂದೆ ದೊಡ್ಡ ಕಥೆಯೇ ಇದೆ. ಪ್ರತಿ ಸಾಧಕನೂ ಕನಸು ಕಾಣುವಂಥ ಆಸ್ಕರ್‌ ಪ್ರಶಸ್ತಿ ಪಡೆಯುವವರೆಗಿನ ಸಾಧನೆ ಅಲ್ಪ ಸಮಯದಲ್ಲಿ ಸಾಧಿಸಿದ ಅದ್ಭುತವಲ್ಲ!


ಕ್ಷೌರಿಕ ಮಗನಿಂದ ಪ್ರಸಿದ್ಧ ಗಾಯಕನವರೆಗೆ


ರಾಹುಲ್ ಸಿಪ್ಲಿಗಂಜ್‌ ಅವರು ತೆಲಂಗಾಣದ ಹೈದರಾಬಾದ್‌ನಲ್ಲಿರುವ ಓಲ್ಡ್ ಸಿಟಿಯ ಒಂದು ಭಾಗವಾದ ಧೂಲ್‌ಪೇಟ್ ಬಳಿಯ ಮಂಗಲ್‌ಹಟ್ ಪ್ರದೇಶದಲ್ಲಿ ಹುಟ್ಟಿ ಬೆಳೆದರು.


ಅವರ ತಂದೆ ರಾಜ್ ಕುಮಾರ್, ವೃತ್ತಿಯಲ್ಲಿ ಕ್ಷೌರಿಕರಾಗಿದ್ದು, ಜೀವನೋಪಾಯಕ್ಕಾಗಿ ಹೇರ್ ಕಟಿಂಗ್ ಸಲೂನ್ ನಡೆಸುತ್ತಿದ್ದರು. ಎಲ್ಲ ತಂದೆಯರಂತೆಯೇ ತಮ್ಮ ಮಗ ಒಂದು ಒಳ್ಳೆಯ ಉದ್ಯೋಗ ಮಾಡಲಿ ಎಂಬುದಾಗಿ ರಾಜ್‌ಕುಮಾರ್‌ ಬಯಸಿದ್ದರು.


ಆದರೆ ರಾಹುಲ್ ಇಷ್ಟವೇ ಬೇರೆ ಇದ್ದಿತ್ತು. ಅವರಿಗೆ ಕ್ರಿಕೆಟ್ ಮತ್ತು ಕಬಡ್ಡಿ ಆಡುವುದೇ ಇಷ್ಟವಾಗಿತ್ತು. ಅಲ್ಲದೇ ವಿನಾಯಕ ಚೌತಿ ಸಂದರ್ಭದಲ್ಲಿ ಭಕ್ತಿಗೀತೆಗಳನ್ನು ಹಾಡುತ್ತಿದ್ದರು. ಅಲ್ಲದೇ ಶಿಕ್ಷಣವನ್ನು ಮುಂದುವರಿಸುವ ಆಸಕ್ತಿಯನ್ನೂ ತೋರಿಸಲಿಲ್ಲ.


ಮುಂದೆ ರಾಜ್‌ಕುಮಾರ್ ಅವರು ತಮ್ಮ ಮಗನ ಪ್ರತಿಭೆಯನ್ನು ಗಮನಿಸಿ ಗಾಯನ ತರಗತಿಗಳಿಗೆ ಸೇರಿಸುವ ಮೂಲಕ ಪ್ರೋತ್ಸಾಹಿಸಿದರು. ರಾಹುಲ್ ತನ್ನ ಸಂಬಂಧಿಕರ ಮನೆಗಳಲ್ಲಿ ಕಾರ್ಯಕ್ರಮಗಳಲ್ಲಿ ಹಾಡುಗಳನ್ನು ಹಾಡಲು ಪ್ರಾರಂಭಿಸಿದರು.


ಈ ನಡುವೆ ಇಂಟರ್ ಮೀಡಿಯೇಟ್ ಶಿಕ್ಷಣವನ್ನು ಯಶಸ್ವಿಯಾಗಿ ಮುಗಿಸಿ ಮುಂದೆ ಓದುವುದು ಬೇಡ ಎಂದು ನಿರ್ಧರಿಸಿದ ರಾಹುಲ್‌ ಹಿನ್ನೆಲೆ ಗಾಯನದ ಅವಕಾಶವನ್ನು ಪಡೆಯಲು ಚಲನಚಿತ್ರ ನಿರ್ಮಾಣ ಕಚೇರಿಗಳಿಗೆ ಭೇಟಿ ನೀಡಲು ಪ್ರಾರಂಭಿಸಿದರು. ಜೊತೆಗೆ ತಂದೆಯ ಸಲೂನ್‌ನಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದರು.


Naatu Naatu Singer Rahul Sipligunj Inspiring Journey From a Barber Son in Old City to Oscars Stage
ಗಾಯಕ ರಾಹುಲ್ ಸಿಪ್ಲಿಗುಂಜ್ ಸಾಧನೆ ಹಾದಿ


ಡಬ್ಬಿಂಗ್‌ ಚಿತ್ರಗಳಿಗೆ ಹಾಡುವ ಅವಕಾಶ


ಕ್ರಮೇಣ ರಾಹುಲ್‌ ತೆಲುಗು ಭಾಷೆಗೆ ಡಬ್ ಆದ ಚಲನಚಿತ್ರಗಳ ಹಾಡುಗಳಿಗೆ ತಮ್ಮ ಧ್ವನಿಯನ್ನು ನೀಡುವ ಅವಕಾಶವನ್ನು ಪಡೆದರು. ನಂತರ, ವಿವಿಧ ಸಂಗೀತ ನಿರ್ದೇಶಕರು ಸಂಯೋಜಿಸಿದ ಕೋರಸ್ ಮತ್ತು ಹಿನ್ನೆಲೆ ಹಾಡುಗಳಲ್ಲಿ ತಮ್ಮ ಧ್ವನಿಯನ್ನು ನೀಡಿದ ಗಾಯಕರಲ್ಲಿ ಒಬ್ಬರಾದರು. ಆದರೆ ಅವರ ಪ್ರಯತ್ನಗಳು ಅಷ್ಟೇನೂ ಯಶಸ್ವಿಯಾಗಲಿಲ್ಲ.


ಹೀಗಾಗಿ, ಅವರು 2013 ರಿಂದ ತನ್ನ ತಾಯಿಯ ಆಭರಣಗಳನ್ನು ಅಡವಿಟ್ಟು ಅದರಿಂದ ಬಂದ ಹಣ ಮತ್ತು ತಂದೆ ಸಾಲವಾಗಿ ಪಡೆದ ಹಣದಿಂದ ವೀಡಿಯೊ ಆಲ್ಬಂಗಳನ್ನು ತಯಾರಿಸಿ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದರು.


2009 ರಲ್ಲಿ ಬದಲಾಯ್ತು ಅದೃಷ್ಟ


2009 ರಲ್ಲಿ ನಾಗ ಚೈತನ್ಯ ಅಭಿನಯದ ಜೋಶ್ ಚಿತ್ರದಲ್ಲಿ ಹಾಡೊಂದನ್ನು ಹಾಡಲು ಅವಕಾಶ ಸಿಕ್ಕಿದ ನಂತರ ಅವರ ಅದೃಷ್ಟವೇ ಬದಲಾಯ್ತು ಎನ್ನಬಹುದು.


ನಂತರ ಅವರಿಗೆ ದಮ್ಮು ಚಿತ್ರದಲ್ಲಿ ಎಂಎಂ ಕೀರವಾಣಿ ಸಂಯೋಜಿಸಿದ 'ವಾಸ್ತು ಬಗುಂಡೆ' ಹಾಡನ್ನು ಹಾಡುವ ಅವಕಾಶ ಸೇರಿದಂತೆ ಆಫರ್‌ಗಳ ಮಹಾಪೂರವೇ ಹರಿದು ಬಂದಿತು. 2012 ರಲ್ಲಿ ರಾಜಮೌಳಿಯವರ ಬ್ಲಾಕ್‌ಬಸ್ಟರ್‌ ಚಿತ್ರ 'ಈಗ' ಚಿತ್ರದಲ್ಲೂ ಒಂದು ಹಾಡು ಹಾಡಿದರು.


ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಅವರೊಂದಿಗಿನ ಅವರ ಒಡನಾಟವು ಆರ್‌ಆರ್‌ಆರ್‌ನಲ್ಲಿ ನಾಟು ನಾಟುಗೆ ಧ್ವನಿ ನೀಡಲು ಅವರಿಗೆ ಅವಕಾಶವನ್ನು ನೀಡಿತು. ಈ ಅವಕಾಶವೇ ಇಂಥದ್ದೊಂದು ದೊಡ್ಡ ಪ್ರಶಸ್ತಿಯನ್ನು ಪಡೆಯಲು ಕಾರಣವಾಯ್ತು.




ಸದ್ಯ ರಾಹುಲ್ ಸಿಪ್ಲಿಗುಂಜ್ ಅವರು ಖ್ಯಾತ ತೆಲುಗು ನಿರ್ದೇಶಕ ಕೃಷ್ಣ ವಂಶಿ ಅವರ ಮುಂಬರುವ ಚಿತ್ರ 'ರಂಗ ಮಾರ್ತಾಂಡ'ದಲ್ಲಿ ನಟನಾಗಿ ಅಭಿನಯಿಸುತ್ತಿದ್ದಾರೆ.

Published by:ಪಾವನ ಎಚ್ ಎಸ್
First published: