‘ನಾನು ಮತ್ತು ಗುಂಡ‘ ಚಿತ್ರದ ಡಾಗ್​ ಪ್ರೀಮಿಯರ್​ ಶೋ: ನಿಮ್ಮ ಮುದ್ದಿನ ನಾಯಿ ಜೊತೆ ಸಿನಿಮಾ ನೋಡುವ ಅವಕಾಶ!

Naanu Matthu Gunda: ವಿಶೇಷವೆಂದರೆ ಇದು ಡಾಗ್​ ಪ್ರಿಮಿಯರ್​ ಶೋ ಆಗಿದ್ದು, ‘ಸೀ ಇಟ್​ ಫಸ್ಟ್​​ ವಿತ್​ ಯುವರ್​ ಡಾಗ್ಸ್‘​​ ಎಂಬ ಶೀರ್ಷಿಕೆಯೊಂದಿಗೆ ಚಿತ್ರತಂಡ ಪ್ರಿಮಿಯರ್​ ಶೋ ಆಯೋಜಿಸಿದೆ.

news18-kannada
Updated:January 21, 2020, 10:47 PM IST
‘ನಾನು ಮತ್ತು ಗುಂಡ‘ ಚಿತ್ರದ ಡಾಗ್​ ಪ್ರೀಮಿಯರ್​ ಶೋ: ನಿಮ್ಮ ಮುದ್ದಿನ ನಾಯಿ ಜೊತೆ ಸಿನಿಮಾ ನೋಡುವ ಅವಕಾಶ!
Naanu Matthu Gunda: ವಿಶೇಷವೆಂದರೆ ಇದು ಡಾಗ್​ ಪ್ರಿಮಿಯರ್​ ಶೋ ಆಗಿದ್ದು, ‘ಸೀ ಇಟ್​ ಫಸ್ಟ್​​ ವಿತ್​ ಯುವರ್​ ಡಾಗ್ಸ್‘​​ ಎಂಬ ಶೀರ್ಷಿಕೆಯೊಂದಿಗೆ ಚಿತ್ರತಂಡ ಪ್ರಿಮಿಯರ್​ ಶೋ ಆಯೋಜಿಸಿದೆ.
  • Share this:
ಕಾಮಿಡಿಯನ್​ ಶಿವರಾಜ್​ ಕೆ.ಆರ್​ ಪೇಟೆ ಮತ್ತು ಸಂಯುಕ್ತಾ ಹೊರನಾಡು ನಟಿಸಿರುವ ‘ನಾನು ಮತ್ತು ಗುಂಡ‘ ಸಿನಿಮಾ ಜನವರಿ 24 ರಂದು ತೆರೆಗೆ ಬರುತ್ತಿದೆ. ಈ ಸಿನಿಮಾದ ಪ್ರಿಮಿಯರ್​ ಶೋ ನಾಳೆ ಬೆಂಗಳೂರಿನ ನಗರ್ತರ ಪೇಟೆಯ ಶಾರದ ಚಿತ್ರಮಂದಿರದಲ್ಲಿ ಸಂಜೆ 7.15ಕ್ಕೆ ಚಿತ್ರತಂಡ ಆಯೋಜನೆ ಮಾಡಿದೆ.

ವಿಶೇಷವೆಂದರೆ ಇದು ಡಾಗ್​ ಪ್ರಿಮಿಯರ್​ ಶೋ ಆಗಿದ್ದು, ‘ಸೀ ಇಟ್​ ಫಸ್ಟ್​​ ವಿತ್​ ಯುವರ್​ ಡಾಗ್ಸ್‘​​ ಎಂಬ ಶೀರ್ಷಿಕೆಯೊಂದಿಗೆ ಚಿತ್ರತಂಡ ಪ್ರೀಮಿಯರ್​ ಶೋ ಆಯೋಜಿಸಿದೆ.ಕಥಾವಸ್ತುವನ್ನೇ ಹೀರೋವನ್ನಾಸಿಕೊಂಡು ಶ್ವಾನವನ್ನೇ ಕಥಾ ಮುಖ್ಯ ಪಾತ್ರಧಾರಿಯನ್ನಾಗಿಕೊಂಡು ಈ ಸಿನಿಮಾ ಇದೇ ವಾರದಂದು ತೆರೆಗೆ ಬರುತ್ತಿದೆ. ಗುಂಡ ಎನ್ನುವ ನಾಯಿ ಈ ಸಿನಿಮಾದಲ್ಲಿ ನಟಿಸಿರುವುದು ಈ ಚಿತ್ರದ ವಿಶೇಷವಾಗಿದೆ. ಸ್ಯಾಂಡಲ್​ವುಡ್​ನಲ್ಲಿ ವಿಭಿನ್ನ ಪ್ರಯೋಗಗಳ ಚಿತ್ರಗಳು ತೆರೆ ಮೇಲೆ ಬಂದು ಪ್ರೇಕ್ಷಕರ ಮನಸ್ಸಲ್ಲಿ ಅಚ್ಚಳಿಯಾಗಿ ಉಳಿದಿರುವ ಸಿನಿಮಾಗಳು ಸಾಕಷ್ಟಿವೆ. ಆದರಂತೆ ‘ನಾನು ಮತ್ತು ಗುಂಡ‘ ಸಿನಿಮಾ ಕೂಡ ಪ್ರೇಕ್ಷಕರನ್ನು ಮನರಂಜಿಸಲಿದೆ ಎನ್ನುತ್ತಿದ್ದಾರೆ ಚಿತ್ರತಂಡ.

ನಿರ್ದೆಶಕ ಶ್ರೀನಿವಾಸ್​ ತಿಮ್ಮಯ್ಯ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಶಿವರಾಜ್​ ಕೆಆರ್ ಪೇಟೆ, ಸಂಯುಕ್ತ ಹೊರನಾಡು, ಗೋವಿಂದೇ ಗೌಡ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: IPL 2020: ಸೂಪರ್ ಓವರ್​ನಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಬಲ್ಲ ಆಟಗಾರರನ್ನು ಹೊಂದಿರುವ ತಂಡಗಳಿವು

ಇದನ್ನೂ ಓದಿ: ಬೆಂಗಳೂರಿನಲ್ಲಿ ‘ಬಾಹುಬಲಿ‘ ಮಗು ಜನನ; ಪುಟ್ಟ ಕಂದಮ್ಮನ ತೂಕವೆಷ್ಟು ಗೊತ್ತಾ?
First published:January 21, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ