Naagarahaavu Movie: ಜಲೀಲನ ಪಾತ್ರ ಅಂಬರೀಶ್ ಅಲ್ಲ, ರಜನೀಕಾಂತ್ ಮಾಡಬೇಕಿತ್ತಾ?

ಜಲೀಲನ ಪಾತ್ರಕ್ಕೆ ಸೂಪರ್ ಸ್ಟಾರ್ ರಜಿನಿ ಸೆಲೆಕ್ಟ್ ಆಗಿದ್ದರೇ?

ಜಲೀಲನ ಪಾತ್ರಕ್ಕೆ ಸೂಪರ್ ಸ್ಟಾರ್ ರಜಿನಿ ಸೆಲೆಕ್ಟ್ ಆಗಿದ್ದರೇ?

ಜಲೀಲನ ಪಾತ್ರಕ್ಕೆ ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಆಡಿಷನ್​ ಕೂಡ ನಡೆದಿತ್ತೇ? ಇದರ ಬಗ್ಗೆ ಎಲ್ಲೂ ದಾಖಲೆಗಳೂ ಇಲ್ಲ. ಹಿರಿಯ ಪತ್ರಕರ್ತರೂ ಕೂಡ ಎಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡಿದ್ದು ಕಂಡಿಲ್ಲ. ಆದರೆ ಇದೊಂದು ಮಾತು ಇಂಡಸ್ಟ್ರಿಯಲ್ಲಿ ಇದ್ದೇ ಇದೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಬೆಳ್ಳಿತೆರೆಯ ಭಾವಶಿಲ್ಪಿ ಪುಟ್ಟಣ್ಣನವರು (Puttanna Kanagal) ಎಂದೂ ತಾಳ ತಪ್ಪಿದವರೇ ಅಲ್ಲ. ಪಾತ್ರಕ್ಕೆ ಬೇಕಾಗೋ ಕಲಾವಿದರ ಆಯ್ಕೆಯಲ್ಲಿ ಮಿಸ್ ಆಗಿದ್ದೇ ಇಲ್ಲ. ಪುಟ್ಟಣ್ಣಜೀ (Puttanna) ಆಯ್ಕೆ ಮಾಡಿದ್ದ ಕಲಾವಿದರೆಲ್ಲ ಆಯಾ ಪಾತ್ರಕ್ಕೆ ಸೂಕ್ತವಾಗಿರುತ್ತಿದ್ದರು. ತಮಗೆ ಹೇಗೆ ಬೇಕೋ ಹಾಗೆ ಬದಲಾಯಿಸೋ ಮಾಡೋ ಜಾಣ್ಮೆ ಪುಟ್ಟಣ್ಣಜೀ ಅವರಿಗೆ ಗೊತ್ತಿತ್ತು. ನಾಗರಹಾವು ಚಿತ್ರದ ವಿಷಯದಲ್ಲೂ ಪುಟ್ಟಣ್ಣಜೀ ಸೂಕ್ತ ಕಲಾವಿದರನ್ನೇ ಆಯ್ಕೆ ಮಾಡಿದ್ದರು. ಆದರೆ ಜಲೀಲನ (Jaleela) ಪಾತ್ರದ ಆಯ್ಕೆಯಲ್ಲಿ ಪುಟ್ಟಣ್ಣಜೀ ಆ ಒಂದು ಎಡವಟ್ಟು ಮಾಡಿದ್ದರೇ? ನಿಜಕ್ಕೂ ಆ ಒಂದು ಘಟನೆ ನಡೆದಿತ್ತೇ? ಅದಕ್ಕೆ ಏನಾದರೂ (Kannada Classic Movie) ದಾಖಲೆಗಳು ಇವೆಯೇ? ಇದರ ಸುತ್ತ ಒಂದಷ್ಟು ವಿಷಯ ಇಲ್ಲಿದೆ ಓದಿ.


ಸೂಪರ್ ಸ್ಟಾರ್ ರಜಿನಿಗೂ ಜಲೀಲನಿಗೂ ಏನ್ ಸಂಬಂಧ?


ಪುಟ್ಟಣ್ಣ ಕಣಗಾಲ್ ಅವರು ಅಂಬರೀಶ್ ಅವರನ್ನು ಆಡಿಷನ್ ಮಾಡಿಯೇ ತೆಗೆದುಕೊಂಡಿದ್ದರು. ರಾಜೇಂದ್ರ ಸಿಂಗ್ ಬಾಬು ಅವರ ಸಹೋದರ ಸಂಗ್ರಾಮ್ ಸಿಂಗ್ ಅವರು, ಪುಟ್ಟಣ್ಣ ಅವರಿಗೆ ಅಂಬಿಯನ್ನ ಪರಿಚಯಿಸಿದ್ದರು.


Kannada Naagarahaavu Movie Interesting Unknown Facts
ಸೂಪರ್ ಸ್ಟಾರ್ ರಜಿನಿಗೂ ಜಲೀಲನಿಗೂ ಏನ್ ಸಂಬಂಧ?


ಇದಾದ್ಮೇಲೆ ಅಂಬರೀಶ್ ಆಡಿಷನ್ ಕೊಟ್ಟಿದ್ದರು. ಆಡಿಷನ್​ನಲ್ಲಿ ಪುಟ್ಟಣ್ಣ ಹೇಳಿದ ಡೈಲಾಗ್ ಹೇಳಿದ್ದರು. ತಮ್ಮದೇ ರೀತಿಯಲ್ಲಿ ಸಿಗರೇಟ್ ಸೇದೋ ಸ್ಟೈಲ್ ತೋರಿಸಿ ಪುಟ್ಟಣ್ಣಜೀ ಅವರ ಮನಸ್ಸು ಗೆದ್ದಿದ್ದರು. ಇದಾದ ಮೇಲೆ ಅಂಬರೀಶ್ ಜಲೀಲನ ಪಾತ್ರಕ್ಕೆ ಸೆಲೆಕ್ಟ್ ಆದರು. ಪುಟ್ಟ ಪಾತ್ರ ಆಗಿದ್ದರೂ ಜನರ ಮನಸ್ಸನ್ನ ಗೆದ್ದೇ ಬಿಟ್ಟರು.




ಜಲೀಲನ ಪಾತ್ರಕ್ಕೆ ಸೂಪರ್ ಸ್ಟಾರ್ ರಜನಿ ಸೆಲೆಕ್ಟ್ ಆಗಿದ್ದರೇ?


ನಾಗರಹಾವು ಚಿತ್ರದ ಎಲ್ಲ ಪಾತ್ರಕ್ಕೂ ಪುಟ್ಟಣ್ಣನವರು ಆಡಿಷನ್ ಮಾಡಿದ್ದರು. ವಿಷ್ಣುವರ್ಧನ್ ಸೇರಿದಂತೆ ಇತರ ಪಾತ್ರಗಳ ಆಯ್ಕೆ ವಿಷಯದಲ್ಲೂ ಇದೇ ಪ್ರೋಸೆಸ್ ಮುಂದುವರೆಸಿ ಪಾತ್ರಧಾರಿಗಳನ್ನ ಸೆಲೆಕ್ಟ್ ಮಾಡಿದ್ದರು.


ಆದರೆ ಜಲೀಲನ ಪಾತ್ರಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಆಡಿಷನ್​ ಕೂಡ ನಡೆದಿತ್ತೇ? ಇದರ ಬಗ್ಗೆ ಎಲ್ಲೂ ದಾಖಲೆಗಳೂ ಇಲ್ಲ. ಹಿರಿಯ ಪತ್ರಕರ್ತರೂ ಕೂಡ ಎಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡಿದ್ದಂತೆನೂ ಕಂಡಿಲ್ಲ. ಆದರೆ ಇದೊಂದು ಮಾತು ಇಂಡಸ್ಟ್ರಿಯಲ್ಲಿ ಇದ್ದೇ ಇದೆ.


ಜಲೀಲ ಪಾತ್ರಕ್ಕೆ ರಜನಿಕಾಂತ್ ಮೊದಲ ಆಯ್ಕೆನಾ?


ಇದು ನಿಜವೇ? ಈ ರೀತಿ ಆಗ ಆಗಿತ್ತೇ? ಇದಕ್ಕೂ ಹೆಚ್ಚಾಗಿ ಈ ಪಾತ್ರದಲ್ಲಿ ರಜನಿಕಾಂತ್ ಅಭಿನಯಿಸಿದ್ದರೇ ಅನ್ನುವ ಪ್ರಶ್ನೆ ಕೂಡ ಇದೆ. ಆದರೆ ಇದೆಲ್ಲಕ್ಕಿಂತಲೂ ಇನ್ನೂ ಒಂದು ವಿಷಯ ಇದೆ. ಅದು ಗಾಸಿಪ್ ಆಗಿರಬಹುದೇ? ಇಲ್ಲವೇ ನಿಜವೇ ಇರಬಹುದೇ? ಗೊತ್ತಿಲ್ಲ. ಆದರೆ ಇದನ್ನ ಕೇಳಿದ್ರೆ ನಿಮಗೂ ಒಮ್ಮೆ ಆಶ್ಚರ್ಯ ಆದರೂ ಆಗಬಹುದು?


ರಜನಿ ಜೊತೆಗೆ ಪುಟ್ಟಣ್ಣ ಜಲೀಲ ಪಾತ್ರ ಶೂಟ್ ಮಾಡಿದ್ರೇ?
ರಜನಿಕಾಂತ್ ಅವರನ್ನ ಪುಟ್ಟಣ್ಣ ಅವರು ಆಯ್ಕೆ ಮಾಡಿದ್ದರು. ಜಲೀಲ ಪಾತ್ರದ ಒಂದಷ್ಟು ದೃಶ್ಯಗಳನ್ನ ಕೂಡ ತೆಗೆದಿದ್ದರು. ಆದರೆ ಅದೇನು ಆಯಿತೋ ಏನೋ? ರಜನಿಕಾಂತ್ ಪಾತ್ರದ ಶೂಟಿಂಗ್ ಮಾಡಿದ್ದನ್ನು ಪುಟ್ಟಣ್ಣ ಬಿಟ್ಟು ಬಿಟ್ಟರು. ಮುಂದೆ ಇದೇ ಪಾತ್ರಕ್ಕೆ ಅಂಬರೀಶ್ ಅವರನ್ನ ಆಯ್ಕೆ ಮಾಡಿದ್ದರು ಅನ್ನುವ ವಿಷಯ ಈಗಲೂ ಕೇಳಿ ಬರುತ್ತದೆ.


ಆದರೆ ಈ ಒಂದು ವಿಷಯ ಎಲ್ಲೂ ದಾಖಲೆ ಆಗಿಲ್ಲ. ಯಾವ ಇತಿಹಾಸ ಪುಟದಲ್ಲೂ ಇದರ ಪ್ರಸ್ತಾಪವೂ ಇಲ್ಲ. ಇದು ಕೂಡ ಅಂದಿನ ಗಾಂಧಿನಗರದ ಗಲ್ಲಿ ಗಾಸಿಪ್ ಆಗಿತ್ತೇ? ಗೊತ್ತಿಲ್ಲ. ಆದರೆ ಪುಟ್ಟಣ್ಣ ಅವರ ಮುಂದಿನ ಚಿತ್ರದಲ್ಲಿ ರಜನಿಕಾಂತ್ ಅಭಿನಯಿಸಿರೋದಂತು ಸತ್ಯ.


ಪುಟ್ಟಣ್ಣನವರ ಕಥಾಸಂಗಮದಲ್ಲಿ ರಜಿನಿ ಅಭಿನಯಿಸಿದ್ದೇಕೆ?
ಜಲೀಲ ಪಾತ್ರ ಕ್ಯಾನ್ಸಲ್ ಮಾಡಿದ್ದಕ್ಕೆ ಕಥಾಸಂಗಮದಲ್ಲಿ ರಜನಿಕಾಂತ್ ಅಭಿನಯಿಸಿದ್ದರೇ? ಇದನ್ನ ಹೇಳೋದು ಕಷ್ಟವೇ ಸರಿ. ಪುಟ್ಟಣ್ಣ ಅವರು ಐದು ಕಥೆಯ ಒಂದು ಚಿತ್ರ ಮಾಡಿದ್ದರು. ಕಥಾಸಂಗಮ ಅಂತಲೇ ಆ ಚಿತ್ರಕ್ಕೆ ಹೆಸರು ಕೂಡ ಇಟ್ಟಿದ್ದರು. ಹೌದು, ನೀವು ಕಥಾಸಂಗಮ ಚಿತ್ರವನ್ನ ನೋಡಿದ್ರೆ ನಿಮಗೆ ಈ ಸತ್ಯ ತಿಳಿಯುತ್ತದೆ.


Kannada Naagarahaavu Movie Interesting Unknown Facts
ಬೆಳ್ಳಿತೆರೆಯ ಭಾವಶಿಲ್ಪಿ ಪುಟ್ಟಣ್ಣ ಆ ನಿರ್ಧಾರ ಯಾಕೆ ಮಾಡಿದ್ದರು?


ಇದನ್ನ ನೋಡಿದವರಿಗೆ ಈ ವಿಷಯ ಗೊತ್ತೇ ಇರುತ್ತದೆ ಬಿಡಿ. ಇದರಲ್ಲಿ ರಜನಿಕಾಂತ್ ವಿಲನ್ ಪಾತ್ರವನ್ನ ಮಾಡಿದ್ದರು. ತಮ್ಮ ವಿಶಿಷ್ಠ ಅಭಿನಯದ ಮೂಲಕ ಕನ್ನಡಿಗರಲ್ಲಿ ವಿಲನ್ ಹೀಗೂ ಇರ್ತಾರೆ ಅನ್ನೋದನ್ನ ತಿಳಿಸಿದ್ದರು.


ಇದನ್ನೂ ಓದಿ: Real Star Upendra: ಉಪ್ಪಿಯ 'ತ್ರಿಶೂಲಂ' ಸಿನಿಮಾ ಎಲ್ಲಿಗೆ ಬಂತು? ರಿಯಲ್ ಸ್ಟಾರ್-ಕ್ರೇಜಿಸ್ಟಾರ್ ಜೋಡಿ ತೆರೆಗೆ ಬರೋದು ಯಾವಾಗ?


ರಜನಿಕಾಂತ್ ಒಂದು ವೇಳೆ ಜಲೀಲನ ಪಾತ್ರ ಮಾಡಿದ್ದರೇ, ಅಂಬರೀಶ್ ಕನ್ನಡ ಸಿನಿಪ್ರೇಮಿಗಳಿಗೆ ಸಿಗ್ತಿದ್ದರೋ ಇಲ್ವೋ? ಆದರೆ ಪುಟ್ಟಣ್ಣ ಅವರು ಮನಸ್ಸು ಬದಲಿಸಿದ್ರೋ? ರಜಿನಿಕಾಂತ್ ಬೇಡ ಅಂದ್ರೋ? ಒಟ್ಟಿನಲ್ಲಿ ಅಂಬರೀಶ್ ಕನ್ನಡ ಚಿತ್ರರಂಗದಲ್ಲಿ ಜಲೀಲನಾಗಿ ಮಿಂಚಿ, ಕನ್ನಡ ಸಿನಿಪ್ರೇಮಿಗಳ ಮನದಲ್ಲಿ ಈಗಲೂ ಇದ್ದಾರೆ.

First published: