Samantha Ruth Prabhu: ಸಮಂತಾ ನನ್ನ ರಾಣಿ ಎಂದ ವಿಜಯ್ ದೇವರಕೊಂಡ!

ನಟಿ ಸಮಂತಾ ಹಾಗೂ ವಿಜಯ್ ದೇವರಕೊಂಡ

ನಟಿ ಸಮಂತಾ ಹಾಗೂ ವಿಜಯ್ ದೇವರಕೊಂಡ

Samantha Ruth Prabhu: ಸಮಂತಾ ರುತ್ ಪ್ರಭು ಹಾಗೂ ವಿಜಯ್ ದೇವರಕೊಂಡ ಅಭಿನಯದ ಖುಷಿ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ.

  • News18 Kannada
  • 2-MIN READ
  • Last Updated :
  • Hyderabad, India
  • Share this:

ಒಂದು ಕಡೆ ದಿ ಕೇರಳ ಸ್ಟೋರಿ (The Kerala Story) ಸಿನಿಮಾದಲ್ಲಿ  ( Cinema) ಮತಾಂತರ (Conversion), ಲವ್ ಜಿಹಾದ್ ಕುರಿತು ಕಥೆ ಹೇಳಿ ಸುದ್ದಿ ಮಾಡುತ್ತಿದ್ದರೆ ಇತ್ತ ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ (Vijay Deverakonda) ಹಾಗೂ ಸಮಂತಾ (Samantha) ಅಭಿನಯದ ಖುಷಿ (Kushi) ಸಿನಿಮಾ ಕೂಡಾ ವೈರಲ್ ಆಗಿದೆ. ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಹಿಂದೂ ಯುವತಿಯರನ್ನು ಬ್ರೈನ್ ವಾಶ್ ಮಾಡಿ ಮತಾಂತರ ಮಾಡುವ ಕಥೆಯನ್ನು ಇದರಲ್ಲಿ ತೋರಿಸಲಾಗಿದೆ. ಈಗ ತೆಲುಗಿನ ಬಹುನಿರೀಕ್ಷಿತ ಸಿನಿಮಾದ ಮೊದಕ ಹಾಡು ರಿಲೀಸ್ ಆಗಿದ್ದು ಇದರಲ್ಲಿ ಸಮಂತಾ ಅವರು ಹಿಜಾಬ್ (Hijab) ಧರಿಸಿದ್ದನ್ನು ನೋಡಿ ನೆಟ್ಟಿಗರು ಅಚ್ಚರಿಪಡುತ್ತಿದ್ದಾರೆ. ಅಂತೂ ಈ ಸಿನಿಮಾ ಕೂಡಾ ಒಂದು ಅಂತರ್​ಧರ್ಮೀಯ ಲವ್​ಸ್ಟೋರಿ (Love Story) ಎನ್ನುವ ಹಿಂಟ್ ಸಿಕ್ಕಿದೆ.


ಸಿನಿಮಾ ನಿರ್ದೇಶಕ ಶಿವ ನಿರ್ವಾಣ ಅವರು ಬಹಳ ಸೂಕ್ಷ್ಮ ಕಾನ್ಸೆಪ್ಟ್ ಒಂದನ್ನು ಸಿನಿಮಾ ಆಗಿ ತೋರಿಸಲಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಮಲಯಾಳಂ ಸಿನಿಮಾ ಹೃದಯಂಗೆ ಸಂಗೀತ ಒದಗಿಸಿದ ಹೇಶಮ್ ಅಬ್ದುಲ್ ವಹಾಬ್ ಅವರು ಸಮಂತಾ ತನ್ನ ಬದುಕಿಗೆ ಎಷ್ಟು ಮುಖ್ಯ ಎಂದು ಹೀರೋ ಹೇಳುವ ಹಾಡೊಂದಕ್ಕೆ ಸಂಗೀತ ಒದಗಿಸಿದ್ದಾರೆ.
ಹೀರೋ ಆಗಿರುವ ವಿಜಯ್ ದೇವರಕೊಂಡ ತನ್ನ ಪ್ರೇಯಸಿಯಾಗಿರುವ ಸಮಂತಾ ಅವರ ಸೌಂದರ್ಯ ಹೊಗಳಿ ಆಕೆಯನ್ನು ತನ್ನ ರಾಣಿ ಎಂದು ಕರೆದಿದ್ದಾರೆ. ತನ್ನ ಪ್ರೀತಿಯ ಹೆಜ್ಜೆಯನ್ನು ಫಾಲೋ ಮಾಡಿಕೊಂಡು ಬದುಕುತ್ತೇನೆಂದು ಹೀರೋ ಹೇಳುತ್ತಾನೆ. ಈ ಹಾಡು ಹಿಟ್ ಆಗಿದೆ.
ಈ ಸಿನಿಮಾದ ದೃಶ್ಯಗಳನ್ನು ಕಾಶ್ಮೀರಗಳನ್ನು ಶೂಟಿಂಗ್ ಮಾಡಲಾಗಿದೆ ಎನ್ನಲಾಗುತ್ತಿದೆ. ಸಿನಿಮಾದ ಹಾಡಿನಲ್ಲಿ ಕೆಲವೊಂದು ದೃಶ್ಯಗಳನ್ನು ತೋರಿಸಲಾಗಿದೆ. ಈ ಸಿನಿಮಾದ ತಮಿಳು ವರ್ಷನ್ ಹಾಡನ್ನು ಕಾರ್ಕಿ ಬರೆದಿದ್ದಾರೆ. ಇದರಲ್ಲಿ ಮಣಿರತ್ನಂ ಅವರ ಸಿನಿಮಾಗಳಾದ ಕಾಟ್ರು ವೆಳಿಯಿದೈ, ರಾವಣ್, ಓಕೆ ಕಣ್ಮಣಿಯಂತಹ ಸಿನಿಮಾ ಟೈಟಲ್​ ಕುರಿತು ಮಾತನಾಡುತ್ತದೆ. ಇದರಲ್ಲಿ ಊ ಅಂಟಾವಾ ಹಾಡಿನ ಫನ್ನಿ ರೆಫರೆನ್ಸ್ ಕೂಡಾ ಇದೆ. ಹಾಡನ್ನು ನೋಡಿದರೆ ಸಿನಿಮಾದಲ್ಲಿ ಸಮಂತಾ ಅವರ ಹೆಸರು ಆರಾ ಎಂದು ಇರಲಿದೆ ಎನ್ನಲಾಗುತ್ತಿದೆ.
ಖುಷಿ ಸಿನಿಮಾವನ್ನು 2019ರಲ್ಲಿ ಅನೌನ್ಸ್ ಮಾಡಲಾಯಿತು. ಆದರೆ ಕೊರೋನಾ ಹಾಗೂ ಸಮಂತಾ ಅವರ ಇತರ ಕೆಲಸಗಳಿಂದಾಗಿ ಈ ಸಿನಿಮಾ ತಡವಾಯಿತು. ಸಿನಿಮಾ ಶೂಟಿಂಗ್ ಆರಂಭವಾಗುವ ಮೊದಲು ಸಮಂತಾ ವಿಜಯ ದೇವರಕೊಂಡ ಅವರ ಅಭಿಮಾನಿಗಳಲ್ಲಿ ತಡವಾಗಿದ್ದಕ್ಕಾಗಿ ಕ್ಷಮೆ ಕೇಳಿದರು.


ಸಮಂತಾ


ಸಮಂತಾ ಹಾಗೂ ದೇವರಕೊಂಡ ಅವರನ್ನು ಹೊರತುಪಡಿಸಿ ವೆನ್ನಿಲಾ ಕಿಶೋರ್, ಜಯರಾಮ್, ಸಚಿನ ಕೆಡೆಕಾರ್, ಮುರಳಿ ಶರ್ಮಾ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಸೆಪ್ಟೆಂಬರ್ 2ರಂದು ರಿಲೀಸ್ ಆಗಲಿದೆ.


ಇದನ್ನೂ ಓದಿ: Kushee Ravi: ಪತಿಯ ಬೆನ್ನೇರಿ ಮಾವಿನಕಾಯಿ ಕಿತ್ತ ದಿಯಾ ನಟಿ! ಖುಷಿಯ ಬೇಸಿಗೆ ಮಸ್ತಿ ಫೋಟೋಸ್ ವೈರಲ್


ಈ ಸಿನಿಮಾ ವಿಜಯ್ ದೇವರಕೊಂಡ ಹಾಗೂ ಸಮಂತಾ ಇಬ್ಬರಿಗೂ ತುಂಬಾ ಮುಖ್ಯವಾಗಿದೆ. ಸಮಂತಾ ಅವರ ಶಾಕುಂತಲಂ ಸಿನಿಮಾ ಫ್ಲಾಪ್ ಆಯಿತು. ಇತ್ತ ವಿಜಯ್ ದೇವರಕೊಂಡ ಅವರಿಗೆ ಅವರ ಮೊದಲ ಬಾಲಿವುಡ್ ಸಿನಿಮಾ ಫ್ಲಾಪ್ ಆಯಿತು. ಹಾಗಾಗಿ ಇವರಿಬ್ಬರೂ ಖುಷಿ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.


ಲೈಗರ್ ಸಿನಿಮಾದಲ್ಲಂತೂ ಸಿನಿಮಾಗೆ ಹಾಕಿದ ಬಂಡವಾಳ ಕೂಡಾ ಮರಳಿ ಸಿಕ್ಕಿರಲಿಲ್ಲ. ಹಾಗಾಗಿ ಇಬ್ಬರು ಸ್ಟಾರ್ ಕಲಾವಿದರ ಅಭಿಮಾನಿಗಳು ಖುಷಿ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

top videos
    First published: