ಕೆಜಿಎಫ್​ ನಿರ್ದೇಶಕ ಪ್ರಶಾಂತ್ ನೀಲ್ ಮೊದಲ ತೆಲುಗು ಸಿನಿಮಾಗೆ ಹೀರೋ ಫಿಕ್ಸ್​​; ಯಾರು ಆ ಸ್ಟಾರ್​?

ಜೂ.ಎನ್​ಟಿಆರ್​ ಸಿನಿಮಾಗೆ ಮೈತ್ರಿ ಮೂವಿಸ್ ಬಂಡವಾಳ ಹೂಡುತ್ತಿದೆ. ಈ ಚಿತ್ರಕ್ಕೆ ಪ್ರಶಾಂತ್​ ನೀಲ್​ ಆ್ಯಕ್ಷನ್​ ಹೇಳಿದರೆ ಉತ್ತಮ ಎನ್ನುವ ಕಾರಣಕ್ಕೆ ಪ್ರಶಾಂತ್​ ಜೊತೆ ಮಾತುಕತೆ ನಡೆಸಿ ಅವರ ಕೈಗೆ ಅಡ್ವಾನ್ಸ್​ ಹಣ ನೀಡಲಾಗಿತ್ತು.

Rajesh Duggumane | news18
Updated:July 13, 2019, 1:30 PM IST
ಕೆಜಿಎಫ್​ ನಿರ್ದೇಶಕ ಪ್ರಶಾಂತ್ ನೀಲ್ ಮೊದಲ ತೆಲುಗು ಸಿನಿಮಾಗೆ ಹೀರೋ ಫಿಕ್ಸ್​​;  ಯಾರು ಆ ಸ್ಟಾರ್​?
ಪ್ರಶಾಂತ್​ ನೀಲ್​-ಎನ್​ಟಿಆರ್​
  • News18
  • Last Updated: July 13, 2019, 1:30 PM IST
  • Share this:
ನಿರ್ದೇಶಕನಿಗೆ ಖ್ಯಾತಿ ಬಂದ ನಂತರ ಒಂದಿಲ್ಲೊಂದು ಹೀರೋ ಜೊತೆ ಅವರ ಹೆಸರು ಥಳುಕು ಹಾಕಿಕೊಳ್ಳುತ್ತದೆ. ‘ಕೆಜಿಎಫ್​’ ಚಿತ್ರದ ನಿರ್ದೇಶಕ ಪ್ರಶಾಂತ್​ ನೀಲ್​ ಕೂಡ ಇದಕ್ಕೆ ಹೊರತಾಗಿಲ್ಲ. ‘ಕೆಜಿಎಫ್​’ ಸಿನಿಮಾ ಅವರಿಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿತ್ತು. ಅಂತೆಯೇ ಟಾಲಿವುಡ್​ನ ಕೆಲ ಪ್ರಮುಖ ಸ್ಟಾರ್​ಗಳ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು. ಈಗ ಈ ವಿಚಾರ ಅಧಿಕೃತ ಮಾಹಿತಿಯೊಂದು ಸಿಕ್ಕಿದೆ.

'ಕೆಜಿಎಫ್​' ತೆರೆಕಂಡಾಗ ಮಹೇಶ್​ ಬಾಬು, ಜೂ. ಎನ್​ಟಿಆರ್​ ಸಿನಿಮಾಗೆ ಪ್ರಶಾಂತ್​ ನೀಲ್​ ನಿರ್ದೇಶನ ಮಾಡಲಿದ್ದಾರೆ ಎನ್ನುವ ಮಾತು ಹರಿದಾಡಿತ್ತು. ಈಗ ಜೂ.ಎನ್​ಟಿಆರ್​ ಸಿನಿಮಾಗೆ ಪ್ರಶಾಂತ್​ ನೀಲ್​ ಆ್ಯಕ್ಷನ್​ ಕಟ್​ ಹೇಳುವ ವಿಚಾರ ಅಧಿಕೃತವಾಗಿದೆ. ಈ ಬಗ್ಗೆ ನಿರ್ಮಾಪಕರೇ ಮಾಹಿತಿ ನೀಡಿದ್ದಾರೆ.

ಜೂ. ಎನ್​ಟಿಆರ್​ ಸಿನಿಮಾಗೆ ಮೈತ್ರಿ ಮೂವಿಸ್ ಬಂಡವಾಳ ಹೂಡುತ್ತಿದೆ. ಈ ಚಿತ್ರಕ್ಕೆ ಪ್ರಶಾಂತ್​ ನೀಲ್​ ಆ್ಯಕ್ಷನ್​ ಹೇಳಿದರೆ ಉತ್ತಮ ಎನ್ನುವ ಕಾರಣಕ್ಕೆ ಪ್ರಶಾಂತ್​ ಜೊತೆ ಮಾತುಕತೆ ನಡೆಸಿ ಅವರ ಕೈಗೆ ಅಡ್ವಾನ್ಸ್​ ಹಣ ನೀಡಲಾಗಿತ್ತು. ಈ ಬಗ್ಗೆ ಮಾಹಿತಿ ನೀಡಿರುವ ಮೈತ್ರಿ ಮೂವೀಸ್ ಮೇಕರ್ಸ್​​ ಸ್ಥಾಪಕ ನವೀನ್​​, “ಪ್ರಶಾಂತ್​ ನೀಲ್​ ಹಾಗೂ ಜೂ. ಎನ್​ಟಿಆರ್​ಗೆ ಅಡ್ವಾನ್ಸ್​ ಹಣ ನೀಡಿದ್ದೇವೆ. ಪ್ರಶಾಂತ್​ ಶೀಘ್ರವೇ ಜೂ. ಎನ್​ಟಿಆರ್​ಗೆ ಕಥೆ ಹೇಳಲಿದ್ದಾರೆ. ಅದು ಇಷ್ಟವಾದರೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ” ಎಂದಿದ್ದಾರೆ.

ನವೀನ್​ ಹೇಳುವ ಪ್ರಕಾರ 2020ರ ವೇಳೆಗೆ ಸಿನಿಮಾ ಸೆಟ್ಟೇರಲಿದೆಯಂತೆ. ಸದ್ಯಕ್ಕೆ ಪ್ರಶಾಂತ್​ ನೀಲ್​ ‘ಕೆಜಿಎಫ್​-2’ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಜೂ. ಎನ್​ಟಿಆರ್​ ‘ಆರ್​ಆರ್​ಆರ್​’ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳಿಗೆ ಪ್ರಶಾಂತ್ ನೀಲ್ ಉಡುಗೊರೆ; ಸೈಲೆಂಟಾಗಿ ಮತ್ತೊಂದು ಸಿನಿಮಾ ಒಪ್ಪಿಕೊಂಡ್ರಂತೆ ಕೆಜಿಎಫ್ ನಿರ್ದೇಶಕ
First published:July 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ