Olympia Theater: ಇತಿಹಾಸದ ಪುಟ ಸೇರಿದ ಮೈಸೂರಿನ ಮತ್ತೊಂದು ಥಿಯೇಟರ್​ - 73 ವರ್ಷಗಳ ಪ್ರದರ್ಶನ ನಿಲ್ಲಿಸಿದ ಒಲಂಪಿಯಾ

Mysuru: ಈ ಒಲಂಪಿಯಾ (Olympia) ಚಿತ್ರಮಂದಿರವು ಸತತ 73 ವರ್ಷಗಳ ಪ್ರದರ್ಶನದ ನಂತರ ಮುಚ್ಚುತ್ತಿದ್ದು, ಇತಿಹಾಸದ ಪುಟ ಸೇರುತ್ತಿದೆ. ಈ ಚಿತ್ರಮಂದಿರ ಬಂದ್ ಆಗುವ ಮೂಲಕ ಮೈಸೂರಿನ ಮತ್ತೊಂದು ಐತಿಹಾಸಿಕ ಚಿತ್ರಮಂದಿರ ಮುಚ್ಚಿದಂತೆ ಆಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೈಸೂರಿನ (Mysuru) ಮತ್ತೊಂದು ಹಳೆಯ ಚಿತ್ರ ಮಂದಿರ (Theater) ಬಾಗಿಲು ಹಾಕುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ. ಮೈಸೂರಿನ ಗಾಂಧಿ ವೃತ್ತದ ಬಳಿ ಇರುವ ಈ ಒಲಂಪಿಯಾ (Olympia) ಚಿತ್ರಮಂದಿರವು ಸತತ 73 ವರ್ಷಗಳ ಪ್ರದರ್ಶನದ ನಂತರ ಮುಚ್ಚುತ್ತಿದ್ದು, ಇತಿಹಾಸದ ಪುಟ ಸೇರುತ್ತಿದೆ. ಈ ಚಿತ್ರಮಂದಿರ ಬಂದ್ ಆಗುವ ಮೂಲಕ ಮೈಸೂರಿನ ಮತ್ತೊಂದು ಐತಿಹಾಸಿಕ ಚಿತ್ರಮಂದಿರ ಮುಚ್ಚಿದಂತೆ ಆಗುತ್ತಿದೆ.

ಮೈಸೂರಿನಲ್ಲಿ ಈಗಾಗಲೆ ಹಲವಾರು ಚಿತ್ರಮಂದಿರಗಳು ಮುಚ್ಚಿವೆ. ಮೈಸೂರಿನಲ್ಲಿ ಮೊದಲು 25ಕ್ಕು ಹೆಚ್ಚು ಚಿತ್ರಮಮದಿರಗಳಿದ್ದವು. ಆದರೆ ಕಳೆದ 2 ವರ್ಷದಿಂದ ಪ್ರಸಿದ್ದ ಚಿತ್ರಮಂದಿರಗಳಾದ ಶಾಂತಲಾ, ಲಕ್ಷ್ಮೀ ಮತ್ತು ಸರಸ್ವತಿ ಚಿತ್ರಮಮದಿರಗಳು ಬಾಗಿಲು ಹಾಕಿವೆ. ಸಧ್ಯದ ಪಟ್ಟಿಯ ಪ್ರಕಾರ ಮೈಸೂರಿನಲ್ಲಿ ಚಿತ್ರಮಂದಿರಗಳ ಸಂಖ್ಯೆ ಕಡಿಮೆಯಾಗಿದ್ದು, ಇದು ನಿಜಕ್ಕೂ ಬೇಸರದ ಸಂಗತಿ ಎನ್ನುತ್ತಿದ್ದಾರೆ ಸಿನಿ ಪ್ರೇಮಿಗಳು.

ಮೈಸೂರಿನಲ್ಲಿ ಮುಚ್ಚಿದ ಸುಮಾರು 4 ಚಿತ್ರಮಂದಿರಗಳು

ಕಳೆದ 2 ವರ್ಷದ ಹಿಂದೆ ಸಹ ಇಲ್ಲಿನ ಮತ್ತೊಂದು ಪ್ರಸಿದ್ದ ಹಾಗೂ ಹಳೆಯ ಚಿತ್ರಮಂದಿರ ಶಾಂತಲಾ ಸಹ ಬಾಗಿಲು ಹಾಕಿತ್ತು. 46 ವರ್ಷಗಳ ಸುದೀರ್ಘ ಕಾಲ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸಿ, ಹಿಟ್‌ಗಳ ಸಂಭ್ರಮಾಚರಣೆಗೆ ಸಾಕ್ಷಿಯಾಗಿದ್ದ ಈ ಶಾಂತಲಾ ಥಿಯೇಟರ್ ರೀತಿಯೇ ಈ ಒಲಂಪಿಯನ್ ಸಹ ಇನ್ನು ನೆನಪು ಮಾತ್ರ.

ಮೈಸೂರಿನ ಶಾಂಲಾ ಚಿತ್ರಮಂದಿರ ಅಂದರೆ ಥಟ್ ನೆನಪಾಗೋದು ಏಯ್... ಅಲ್ಲಿ ಬ್ಲ್ಯಾಕ್ ಟಿಕೆಟ್ ಮಾರಲ್ಲ. ಕ್ಯೂ ನಲ್ಲಿ ನಿಂತ ಎಲ್ಲರಿಗೂ ಟಿಕೆಟ್ ಸಿಗುತ್ತಲ್ಲ ಎಂಬುದು. ಹಾಗಯೇ ಹೆಸರು ಮಾಡಿದ್ದ ಸರಸ್ವತಿ ಮತ್ತು ಲಕ್ಷ್ಮೀ ಚಿತ್ರಮಂದಿರಗಳು ಸಹ ಬಂದ್ ಆಗಿದ್ದು, ಇದು ಚಿತ್ರ ನಿರ್ಮಾಪಕರ ಚಿಂತೆಗೆ ಕಾರಣವಾಗಿದೆ. ಮೈಸೂರಿನ ಒಂದೊಂದೆ ಚಿತ್ರ ಮಂದಿರಗಳು ಮುಚ್ಚುತ್ತಿರುವುದು ಕನ್ನಡ ಚಿತ್ರಗಳಿಗೆ ಭಾರೀ ಹೊಡೆತ ಎನ್ನಬಹುದು. ಅಲ್ಲದೇ ನಿಜಕ್ಕೂ ಇದು ಕನ್ನಡ ಚಿತ್ರ ನಿರ್ಮಾಪಕರ ಆತಂಕ್ಕೆ ಸಹ ಕಾರಣವಾಗಿದ್ದು, ಯಾವ ಚಿತ್ರಮಂದಿರದಲ್ಲಿ ಸಿನೆಮಾ ಬಿಡುಗಡೆಮಾಡಬೇಕು ಭಯ ಇದ್ದೇ ಇರುತ್ತದೆ.

ಕೇವಲ ನಿರ್ಮಾಪಕರಿಗೆ ಮಾತ್ರವಲ್ಲದೇ ವಿತರಕರಿಗೂ ಇದು ದೊಡ್ಡ ಹೊಡೆತ ಎನ್ನಬಹುದು. ಪ್ರಸಿದ್ದ ಹಳೆಯ ಹಾಗೂ ಹೆಚ್ಚು ಬ್ಯುಸಿನೆಸ್ ಕೊಡುವ ಚಿತ್ರಮಂದಿರಗಳು ಒಂದೊಂದೆ ಈ ರೀತಿ ಬಾಗಿಲು ಹಾಕಿದರೆ, ಮುಂದಿನ ಕಥೆ ಏನು ಎಂಬುದು ವಿತರಕರ ಚಿಂತೆ.

ಇದನ್ನೂ ಓದಿ: 'ಕ್ವೀನ್​' ಕಂಗನಾ ಸಿನಿಮಾಗೆ ಇದೆಂಥಾ ಸೋಲು, ಮಕಾಡೆ ಮಲಗಿದ 'ಧಾಕಡ್'!​

ರಾಜ್ಯದಲ್ಲಿ 81 ಥೀಯೇಟರ್​ ಕ್ಲೋಸ್

ಕೊರೊನಾ ಮತ್ತು ಲಾಕ್‌ಡೌನ್‌ ಕಾರಣದಿಂದ ಕಳೆದ 2 ವರ್ಷದಿಂದ ಚಿತ್ರಮಂದಿರಗಳು ಸರಿಯಾಗಿ ತೆರೆಯದ ಕಾರಣ ಮಾಲೀಕರಿಗೆ ತಮ್ಮ ಸಿಬ್ಬಂದಿಗೆ ಸಂಬಳ ಕೊಟ್ಟು ಥಿಯೇಟರ್ ನಡೆಸಲು ಕಷ್ಟವಾಗುತ್ತಿದೆ. ಹಾಗಾಗಿ ಚಿತ್ರಮಂದಿರಗಳು ಒಂದೊಂದೆ ಮುಚ್ಚುತ್ತಿವೆ.

ಅಲ್ಲದೇ ಇತ್ತೀಚಿನ ಕಾಲಘಟ್ಟದಲ್ಲಿ ಸಿನೆಮಾವನ್ನು ನೋಡುವ ರೀತಿ ಬದಲಾಗಿದೆ. ಜನರಿಗೆ ಮನೆಯಲ್ಲಿ ಕುಳಿತು ನೋಡುವುದು ಇಷ್ಟ. ಹಾಗಾಗಿ ಜನರು ಥಿಯೇಟರ್ ಕಡೆ ಬರುವುದು ಸ್ವಲ್ಪ ಕಡಿಮೆಯಾಗಿದೆ. ಇದು ಚಿತ್ರಮಂದಿರ ಮಾಲೀಕರ ನಷ್ಟಕ್ಕೆ ಕಾರಣವಾಗಿದೆ.
ಇದು ಕೇವಲ ಮೈಸೂರಿನ ಕಥೆಯಲ್ಲ ರಾಜ್ಯದಲ್ಲಿ ಸಹ ಹಲವಾರು ಚಿತ್ರಮಂದಿರಗಳು ನಷ್ಟದ ಕಾರಣದಿಂದ ಮುಚ್ಚಿವೆ.

ಇದನ್ನೂ ಓದಿ: ಎಂಬಿಎ ಮಾಡಿ ನಟನಾ ಕ್ಷೇತ್ರಕ್ಕೆ ಬಂದ ಮೀರಾ - ಮಾನಸ ಮನೋಹರ ಲೈಫ್​ ಸ್ಟೋರಿ

ರಾಜ್ಯದಲ್ಲಿ 630 ಚಿತ್ರಮಂದಿರಗಳಿದ್ದು, ಸದ್ಯ 81 ಚಿತ್ರಮಂದಿಗಳನ್ನು ಮುಚ್ಚಲಾಗಿದೆ. ಮೊಬೈಲ್ ಹಾಗೂ ಮನೆಯಲ್ಲೇ ಹೋಂ ಥಿಯೇಟರ್‌ನಲ್ಲಿ ಸಿನಿಮಾ ನೋಡಲು ಇಷ್ಟಪಡುತ್ತಿದ್ದಾರೆ. ಮಾಲ್‌ಗಳ ಸಂಸ್ಕೃತಿ ಜೊತೆಗೆ ಕೊರೊನಾ ಲಾಕ್‌ಡೌನ್ ಸಿನಿಮಾ ಮಂದಿರ ಮುಚ್ಚಲು ಪ್ರಮುಖ ಕಾರಣ ಎನ್ನುತ್ತಿದ್ದಾರೆ ಥಿಯೇಟರ್ ಮಾಲೀಕರು.
Published by:Sandhya M
First published: