ಕನ್ನಡದ ಬಿಗ್ಬಾಸ್ ಒಟಿಟಿ ಸೀಸನ್ -1ರ (Kannada Bigg Boss OTT Season-1) ಮೂಲಕ ದೊಡ್ಮನೆಗೆ ಎಂಟ್ರಿ ಕೊಟ್ಟು, ಈಗ ಟೆಲಿವಿಷನ್ ಬಿಗ್ಬಾಸ್ ಸೀಸನ್-9 (Kannada Bigg Boss Season-9) ರಲ್ಲೂ ಸ್ಯಾಂಡಲ್ವುಡ್ (Sandalwoodrakes ನಟ ರಾಕೇಶ್ ಅಡಿಗ (Rakesh Adiga) ಮಿಂಚುತ್ತಿದ್ದಾರೆ. ತಮ್ಮ ನೇರ ನುಡಿ, ಸರಳತೆ ಮೂಲಕವೇ ಕನ್ನಡಗರ ಮನಗೆದ್ದಿರುವ ರಾಕೇಶ್ ಅಡಿಗ ಬಿಗ್ಬಾಸ್ನಲ್ಲಿ ಉತ್ತಮವಾಗಿ ಆಟವಾಡುತ್ತಿದ್ದಾರೆ. ಈ ಮಧ್ಯೆ ನಟ ರಾಕೇಶ್ ಅಡಿಗ ತಾಯಿ ತಮ್ಮ ಮಗ ಮೊದಲಿಗೆ ಜೋಶ್ (Josh) ಸಿನಿಮಾಕ್ಕೆ ನಾಯಕನಾಗಿ ಆಯ್ಕೆಯಾಗಿರಲಿಲ್ಲ. ರಾಕೇಶ್ ಪಾತ್ರದಲ್ಲಿ ಮತ್ತೋರ್ವ ನಟ ನಟಿಸಬೇಕಾಗಿತ್ತು. ಆದರೆ ಆದ್ಯಾಗೋ ಜೋಶ್ ಸಿನಿಮಾ ರಾಕೇಶ್ ಪಾಲಾಯಿತು ಎಂದು ಸೀಕ್ರೆಟ್ ಹೇಳಿದ್ದಾರೆ.
2009ರಲ್ಲಿ ಜೋಶ್ ಸಿನಿಮಾ ಬಿಡುಗಡೆ
ಹೌದು, ನಿರ್ದೇಶಕ ಶಿವಮಣಿ ಆ್ಯಕ್ಷನ್ ಕಟ್ ಹೇಳಿದ್ದ ಜೋಶ್ ಸಿನಿಮಾ 2009ರಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ನಾಯಕ ನಟನಾಗಿ ಮೊದಲ ಬಾರಿಗೆ ರಾಕೇಶ್ ಅಡಿಗ ಬಣ್ಣ ಹಚ್ಚಿದ್ದರು. ಮೊದಲ ಸಿನಿಮಾದಲ್ಲಿ ಬಾಕ್ಸ್ ಆಫೀಸ್ನಲ್ಲಿ ಭಾರೀ ಸದ್ದು ಮಾಡಿದ ರಾಕೇಶ್, ಅಪಾರ ಅಭಿಮಾನಿಗಳನ್ನು ಸಂಪಾದಿಸಿದರು. ಮೊದಲ ಸಿನಿಮಾದಲ್ಲಿಯೇ ಶತಕ ಬಾರಿಸಿ ಕನ್ನಡದಲ್ಲಿ ಭರವಸೆ ಹುಟ್ಟು ಹಾಕಿದ ನಟರಾಗಿದ್ದರು.
ಕರ್ನಾಟಕದ ಮೊದಲ ರ್ಯಾಪರ್ ಆಗಿದ್ದ ರಾಕೇಶ್ ಅಡಿಗ
ಜೋಶ್ ಸಿನಿಮಾದಲ್ಲಿ ಕಾಲೇಜು ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಾಕೇಶ್ ಆಗಲೇ ಹುಡುಗಿಯರ ಮನಕದ್ದಿದ್ದರು. ಆದರೆ ವಾಸ್ತವವಾಗಿ ಹೇಳಬೇಕೆಂದರೆ ರಾಕೇಶ್ ಅಡಿಗ ನಟರಾಗುವ ಮುನ್ನ ಅರ್ಬನ್ ಲ್ಯಾಡ್ಸ್ ಎಂಬ ರ್ಯಾಪ್ ಆಲ್ಬಂ ಹಾಡುಗಳನ್ನು ಸಂಯೋಜಿಸಿ ಕರ್ನಾಟಕದ ಮೊದಲ ರ್ಯಾಪರ್ ಎಂದು ಖ್ಯಾತಿ ಪಡೆದಿದ್ದರು.
ಜೋಶ್ ಸಿನಿಮಾ ತಮ್ಮ ಮೊದಲ ಸಿನಿಮಾ ಎಂಬುವುದು ಯಾರಿಗೂ ಗೊತ್ತಾಗದಂತೆ ನಟಿಸಿದ್ದ ರಾಕೇಶ್ ಅಡಿಗ ಅವರ ಬಗ್ಗೆ ಇದೀಗ ಅವರ ತಾಯಿ ಲತಾ ಅಡಿಗ ಅವರು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಜೋಶ್ ಚಿತ್ರಕ್ಕೆ ಮೊದಲು ರಾಕೇಶ್ ಆಯ್ಕೆಯಾಗಿರಲಿಲ್ಲ
ಜೋಶ್ ಚಿತ್ರಕ್ಕೆ ಮೊದಲು ರಾಕೇಶ್ ಆಯ್ಕೆಯಾಗಿರಲಿಲ್ಲ. ಆ ಪಾತ್ರದಲ್ಲಿ ಬೇರೆಯವರು ನಟಿಸಬೇಕಾಗಿತ್ತು. ಆದರೆ ಹೇಗೋ ಜೋಶ್ ಚಿತ್ರ ರಾಕೇಶ್ ಪಾಲಾಯಿತು ಎಂದಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಲತಾ ಅವರು, ರಾಕೇಶ್ ನಾಯಕನಾಗಿ ಆಯ್ಕೆಯಾಗಿದ್ದನ್ನು ನನಗೆ ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ. ಅವನು ಆಟ ಆಡಿಕೊಂಡೆ ನಟನಾಗಿಬಿಟ್ಟ. ಚಿತ್ರದ ಆಡಿಷನ್ ನಡೆಯುತ್ತಿದೆ ಎಂದು ಗೆಳೆಯರೆಲ್ಲ ಸೇರಿ ಭಾಗವಹಿಸಿದ್ದರು. ನಂತರ ಆಡಿಷನ್ನಲ್ಲಿ ಆಯ್ಕೆ ಕೂಡ ಆಗಿ ಬಿಟ್ಟರು. ಈ ಚಿತ್ರಕ್ಕೆ ಮೊದಲು ಬೇರೆಯವರು ನಾಯಕರಾಗಿ ಆಯ್ಕೆಯಾಗಿದ್ದರು. ಆದರೆ ನಂತರ ರಾಕೇಶ್ ಟ್ಯಾಲೆಂಟ್ ನೋಡಿ ಇವನಿಗೆ ನಾಯಕನಾಗಿ ಅಭಿನಯಿಸಲು ಅವಕಾಶ ಕೊಟ್ಟರು ಎಂದು ತಿಳಿಸಿದ್ದಾರೆ.
ಜೋಶ್ ಸಿನಿಮಾ ಹಿಟ್ ಬೆನ್ನೆಲ್ಲೇ ಹುಡುಗರಿಗೆ ಬೈಕ್ ಕೊಟ್ಟಿದ್ದ ಚಿತ್ರತಂಡ
ಇನ್ನೂ ಜೋಶ್ ಸಿನಿಮಾ ಹಿಟ್ ಆದ ಬೆನ್ನೆಲ್ಲೇ ಚಿತ್ರತಂಡ ಎಲ್ಲಾ ಹುಡುಗರಿಗೂ ಪಲ್ಸರ್ ಬೈಕ್ ಕೂಡ ಕೊಟ್ಟಿತ್ತು. ಇದೆಲ್ಲವನ್ನು ನೋಡಿ ನನಗೆ ಬಹಳ ಖುಷಿಯಾಗಿತ್ತು ಎಂದು ತಮ್ಮ ಸಿಹಿ ನೆನಪುಗಳನ್ನು ಬೆಚ್ಚಿಟ್ಟಿದ್ದಾರೆ.
ಇಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡ ರಾಕೇಶ್ ಅಡಿಗಗೆ ತಾನೊಬ್ಬ ಸೆಲೆಬ್ರಿಟಿ ಎಂಬ ಭಾವನೆ ಇಲ್ಲ. ಯಾವುದೇ ಕಾರ್ಯಕ್ರಮಕ್ಕೆ ತೆರಳುವಾಗ ಬ್ರಾಂಡೆಡ್ ಬಟ್ಟೆ ಧರಿಸಲು ಇಚ್ಛಿಸುವುದಿಲ್ಲ. ಎಷ್ಟೋ ಬಾರಿ ನಾನೇ ನನ್ನ ಮಗನಿಗೆ ನಿನೊಬ್ಬ ಸೆಲೆಬ್ರಿಟಿ, ಬ್ರಾಂಡೆಡ್ ಬಟ್ಟೆಗಳನ್ನು ಧರಿಸು ಎಂದು ಸಲಹೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ತಮಿಳು, ತೆಲುಗಿಗೂ ರಿಮೇಕ್ ಆಗಿತ್ತು ಜೋಶ್ ಚಿತ್ರ
ಕನ್ನಡದಲ್ಲಿ ತೆರೆಕಂಡ ಜೋಶ್ ಸಿನಿಮಾ ಆಗ ಯೂತ್ಸ್ ಅನ್ನು ಹೆಚ್ಚಾಗಿ ಚಿತ್ರಮಂದಿರದತ್ತ ಎಳೆಯಿತು. ಸಮಯ, ವಿದ್ಯೆ, ವಿದ್ಯಾರ್ಥಿ ಜೀವನ, ತಂದೆ ತಾಯಿಯ ಪ್ರಾಮುಖ್ಯತೆ, ಪ್ರೀತಿ, ಸ್ನೇಹ ಹೀಗೆ ಜೀವನದ ಅತ್ಯಾಮೂಲ್ಯವಾದ ಅಂಶಗಳನ್ನು ಒಳಗೊಂಡಿದ್ದ ಜೋಶ್ ಸಿನಿಮಾ ಕನ್ನಡದಲ್ಲಿ ಸೂಪರ್ ಡೂಪರ್ ಹಿಟ್ ಆಗಿತ್ತು. ನಂತರ ಈ ಸಿನಿಮಾವನ್ನು ತೆಲುಗಿನಲ್ಲಿ ಕೆರಂಟ ಹಾಗೂ ತಮಿಳಿನಲ್ಲಿ ಯುವನ್ ಎಂಬ ಶೀರ್ಷಿಕೆಯಡಿ ರಿಮೇಕ್ ಮಾಡಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ