Sudha Murty: ನನ್ನ ಅಳಿಯ ಯುಕೆ ಪ್ರಧಾನಿ ಎಂದರೆ ಜನರು ನಂಬುವುದಿಲ್ಲ: ಸುಧಾ ಮೂರ್ತಿ

ಸುಧಾಮೂರ್ತಿ

ಸುಧಾಮೂರ್ತಿ

ತಾಯಂದಿರ ದಿನದ ಪ್ರಯುಕ್ತ ದಿ ಕಪಿಲ್ ಶರ್ಮಾ ಶೋನ ವಿಶೇಷ ಸಂಚಿಕೆಯಲ್ಲಿ ಇನ್ಫೋಸಿಸ್​ ಸಂಸ್ಥಾಪಕರಾದ ಸುಧಾಮೂರ್ತಿಯವರು ಬಂದಿದ್ದರು. ಈ ಸಂದರ್ಭದಲ್ಲಿ ಕಪಿಲ್ ಅವರು ಸುಧಾಮೂರ್ತಿಯವರ ಜೊತೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ.

  • Share this:

‘ದಿ ಕಪಿಲ್ ಶರ್ಮಾ ಶೋ’ (The Kapil Sharma Show) ನ ತಾಯಂದಿರ ದಿನದ ವಿಶೇಷ ಸಂಚಿಕೆಯು ದೇಶದ ಅನೇಕ ಮಹಿಳೆಯರಿಗೆ ಒಂದು ಸ್ಪೂರ್ತಿ ನೀಡುವಂತಹ ಎಪಿಸೋಡ್ ಆಗಿ ತೆರೆ ಮೇಲೆ ಮೂಡಿಬಂದಿದೆ. ಬಾಲಿವುಡ್ ನಟಿ (Bollywood Actress) ಪದ್ಮಶ್ರೀ ಪುರಸ್ಕೃತೆ ರವೀನಾ ಟಂಡನ್, ನಿರ್ಮಾಪಕಿ ಮತ್ತು ಆಸ್ಕರ್ ಪ್ರಶಸ್ತಿ ವಿಜೇತರಾದ ಗುನೀತ್ ಮೋಂಗಾ ಮತ್ತು ಪದ್ಮಭೂಷಣ ಸುಧಾ ಮೂರ್ತಿ ಅವರನ್ನು ಕಪಿಲ್ ಅವರು ತಮ್ಮ ಶೋ ಗೆ ಆಹ್ವಾನಿಸಿದ್ದರು. ಕಪಿಲ್ ಅವರು ಸುಧಾ ಮೂರ್ತಿ ಅವರೊಂದಿಗೆ ತುಂಬಾನೇ ಮಾತುಕತೆ ನಡೆಸಿದರು. ಅನೇಕ ಪ್ರಶ್ನೆಗಳನ್ನು ಸುಧಾ (Sudha Murty) ಅವರಿಗೆ ಕೇಳಿದ ಕಪಿಲ್ ಅವರು ಮಧ್ಯೆ ಮಧ್ಯೆ ಕಾಮಿಡಿ ಪಂಚ್ ಗಳನ್ನು ನೀಡುತ್ತಾ ಶೋ ಅನ್ನು ಹೋಸ್ಟ್ ಮಾಡಿದರು.


ಬನ್ನಿ ಹಾಗಾದರೆ ಸುಧಾ ಮೂರ್ತಿಯವರು ಕಪಿಲ್ ಅವರೊಂದಿಗೆ ಏನೆಲ್ಲಾ ಪ್ರಶ್ನೆಗಳಿಗೆ ಹೇಗೆಲ್ಲಾ ಉತ್ತರಿಸಿದರು ಅಂತ ನೋಡಿಕೊಂಡು ಬರೋಣ.


ನನ್ನ ಅಳಿಯ ಯುಕೆ ಪ್ರಧಾನಿ ಎಂದು ಜನರು ನಂಬುವುದಿಲ್ಲ


ಪ್ರಧಾನಿ ರಿಷಿ ಸುನಕ್ ಅವರ ಅಳಿಯನಾಗಿರುವುದರಿಂದ ಯುಕೆಗೆ ವೀಸಾ ತೆಗೆದುಕೊಳ್ಳಬೇಕೇ ಅಥವಾ ಮಗಳ ಮದುವೆಯ ಕಾರ್ಡ್ ತೋರಿಸಬೇಕೇ ಎಂದು ಕಪಿಲ್ ಸುಧಾ ಅವರನ್ನು ಕೇಳುತ್ತಾರೆ. ಆಗ ಸುಧಾ ಅವರು "ಇಲ್ಲ, ಯುಕೆಗೆ ಭೇಟಿ ನೀಡಲು ನಾವು ವೀಸಾ ತೆಗೆದುಕೊಳ್ಳಬೇಕು. ನಿವಾಸದ ವಿಳಾಸದ ಬಗ್ಗೆ ಅವರು ನನ್ನನ್ನು ಕೇಳಿದಾಗ, ನಾನು 10 ಡೌನಿಂಗ್ ಸ್ಟ್ರೀಟ್ ಎಂದು ಬರೆದಿದ್ದೇನೆ ಎಂದು ನನಗೆ ನೆನಪಿದೆ.


ಇದನ್ನೂ ಓದಿ: ತೂಕ ಇಳಿಸಿಕೊಂಡ ಗಾನ ಬಜಾನ ಚೆಲುವೆ! ಪ್ರಿಯಾಮಣಿ ವೈರಲ್ ಫೋಟೋಸ್ ನೋಡಿ


ನನ್ನ ಮಗ ಕೂಡ ಅಲ್ಲಿಯೇ ಇರುತ್ತಾನೆ, ಆದರೆ ನನಗೆ ಅವನ ವಿಳಾಸ ನೆನಪಿಲ್ಲ, ಆದ್ದರಿಂದ ನಾನು 10 ಡೌನಿಂಗ್ ಸ್ಟ್ರೀಟ್ ಎಂದು ಬರೆದೆ, ಅಧಿಕಾರಿಯೊಬ್ಬರು ಅದನ್ನು ಓದಿ 'ನೀವು ತಮಾಷೆ ಮಾಡುತ್ತಿದ್ದೀರಾ' ಅಂತ ಕೇಳಿದರು. 72 ವರ್ಷದ ಸರಳ ಮಹಿಳೆ ರಿಷಿ ಸುನಕ್ ಅವರ ಅತ್ತೆಯಾಗಿರಬಹುದು ಎಂದು ಜನರು ನಂಬಲು ಸಾಧ್ಯವಿಲ್ಲ” ಅಂತ ಹೇಳಿದರು.


ಮೂರ್ತಿ ಅವರಿಗೆ ತಿಳಿಯದಂತೆ 10,250 ರೂಪಾಯಿಗಳನ್ನು ಉಳಿಸಿದ್ರಂತೆ ಸುಧಾ


ಮೂರ್ತಿ 1981 ರಲ್ಲಿ ಇನ್ಫೋಸಿಸ್ ಅನ್ನು ಪ್ರಾರಂಭಿಸಿದರು, ಆಗ ನಮ್ಮ ಬಳಿ ಅಷ್ಟೊಂದು ಹಣವಿರಲಿಲ್ಲ. ನಾವು ಬಾಂದ್ರಾದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೆವು.


ಒಂದು ದಿನ ಅವರು ನನ್ನ ಬಳಿಗೆ ಬಂದು ನಮ್ಮ ಪಾಲುದಾರರೊಂದಿಗೆ ಸಾಫ್ಟ್‌ವೇರ್ ಕಂಪನಿಯನ್ನು ಪ್ರಾರಂಭಿಸುವ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು. ನಾವು ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವುದರಿಂದ ಕಂಪನಿಯನ್ನು ಪ್ರಾರಂಭಿಸಲು ಹಣ ಎಲ್ಲಿದೆ ಎಂಬುದು ನನ್ನ ಮೊದಲ ಕಾಳಜಿಯಾಗಿತ್ತು. ಭಾರತಕ್ಕೆ ಸಾಫ್ಟ್‌ವೇರ್ ಕ್ರಾಂತಿಯ ಅಗತ್ಯವೇನಿದೆ ಎಂದು ಅವರು ನನಗೆ ವಿವರಿಸಿದರು.


ಅವರಿಗೆ ಆಗ ಸಹಾಯ ಮಾಡಲು ನಾನು ಏನು ಮಾಡಬೇಕೆಂದು ನಾನು ಅವರನ್ನು ಕೇಳಿದೆ. ಅದಕ್ಕೆ ಅವರು ಸಹಾಯ ಮಾಡಲು ನನ್ನನ್ನು ಕೇಳಿದರು. ಮೂರ್ತಿಗೆ ತಿಳಿಯದಂತೆ, ನಾನು ಹಳೆಯ ಹಿಟ್ಟಿನ ಡಬ್ಬಿಯಲ್ಲಿ 10,250 ರೂಪಾಯಿಗಳನ್ನು ಉಳಿಸಿದ್ದೆ. ನಾನು ಎಲ್ಲಾ ಮಹಿಳೆಯರಿಗೆ ಹಣವನ್ನು ಉಳಿಸಲು ಮತ್ತು ಅಂತಹ ಆರ್ಥಿಕ ಅಗತ್ಯಗಳಿಗಾಗಿ ಹಣವನ್ನು ಇಟ್ಟುಕೊಳ್ಳಲು ಸಲಹೆ ನೀಡುತ್ತೇನೆ ಅಂತ ಸುಧಾ ಮೂರ್ತಿಯವರು ಹೇಳಿದರು.


ಸುಧಾ ಮೂರ್ತಿಯವರು ಭಾರತದ ಸ್ಮಾರ್ಟ್ ಹೂಡಿಕೆದಾರರಂತೆ..


“ನಾನು ಕಂಪನಿ ಶುರು ಮಾಡಲು ನಾರಾಯಣ ಮೂರ್ತಿಯವರಿಗೆ 10,000 ರೂಪಾಯಿಗಳನ್ನು ನೀಡಿದ್ದೆ ಮತ್ತು ತುರ್ತು ಪರಿಸ್ಥಿತಿಗಳಿಗಾಗಿ 250 ರೂಪಾಯಿಗಳನ್ನು ನನ್ನ ಬಳಿಯೇ ಇಟ್ಟುಕೊಂಡಿದ್ದೆ. ಅದಕ್ಕಾಗಿಯೇ ನಾನು ನನ್ನನ್ನು ಭಾರತದ ಸ್ಮಾರ್ಟ್ ಹೂಡಿಕೆದಾರ ಅಂತ ಕರೆದುಕೊಳ್ಳುತ್ತೇನೆ” ಅಂತ ಸುಧಾ ಅವರು ಹೇಳಿಕೊಂಡರು.


“ನಾನು ನನ್ನ ಗಂಡನಿಗೆ ನೀಡಿದ ಆ 10 ಸಾವಿರ ಸಾಲ ಇವತ್ತು ಶತಕೋಟಿಗಳಲ್ಲಿ ಆದಾಯವನ್ನು ಗಳಿಸಿದೆ. ಹೂಡಿಕೆ ಮಾಡಿದ ಮೊತ್ತವನ್ನು ಮರಳಿ ಪಡೆದಿರಾ ಅಥವಾ ಇಲ್ಲವೇ ಎಂದು ಕಪಿಲ್ ಕೇಳಿದಾಗ, ಸುಧಾ ಅವರು "ನಾನು ಕುಲಕರ್ಣಿ ಅವರ ಮಗಳು, ನಾವು ನಮ್ಮ ಖಾತೆಗಳನ್ನು ಹಾಗೆಯೇ ಉಳಿಸಿಕೊಳ್ಳುತ್ತೇವೆ.


ನನ್ನ 10,000 ರೂಪಾಯಿಗಳನ್ನು ಪಕ್ಕಕ್ಕಿಟ್ಟು ಸಮಯಕ್ಕೆ ಸರಿಯಾಗಿ ನನಗೆ ಹಿಂತಿರುಗಿಸಿ ಎಂದು ನಾನು ಅವರಿಗೆ ಸ್ಪಷ್ಟವಾಗಿ ಹೇಳಿದೆ. ಉಳಿದ ನಿಮ್ಮ ಲಾಭಗಳು ನಿಮ್ಮ ಜವಾಬ್ದಾರಿಯಾಗಿದೆ. ನೀವು ಏನು ಬೇಕಾದರೂ ಮಾಡಬಹುದು ಆದರೆ ನಾನು ಹೂಡಿಕೆ ಮಾಡಿದ ಹಣವನ್ನು ಮರಳಿ ಪಡೆಯಬೇಕು” ಅಂತ ಹೇಳಿದ್ರಂತೆ ಸುಧಾ.


ನಾರಾಯಣ್ ಮೂರ್ತಿಯವರನ್ನು ಸುಧಾ ಅವರ ಪತಿ ಅಂತ ಪರಿಚಯಿಸುತ್ತಿದ್ದರಂತೆ ಅವರ ತಂದೆ


“ಮಧ್ಯಮ ವರ್ಗದ ಕುಟುಂಬದಿಂದ ಬಂದ ಮತ್ತು ವೈದ್ಯರ ಮಗಳಾಗಿರುವುದರಿಂದ, ನಮ್ಮ ಸಂಪತ್ತು ಎಂದರೆ ನಮ್ಮ ಶಿಕ್ಷಣ ಮತ್ತು ಪುಸ್ತಕಗಳು. ನಾನು ನಾರಾಯಣ್ ಮೂರ್ತಿಯನ್ನು ಮದುವೆಯಾದಾಗ, ಅವರು ನಿರುದ್ಯೋಗಿಯಾಗಿದ್ದರು, ಆದ್ದರಿಂದ ಅವರನ್ನು ಕುಟುಂಬಕ್ಕೆ ಹೇಗೆ ಪರಿಚಯಿಸುವುದು ಎಂದು ನನ್ನ ತಂದೆ ಗೊಂದಲಕ್ಕೊಳಗಾಗಿದ್ದರು. ಅವರನ್ನು ಸುಧಾಳ ಪತಿ ಎಂದು ಪರಿಚಯಿಸಲು ನಾನು ನನ್ನ ತಂದೆಗೆ ಹೇಳಿದೆ” ಅಂತ ಸುಧಾ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡರು.


ಜೆಆರ್‌ಡಿ ಟಾಟಾ ಅವರಿಗೆ ಸಮಾನ ಅವಕಾಶದ ಬಗ್ಗೆ ಪತ್ರ ಬರೆದಿದ್ದರಂತೆ ಸುಧಾ


“ನಾನು 1974 ರಲ್ಲಿ ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್ ನಲ್ಲಿ ಎಂ.ಟೆಕ್ ಓದುತ್ತಿದ್ದೆ, ಮತ್ತು ಇಡೀ ತರಗತಿಯಲ್ಲಿ ನಾನು ಒಬ್ಬಳೇ ಹುಡುಗಿಯಾಗಿದ್ದೆ. ನಾನು ಬಿ.ಇ ಮಾಡುತ್ತಿರುವಾಗಲೂ ಸಹ ನನ್ನ ತರಗತಿಯಲ್ಲಿ ನಾನೊಬ್ಬಳೇ ಹುಡುಗಿ ಇದ್ದೆ.


ಸುಧಾಮೂರ್ತಿ


ಒಂದು ದಿನ, ಹಾಸ್ಟೆಲ್ ನಿಂದ ತರಗತಿಗಳಿಗೆ ಹೋಗುವಾಗ, ನಾನು ಕಾಲೇಜಿನಲ್ಲಿ ಒಂದು ಕರಪತ್ರವನ್ನು ಓದಿದೆ, ಅದರಲ್ಲಿ ಒಂದು ಉದ್ಯೋಗಾವಕಾಶವಿದ್ದು, ಆ ಜಾಹೀರಾತಿನ ಕೊನೆಯಲ್ಲಿ 'ಮಹಿಳಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕಾಗಿಲ್ಲ' ಎಂದು ಬರೆಯಲಾಗಿತ್ತು. ಇದು ನನಗೆ ಕೋಪ ತರಿಸಿತು, ನಾನು ಹಾಸ್ಟೆಲ್ ಗೆ ಹೋಗಿ ಜೆಆರ್‌ಡಿ ಟಾಟಾ ಅವರಿಗೆ ಪೋಸ್ಟ್ ಕಾರ್ಡ್ ನಲ್ಲಿ ಪತ್ರ ಬರೆದೆ.


"ನಮ್ಮಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳಿಲ್ಲ ಮತ್ತು ನೀವು ಮಹಿಳೆಯ ಸೇವೆಗಳನ್ನು ಕಡಿತಗೊಳಿಸುತ್ತಿದ್ದೀರಿ, ಇದು ನಮ್ಮ ದೇಶದಲ್ಲಿ ಯಾವುದೇ ಪ್ರಗತಿಗೆ ಕಾರಣವಾಗುವುದಿಲ್ಲ. ಮಹಿಳೆಯರಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳು ಇಲ್ಲದಿರುವಾಗ, ದೇಶವು ಹೇಗೆ ಪ್ರಗತಿ ಸಾಧಿಸುತ್ತದೆ” ಅಂತ ಪತ್ರದಲ್ಲಿ ಬರೆದಿದ್ದರಂತೆ ಸುಧಾ. ಟಾಟಾ ಅವರು ನನ್ನ ಪತ್ರ ಓದಿ ಖೇದಪಟ್ಟರು ಮತ್ತು ನನಗೆ ಅವಕಾಶ ನೀಡಲು ನಿರ್ಧರಿಸಿದರು.


ಅವರು ಪುಣೆಗೆ ರೈಲಿನ ಪ್ರಥಮ ದರ್ಜೆ ಟಿಕೆಟ್ ನೊಂದಿಗೆ ಟೆಲಿಗ್ರಾಮ್ ಸಹ ಕಳುಹಿಸಿದರು ಮತ್ತು ಟೆಲ್ಕೊದಲ್ಲಿ ಸಂದರ್ಶನವಿದೆ ಬನ್ನಿ ಅಂತ ಅದರಲ್ಲಿ ಬರೆದಿತ್ತು” ಎಂದು ಸುಧಾ ಹೇಳಿದರು.


ಸುಧಾ ಅವರು ಟಾಟಾ ಗ್ರೂಪ್ ನ ಮೊದಲ ಮಹಿಳಾ ಎಂಜಿನಿಯರ್ ಆಗಿದ್ರಂತೆ..


ನಾನು ಮನೆಗೆ ಹಿಂದಿರುಗಿದಾಗ, ನಾನು ಇಡೀ ಘಟನೆಯನ್ನು ನನ್ನ ತಂದೆಗೆ ಹೇಳಿದೆ ಮತ್ತು ಅವರು ಅದಕ್ಕೆ ನೀನು ಈ ಕೆಲಸವನ್ನು ತೆಗೆದುಕೊಳ್ಳುತ್ತೀಯಾ ಅಂತ ಕೇಳಿದರು. 'ಇಲ್ಲ, ನಾನು ಅಮೆರಿಕಕ್ಕೆ ಹೋಗುತ್ತಿದ್ದೇನೆ' ಅಂತ ನಾನು ಹೇಳಿದೆ, ನಂತರ ನನ್ನ ತಂದೆ ನಾನು ತಪ್ಪಾಗಿ ಆಲೋಚನೆ ಮಾಡಿದ್ದೇನೆ ಅಂತ ಹೇಳಿದರು. 'ನೀವು ಸಮಾನತೆಯ ಬಗ್ಗೆ ಮಾತಾಡಿದಾಗ ಆ ಉದ್ಯೋಗವನ್ನು ನೀನು ಮಾಡಲೇಬೇಕು.


ಯಾರಿಗೊ ಏನನ್ನೋ ಸಾಬೀತುಪಡಿಸಲು ಇದನ್ನು ಮಾಡಬೇಡ, ಜವಾಬ್ದಾರಿಯನ್ನು ತೆಗೆದುಕೊಂಡು ಮಾಡು ಅಂತ ಹೇಳಿದ್ರಂತೆ ಸುಧಾ ಅವರ ತಂದೆ. ಅವರ ಈ ಮಾತುಗಳು ಸುಧಾ ಅವರ ನಿರ್ಧಾರ ಬದಲಾಯಿಸಿಕೊಂಡು ಪಿಎಚ್.ಡಿ ಪತ್ರವನ್ನು ಹರಿದು ಟೆಲ್ಕೊ ಕೆಲಸಕ್ಕೆ ಸೇರಿಕೊಳ್ಳುವಂತೆ ಮಾಡಿತಂತೆ. ನಾನು ಟಾಟಾ ಗ್ರೂಪ್ ನ ಮೊದಲ ಮಹಿಳಾ ಎಂಜಿನಿಯರ್ ಆಗಿದ್ದೆ ಅಂತ ನೆನಪಿಸಿಕೊಳ್ತಾರೆ ಸುಧಾ ಮೂರ್ತಿ.


ಸುಧಾಮೂರ್ತಿ


ಆ ಸಮಯದಲ್ಲಿ ಇನ್ಸ್ಟಿಟ್ಯೂಟ್ ನಲ್ಲಿ ಮಹಿಳೆಯರ ವಾಶ್‌ರೂಮ್ ಇರಲಿಲ್ವಂತೆ


1968 ರಲ್ಲಿ ಇನ್ಸ್ಟಿಟ್ಯೂಟ್ ಗೆ ಸುಧಾ ಅವರು ಸೇರಿಕೊಂಡಾಗ ಅವರ ಬ್ಯಾಚ್ ನಲ್ಲಿ 149 ಹುಡುಗರು ಇದ್ದರಂತೆ ಮತ್ತು ಅವರೊಬ್ಬರೆ ಹುಡುಗಿಯಂತೆ. ಅಷ್ಟೇ ಅಲ್ಲದೆ ಇಡೀ ವಿಶ್ವವಿದ್ಯಾಲಯದಲ್ಲಿ ಇವರೊಬ್ಬರೆ ಹುಡುಗಿಯಂತೆ.


ಸಿಬ್ಬಂದಿ ಮತ್ತು ವಿದ್ಯಾರ್ಥಿಗಳೆಲ್ಲರೂ ಪುರುಷರಾಗಿದ್ದರಿಂದ ಸಂಸ್ಥೆಯಲ್ಲಿ ಮಹಿಳೆಯರ ಶೌಚಾಲಯ ಇರಲಿಲ್ಲವಂತೆ. ಪ್ರೊಫೆಸರ್ ಗಳು ಸಹ ನನ್ನನ್ನು ನೋಡಿ ತುಂಬಾನೇ ಗೊಂದಲಕ್ಕೊಳಗಾದರು ಮತ್ತು ನಾನು 2-3 ತಿಂಗಳಲ್ಲಿ ಅಲ್ಲಿಂದ ಹೊರಡುತ್ತೇನೆ ಅಂತ ಭಾವಿಸಿದ್ದರು. ಆದರೆ ನಾನು ಅವರ ನಿರೀಕ್ಷೆಗಳನ್ನು ತಪ್ಪೆಂದು ಸಾಬೀತುಪಡಿಸಲು ನಿರ್ಧರಿಸಿದೆ ಅಂತ ಹೇಳಿದರು ಸುಧಾ.


ಎಂಜಿನಿಯರಿಂಗ್ ಓದಲು ಅವಕಾಶ ನೀಡಿದ್ದಕ್ಕಾಗಿ ಸುಧಾ ಅವರ ತಂದೆ ಟೀಕೆಗಳಿಗೆ ಗುರಿಯಾಗಿದ್ರಂತೆ..


“ನನ್ನ ತಂದೆ ಸಮಾಜದಿಂದ ಸಾಕಷ್ಟು ಟೀಕೆಗಳನ್ನು ಎದುರಿಸಿದ್ರು, ಏಕೆಂದರೆ ಹುಡುಗಿಯರು ಎಂಜಿನಿಯರಿಂಗ್ ಮಾಡುವಂತಿಲ್ಲ, ನೀವು ಸಂಪ್ರದಾಯಗಳನ್ನು ಮುರಿಯುತ್ತಿದ್ದೀರಿ ಎಂದು ಜನರು ಅವರಿಗೆ ಹೇಳುತ್ತಿದ್ದರು. ಹುಡುಗಿಗೆ ಉನ್ನತ ಶಿಕ್ಷಣ ಮಾಡಲು ಬಿಡುವುದು ಅಸಾಧ್ಯವಾಗಿತ್ತು” ಅಂತ ಸುಧಾ ಹೇಳಿದರು.


“ಆದರೆ ನಾನು ಸಮಾಜದ ಜನರಲ್ಲಿದ್ದ ಆ ನಂಬಿಕೆಯನ್ನು ಹುಸಿಗೊಳಿಸಲು ಚೆನ್ನಾಗಿ ಅಧ್ಯಯನ ಮಾಡಿದೆ. ನನ್ನ ಮೊದಲ ಸೆಮಿಸ್ಟರ್ ನಲ್ಲಿ ನಾನು ಮೊದಲ ರ್ಯಾಂಕ್ ಪಡೆದಿದ್ದೆ, ಅದರ ನಂತರ ನಾನು ಹಿಂತಿರುಗಿ ನೋಡಲಿಲ್ಲ” ಅಂತ ಹೇಳಿದರು ಸುಧಾ.




ಚಲನಚಿತ್ರಗಳನ್ನು ನೋಡುವುದು ಅಂದ್ರೆ ಸುಧಾ ಅವರಿಗೆ ತುಂಬಾ ಇಷ್ಟವಂತೆ..


ಚಲನಚಿತ್ರಗಳಲ್ಲಿ ಸುಧಾ ಅವರ ಆಸಕ್ತಿಯ ಬಗ್ಗೆ ಕೇಳಿದಾಗ, ಸುಧಾ ಅವರು "ನಾನು ಚಲನಚಿತ್ರಗಳನ್ನು ನೋಡುವುದನ್ನು ಇಷ್ಟಪಡುತ್ತೇನೆ, ನಾನು ಪುಣೆಯಲ್ಲಿದ್ದಾಗ ನನ್ನ ಸ್ನೇಹಿತ ಮತ್ತು ನಾನು ಪ್ರತಿದಿನ ಚಲನಚಿತ್ರಗಳನ್ನು ನೋಡಲು ನಿರ್ಧರಿಸಿದ್ದೆವು ಮತ್ತು ಆ ವರ್ಷದಲ್ಲಿ ನಾವು 365 ಚಲನಚಿತ್ರಗಳನ್ನು ನೋಡಿದ್ದೇವೆ” ಅಂತ ಹೇಳಿದರು.


“ನನ್ನ ಯೌವನದ ದಿನಗಳಲ್ಲಿ ನಾನು ದಿಲೀಪ್ ಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿದ್ದೆ. ಅವರಲ್ಲದೆ, ಶಾರುಖ್ ಖಾನ್ ನಟನೆಯ ವೀರ್ ಜಾರಾ ಮತ್ತು ಭಜರಂಗಿ ಭಾಯಿಜಾನ್ ಚಿತ್ರದಲ್ಲಿ ನಟಿಸಿರುವ ಸಲ್ಮಾನ್ ಖಾನ್ ಪಾತ್ರಗಳು ಇಷ್ಟ” ಅಂತ ಸುಧಾ ಅವರು ಹೇಳಿದರು.


ಎಂಜಿನಿಯರಿಂಗ್ ನಂತರ ಸುಧಾ ಮೂರ್ತಿ ಅವರಿಗೆ ಸಿಕ್ಕ ಸಂಬಳ 1500 ರೂಪಾಯಿ ಅಂತೆ


“1974 ರಲ್ಲಿ, ನನ್ನ ಸಂಬಳ 1500 ರೂಪಾಯಿ, ನನ್ನ ತಂದೆ ಪ್ರಾಧ್ಯಾಪಕ ಮತ್ತು ವೈದ್ಯರಾಗಿದ್ದರು ಮತ್ತು ಅವರ ಸಂಬಳ 500 ರೂಪಾಯಿ ಮತ್ತು ನಾರಾಯಣ್ ಅವರ ಸಂಬಳ 1000 ರೂಪಾಯಿಯಾಗಿತ್ತು. ಇತರ ವೃತ್ತಿಗಳಿಗೆ ಹೋಲಿಸಿದರೆ ಎಂಜಿನಿಯರ್ ಗಳು ಆಗ ಹೆಚ್ಚಿನ ಸಂಬಳವನ್ನು ಹೊಂದಿದ್ದರು” ಅಂತಾರೆ ಸುಧಾ.

top videos
    First published: