News18 India World Cup 2019

ಯಶ್​ ಅಭಿನಯದ 'ಮೈ ನೇಮ್​ ಇಸ್​ ಕಿರಾತಕ' ಸಿನಿಮಾಕ್ಕೆ ಸಿಕ್ಕಿತು ಕಿಕ್​ ಸ್ಟಾರ್ಟ್​..!

news18
Updated:August 28, 2018, 6:07 PM IST
ಯಶ್​ ಅಭಿನಯದ 'ಮೈ ನೇಮ್​ ಇಸ್​ ಕಿರಾತಕ' ಸಿನಿಮಾಕ್ಕೆ ಸಿಕ್ಕಿತು ಕಿಕ್​ ಸ್ಟಾರ್ಟ್​..!
news18
Updated: August 28, 2018, 6:07 PM IST
ನ್ಯೂಸ್ 18 ಕನ್ನಡ 

ಎರಡೂವರೆ ವರ್ಷ ಕಳೆದ ಮೇಲೆ 'ಕೆಜಿಎಫ್​' ಸಿನಿಮಾದ ನಂತರ ರಾಕಿಂಗ್​ ಸ್ಟಾರ್​ ಯಶ್​ ಈಗ ಮತ್ತೊಂದು ಸಿನಿಮಾಗೆ ಚಾಲನೆ ನೀಡಿದ್ದಾರೆ. ಇತ್ತೀಚೆಗಷ್ಟೆ ಈ ಹೊಸ ಸಿನಿಮಾಗಾಗಿಯೇ ಯಶ್​ ತಮ್ಮ ಗಡ್ಡಕ್ಕೆ ಕತ್ತರಿ ಹಾಕಿಕೊಂಡರು.

`ಮೈ ನೇಮ್ ಈಸ್ ಕಿರಾತಕ’ ಸಿನಿಮಾಗಾಗಿ ಸಲಕ ಸಿದ್ಧತೆ ಮಾಡಿಕೊಂಡಿರುವ ಯಶ್​, ವರಮಹಾಲಕ್ಷ್ಮೀ ಹಬ್ಬದಂದೇ ಈ ಸಿನಿಮಾಗೆ ಚಾಲನೆ ನೀಡಿದರು. ಹೌದು ರಾಕಿಂಗ್ ಸ್ಟಾರ್ ಯಶ್ ನಾಯಕನಟರಾಗಿ ಅಭಿನಯಿಸುತ್ತಿರುವ `ಮೈ ನೇಮ್ ಈಸ್ ಕಿರಾತಕ` ಚಿತ್ರದ ಮುಹೂರ್ತ ಸಮಾರಂಭ ವರಮಹಾಲಕ್ಷ್ಮೀ ಹಬ್ಬದ ದಿನದಂದು ಚೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಮೋದಿ ಆಸ್ಪತ್ರೆ ಬಳಿಯ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ದೇವರ ಮೇಲೆ ಚಿತ್ರಿಸಲಾದ ಮೊದಲ ಸನ್ನಿವೇಶದ ಚಿತ್ರೀಕರಣಕ್ಕೆ ಯಶ್ ಕ್ಯಾಮೆರಾ ಚಾಲನೆ ಮಾಡಿದರು.


ಕನ್ನಡ ಚಿತ್ರರಂಗದಲ್ಲಿ ಸಾಕಷ್ಠು ಯಶಸ್ವಿ ಚಿತ್ರಗಳನ್ನು ನಿರ್ಮಾಣ ಮಾಡಿರುವ ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು `ದಿಲ್‍ವಾಲ` ಅನಿಲ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಸುಧಾಕರ್ ಎಸ್. ರಾಜ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ.

ಸೆಪ್ಟೆಂಬರ್ 3ರಿಂದ ಚಿತ್ರಕ್ಕೆ ಮಂಡ್ಯ ಸುತ್ತಮುತ್ತ ಮೊದಲ ಹಂತದ ಚಿತ್ರೀಕರಣ ಆರಂಭವಾಗಲಿದೆ. ದ್ವಿತೀಯ ಹಂತದ ಚಿತ್ರೀಕರಣ ದುಬೈನಲ್ಲಿ ನಡೆಯಲಿದೆ. 'ನಂದಾ ಲವ್ಸ್​ ನಂದಿತಾ' ಸಿನಿಮಾದ ಶ್ವೇತಾ ಈ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
Loading...

 
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...