ಸ್ವಾಮಿ ನಿತ್ಯಾನಂದ ಯಾರಿಗೆ ತಿಳಿದಿಲ್ಲ ಹೇಳಿ? ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದಗೆ ಅಂಟಿಕೊಂಡಿರುವ ವಿವಾದಗಳು ಒಂದೆರಡಲ್ಲ. ಸದ್ಯ ಕೈಲಾಸವಾಸಿಯಾಗಿರುವ ನಿತ್ಯಾನಂದ (Swami Nithyananda) ತನ್ನನ್ನು ತಾನೇ ದೇವರ ಅಪರಾವತಾರ ಎಂದು ಬಿಂಬಿಸಿಕೊಳ್ಳುತ್ತಾನೆ. ಸದಾ ವಿವಾದದ ಕೇಂದ್ರಬಿಂದುವೇ ಆಗಿರುವ ನಿತ್ಯಾನಂದನ ಕುರಿತು ಇದೀಗ My Daughter Joined a Cult ಎಂಬ ಡಾಕ್ಯೂ ಸಿರೀಸ್ (Docu Series) ಬಿಡುಗಡೆಯಾಗಿದೆ. ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಕುರಿತಾದ ಡಾಕ್ಯೂ ಸರಣಿ My Daughter Joined a Cult ಡಿಸ್ಕವರಿ+ ನಲ್ಲಿ ಬಿಡುಗಡೆಯಾಗಿದೆ. VICE ಸ್ಟುಡಿಯೋಸ್ನಿಂದ ನಿರ್ಮಿಸಲ್ಪಟ್ಟ ಸರಣಿಯು ಜೂನ್ 2 ರಿಂದ OTT ಪ್ಲಾಟ್ಫಾರ್ಮ್ನಲ್ಲಿ ಸ್ಟ್ರೀಮ್ ಆಗಲು ಪ್ರಾರಂಭಿಸಿದೆ. ಇದು ಹಿಂದಿ, ತಮಿಳು, ತೆಲುಗು, ಇಂಗ್ಲೀಷ್, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಲಭ್ಯವಿದೆ.
ಡಿಸ್ಕವರಿ+ ನ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್ ಮೈ ಡಾಟರ್ ಜಾಯ್ನ್ಡ್ ಎ ಕಲ್ಟ್ನ ಟ್ರೈಲರ್ ಅನ್ನು ಹಂಚಿಕೊಂಡಿದೆ. "ಮಿಲಿಯನ್ಗಳಿಂದ ದ್ವೇಷಿಸಲ್ಪಟ್ಟ ಮಿಲಿಯನ್ಗಳಿಂದ ಪ್ರೀತಿಸಲ್ಪಟ್ಟವರು ಅವರು ಯಾರು? ಗಾಡ್ಮ್ಯಾನ್ ಅಥವಾ ಕಾನ್ಮ್ಯಾನ್? My Daughter Joined a Cult ಡಿಸ್ಕವರಿ + ನಲ್ಲಿ ವೀಕ್ಷಿಸಿ. ಜೂನ್ 2 ರಂದು, ಡಿಸ್ಕವರಿ + ನಲ್ಲಿ ಮಾತ್ರ ಎಂದು ಟ್ರೇಲರ್ನ್ನು ಹಂಚಿಕೊಳ್ಳಲಾಗಿದೆ.
ಮೂರು ಸಂಚಿಕೆಯ ಡಾಕ್ಯೂ ಸಿರೀಸ್ ಮೂರು ಸಂಚಿಕೆಗಳ ಸರಣಿಯು ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದನ ಕುರಿತು ಆತನ ಮಾಜಿ ಭಕ್ತರು ಮಾಡಿರುವ ಆರೋಪಗಳ ಪಟ್ಟಿಯನ್ನು ಒಳಗೊಂಡಿದೆ. ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ತನ್ನ ಭಕ್ತರನ್ನು ತನ್ನ ಆಶ್ರಮ ಮತ್ತು ಗುರುಕುಲ ಟ್ರಸ್ಟ್ ನಿತ್ಯಾನಂದ ಧ್ಯಾನಪೀಠಕ್ಕೆ ಆಮಿಷವೊಡ್ಡುವ ಸೇರುವಂತೆ ಮಾಡಿ ವಂಚನೆ ನಡೆಸಿದ್ದ ಎಂದು ಡಾಕ್ಯೂ ಸಿರೀಸ್ನಲ್ಲಿ ಆತನ ಹಲವು ಮಾಜಿ ಭಕ್ತರು ಆರೋಪ ಮಾಡಿದ್ದಾರೆ.
ನಿತ್ಯಾನಂದನ ಜೀವನದಲ್ಲಿ ಏನೇನಾಗಿತ್ತು? ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದನ ಮಾಜಿ ಭಕ್ತರು, ವಕೀಲರು, ಪತ್ರಕರ್ತರು ಮತ್ತು ಆತನ ಆಶ್ರಮದ ಕಾರ್ಯಕರ್ತರು ಡಾಕ್ಯುಮೆಂಟ್ ಸರಣಿಯಲ್ಲಿ ಹಲವಾರು ಸಾಕ್ಷ್ಯಗಳೊಂದಿಗೆ ನಿತ್ಯಾನಂದನ ಜೀವನದ ಏರಿಳಿತಗಳ ನಿರೂಪಣೆಯನ್ನು ಪ್ರಸ್ತುತಪಡಿಸಿದ್ದಾರೆ.
ಈ ಡಾಕ್ಯೂ ಸಿರೀಸ್ನಲ್ಲಿ ಪತ್ರಕರ್ತರು ಸೇರಿದಂತೆ ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದನ ಮಾಜಿ ಭಕ್ತರ ಸಂದರ್ಶನಗಳೂ ಸೇರಿವೆ. ಅವರಲ್ಲಿ ದಿ ನ್ಯೂಸ್ಮಿನಿಟ್ ಸಂಸ್ಥಾಪಕಿ ಧನ್ಯಾ ರಾಜೇಂದ್ರನ್ ಅವರು ಟೈಮ್ಸ್ ನೌನಲ್ಲಿ ಕೆಲಸ ಮಾಡುತ್ತಿದ್ದಾಗ, ತಲೆಮರೆಸಿಕೊಂಡಿದ್ದ ನಿತ್ಯಾನಂದನನ್ನು ಪತ್ತೆ ಹಚ್ಚಿದ ಘಟನೆಯೂ ಒಳಗೊಂಡಿದೆ. ಹೀಗಾಗಿ ಈ ಡಾಕ್ಯೂ ಸಿರೀಸ್ ಮಹತ್ವ ಗಳಿಸಿದೆ.
ಸ್ವಾಮಿ ನಿತ್ಯಾನಂದ ಸ್ಥಾಪಿಸಿರುವ ಕೈಲಾಸವು ತನ್ನದೇ ಆದ ಧ್ವಜ, ಕರೆನ್ಸಿ ಎಲ್ಲವನ್ನೂ ಹೊಂದಿದೆ. ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಮತ್ತು ಆತನ ಅನುಯಾಯಿಗಳು ನಿಯಮಿತವಾಗಿ ಅವರ ಅಧಿಕೃತ ಯೂಟ್ಯೂಬ್ ಚಾನೆಲ್ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತಾರೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ