The Kerala Story: ದಿ ಕೇರಳ ಸ್ಟೋರಿ ಶೋ ನಡೆಯುವಾಗಲೇ ಥಿಯೇಟರ್​ನಲ್ಲಿ ಜಗಳ!

ದಿ ಕೇರಳ ಸ್ಟೋರಿ ಸಿನಿಮಾ

ದಿ ಕೇರಳ ಸ್ಟೋರಿ ಸಿನಿಮಾ

The Kerala Story: ಯುಕೆ ಸಿನಿಮಾ ವೀಕ್ಷಣೆ ವೇಳೆ ಮುಸ್ಲಿಂ ಕಾರ್ಯಕರ್ತರು ಹಾಗೂ ಪ್ರೇಕ್ಷಕರ ಮಧ್ಯೆ ಥಿಯೇಟರ್ ಒಳಗೆಯೇ ಜಗಳ ನಡೆದಿದೆ.

  • News18 Kannada
  • 3-MIN READ
  • Last Updated :
  • New Delhi, India
  • Share this:

ಬಾಲಿವುಡ್ ನಟಿ ಆದಾ ಶರ್ಮಾ (Adah Sharma) ಅಭಿನಯದ ವಿವಾದಾತ್ಮಕ ಸಿನಿಮಾ ದಿ ಕೇರಳ ಸ್ಟೋರಿ (The Kerala Story) ಕುರಿತು ಬಹಳಷ್ಟು ಅಪ್ಡೇಟ್ ಬರುತ್ತಲೇ ಇದೆ. ನಿರ್ದೇಶಕ ಸುದಿಪ್ತೋ ಸೆನ್ (Sudipto Sen) ಅವರ ನಿರ್ದೇಶನದ ವಿಪುಲ್ ಶಾ ನಿರ್ಮಿಸಿದ ದಿ ಕೇರಳ ಸ್ಟೋರಿ ಸಿನಿಮಾ ಯುಕೆಯಲ್ಲಿ (UK) ಮೇ 19ರಂದು ಪ್ರದರ್ಶನವಾಗಿದೆ. ಆದರೆ ಸಿನಿಮಾ ಪ್ರದರ್ಶನಕ್ಕೆ ಮುಸ್ಲಿಂ ಕಾರ್ಯಕರ್ತರು ಅಡ್ಡಿಪಡಿಸಿದ್ದು ಪ್ರೇಕ್ಷಕರ ನಡುವೆ ಜಗಳ ನಡೆಯಿತು. ದಿ ಕೇರಳ ಸ್ಟೋರಿ ಶೋಗಳು ಕಳೆದವಾರವೇ ಯುಕೆನಲ್ಲಿ ಕ್ಯಾನ್ಸಲ್ (Cancel) ಆಗಿದೆ. ಬಿಬಿಎಫ್​ಸಿಯಿಂದ ಏಜ್ ಕ್ಲಾಸಿಫಿಕೇಷನ್ ಸಿಗದ ಕಾರಣ ಸಿನಿಮಾ ಪ್ರದರ್ಶನ ರದ್ದುಪಡಿಸಲಾಗಿತ್ತು. ವರದಿಯ ಪ್ರಕಾರ, ಚಿತ್ರಕ್ಕೆ '18' ರೇಟಿಂಗ್ ಜೊತೆಗೆ ಚಿತ್ರವನ್ನು ವೀಕ್ಷಿಸುವವರಿಗೆ ವಿವರವಾದ ವಿಷಯ ಸಲಹೆಯನ್ನು ನೀಡಲು ಸೂಚಿಸಲಾಗಿತ್ತು.


ಇದೀಗ ಯುಕೆ ಸಿನಿಮಾ ಪ್ರದರ್ಶನದ ವೇಳೆ ನಡೆದ ಘಟನೆಯ ವಿಡಿಯೋ ಎಲ್ಲಾ ಕಡೆಗಳಲ್ಲಿ ವೈರಲ್ ಆಗಿದೆ. ಶಕೀಲ್ ಅಫ್ಸರ್ ನೇತೃತ್ವದಲ್ಲಿ ಮುಸ್ಲಿಂ ಕಾರ್ಯಕರ್ತರು ಪ್ರದರ್ಶನದ ಮಧ್ಯೆ ತೊಂದರೆ ಮಾಡಿರುವ ವಿಡಿಯೋ ಹರಿದಾಡುತ್ತಿದೆ. ಥಿಯೇಟರ್​ ಒಳಗೆಯೇ ಪರಸ್ಪರ ಬೈದುಕೊಂಡು, ಟೀಕಿಸಿಕೊಂಡು ಜಗಳವಾಡುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಆದರೆ ಪ್ರೇಕ್ಷಕರು ಕೂಡಾ ತಿರುಗಿ ವಾದ ಮಾಡಿದ ಕಾರಣ ಸ್ವಲ್ಪ ಹೊತ್ತು ಕಳೆದಾಗ ಕಾರ್ಯಕರ್ತರು ಥಿಯೇಟರ್​ನಿಂದ ಹೊರಬಂದರು.


ಮೇ 20ರಂದು ಶಕೀಲ್ ಎಂಬವರು ವಿಡಿಯೋ ರೀ ಶೇರ್ ಮಾಡಿದ್ದಾರೆ. ಟ್ವಿಟರ್​​ನಲ್ಲಿ ಕಮೆಂಟ್ ಮಾಡಿದ ನೆಟ್ಟಿಗರು ಯುಕೆಯಲ್ಲಿ ಬಿಜೆಪಿ ಅಥವಾ ಹಿಂದುತ್ವದ ಪ್ರೊಪಗಾಂಡಕ್ಕೆ ಜಾಗವಿಲ್ಲ ಎಂದು ಎಂದಿದ್ದಾರೆ. ಕಳೆದ ವಾರ, ಯುಕೆಯಲ್ಲಿ 31 ಚಿತ್ರಮಂದಿರಗಳಲ್ಲಿ ನಿಗದಿಯಾಗಿದ್ದ ದಿ ಕೇರಳ ಸ್ಟೋರಿ ಹಿಂದಿ, ತಮಿಳು ಮತ್ತು ಮಲಯಾಳಂನಲ್ಲಿ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಸಿನಿಮಾ ವೆಬ್‌ಸೈಟ್‌ಗಳು ಟಿಕೆಟ್ ಮಾರಾಟವನ್ನು ನಿಲ್ಲಿಸಿದವು. ರದ್ದಾದ ಪ್ರದರ್ಶನಗಳಿಗೆ ಮರುಪಾವತಿಯನ್ನು ಪ್ರಾರಂಭಿಸಿದವು.


ಇದನ್ನೂ ಓದಿ: Bollywood Actresses: ದೀಪಿಕಾ ಪಡುಕೋಣೆ ಅಜ್ಜಿ ಆದ್ರೆ ಹೀಗಿರ್ತಾರೆ!


ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ದಿ ಕೇರಳ ಸ್ಟೋರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೊಂದು ಬೋಗಸ್ ಸ್ಟೋರಿ ಎಂದಿದ್ದಾರೆ. ಇದು ಸಂಘ ಪರಿವಾರದ ಸುಳ್ಳಿನ ಕಾರ್ಖಾನೆಯ ಪ್ರಾಡಕ್ಟ್ ಎಂದಿದ್ದಾರೆ ಕೇರಳ ಸಿಎಂ. ಪಶ್ಚಿಮ ಬಂಗಾಳ ಈ ಸಿನಿಮಾವನ್ನು ನಿಷೇಧಿಸಿದೆ. ರಾಜ್ಯದಲ್ಲಿ ಯಾವುದೇ ರೀತಿಯ ದ್ವೇಷ, ಗಲಾಟೆ, ಹಿಂದೆಯನ್ನು ಅವಾಯ್ಡ್ ಮಾಡಿ ರಾಜ್ಯದ ಶಾಂತಿ ಕಾಪಾಡಲು ಈ ನಿರ್ಧಾರ ಎಂದು ಹೇಳಿದೆ ಪಶ್ಚಿಮ ಬಂಗಾಳ.




ಸಿನಿಮಾ ರಿಲೀಸ್ ಬಗ್ಗೆ ಸರ್ಕಾರ ಹೈ ಅಲರ್ಟ್ ಇಟ್ಟ ನಂತರ ತಮಿಳುನಾಡಿನ ಥಿಯೇಟರ್​ನಲ್ಲಿಯೂ ಸಿನಿಮಾ ರಿಲೀಸ್ ಹಿಂಪಡೆಯಲಾಯಿತು. ಈ ಸಿನಿಮಾದ ವಿರುದ್ಧ ಇರುವ ದೊಡ್ಡ ಆರೋಪ ಏನೆಂದರೆ ಇದು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಹುಟ್ಟಿಸುತ್ತದೆ ಎಂಬುದಾಗಿತ್ತು.


ಇನ್ನು ಚಿತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಮಾತನಾಡಿದ್ದಾರೆ. ರಾಜ್ಯಕ್ಕೆ ಮೊನ್ನೆ ಆಗಮಿಸಿದ್ದ ಮೋದಿ ತಮ್ಮ ಭಾಷಣದಲ್ಲಿ ಚಲನಚಿತ್ರವನ್ನು ಪ್ರಸ್ತಾಪಿಸಿದರು ಮತ್ತು ಸಿನಿಮಾ ಸಮಾಜದಲ್ಲಿ ಭಯೋತ್ಪಾದನೆಯ ಪರಿಣಾಮಗಳನ್ನು ಬಹಿರಂಗಪಡಿಸಲು ಪ್ರಯತ್ನಿಸಿದೆ ಎಂದರು.




‘ದಿ ಕೇರಳ ಸ್ಟೋರಿ' ಸಿನಿಮಾದಲ್ಲಿ ಆತಂಕವಾದದ ಮತ್ತೊಂದು ಮುಖವನ್ನು ಪರಿಚಯಿಸಲಾಗಿದೆ. ಇದು ನೈಜ ಘಟನೆಯನ್ನು ಆಧರಿಸಿದ ಸಿನಿಮಾ. ಆದರೆ, ಕಾಂಗ್ರೆಸ್ ಪಕ್ಷ ಈ ಕುರಿತು ಮಾತನಾಡದೇ ಸಿನಿಮಾವನ್ನು ನಿಷೇಧ ಮಾಡಬೇಕು ಎಂದು ಆತಂಕವಾದದ ಪರವಾಗಿಯೇ ಮಾತನಾಡುತ್ತಿದೆ. ಕಾಂಗ್ರೆಸ್ ಪಕ್ಷವು ಈಗ ಚಲನಚಿತ್ರವನ್ನು ನಿಷೇಧಿಸಲು ಮತ್ತು ಭಯೋತ್ಪಾದಕ ಅಂಶಗಳನ್ನು ಬೆಂಬಲಿಸಲು ಪ್ರಯತ್ನಿಸುತ್ತಿದೆ" ಎಂದರು.


‌ದಕ್ಷಿಣ ರಾಜ್ಯದಿಂದ ಐಸಿಸ್ ನೇಮಕಾತಿ ವಿವಾದ ಸಾಧ್ಯವಿಲ್ಲ ಎಂದು ಹೇಳಿರುವ ಬಿಜೆಪಿ ಚಿತ್ರದ ಬೆಂಬಲಕ್ಕೆ ನಿಂತಿದೆ. “ಕೇರಳದಲ್ಲಿ ಐಸಿಸ್ ಮಹತ್ವದ ಅಸ್ತಿತ್ವವನ್ನು ಹೊಂದಿದೆ. ನೀವು ರಾಜ್ಯದಿಂದ ಐಸಿಸ್ ನೇಮಕಾತಿಯನ್ನು ನಿರಾಕರಿಸಲು ಸಾಧ್ಯವಿಲ್ಲ" ಎಂದು ಕೇರಳ ಬಿಜೆಪಿ ಮುಖ್ಯಸ್ಥ ಕೆ ಸುರೇಂದ್ರನ್ ಹೇಳಿದ್ದಾರೆ

First published: