Kamal Hassan: ಕಮಲ್ ಹಾಸನ್​ರನ್ನು ಬೆಸ್ತು ಬೀಳಿಸಿದ ಇಳಯರಾಜ: ರೆಟ್ರೋ ಸಂಗೀತ ಸಂಯೋಜನೆ ಕತೆಯ ವಿಡಿಯೋ ವೈರಲ್!

ತಿರುವಳ್ಳುವರ್ ತಮಿಳಿನ ಮಹಾನ್ ಕವಿ. ತಿರುಕುರಲ್​​ನಂತಹ ಸಂಯೋಜನೆಗಳಿಗೆ ಖ್ಯಾತಿ ಗಳಿಸಿದವರು. ಇನ್ನು ಈ ವಿಡಿಯೋ ಅಪಾರ ಮೆಚ್ಚುಗೆ, ಪ್ರಶಂಸೆ ಗಳಿಸುತ್ತಿದ್ದು, ಜನರನ್ನು ರಂಜಿಸುತ್ತಿದೆ. ಅಷ್ಟೇ ಅಲ್ಲದೇ ಈ ಹಾಡು ಪ್ರತಿ ಕೇಳುಗನಿಗೆ ಸಾಕಷ್ಟು ನೆನಪುಗಳನ್ನು ತೆರೆದಿಟ್ಟಿದೆ.

ಇಳಯರಾಜ

ಇಳಯರಾಜ

  • Share this:
    ತಮಿಳುನಾಡಿನ ಸೂಪರ್​ಸ್ಟಾರ್​ ಕಮಲ್​ ಹಾಸನ್ (Tamil Nadu Super Star Kamal Hassan) ಸಂಗೀತ ಮಾಂತ್ರಿಕ ಇಳಯರಾಜ (Musician Ilayaraja) ಅವರ ಸ್ಟುಡಿಯೋಗೆ ಅಚ್ಚರಿಯ ಭೇಟಿ ನೀಡಿದ್ದಾರೆ. ಸದ್ಯ ಈ ಸುದ್ದಿ ಎಲ್ಲೆಡೆ ವೈರಲ್​ ಆಗಿದ್ದು, ಕಮಲ್ ಮತ್ತು ಇಳಯರಾಜ ಅಭಿಮಾನಿಗಳಲ್ಲಿ ನಿರೀಕ್ಷೆಗಳನ್ನು ಹುಟ್ಟು ಹಾಕುತ್ತಿವೆ. ಚೆನ್ನೈನ ಕೋಡಂಬಕ್ಕಂ ಸ್ಟುಡಿಯೋದಲ್ಲಿ ಮಂಗಳವಾರ ಕಮಲ್ ಹಾಸನ್ - ಇಳಯರಾಜ ಅವರ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ.ಇದೇ ಸಮಯದಲ್ಲಿ ಇಳಯ ರಾಜ ಮಗ ಯುವನ್ ಶಂಕರ್​ ರಾಜ ಟ್ವಿಟ್ಟರ್​​ನಲ್ಲಿ ತಮ್ಮ ತಂದೆಯವರು ಮಾತನಾಡಿರುವ ಹೊಸ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.

    ಸಂಗೀತ ಮಾಂತ್ರಿಕ ಇಳಯರಾಜ ಒಂದು ಹಾಸ್ಯದ ಸನ್ನಿವೇಶದ ಬಗ್ಗೆ ವಿವರಣೆ ನೀಡುವ ಮೂಲಕ ಈ ವಿಡಿಯೋ ಆರಂಭವಾಗುತ್ತದೆ. 'ಮೈಕೆಲ್ ಮದನ ಕಾಮ ರಾಜನ್' ಚಿತ್ರದ 'ಪರ್ ವಾಚಾಲುಂ ವೈಕ್ಕಮ' ಹಾಡಿನ ರೆಕಾರ್ಡಿಂಗ್ ಸಮಯದಲ್ಲಿ ನಡೆದ ಒಂದು ಸನ್ನಿವೇಶವನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಇನ್ನು, ಈ ಹಾಡಿಗೆ ದಿವಂಗತ ಹಿರಿಯ ಸಾಹಿತಿ ವಾಲಿಯವರ ಸಾಹಿತ್ಯವಿದೆ.

    ಟೈಂ ಟ್ರಾವೆಲ್ ಕಾಮಿಡಿ 'ಡಿಕ್ಕಿಲೋನಾ' ಸಿನಿಮಾವೂ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿತ್ತು. ಸಂತಾನಮ್ ಮತ್ತು ಅನಘ ನಟನೆಯ ಈ ಚಿತ್ರ ಕಾಲಿವುಡ್​ನಲ್ಲಿ ಸಖತ್ ಸದ್ದು ಮಾಡಿತ್ತು. ಈ ಸಿನಿಮಾಗೆ ಯುವನ್ ಶಂಕರ್​​​ ಹಾಡನ್ನು ಸಂಯೋಜಿಸಿದ್ದರು. ಹಳೆಯ ಹಾಡಿನ ರೀಮಿಕ್ಸ್ ಆವೃತ್ತಿ ‘ಪರ್ ವಾಚಾಲುಂ ವೈಕ್ಕಮಾ ಪೊನಾಲಮ್’ ಶೀರ್ಷಿಕೆಯನ್ನು ಒಳಗೊಂಡ ಈ ಹಾಡು ಯೂಟ್ಯೂಬ್​ನಲ್ಲಿ 1 ಕೋಟಿಗೂ ಅಧಿಕ ವೀಕ್ಷಣೆ ಗಳಿಸಿ ಮೆಚ್ಚುಗೆಗೆ ಪಾತ್ರವಾಗಿದೆ.

    ಇನ್ನು, ಇದೇ ಹಾಡಿನ ಬಗ್ಗೆ ಇಳಯರಾಜ ಅಪರೂಪದ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಈ ರೀಮಿಕ್ಸ್ ಹಾಡಿನ ಮೂಲ ಗೀತೆಯ ಬಗ್ಗೆ ಆಸಕ್ತಿದಾಯಕ ಸಂಗತಿಗಳ ಬಗ್ಗೆ ವಿವರಿಸಿದ್ದಾರೆ. 'ಅಂದು ಸಿಂಗೀತಂ ಶ್ರೀನಿವಾಸ ರಾವ್ ಮತ್ತು ಕಮಲ್ ಹಾಸನ್​ ಕಂಪೋಸಿಂಗ್ ರೂಂನಲ್ಲಿ ಕಾಯುತ್ತಿದ್ದರು. ಬಹಳ ಹೊತ್ತು ರಾಗದ ಬಗ್ಗೆ ಚರ್ಚಿಸಿದ ನಂತರ, ನಾವು ಕಡೆಯದಾಗಿ ಒಂದು ಆಲೋಚನೆಗೆ ಬಂದೆವು. ಅದನ್ನು ಬರೆಯಲು ವಾಲಿ ಸರ್ ಅವರನ್ನು ಕೇಳಿದೆವು' ಎಂದು ಇಳಯ ರಾಜ ಹೇಳುತ್ತಾರೆ.

    'ವಾಲಿ ಸರ್ ನನಗೆ ಟ್ಯೂನ್ ಹೇಳುವಂತೆ ಹೇಳಿದರು. ನಾನು ಹಾಗೆ ಒಂದು ರಾಗವನ್ನು ಹಮ್ಮಿಂಗ್ ಮಾಡಿದೆ. ಆಗ ವಾಲಿ ಸರ್ ಏನಪ್ಪಾ ಇದು ಟುಟ್ಟಾ.. ಟುಟ್ಟಾ.. ಅಂದರೆ ಹೇಗಪ್ಪಾ ಸಾಹಿತ್ಯ ಬರೆಯೋದು? ಎಂದು ಕೇಳಿದರು. ಸಾರ್​ ಈ ಟ್ಯೂನ್​ಗೆ ಈಗಾಗಲೇ ಸಾಹಿತ್ಯ ಬರೆದಾಗಿದೆ ಎಂದು ಹೇಳಿದೆ. ಇದನ್ನು ಕೇಳಿದ ಸಿಂಗೀತಂ, ಕಮಲ್ ಹಾಸನ್ ಮತ್ತು ವಾಲಿಯವರು ಗೊಂದಲಕ್ಕೆ ಒಳಗಾದರು. ಹೌದು ಸರ್ ತಿರುವಳ್ಳುವರ್ ಸಾಹಿತ್ಯವೊಂದು ನಾನು ಹೇಳಿದ ಟ್ಯೂನ್​​ನಂತೆಯೇ ಇದೆ. ನೀವು ಆ ರೀತಿ ಪದ ಸಂಯೋಜಿಸಿ ಕೊಡಿ ಎಂದೆ, ಹಾಗೆ ಹುಟ್ಟಿದ್ದೇ ಈ ಹಾಡು' ಎನ್ನುವ ರೆಟ್ರೋ ಸ್ಟೋರಿಯನ್ನು ಖುಷಿಯಿಂದಲೇ ಹಂಚಿಕೊಂಡಿದ್ದಾರೆ ಇಳಯರಾಜ.



    ತಿರುವಳ್ಳುವರ್ ತಮಿಳಿನ ಮಹಾನ್ ಕವಿ. ತಿರುಕುರಲ್​​ನಂತಹ ಸಂಯೋಜನೆಗಳಿಗೆ ಖ್ಯಾತಿ ಗಳಿಸಿದವರು. ಇನ್ನು ಈ ವಿಡಿಯೋ ಅಪಾರ ಮೆಚ್ಚುಗೆ, ಪ್ರಶಂಸೆ ಗಳಿಸುತ್ತಿದ್ದು, ಜನರನ್ನು ರಂಜಿಸುತ್ತಿದೆ. ಅಷ್ಟೇ ಅಲ್ಲದೇ ಈ ಹಾಡು ಪ್ರತಿ ಕೇಳುಗನಿಗೆ ಸಾಕಷ್ಟು ನೆನಪುಗಳನ್ನು ತೆರೆದಿಟ್ಟಿದೆ. 'ಮೈಕೆಲ್ ಮದನ ಕಾಮ ರಾಜನ್' ಚಿತ್ರದ 'ಪರ್ ವಾಚಾಲುಂ ವೈಕ್ಕಮ' ಹಾಡಿನ ರೆಕಾರ್ಡಿಂಗ್ ಸಮಯದಲ್ಲಿ ನಡೆದ ಒಂದು ಸನ್ನಿವೇಶವನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
    First published: