ಕೆಜಿಎಫ್ 2 (KGF 2) ಸಿನಿಮಾ (Film) ಇಂದಿಗೆ ನೂರು ದಿನಗಳನ್ನು ಪೂರೈಸಿದೆ. ಈ ಸಿನಿಮಾದ ಹಾಡುಗಳು ಚಿತ್ರ ಹಿಟ್ ಆಗಲು ಮುಖ್ಯ ಕಾರಣ ಎನ್ನಬಹುದು. ಈ ಸಿನಿಮಾಗೆ ಸಂಗೀತ ನೀಡಿದ್ದ ಸಂಗೀತ ನಿರ್ದೇಶಕ ರವಿ ಬಸ್ರೂರು (Ravi Basrur) ಅವರಿಗೆ ಈಗ ದಕ್ಷಿಣ ಭಾರತದ (South India) ಬೇರೆ ಭಾಷೆಗಳಲ್ಲಿ ಬೇಡಿಕೆ ಹೆಚ್ಚಾಗಿದ್ದು, ಮಲಯಾಳಂ (Malayalam) ಸ್ಟಾರ್ ನಟನ ಸಿನಿಮಾಗೆ ಸಂಗೀತ ನೀಡಲಿದ್ದಾರೆ ಎನ್ನುವ ಮಾಹಿತಿ ಇದೆ.
ಪೃಥ್ವಿರಾಜ್ ಸುಕುಮಾರನ್ ಜೊತೆ ಸಿನಿಮಾ
ಕನ್ನಡದಲ್ಲಿ ಕೆಜಿಎಫ್ ಸರಣಿ ಸಿನಿಮಾಗಳು ಮಾತ್ರವಲ್ಲದೇ, ಕನ್ನಡದ ಅನೇಕ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಈಗ ಕೆಜಿಎಫ್ 2 ಸಕ್ಸಸ್ ನಂತ ಬಾಲಿವುಡ್ನಿಂದ ಸಹ ಆಫರ್ ಬಂದಿದೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ಅಭಿನಯದ ಸಿನಿಮಾಗೆ ರವಿ ಸಂಗೀತ ನೀಡಲಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಈಗ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ಅವರ ಚಿತ್ರಕ್ಕೂ ರವಿ ಸಂಗೀತ ಸಂಯೋಜನೆ ಮಾಡಲಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿದೆ.
ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್ ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳತ್ತ ಮುಖ ಮಾಡಿರುವ ಹಾಗಿದೆ. ಅವರು ಪ್ರಶಾಂತ್ ನೀಲ್ ಅವರ ಸಲಾರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಇತ್ತು. ಸದ್ಯದ ಮಾಹಿತಿ ಪ್ರಕಾರ ಪೃಥ್ವಿರಾಜ್ ಸುಕುಮಾರನ್ ಅವರ ಕಾಳಿಯನ್ಗೆ ರವಿ ಬಸ್ರೂರ್ ಸಂಗೀತ ಸಂಯೋಜಿಸಲಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ರವಿ ಬಸ್ರೂರ್ ಅವರು ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿಯನ್ನು ಪ್ರಕಟಿಸಿದ್ದಾರೆ. ನಟ ಇನ್‌ಸ್ಟಾಗ್ರಾಮ್ ಕ್ಯಾಪ್ಷನ್ನಲ್ಲಿ, ಕಾಳಿಯನ್ ಸಿನಿಮಾ ತಂಡಕ್ಕೆ ರವಿ ಬಸ್ರೂರ್ ಅವರಿಗೆ ಸುಸ್ವಾಗತ! ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ನಿರ್ಮಾಪಕ ದಿಲ್ ರಾಜು ಬಗ್ಗೆ ನಾಗ ಚೈತನ್ಯ ಹೀಗಂದ್ರಾ? ಏನಿದು ಸುದ್ದಿ?
View this post on Instagram
ನಿರೀಕ್ಷೆ ಹುಟ್ಟಿಸಿದ ಸಿನಿಮಾ
ದುರದೃಷ್ಟವಶಾತ್ ಇತಿಹಾಸದ ಪುಸ್ತಕಗಳಲ್ಲಿ ಸ್ಥಾನ ಪಡೆಯದ ನಾಯಕ ಎಂದು ಕರೆಯಲ್ಪಡುವ ಮಹಾನ್ ಯೋಧ ಕುಂಜಿರಕೊಟ್ಟು ಕಾಳಿಯ ಕಥೆಯನ್ನು ಕಾಳಿಯನ್ ಎಂದು ಸಿನಿಮಾ ಮಾಡಲಾಗುತ್ತಿದೆ. ಕುಂಜಿರಕೊಟ್ಟು ಕಾಳಿ ವೇನಾಡ್ ಸಾಮ್ರಾಜ್ಯದ ಕಮಾಂಡರ್-ಇನ್-ಚೀಫ್ ಇರವಿಕ್ಕುಟ್ ಪಿಳ್ಳೈ ಅವರ ಆಪ್ತರಾಗಿದ್ದರು. ಇಂಥಹ ಅದ್ಭುತವಾದ ಕಥಾವಸ್ತುವನ್ನು ಆಧರಿಸಿ, ಉತ್ತಮ ಸಿನಿಮಾವನ್ನು ನೀಡುವ ಭರವಸೆಯನ್ನು ಚಿತ್ರತಂಡ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಸುಶ್ಮಿತಾ ಸೇನ್‌ನಿಂದ ಮಲೈಕಾ ಅರೋರಾವರೆಗೆ, ಗೋಲ್ಡ್ ಡಿಗ್ಗರ್ ಎಂದು ಟ್ರೋಲ್ ಆಗಿದ್ದ ನಟಿಯರಿವರು
ಪೃಥ್ವಿರಾಜ್ ಸುಕುಮಾರನ್ ಹೊರತಾಗಿ, ತಮಿಳು ನಟ ಸತ್ಯರಾಜ್ 'ಕಾಲಿಯಾನ್' ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾಗೆ ಛಾಯಾಗ್ರಹಣವನ್ನು ಸುಜಿತ್ ವಾಸುದೇವ್ ಮಾಡುತ್ತಿದ್ದಾರೆ. ಈ ಮಧ್ಯೆ, ಪೃಥ್ವಿರಾಜ್ ಸುಕುಮಾರನ್ ಅವರು ತಮ್ಮ ಯಶಸ್ವಿ ಸಿನಿಮಾಗಳ ಮೂಲಕ ವೃತ್ತಿಜೀವನದ ಉತ್ತುಂಗದಲ್ಲಿದ್ದಾರೆ. ಏಕೆಂದರೆ ಅವರು ಬ್ಯಾಕ್-ಟು-ಬ್ಯಾಕ್ ಸೂಪರ್ಹಿಟ್ ಚಿತ್ರಗಳನ್ನು ನೀಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ