ಪೇಜಾವರ ಶ್ರೀಗಳ(Pejavara Sri) ಬಗ್ಗೆ ನೀಡಿದ ಹೇಳಿಕೆಯೊಂದು ಈಗ ನಾದಬ್ರಹ್ಮ ಹಂಸಲೇಖ(Hansalekha) ಅವರಿಗೆ ಊರುಳಾಗಿ ಪರಿಣಮಿಸಿದೆ. .ಹಂಸಲೇಖ ವಿರುದ್ಧ ಹಲವು ಬ್ರಾಹ್ಮಣ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿವೆ. ಇತ್ತ ಪೊಲೀಸರು(Police) ಸಹ ಪೇಜಾವರ ಶ್ರೀಗಳ ಬಗ್ಗೆ ನೀಡಿದ ಹೇಳಿಕೆಯ ಕುರಿತು ಹಂಸಲೇಖ ಅವರ ವಿಚಾರಣೆ ನಡೆಸುತ್ತಿದ್ದಾರೆ.. ಇದಿಷ್ಟು ಸಾಲದು ಅಂತ ಕಿಡಿಗೇಡಿಗಳು ಹಂಸಲೇಖ ಅವರು ವಿವಾದಗಳಿಂದ ನೊಂದು ಹೋಗಿರುವ ಕಾರಣ ಅವರ ಆರೋಗ್ಯದಲ್ಲಿ(Health) ಏರುಪೇರಾಗಿದೆ ಎಂದು ಗುಲ್ಲೆಬ್ಬಿಸಿದ್ದಾರೆ.. ಹೀಗಾಗಿ ಹಂಸಲೇಖ ವಿರುದ್ಧ ಧ್ವನಿ ಎತ್ತುವವರು ಒಂದು ಕಡೆ. ಹಂಸಲೇಖ ಪರ ಬೆಂಬಲಕ್ಕೆ ನಿಂತವರು ಮತ್ತೊಂದು ಕಡೆ. ಹೀಗಾಗಿ ಇಬ್ಬರ ನಡುವೆ ವಾದ-ವಿವಾದಗಳು, ಪ್ರತಿಭಟನೆಗೆ ಹಂಸಲೇಖ ಕಾರಣರಾಗಿದ್ದರು. ಇಷ್ಟೆಲ್ಲಾ ನಡೆದ ಬಳಿಕ ಸೈಲೆಂಟ್ ಆಗಿದ್ದ ಹಂಸಲೇಖ ಸಂವಿಧಾನದ ಪಾಠ ಮಾಡಿದ್ದಾರೆ.
ಹಲವು ವಿವಾದಗಳ ಬಳಿಕ ಸಂವಿಧಾನದ ಪಾಠ ಮಾಡಿದ ಹಂಸಲೇಖ
ಪೇಜಾವರ ಶ್ರೀಗಳ ಬಗ್ಗೆ ನೀಡಿದ್ದ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡಿರುವ ಸಮಯದಲ್ಲಿ ವಿಚಾರಣೆ ಎಂದೆಲ್ಲಾ ಓಡಾಡಿದ್ದ ಹಂಸಲೇಖ ಒಂದೆರಡು ದಿನ ಸೈಲೆಂಟ್ ಆಗಿದ್ರು.. ಆದರೆಬಡವರ ಗೀತೆಯೊಂದರ ಬಗ್ಗೆ ಸವಿಸ್ತಾರವಾದ ಗೀತೆಯೊಂದನ್ನು ರಚಿಸಿ ಸಂವಿಧಾನದ ಪಾಠ ಮಾಡಿದ್ದಾರೆ. ಸದ್ಯ ಈ ಗೀತೆಯೀಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ :ಸರಿಗಮಪ’ ಶೋಗೆ ಹಂಸಲೇಖ ಗೈರು, ವಾಹಿನಿ ಹೇಳಿದ್ದು ಹೀಗೆ..!
ಸಂವಿಧಾನ ದಿನಕ್ಕಾಗಿ ರಚಿಸಿದ ಬಡವರ ಗೀತೆ
ನವೆಂಬರ್ 26ರಂದು 'ಸಂವಿಧಾನ ದಿವಸ'ವನ್ನು ಆಚರಿಸಲಾಗಿದೆ. ಇದರ ನೆನಪಿಗಾಗಿ ಹಂಸಲೇಖ ಅವರು ಭಾರತದ ಬೃಹತ್ ಸಂವಿಧಾನದ ಬಗ್ಗೆ ಗೀತೆ ರಚಿಸಿದ್ದಾರೆ ಎನ್ನಲಾಗಿದೆಇನ್ನು ಹಂಸಲೇಖ ಸಂವಿಧಾನದ ಬಗ್ಗೆ ಬರೆದ ಈ ಸಾಲುಗಳನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ತಾವೇ ಧ್ವನಿ ನೀಡಿ ಶೇರ್ ಮಾಡಿಕೊಂಡಿದ್ದಾರೆ. ಈ ಸಾಲುಗಳು ಈಗ ವೈರಲ್ ಆಗುತ್ತಿದ್ದು, ಎರಡು ದಿನಗಳ ಹಿಂದೆ ರಚಿಸಿದ ಈ ಗೀತೆಯ ಬಗ್ಗೆ ಚರ್ಚೆಯಾಗುತ್ತಿದೆ. . ಇದೇ ಗೀತೆಯೀಗ ಹಂಸಲೇಖ ಬೆಂಬಲಿಗರ ಮೆಚ್ಚುಗೆ ಗಳಿಸುತ್ತಿದೆ.
ಗೀತೆಯಲ್ಲಿದೆ ಸಂವಿಧಾನದ ಮಹತ್ವ
ಹಂಸಲೇಖ ಸಂವಿಧಾನ ಗೀತೆಯನ್ನು ರಚಿಸಿ, ಸಂವಿಧಾನದ ಮಹತ್ವವನ್ನು ಸಾರಿ ಹೇಳಿದ್ದಾರೆ. ಸಂವಿಧಾನದ ಬಗ್ಗೆ ಹಂಸಲೇಖ ಬರೆದ ಸಾಲುಗಳು ಹೀಗಿವೆ.
' ನಾನು:
ನೀನು:
ನಮಗಾಗಿರೋದೇ ಕಾನೂನು,
ನಾವು:
ನೀವು:
ಎಲ್ಲರೂ ಇದರಲ್ಲಿ ಕೂಡೆವು,
ಕೂಡೆವು:
ಬಾಳೆವು:
ಬಂಧುತ್ವವನು ಕಟ್ಟೇವು
ಜೀವನ ವಿಧಾನ ಯಾನ:
ವಿದ್ಯಾ ಪ್ರಧಾನ ಗಾನ:
ಬೃಹತ್ ಭಾರತದ ಬೃಹತ್ ಸಂವಿಧಾನ!
ಓ ಬಡವರ ಗೀತೆ,
ನೀ ಬಹುಜನ ಜಾತೆ!
ಅಕ್ಷರ ರೂಪದ
ಶಾಂತಿಯ ಧನಿಯ :
ಪ್ರಜಾಪ್ರಭುತ್ವದ institution
ವಂದೇ ಇಂಡಿಯನ್ constitution'..
ಇದನ್ನೂ ಓದಿ :ನನ್ನ ಹೇಳಿಕೆಯಿಂದ ಕೆಲಸದಲ್ಲೂ ನನಗೆ ಹಿನ್ನಡೆಯಾಗಿದೆ; ವಿಚಾರಣೆ ವೇಳೆ ಗದ್ಗದಿತರಾದ Hamsalekha
ಮತ್ತೆ ಭುಗಿಲೇಳುತ್ತಾ ವಿವಾದ..?
ದಿವಂಗತ ಪೇಜಾವರ ಶ್ರೀಗಳ ಬಗ್ಗೆ ಹೇಳಿಕೆ ನೀಡಿದ ಹಂಸಲೇಖ ವಿರುದ್ಧ ದೂರು ದಾಖಲಾಗಿದ್ದು, ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ. ಈ ಮೂಲಕ ತನಿಖೆಯನ್ನು ಪೊಲೀಸರು ಆರಂಭಿಸಿದ್ದಾರೆ. ತಮಗೆ ಬೇಕಿರುವ ಪ್ರಶ್ನೆಗಳನ್ನು ಕೇಳಿ ಹಂಸಲೇಖರಿಂದ ಉತ್ತರ ಪಡೆದಿದ್ದಾರೆ. ಅಗತ್ಯಬಿದ್ದರೆ ಮತ್ತೆ ಕರೆಯುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದರ ನಡುವೆ ಹಂಸಲೇಖ ಅವರು ರಚಿಸಿರುವ ಸಂವಿಧಾನ ಗೀತೆಯು ಮತ್ತೆ ವಿವಾದಗಳಿಗೆ ತುಪ್ಪ ಸುರಿಯುವ ಸಾಧ್ಯತೆ ಇದೆ ಎಂದು ಹಲವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ..
ಇನ್ನು ಪೇಜಾವರ ಶ್ರೀ ಕುರಿತು ಹಂಸಲೇಖ ನೀಡಿದ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಅವರ ಬಗ್ಗೆ ದಿನಕ್ಕೊಂದು ಮಾತುಗಳು ಕೇಳಿಬರುತ್ತಿವೆ.. ಅದರಲ್ಲೂ ಹಂಸಲೇಖ ಅವರು ತೀರ್ಪುಗಾರರಾಗಿ ನಡೆಸಿಕೊಡುತ್ತಿದ್ದ ಖಾಸಗಿ ವಾಹಿನಿಯ ಸರಿಗಮಪ ಶೋನಿಂದ ಮಹಾ ಗುರುಗಳ ಸ್ಥಾನದಿಂದ ಅವರು ಹೊರ ಬರಲಿದ್ದಾರೆ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದ್ದವು.. ಇದಕ್ಕೆಲ್ಲಾ ಖಾಸಗಿ ವಾಹಿನಿ ಬ್ರೇಕ್ ಹಾಕಿದೆ..
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ