Power Star Puneeth Rajkumar; ಬರ್ತ್ ಡೇ ಪಾರ್ಟಿಯಲ್ಲಿ ಅಪ್ಪು ಆರೋಗ್ಯ ಹೇಗಿತ್ತು? Guru Kiran ಹೇಳಿದ್ದೇನು?

ಪುನೀತ್ ಅವರು ಕಾರ್ಯಕ್ರಮದಿಂದ ಹೋದ ನಂತರವೂ ಅವರ ಸರಳತೆಯ ಬಗ್ಗೆ ಇನ್ನುಳಿದ ಅತಿಥಿಗಳು ಮಾತನಾಡುತ್ತಿದ್ದಾರೆ. ನಮ್ಮೊಂದಿಗೆ ನಗುತ್ತಲೇ ಪುನೀತ್ (Puneeth Rajklumar) ಕಾಲ ಕಳೆದಿದ್ದು ನೋಡಿದ್ರೆ  ಅವರಿಗೆ ಎದೆನೋವು ಇರಬಹುದೆಂಬ ಅನುಮಾನವೂ ಬರಲಿಲ್ಲ.

 ಪುನೀತ್ ರಾಜ್‍ಕುಮಾರ್ ಮತ್ತು ಗುರು ಕಿರಣ್

ಪುನೀತ್ ರಾಜ್‍ಕುಮಾರ್ ಮತ್ತು ಗುರು ಕಿರಣ್

  • Share this:
 ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ (Power Star Puneeeth Rajkumar) ಇಂದು ನಿಧನರಾಗಿದ್ದು, ಅವರ ಆರೋಗ್ಯದ ಬಗ್ಗೆ  ಅನೇಕ ಸುದ್ದಿಗಳು ಹರಿದಾಡುತ್ತಿವೆ. ಗುರುವಾರ ರಾತ್ರಿಯೇ ಪುನೀತ್ ಆರೋಗ್ಯದಲ್ಲಿ (Puneeth Death) ಏರುಪೇರು ಕಾಣಿಸಿಕೊಂಡಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು. ಆದ್ರೆ ಗುರುವಾರ ರಾತ್ರಿ ಸಂಗೀತ ನಿರ್ದೇಶಕ ಗುರುಕಿರಣ್ (Music Director Guruk iran)ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿ, ಗೆಳೆಯರ ಜೊತೆ ಸಮಯ ಕಳೆದಿದ್ದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿರುವ ಗುರುಕಿರಣ್, ರಾತ್ರಿ ಅಪ್ಪು ಆರೋಗ್ಯ ಹೇಗಿತ್ತು ಎಂಬದನ್ನು ವಿವರಿಸಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿ ಯಾರೆಲ್ಲ ಭಾಗಿಯಾಗಿದ್ದರು ಎಂಬುದರ ಮಾಹಿತಿ ಇಲ್ಲಿದೆ

ಗುರುಕಿರಣ್  ಹೇಳಿದ್ದೇನು?

ತುಂಬಾ ದಿನಗಳ ನಂತರ ಪುನೀತ್ ಅವರನ್ನು ಭೇಟಿ ಮಾಡಲಾಗಿತ್ತು. ತುಂಬಾ ಸಮಯದವರೆಗೆ ಹಲವು ವಿಷಯಗಳ ಕುರಿತು ನಮ್ಮೊಂದಿಗೆ ಮಾತನಾಡಿದರು. ರಾತ್ರಿಯೇ ಪುನೀತ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು ಎಂದು ಕೆಲವರು ಹೇಳುತ್ತಿದ್ದಾರೆ. ಆದ್ರೆ ಪುನೀತ್ ತುಂಬಾನೇ ಲವಲವಿಕೆಯಿಂದ ನಮ್ಮ ಜೊತೆಯಲ್ಲಿದ್ದರು. ಆಯಾಸ, ಬಳಲಿಕೆಯೂ ನಮಗೆ ಕಾಣಿಸಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:  Puneeth Rajkumar​ ಸಾವಿನಲ್ಲಿ ಎಚ್ಚರಿಕೆಯ ಗಂಟೆ: ಹೆಚ್ಚು ತೂಕ ಎತ್ತುವುದರಿಂದ Heart Attack

ಪುನೀತ್ ಅವರು ಕಾರ್ಯಕ್ರಮದಿಂದ ಹೋದ ನಂತರವೂ ಅವರ ಸರಳತೆಯ ಬಗ್ಗೆ ಇನ್ನುಳಿದ ಅತಿಥಿಗಳು ಮಾತನಾಡುತ್ತಿದ್ದಾರೆ. ನಮ್ಮೊಂದಿಗೆ ನಗುತ್ತಲೇ ಪುನೀತ್ ಕಾಲ ಕಳೆದಿದ್ದು ನೋಡಿದ್ರೆ  ಅವರಿಗೆ ಎದೆನೋವು ಇರಬಹುದೆಂಬ ಅನುಮಾನವೂ ಬರಲಿಲ್ಲ. ನನಗೆ ಅವರೊಟ್ಟಿಗೆ ಒಳ್ಳೆಯ ಸಂಬಂಧ ಇತ್ತು. ವೃತ್ತಿಗಿಂತಲೂ ನಮ್ಮದು ಮಾನವೀಯ ಸಂಬಂಧ. ದೊಡ್ಮನೆಯ ಯಾರಿಗೂ ನಾವು ಸ್ಟಾರ್ ಅಹಂ ಇರಲಿಲ್ಲ ಎಂದು ಪುನೀತ್ ಸರಳತೆಯನ್ನು ಕೊಂಡಾಡಿದರು.

ಇದೇ ಪಾರ್ಟಿಯಲ್ಲಿದ್ರು ನಟ ಅನಿರುದ್ಧ್, ರಮೇಶ್ ಅರವಿಂದ್

ಇದೇ ಬರ್ತ್ ಡೇ ಪಾರ್ಟಿಯಲ್ಲಿ ನಟ ರಮೇಶ್ ಅರವಿಂದ್, ಅನಿರುದ್ಧ, ಗಾಯಕ ಹೇಮಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪುನೀತ್ ನಿಧನಕ್ಕೆ ಸಂತಾಪ ಸೂಚಿಸಿ ಮಾತನಾಡಿದ ಅನಿರುದ್ಧ್, ತಮ್ಮ ಫಿಟ್ನೆಸ್, ಸೈಕಲ್ ಸವಾರಿಯ ಅಭ್ಯಾಸ ಮತ್ತು ವ್ಯಾಯಾಮ ಸೇರಿದಂತೆ ಹಲವು ವಿಷಯಗಳ ಬಗ್ಗೆ ನಮ್ಮೊಂದಿಗೆ ಮಾತನಾಡಿದ್ದರು ಎಂದು ಹೇಳಿದ್ದಾರೆ.

ಇದನ್ನೂ ಓದಿ:  Power Star Puneeth Rajkumar; ಅನರ್ಘ್ಯ ರತ್ನ ಹೇಳದೇ ಕೇಳದೇ ನಿರ್ಗಮಿಸಿ ಅಪ್ಪಅಮ್ಮನ ಮಡಿಲು ಸೇರಿತು: Jaggesh ಕಣ್ಣೀರು

ಹೇಳದೇ ಕೇಳದೇ ಹೋದ ಅನರ್ಘ್ಯ ರತ್ನ

ವಾರದ ಹಿಂದೆ ಮಲ್ಲೇಶ್ವರಕ್ಕೆ ಬಂದಿರುವೆ ಬಾ ಅಣ್ಣ ಎಂದು ಕರೆದು ಒಂದು ಗಂಟೆ ಸಮಯ ಕಳೆದ ಆತ್ಮೀಯ ತಮ್ಮ ಪುನೀತ್ ಇಂದಿಲ್ಲಾ ಎಂದರೆ ಎಂಥ ದುರ್ವಿಧಿ! ಕೋಟ್ಯಾಂತರ ಅಭಿಮಾನಿಗಳು ಅವರ ಮನೆಯವರಿಗೆ ಈ ನೋವು ಬರಿಸುವ ಶಕ್ತಿಯನ್ನು ಆ ದೇವರೇ ನೀಡಬೇಕು. ಕನ್ನಡ ಚಿತ್ರರಂಗದ ಅನರ್ಘ್ಯ ರತ್ನ ಹೇಳದೇ ಕೇಳದೇ ನಿರ್ಗಮಿಸಿ ಅಪ್ಪ-ಅಮ್ಮನ ಮಡಿಲು ಸೇರಿತು. ನಿಮ್ಮಆತ್ಮಕ್ಕೆ ಚಿರಶಾಂತಿ ಎಂದು ಜಗ್ಗೇಶ್ ಸಂತಾಪ ಸೂಚಿಸಿದ್ದಾರೆ.

ಅಭಿಮಾನಿಗಳಲ್ಲಿ ಸಿಂಪಲ್ ಸುನಿ ಮನವಿ

ದಯವಿಟ್ಟು ಯಾರು "ಆ ಪಿಕ್" ಅನ್ನು ಶೇರ್ ಮಾಡಬೇಡಿ... ನಮ್ಮ ಕಣ್ಣಲ್ಲಿ "ಅಪ್ಪು ಸರ್" ಸದಾ ಎಂದಿನಂತೆ ಹಸನ್ಮುಖರಾಗಿರಲಿ.. "ಜೊತೆಗಿರದ ಜೀವ ಎಂದಿಗೂ ಜೀವಂತ" ಜೀವನದ ಅಘಾತಕಾರಿ ಸುದ್ದಿ ಇದು ಎಂದು ನಿರ್ದೇಶಕ ಸಿಂಪಲ್ ಸುನಿ (Director Simle Suni) ಅಭಿಮಾನಿಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪುನೀತ್ ಮೃತದೇಹದ ಫೋಟೋ ವೈರಲ್ ಆಗಿದೆ.

ಇದನ್ನೂ ಓದಿ:  Puneeth Rajkumar, Chiranjeevi Sarja ಸೇರಿದಂತೆ ಹೃದಯಾಘಾತದಿಂದ ಮೃತಪಟ್ಟ ಸೆಲೆಬ್ರಿಟಿಗಳು

ಸ್ಯಾಂಡಲ್​ವುಡ್​ನ ನಟ ಸಾರ್ವಭೌಮ, ಪವರ್​ ಸ್ಟಾರ್ ಎಂದು ಕರೆಸಿಕೊಳ್ಳುವ ನಟ ಪುನೀತ್ ರಾಜ್​ಕುಮಾರ್​ ಅಭಿಮಾನಿಗಳಿಗೆ ಮಾತ್ರ ಪ್ರೀತಿಯ ಅಪ್ಪು. 46 ವರ್ಷದ ನಟನಿಗೆ ಇಂದು ಮುಂಜಾನೆ ವ್ಯಾಯಾಮ ಮಾಡುವಾಗ ಎದೆ ನೋವು ಕಾಣಿಸಿಕೊಂಡಿತ್ತು. ಬೆಳಿಗ್ಗೆ 11:30ಕ್ಕೆ ಪುನೀತ್​ ಅವರಿಗೆ ಹೃದಯಾಘಾತವಾಗಿದ್ದು, ಮೊದಲು ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ನಂತರ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.‘
Published by:Mahmadrafik K
First published: