• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Devi Sri Prasad: ರಾಮ-ಕೃಷ್ಣರ ನಾಮ, ಚಿಂದಿ ಬಟ್ಟೆಯಲ್ಲಿ ಡ್ಯಾನ್ಸರ್ಸ್ ಹಂಗಾಮ! ದೇವಿ ಶ್ರೀ ಪ್ರಸಾದ್ ವಿರುದ್ಧ ಕೇಸ್

Devi Sri Prasad: ರಾಮ-ಕೃಷ್ಣರ ನಾಮ, ಚಿಂದಿ ಬಟ್ಟೆಯಲ್ಲಿ ಡ್ಯಾನ್ಸರ್ಸ್ ಹಂಗಾಮ! ದೇವಿ ಶ್ರೀ ಪ್ರಸಾದ್ ವಿರುದ್ಧ ಕೇಸ್

ದೇವಿ ಶ್ರೀ ಪ್ರಸಾದ್ ಹಾಡಿಗೆ ವಿರೋಧ

ದೇವಿ ಶ್ರೀ ಪ್ರಸಾದ್ ಹಾಡಿಗೆ ವಿರೋಧ

'ಓ ಪರಿ' ಎನ್ನುವುದು ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಅವರ ಹೊಸ ಆಲ್ಬಂ ಸಾಂಗ್. ಅದು ಇತ್ತೀಚಿಗಷ್ಟೇ ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ರಿಲೀಸ್ ಆಗಿತ್ತು. ಯೂಟ್ಯೂಬ್‌ನಲ್ಲಿ 20 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿ, ಜನಪ್ರಿಯತೆ ಗಳಿಸಿತ್ತು. ಇದೀಗ ಈ ಹಾಡಿಗೆ ವಿರೋಧ ವ್ಯಕ್ತವಾಗಿದೆ.

ಮುಂದೆ ಓದಿ ...
 • News18 Kannada
 • 5-MIN READ
 • Last Updated :
 • Hyderabad, India
 • Share this:

ಹೈದ್ರಾಬಾದ್: ಭಾರತೀಯ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ (Music Director), ತೆಲುಗಿನ ಸಂಗೀತ ಮಾಂತ್ರಿಕ ದೇವಿ ಶ್ರೀ ಪ್ರಸಾದ್ (Devi Sri Prasad) ವಿರುದ್ಧ ದೂರು (complaint) ದಾಖಲಾಗಿದೆ. ಇತ್ತೀಚಿಗೆ ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ರಿಲೀಸ್ ಆದ ಅವರ ‘ಓ ಪರಿ’ ಸಾಂಗ್‌ (O Pari Song) ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಈ ಹಾಡಿನಲ್ಲಿ ದೇವಿ ಶ್ರೀ ಪ್ರಸಾದ್ ಹಿಂದೂ ಧಾರ್ಮಿಕ ಭಾವನೆಗೆ (Hindu religious sentiments) ಧಕ್ಕೆ ತಂದಿದ್ದಾರೆ ಅಂತ ಆರೋಪಿಸಲಾಗಿದೆ. ಈ ಬಗ್ಗೆ ತೆಲುಗು ಚಿತ್ರನಟಿಯೂ (Telugu Film Actress) ಆಗಿರುವ ಹರಿಕಥಾ ಕಲಾವಿದೆ ಕರಾಟೆ ಕಲ್ಯಾಣಿ (Harikatha artiste Karate Kalyani) ಎನ್ನುವವರು ಹೈದ್ರಾಬಾದ್‌ನ ಸೈಬರ್ ಕ್ರೈ ಪೊಲೀಸ್ ಠಾಣೆಗೆ (Cyber Crime Police Station, Hyderabad) ದೂರು ನೀಡಿದ್ದಾರೆ. ಈ ದೂರನ್ನು ಆಧರಿಸಿ ಹೈದರಾಬಾದ್ ನಗರ ಪೊಲೀಸರು ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.


ಕೆಲ ದಿನಗಳ ಹಿಂದಷ್ಟೇ ರಿಲೀಸ್ ಆಗಿದ್ದ ಹಾಡು


ಓ ಪರಿ ಎನ್ನುವುದು ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಅವರ ಹೊಸ ಆಲ್ಬಂ ಸಾಂಗ್. ಅದು ಇತ್ತೀಚಿಗಷ್ಟೇ ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ರಿಲೀಸ್ ಆಗಿತ್ತು. ಯೂಟ್ಯೂಬ್‌ನಲ್ಲಿ 20 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿ, ಜನಪ್ರಿಯತೆ ಗಳಿಸಿತ್ತು.


ದೂರು ನೀಡಿದವರು ಯಾರು?


ದೇವಿ ಶ್ರೀ ಪ್ರಸಾದ್ ವಿರುದ್ಧ ಹರಿಕಥಾ ಗಾಯಕಿಯೂ ಆಗಿರುವ ತೆಲುಗು ನಟಿ ಕರಾಟೆ ಕಲ್ಯಾಣಿ ಹಾಗೂ ಹಾಗೂ ಲಲಿತ್ ಕುಮಾರ್ ಎಂಬುವರು ಪೊಲೀಸರರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ನಮಗೆ ದೂರು ಬಂದಿದ್ದು, ಇದು ಕಾನೂನು ಸಮಸ್ಯೆಯಾಗಿರುವುದರಿಂದ ಈ ಬಗ್ಗೆ ವಿಚಾರಣೆ ನಡೆಸುತ್ತೇವೆ ಎಂದು ಹೈದರಾಬಾದ್ ಸೈಬರ್ ಕ್ರೈಮ್ ಎಸಿಪಿ ಪ್ರಸಾದ್ ತಿಳಿಸಿದ್ದಾರೆ. ಇನ್ನು ಈ ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 153 (ಎ) ಐಪಿಸಿ ಮತ್ತು 295 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


ಇದನ್ನೂ ಓದಿ: Actress Samantha: ಸಮಂತಾರನ್ನು ಕಾಡುತ್ತಿರುವ ಈ ವಿಚಿತ್ರ ಕಾಯಿಲೆ ಬಗ್ಗೆ ಗೊತ್ತಾ? ವ್ಯಕ್ತಿಯನ್ನೇ ಕುಗ್ಗಿಸುತ್ತಾ ಮೈಯೋಸಿಟಿಸ್?


ದೇವಿ ಶ್ರೀ ಪ್ರಸಾದ್ ಮೇಲಿನ ಆರೋಪವೇನು?


ಓ ಪರಿ ಹಾಡಿನಲ್ಲಿ ರಾಮ, ಕೃಷ್ಣ ಎಂಬ ದೇವರ ನಾಮಗಳು ಬರುತ್ತವೆ. ಈ ಹಾಡಿಗೆ ಯುವತಿಯರು ಚಿಂದಿ ಬಟ್ಟೆ ತೊಟ್ಟು, ಅಶ್ಲೀಲವಾಗಿ ಕುಣಿದಿದ್ದಾರೆ ಅಂತ ಆರೋಪಿಸಲಾಗಿದೆ.  ವೀಡಿಯೊದಲ್ಲಿ ಧಾರ್ಮಿಕ ಪಠಣಗಳನ್ನು ಹೊಂದಿರುವ ಸಂಗೀತಕ್ಕೆ ಕಡಿಮೆ ಬಟ್ಟೆ ಧರಿಸಿರುವ ಮಹಿಳೆಯರು ನೃತ್ಯ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದ್ದು, ಇದು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಅಂತ ದೂರುದಾರರು ಹೇಳಿದ್ದಾರೆ.


“ಹಾಡಿನಲ್ಲಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ”


“ಊ ಅಂತಾವಾ ಊ ಊ ಅಂತಾವಾ’ ಎಂಬ ಐಟಂ ಸಾಂಗ್‌ಗಳಿಗೆ ಸಂಗೀತಗಾರರಾಗಿದ್ದ ಇವರು ಇದೀಗ ಹೊಸ ಅಲ್ಬಂ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅಲ್ಪಸ್ವಲ್ಪ ತೊಟ್ಟಿರುವ ಮಹಿಳೆಯರು, ಬಿಕಿನಿ ತೊಟ್ಟಿರುವ ಮಹಿಳೆಯರು, ಈ ಶ್ಲೋಕಗಳನ್ನು ಪಠಿಸುವುದು, ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂಥದ್ದು. ಅಂತಹ ಪ್ರಚೋದನಕಾರಿ ಚಿತ್ರಣಗಳನ್ನು ಪ್ರದರ್ಶಿಸುವ ಹಾಡನ್ನು ಹಾಕುವ ಮೊದಲು ನಮಗೆಲ್ಲರಿಗೂ ಎಷ್ಟು ನೋವಾಗುತ್ತದೆ ಎಂದು ಅವರು ಒಮ್ಮೆ ಯೋಚಿಸುತ್ತಾರೆಯೇ? ಅಂತ ಕರಾಟೆ ಕಲ್ಯಾಣಿ ಪ್ರಶ್ನಿಸಿದ್ದಾರೆ.


“ಕ್ಷಮೆ ಕೇಳಿ, ಹಾಡು ತೆಗೆದು ಹಾಕಿ”


ಹಿಂದೂ ಧರ್ಮದಲ್ಲಿ ಉಳಿದಿರುವುದನ್ನು ಉಳಿಸಲು ನಿಮಗೆ ಸಾಧ್ಯವಾಗದಿದ್ದರೆ, ಕನಿಷ್ಠ ಅದನ್ನು ಅವಮಾನಿಸಬೇಡಿ. ನಾವು ವಿನಂತಿಸುವುದು ಅದನ್ನೇ. ಅದಕ್ಕಾಗಿ ನಿಮ್ಮ ಕ್ಷಮೆಯಾಚಿಸಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ. ಹಾಡನ್ನು ತೆಗೆದುಹಾಕುವಂತೆ ನಾವು ಒತ್ತಾಯಿಸುತ್ತೇವೆ. ಅಗತ್ಯವಿದ್ದರೆ, ನಾವು ಅವರ ಸ್ಟುಡಿಯೋಗೆ ನುಗ್ಗಿ ಅವರಿಗೆ ಬುದ್ಧಿ ಹೇಳುತ್ತೇವೆ ಅಂತ ದೂರುದಾರರಾದ ಕಲ್ಯಾಣಿ ಎಚ್ಚರಿಸಿದ್ದಾರೆ.


ಇದನ್ನೂ ಓದಿ: Rajinikanth: ಪುನೀತ್ ನಿಧನರಾದಾಗ ರಜನಿಕಾಂತ್ ಯಾಕೆ ಬಂದಿರಲಿಲ್ಲ? ವೇದಿಕೆ ಮೇಲೆ ರಿವೀಲ್ ಆಯ್ತು ಕಾರಣ!


ಬಿಜೆಪಿ ನಾಯಕರಿಂದಲೂ ಆಕ್ರೋಶ


ಇನ್ನು ಆಂಧ್ರಪ್ರದೇಶದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್.ವಿಷ್ಣುವರ್ಧನ್ ರೆಡ್ಡಿ ಮಾತನಾಡಿ, ‘ಗೀತೆಯಲ್ಲಿ ಹಿಂದೂಗಳನ್ನು ಅವಹೇಳನ ಮಾಡಿ ಶ್ರೀಕೃಷ್ಣನನ್ನು ಅವಮಾನಿಸಿರುವ ಸಂಗೀತ ನಿರ್ದೇಶಕ ಡಿಎಸ್ಪಿ ಕೂಡಲೇ ಹಿಂದೂ ಸಮಾಜದ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದ್ದಾರೆ. ಹಿಂದೂ ದೇವತೆಗಳು ಮತ್ತು ದೇವರುಗಳನ್ನು ಆಗಾಗ್ಗೆ ಅವಮಾನಿಸುವುದು ಚಿತ್ರರಂಗದ ಕೆಲವರಿಗೆ ಅಭ್ಯಾಸವಾಗಿ ಹೋಗಿದೆ. ಇದು ಇಲ್ಲಿಗೆ ನಿಲ್ಲಬೇಕು ಅಂತ ಅವರು ಹೇಳಿದ್ದಾರೆ.

First published: