Arjun Janya: ಗಿಟಾರ್ ಬಿಟ್ಟು ಡೈರೆಕ್ಟರ್ ಕ್ಯಾಪ್ ಹಾಕೋಕೆ ಸಜ್ಜಾದ ಅರ್ಜುನ್ ಜನ್ಯ, ಮ್ಯೂಸಿಕ್ ಮಾಂತ್ರಿಕನಿಗೆ ಶಿವಣ್ಣ ಸಾಥ್

Shivarajkumar: ಇನ್ನು ಅರ್ಜುನ್  ಜನ್ಯಗೆ  ಸಾಥ್ ಕೊಡ್ತಿರೋದು ಕರುನಾಡ  ಚಕ್ರವರ್ತಿ,  ಅಭಿಮಾನಿಗಳ ಪಾಲಿನ ಪ್ರೀತಿಯ ಅಣ್ಣ ಶಿವಣ್ಣ. ಇವರಿಬ್ಬರು ಒಂದಾದ್ರೆ ಹೇಗಿರುತ್ತೆ ಹೇಳಿ ನೋಡೋಣ?

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ

 • Share this:
  ತಮ್ಮ ಸಂಗೀತದ (music) ಮೂಲಕ ಸ್ಯಾಂಡಲ್ ವುಡ್​ನ  (Sandalwood) ಆವರಿಸಿಕೊಂಡಿರುವ ಮ್ಯೂಸಿಕ್ ಮಾಂತ್ರಿಕ (Music Director) ಎಂದರೆ  ಅರ್ಜುನ್ ಜನ್ಯ . ಮ್ಯೂಸಿಕ್ ಇನ್‌ಸ್ಟ್ರುಮೆಂಟ್ಸ್ ನುಡಿಸಿದ್ದ ಕೈಗಳೀಗ  ಪೆನ್ ಹಿಡಿದು ಕತೆ ಬರೆದು , ಮೈಕ್ ಹಿಡಿದು ಆಕ್ಷನ್ ಕಟ್ ಹೇಳಲು ರೆಡಿಯಾಗಿದೆ. ಹೌದು, ಅರ್ಜುನ್ ಜನ್ಯ ಸಿನಿಮಾ ಕಥೆ ಬರೆದು ನಿರ್ದೇಶಕ ಮಾಡುವ ಆಲೋಚನೆಯಲ್ಲಿದ್ದಾರೆ.  ಮುಖ್ಯವಾಗಿ ಕಥೆ ಕೂಡ ರೆಡಿಯಾಗಿದೆ.

  ಅರ್ಜುನ್ ಜನ್ಯಗೆ ಶಿವಣ್ಣ ಸಾಥ್ 

  ಇನ್ನು ಅರ್ಜುನ್  ಜನ್ಯಗೆ  ಸಾಥ್ ಕೊಡ್ತಿರೋದು ಕರುನಾಡ  ಚಕ್ರವರ್ತಿ,  ಅಭಿಮಾನಿಗಳ ಪಾಲಿನ ಪ್ರೀತಿಯ ಅಣ್ಣ ಶಿವಣ್ಣ. ಇವರಿಬ್ಬರು ಒಂದಾದ್ರೆ ಹೇಗಿರುತ್ತೆ ಹೇಳಿ ನೋಡೋಣ.  ಅಬ್ಬಬ್ಬ ಕೇಳಿದ್ರೆ ಸಖತ್ ಥ್ರಿಲ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.   ಹೌದು ಈಗ ಅಂತಹ ಒಂದು ಎಪಿಕ್ ಹಿಸ್ಟ್ರೀಗೆ ಸಾಕ್ಷಿಯಾಗ್ತಿದೆ ಸ್ಯಾಂಡಲ್‌ವುಡ್ ಎನ್ನಬಹುದು.

  ಕೆಲವೊಂದು ಸುದ್ದಿಗಳೇ ಹಾಗೆ ಅದೇಷ್ಟು ಥ್ರಿಲ್ಲಿಂಗ್ ಆಗಿರ್ತಾವೆ ಅಂದ್ರೆ, ಮತ್ತೆ ಮತ್ತೆ ಅದರ ಬಗ್ಗೆ ಮಾತಾಡ್ಬೇಕು ಅನ್ನಿಸುತ್ತೆ. ಅಂತಹ ಇಂಟ್ರಸ್ಟಿಂಗ್ ಮತ್ತು ಸೆನ್ಸೇಷನ್‌ಲ್ ಸುದ್ದಿ ಇದು.  ಯಾಕಂದ್ರೆ, ಆ ಸುದ್ದಿಗೆ ಸಾಕ್ಷಿಯಾಗಿರೋದು ಸೆಂಚುರಿಸ್ಟಾರ್ ಶಿವಣ್ಣ ಹಾಗು ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ. ಹೌದು ಅರ್ಜುನ್ ಜನ್ಯ, ದಶಕಗಳಿಂದ ಸ್ಯಾಂಡಲ್‌ವುಡ್‌ನ್ನ ತಮ್ಮ ಸಂಗೀತದಿಂದ ಮಂತ್ರ ಮುಗ್ಧಗೊಳಿಸರೋ ಜಾಧೂಗಾರ. ಇಂದು ಯಾವುದೇ ಸ್ಟಾರ್ ಸಿನಿಮಾ ಸೆಟ್ಟೇರ‍ಲಿ ಅಲ್ಲಿ ಕೇಳಿ ಬರುವ ಮೊದಲ ಹೆಸರು ಅರ್ಜುನ್ ಜನ್ಯ.. ಅಲ್ಲದೇ,  ಯಾವುದೇ ಚಿತ್ರಕ್ಕೆ ಅರ್ಜುನ್ ಜನ್ಯಾ ಮ್ಯೂಸಿಕ್ ಇತ್ತು ಅಂದ್ರೆ, ಆ ಚಿತ್ರದ ಖದರೇ ಬೇರೆ ಇರುತ್ತೆ.

  ಇದನ್ನೂ ಓದಿ: ಥೈಲ್ಯಾಂಡ್​ನಲ್ಲಿ ಆಶಿಕಾ ರಂಗನಾಥ್ ಜಬರ್ದಸ್ತ್​ ಪೋಸ್​, ಚುಟು ಚುಟು ಬೆಡಗಿ ನೋಡಿ ಫ್ಯಾನ್ಸ್ ಕ್ಲೀನ್ ಬೋಲ್ಡ್​

  ಅಲ್ಲದೆ ಶಿವಣ್ಣನ ಚಿತ್ರಕ್ಕೆ ಜನ್ಯ ಕಂಪೋಸ್ ಮಾಡಿದ್ರೆ ಅದರ ಮಜಾನೆ ಬೇರೆ. ಆದರೆ ಶಿವಣ್ಣನ ಚಿತ್ರಕ್ಕೆ ಜನ್ಯ ಸಂಗೀತಕ್ಕೆ ಬದಲು ಸಿನಿಮಾ ಡೈರೆಕ್ಷನ್ ಮಾಡಿದ್ರೆ ಅದನ್ನ ಊಹಿಸಿಕೊಳ್ಳೋಕು ಸಾಧ್ಯವಿಲ್ಲ. ಹೌದು, ದಶಕಕ್ಕೂ ಹೆಚ್ಚು ವರ್ಷಗಳ ಕಾಲ  ಸಂಗೀತ ಲೋಕದಲ್ಲಿ ಕಳೆದು ಹೋಗಿರುವ  ಅರ್ಜುನ್ ಜನ್ಯ, ಈಗ ವೈಟ್ ಕ್ಯಾಪ್ ತೊಟ್ಟು, ಆಕ್ಷನ್ ಕಟ್ ಹೇಳಲು ರೆಡಿಯಾಗ್ತಿದ್ದಾರಂತೆ.. ಅದೂ ಸ್ಯಾಂಡಲ್‌ವುಡ್ ಮಂದಿಯ ಪ್ರೀತಿಯ ಅಣ್ಣ, ಸೆಂಚುರಿಸ್ಟಾರ್ ಶಿವಣ್ಣನಿಗೆ ಅನ್ನೋದು ವಿಶೇಷ.

  ಈಗಾಗಲೇ ಸ್ಟೋರಿ ರೆಡಿ ಇದೆ

  ಇಲ್ಲಿನ ಮತ್ತೊಂದು ಇಂಟ್ರಸ್ಟಿಂಗ್  ಫ್ಯಾಕ್ಟ್ ಅಂದ್ರೆ,  ಅರ್ಜುನ್ ಜನ್ಯ ಮಾಡಿಕೊಂಡಿರೋ ಕತೆ ಶಿವಣ್ಣನಿಗೆ ಸಖತ್ ಇಷ್ಟವಾಗಿದೆಯಂತೆ. ಈಗಾಗ್ಲೇ ಚಿತ್ರದ ಸ್ಕ್ರಿಪ್ಟ್ ವರ್ಕ್ ನಡೆತಿದ್ದು. ಆ ಕೆಲಸದಲ್ಲಿ ಟೀಂ ಬ್ಯುಸಿಯಾಗಿದೆ. ಹಾಗಾಗಿ ಯಾವಾಗ ಬೇಕಾದ್ರು ಜೋನಿ ಬೆಲ್ಲದಂತ ಈ ಸಿಹಿಯಾದ ಸುದ್ದಿ ಹೊರಬೀಳಬಹುದು. ಇನ್ನು ಈ ಚಿತ್ರವನ್ನು ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ ರಮೇಶ್ ರೆಡ್ಡಿ ನಿರ್ಮಾಣ ಮಾಡುವ ಸಾಧ್ಯತೆಗಳಿವೆ.

  ರಮೇಶ್ ರೆಡ್ಡಿ ಈಗಾಗಲೇ ಹುಪ್ಪು ಹುಳಿ ಖಾರ, ೧೦೦, ಗಾಳಿಪಟ-2  ಚಿತ್ರಗಳನ್ನ ನಿರ್ಮಿಸಿದ್ದು, ಈ ಚಿತ್ರವನ್ನೂ ಅಷ್ಟೇ ಅದ್ದೂರಿಯಾಗಿ ನಿರ್ಮಾಣ ಮಾಡೋ ಯೋಚನೆಯಲ್ಲಿದ್ದಾರೆ.. ಸದ್ಯ ಈ ಚಿತ್ರದ ಕೆಲಸ ಶುರುವಾಗಿದ್ದು, ಈ ವರ್ಷದ ಅಂತ್ಯದೊಳಗೆ ಪ್ರೀ ಪ್ರೊಡಕ್ಷನ್ ವರ್ಕ್ ಕಂಪ್ಲೀಟ್ ಆಗಲಿದ್ದು, ಪ್ರೀ ಪ್ರೊಡಕ್ಷನ್ ಕೆಲಸ ಮುಗಿದ ಮೇಲೆ ಈ ಸಿನಿಮಾ ಸೆಟ್ಟೇರೋ ಸಾಧ್ಯತೆ ಇದೆ.

  ಇದನ್ನೂ ಓದಿ: ಹೆಚ್ಚಾಗುತ್ತಿದೆ ಚಾರ್ಲಿ ಕಲೆಕ್ಷನ್, ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಬಾಲಿವುಡ್​ ನಿರ್ಮಾಪಕ

  ಅದೇನೆ ಇರಲಿ  ಸ್ಯಾಂಡಲ್‌ವುಡ್‌ನ ಗ್ರೇಟ್ ಮ್ಯೂಸಿಕ್ ಡೈರೆಕ್ಟರ್ ಅಂತಲೇ ಕರೆಸಿಕೊಳ್ಳೊ ಹರಿಕೃಷ್ಣ ಕೂಡ ಈಗಾಗಲೇ  ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದಾರೆ.. ಇದೀಗ ಅರ್ಜುನ್ ಜನ್ಯ ಕೂಡ ಅದೇ ದಾರಿಯಲ್ಲಿ ಹೋಗ್ತಿದ್ದು, ಅವರಿಗೆ ಶಿವಣ್ಣ ಸಾಥ್ ಕೊಟ್ಟಿರೋದು ಇಲ್ಲಿನ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದ್ದು, ಸಂಗೀತ ಲೋಕದಲ್ಲಿ ಸ್ವರಗಳ ಜೊತೆ ಸರಸ ಆಡಿ ಸೈ ಅನಿಸಿಕೊಂಡಿರೋ ಜನ್ಯಗೆ  ನಿರ್ದೇಶನದಲ್ಲೂ ಜಯ  ಸಿಗಲಿ ಒಳ್ಳೆಳ್ಳೊ ಸಿನಿಮಾಗಳನ್ನು ಡೈರೆಕ್ಷನ್ ಮಾಡಲಿ ಅನ್ನೋದೇ ಸಿನಿಮಾ ಪ್ರೇಮಿಗಳ ಆಶಯವಾಗಿದೆ.

  ವರದಿ: ಸತೀಶ್ ಎಂ.ಬಿ
  Published by:Sandhya M
  First published: