ಜೀ ಕನ್ನಡ (Zee Kannada) ಅಭಿಮಾನಿಗಳಿಗೆ ಮನರಂಜನೆ ನಿಡೋದ್ರಲ್ಲಿ ಸದಾ ಮುಂದೆ ಇರುತ್ತೆ. ಜೀ ಕನ್ನಡದಲ್ಲಿ ಶನಿವಾರ ಮತ್ತು ಭಾನುವಾರ 'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19' (SA RI GA MA PA Lil Champs) ಕಾರ್ಯಕ್ರಮ ಪ್ರಸಾರವಾಗ್ತಿದೆ. 18 ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ಗಳನ್ನು ಯಶಸ್ವಿಯಾಗಿ ಪೂರೈಸಿರುವ ಜೀ ಕನ್ನಡ ವಾಹಿನಿ 19ನೇ ಸೀಸನ್ ನಡೆಸುತ್ತಿದೆ. 18 ಸೀಸನ್ಗಳಲ್ಲಿ ಅದೇಷ್ಟೋ ಪುಟ್ಟ ಪುಟ್ಟ ಹಾಡುಗಾರರು ಇಲ್ಲಿ ಬಂದು ಕಲಿತು, ಯಶಸ್ವಿಯಾಗಿದ್ದಾರೆ. ಎಷ್ಟೋ ಜನ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಚಿತ್ರರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಬಾರಿ ಸಹ ಎಲ್ಲ ಮಕ್ಕಳು ಅದ್ಭುತವಾಗಿ ಹಾಡುತ್ತಿದ್ದಾರೆ. ಇದರ ಜಡ್ಜ್ (Judge) ಆಗಿರುವ ಅರ್ಜುನ್ ಜನ್ಯ ಮತ್ತು ನಿರೂಪಕಿ ಅನುಶ್ರೀ ಶಿವಣ್ಣ ಅವರ ವೇದ ಹಾಡಿಗೆ ಡ್ಯಾನ್ಸ್ (Dance) ಮಾಡಿದ್ದಾರೆ.
ಮಾತಿನ ಮಲ್ಲಿ ನಿರೂಪಕಿ ಅನುಶ್ರೀ
ನಿರೂಪಕಿ ಅನುಶ್ರೀ ಅವರು ಹಲವು ವರ್ಷಗಳಿಂದ ಜೀ ಕನ್ನಡದಲ್ಲಿ ನಿರೂಪಣೆ ಮಾಡುತ್ತಾ ಬಂದಿದ್ದಾರೆ. ತಮ್ಮ ಅದ್ಭುತವಾದ ಮಾತಿನ ಮೂಲಕ ಕರುನಾಡ ಜನರನ್ನು ಸೆಳೆದಿದ್ದಾರೆ. ಅನುಶ್ರೀ ಅವರ ನಿರೂಪಣೆ ನೋಡೋದೇ ಚೆಂದ. ಪಟ ಪಟ ಎಂದು ಮಾತನಾಡುತ್ತಾರೆ. ಮಾತಿನ ಮಲ್ಲಿ ಅನುಶ್ರೀ ಅವರು ಕಾರ್ಯಕ್ರಮದ ಪುಟಾಣಿ ಮಕ್ಕಳಿಗೂ ಇಷ್ಟ.
ಅರ್ಜುನ್ ಜನ್ಯಾಗೆ ರೇಗಿಸುವ ಅನುಶ್ರೀ
ನಿರೂಪಕಿ ಅನುಶ್ರೀ ಅವರು ಸದಾ ಅರ್ಜುನ್ ಜನ್ಯ ಅವರಿಗೆ ರೇಗಿಸಯತ್ತಾ ಇರುತ್ತಾರೆ. ನಿಮ್ಮನ್ನು ಕಂಡ್ರೆ ಇಷ್ಟ ಎಂದು. ಅವರು ರೇಗಿಸುತ್ತಾರೆ. ಕೆಲವೊಮ್ಮೆ ಬಿಟ್ಟು ಬಿಡು ತಾಯಿ ಎಂದು ಕೈ ಮುಗಿಯುತ್ತಾರೆ. ಇಬ್ಬರ ಮಾತಿನ ಸಂಭಾಷಣೆ ನಗು ತರಿಸುತ್ತೆ. ಇದನ್ನು ಜನ ಇಷ್ಟ ಪಟ್ಟಿದ್ದಾರೆ. ತಮಾಷೆಯಾಗಿ ನೋಡುತ್ತಾರೆ.
ಅರ್ಜುನ್ ಜನ್ಯ-ಅನುಶ್ರೀ ಡ್ಯಾನ್ಸ್
ಶಿವರಾಜ್ ಕುಮಾರ್ ಅಭಿನಯದ ವೇದ ಚಿತ್ರದ ಪುಷ್ಪಾ, ಪುಷ್ಪಾ ಹಾಡಿಗೆ ಅರ್ಜುನ್ ಜನ್ಯ ಮತ್ತು ಅನುಶ್ರೀ ಡ್ಯಾನ್ಸ್ ಮಾಡಿದ್ದಾರೆ. ಇಬ್ಬರ ಡ್ಯಾನ್ಸ್ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಶಿವಣ್ಣ ಅವರ 125ನೇ ಸಿನಿಮಾ ವೇದಾಗೆ ಅರ್ಜುನ್ ಜನ್ಯ ಅವರು ಸಂಗೀತಾ ಸಂಯೋಜನೆ ಮಾಡಿದ್ದಾರೆ. ಎಲ್ಲಾ ಹಾಡುಗಳು ಕೂಡ ಹಿಟ್ ಆಗಿದ್ದವು.
View this post on Instagram
ದಿಯಾ ಹಾಡು ಹೇಗಿತ್ತು?
ನಾ ಮುದುಕಿ ಆದರೇನಂತೆ ಇನ್ನೂ ಇರಾಕಿ
ನನ್ನ ಮಗನ, ಮಗನ, ಮಗನ ಮದುವೆ ಮಾಡಕಿ
ನನ್ನ ಮಗ ಹರೆಯಕೆ ಬಂದಾನೆ, ಮದುವೆ ಮಾಡು ಅಂತಾನೆ
ಕನ್ಯಾ ಹುಡುಕು ಅಂತಾನೆ,
ನಾಳಿಂದ, ನಾಳಿಂದ ಕನ್ಯಾ ಹುಡುಕೋಕಿ
ವಿಪಿ ಸರ್, ನನಗೆ ಯಾರು ಸೊಸೆ ಆಗಬೇಕು ಅಂತ ಗೊತ್ತಾ?
ಎಜೆ ಸರ್ ನಿಮಗೆ, ಮಹಾಗುರುಗಳೇ ನಿಮಗೆ,
ನಾನು ಕನ್ನಡಕ ಹಾಕಿಕೊಂಡು ನೋಡಾಕಿ,
ಅಂದದ ಸೊಸೆ ತರಾಕಿ, ಬೆಂಗಳೂರು ಬಸ್ ಹತ್ತಾಕಿ
ಲಿಟಲ್ ಚಾಂಪ್ಸ್ಗೆ ಹೋಗಾಕಿ
ನಮ್ಮ ಅನುಶ್ರೀ, ನಿಮ್ಮ ಅನುಶ್ರೀ ಬೇಕು ಅನ್ನಾಕಿ
ನಮ್ಮ ಅನುಶ್ರೀ, ನಿಮ್ಮ ಅನುಶ್ರೀ ಬೇಕು ಅನ್ನಾಕಿ
ಯಾಕ್ ಅನುಶ್ರೀ ಅವರೇ ನನ್ನ ಸೊಸೆ ಆಗಬೇಕು ಅಂದ್ರೆ,
ಮಕ್ಕಳನ್ನು ಮುದ್ದು ಮಾಡೋಕಿ, ಅಂದದ ನಗೆಯ ಬೀರಾಕಿ
ಮಾತಲ್ಲೇ ಮೋಡಿ ಮಾಡಾಕಿ, ಕಣ್ಣಲ್ಲೇ ಪ್ರೀತಿ ತೋರಾಕಿ
ಇದನ್ನೂ ಓದಿ: Olavina Nildana: ಸಿದ್ಧಾಂತ್ ವಿರುದ್ಧ ಸಂಚು, ತಾರಿಣಿ ಮನಸ್ಸಿನಲ್ಲಿ ವಿಷದ ಬೀಜ ಬಿತ್ತಿದ ಪಾಲಾಕ್ಷ!
ಈಗಲೇ, ಈಗಲೇ, ಈಗಲೇ ಫಿಕ್ಸ್ ಮಾಡಾಕಿ
ನಮ್ಮ ಅನುಶ್ರೀ, ನಿಮ್ಮ ಅನುಶ್ರೀ, ನಮ್ಮ ಮನೆ ಸೊಸೆಯಾಕಿ
ನಮ್ಮ ಅನುಶ್ರೀ, ನಿಮ್ಮ ಅನುಶ್ರೀ, ನಮ್ಮ ಮನೆ ಸೊಸೆಯಾಕಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ