Shekhar Ravijani: ಮೂರು ಮೊಟ್ಟೆಗೆ ಸಾವಿರಕ್ಕೂ ಹೆಚ್ಚು ಬೆಲೆ ತೆತ್ತ ಸಂಗೀತ ನಿರ್ದೇಶಕ: ಪಂಚತಾರಾ ಹೋಟೆಲ್​ನಲ್ಲಿ ಮೊಟ್ಟೆ ಬೆಲೆ ಕೇಳಿದ್ರೆ ದಂಗಾಗ್ತೀರಾ..!

Music Composer Shekhar Ravjiani: ಈ ಹಿಂದೆ ನಟ ರಾಹುಲ್​ ಬೋಸ್​ ಚಿತ್ರೀಕರಣಕ್ಕೆಂದು ಹೋಗಿ ಪಂಚತಾರಾ ಹೋಟೆಲ್​ನಲ್ಲಿ ಉಳಿದುಕೊಂಡಾಗ ಜಿಮ್​ಗೆ ಹೋಗುವ ಮೊದಲು ಎರಡು ಬಾಳೆಹಣ್ಣು ಕೇಳಿದ್ದರು. ಅದಕ್ಕೆ ಅವರು ಉಳಿದುಕೊಂಡಿದ್ದ ಪಂಚತಾರಾ ಹೋಟೆಲ್​ನವರು 442 ರೂಪಾಯಿ ಬಿಲ್​ ಮಾಡಿದ್ದರು. ಆ ವಿಷಯವನ್ನು ರಾಹುಲ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.ಈ ಘಟನೆ ಇನ್ನೂ ಹಸಿರಾಗಿರುವಾಗಲೇ ಬಾಲಿವುಡ್​ನ ಸಂಗೀತ ನಿರ್ದೇಶಕ ಶೇಖರ್​ ರವಿಜಾನಿ ಅವರಿಗೂ ಪಂಚತಾರಾ ಹೋಟೆಲೊಂದರಲ್ಲಿ ಇಂತಹದ್ದೇ ಅನುಭವವಾಗಿದೆ.

Anitha E | news18-kannada
Updated:November 15, 2019, 4:05 PM IST
Shekhar Ravijani: ಮೂರು ಮೊಟ್ಟೆಗೆ ಸಾವಿರಕ್ಕೂ ಹೆಚ್ಚು ಬೆಲೆ ತೆತ್ತ ಸಂಗೀತ ನಿರ್ದೇಶಕ: ಪಂಚತಾರಾ ಹೋಟೆಲ್​ನಲ್ಲಿ ಮೊಟ್ಟೆ ಬೆಲೆ ಕೇಳಿದ್ರೆ ದಂಗಾಗ್ತೀರಾ..!
ಸಂಗೀತ ನಿರ್ದೇಶಕ ಶೇಖರ್​
  • Share this:
ಪಂಚತಾರಾ ಹೋಟೆಲ್​ವೊಂದು ಬಿ-ಟೌನ್​ ನಟ ರಾಹುಲ್​ ಬೋಸ್​ ಅವರಿಗೆ ಎರಡು ಬಾಳೆಹಣ್ಣಿಗೆ 442 ರೂಪಾಯಿ ಬಿಲ್​ ಮಾಡಿದ ಘಟನೆ ಇನ್ನೂ ನೆನಪಿನಿಂದ ಮಾಸಿಲ್ಲ. ಅದಾಗಲೇ ಮತ್ತೊಂದು ಪಂಚತಾರಾ ಹೋಟೆಲ್​ ಮೂರು ಮೊಟ್ಟೆಗೆ ಒಂದು ಸಾವಿರಕ್ಕೂ ಹೆಚ್ಚು ಹಣ ಬಿಲ್​ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಈ ಹಿಂದೆ ನಟ ರಾಹುಲ್​ ಬೋಸ್​ ಚಿತ್ರೀಕರಣಕ್ಕೆಂದು ಹೋಗಿ ಪಂಚತಾರಾ ಹೋಟೆಲ್​ನಲ್ಲಿ ಉಳಿದುಕೊಂಡಾಗ ಜಿಮ್​ಗೆ ಹೋಗುವ ಮೊದಲು ಎರಡು ಬಾಳೆಹಣ್ಣು ಕೇಳಿದ್ದರು. ಅದಕ್ಕೆ ಅವರು ಉಳಿದುಕೊಂಡಿದ್ದ ಪಂಚತಾರಾ ಹೋಟೆಲ್​ನವರು 442 ರೂಪಾಯಿ ಬಿಲ್​ ಮಾಡಿದ್ದರು. ಆ ವಿಷಯವನ್ನು ರಾಹುಲ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

Rahul Bose video on bananas
ನಟ ರಾಹುಲ್​ ಬೋಸ್​


ರಾಹುಲ್​ ಬೋಸ್​


ಈ ಘಟನೆ ನಡೆದ ನಂತರ ಕೆಲವು ಪಂಚತಾರಾ ಹೋಟೆಲ್​ಗಳು ಸೀಸನಲ್​ ಹಣ್ಣುಗಳು ತಮ್ಮ ಹೋಟೆಲ್​ಗಳಲ್ಲಿ ಉಚಿತ ಎಂದು ಘೋಷಿಸಿದ್ದವು. ಈ ಘಟನೆ ಇನ್ನೂ ಹಸಿರಾಗಿರುವಾಗಲೇ ಬಾಲಿವುಡ್​ನ ಸಂಗೀತ ನಿರ್ದೇಶಕ ಶೇಖರ್​ ರಾವ್ಜಿಯಾನಿ ಅವರಿಗೂ ಪಂಚತಾರಾ ಹೋಟೆಲೊಂದರಲ್ಲಿ ಇಂತಹದ್ದೇ ಅನುಭವವಾಗಿದೆ.

ಇದನ್ನೂ ಓದಿ: Rishab Shetty: ಮಕ್ಕಳ ದಿನಾಚರಣೆಯಂದೇ ವಿನೂತನವಾಗಿ ಮಗನ ಹೆಸರನ್ನು ರಿವೀಲ್​ ಮಾಡಿದ ನಿರ್ದೇಶಕ ರಿಷಭ್​ ಶೆಟ್ಟಿ ..!

ಶೇಖರ್​ ಗುಜರಾತಿನ ಅಹಮದಬಾದ್​ನಲ್ಲಿರುವ ಪಂಚತಾರಾ ಹೋಟೆಲ್​ವೊಂದರಲ್ಲಿ ಉಳಿದುಕೊಂಡಿದ್ದು, ಅಲ್ಲಿ ರಾತ್ರಿ ಊಟದ ಜತೆಗೆ ಮೂರು ಮೊಟ್ಟೆ ಆರ್ಡರ್​ ಮಾಡಿದ್ದಾರೆ. ಅದಕ್ಕೆ ಹೋಟೆಲ್​ನವರು ಮಾಡಿರುವ ಬಿಲ್​ ಕೇವಲ ಮೊಟ್ಟೆಗೆ 1672 ರೂಪಾಯಿ. ಅದನ್ನು ಶೇಖರ್​ ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಶೇಖರ್​ ಅವರ ಟ್ವೀಟ್​ಗೆ ಸಾಕಷ್ಟು ಮಂದಿ ಪ್ರತಿಕ್ರಿಯಿಸುತ್ತಿದ್ದಾರೆ. ಆದರೆ ಈ ಕುರಿತು ಹೋಟೆಲ್​ನವರು ಮಾತ್ರ ಚಕಾರ ಎತ್ತುತ್ತಿಲ್ಲ.

DeepVeer Anniversary: ಗೋಲ್ಡನ್​ ಟೆಂಪಲ್​ನಲ್ಲಿ ಹಾಟ್​ ಕಪಲ್​ ದೀಪಿಕಾ-ರಣವೀರ್​ ಸಿಂಗ್​: ಇಲ್ಲಿವೆ ಚಿತ್ರಗಳು..!

First published: November 15, 2019, 4:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading