• Home
 • »
 • News
 • »
 • entertainment
 • »
 • ಏನ್ ಕಾಲೇಜ್ ಅದೋ ಮಾರಾಯ.. ಮುನ್ನಿ ಬದ್ನಾಮ್ ಹುಯಿ ಸಾಂಗ್ ಕಲಿತರಷ್ಟೇ ಪಾಸ್ ಮಾಡ್ತಾರಂತೆ..!

ಏನ್ ಕಾಲೇಜ್ ಅದೋ ಮಾರಾಯ.. ಮುನ್ನಿ ಬದ್ನಾಮ್ ಹುಯಿ ಸಾಂಗ್ ಕಲಿತರಷ್ಟೇ ಪಾಸ್ ಮಾಡ್ತಾರಂತೆ..!

ಮುನ್ನಿ ಬದ್ನಾಮ್ ಹಾಡಿನಲ್ಲಿ ಮಲೈಕಾ ಅರೋರಾ.

ಮುನ್ನಿ ಬದ್ನಾಮ್ ಹಾಡಿನಲ್ಲಿ ಮಲೈಕಾ ಅರೋರಾ.

ತಮ್ಮ ಐಟಂ ಸಾಂಗ್ ಲಂಡನ್ ಮ್ಯೂಸಿಕ್ ಶಾಲೆಯ ಪಠ್ಯವಾಗಿರೋದಕ್ಕೆ ನಟಿ ಮಲೈಕಾ ಅರೋರ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಇಸ್ಟಾಗ್ರಾಂನಲ್ಲಿ ವಾವ್ಹ್ ಎಂದು ಬರೆದುಕೊಂಡಿದ್ದಾರೆ.

 • Share this:

  ಮುನ್ನಿ ಬದ್ನಾಮ್ ಹುಯಿ ಡಾರ್ಲಿಂಗ್ ತೇರೆ ಲಿಯೇ.. ಹಿಂದಿ ಚಿತ್ರರಂಗದಲ್ಲಿ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದ ಐಟಂ ಸಾಂಗ್ ಇದು. ನಟ ಸಲ್ಮಾನ್​ ಖಾನ್ ಅಭಿನಯದ ದಬ್ಬಾಂಗ್ ಚಿತ್ರದ ಈ ಹಾಡು ಒಂದು ದಶಕದ ನಂತರವೂ ಕೇಳುಗರನ್ನು ಕುಳಿತಲ್ಲೇ ಕುಣಿಯುವಂತೆ ಮಾಡುತ್ತೆ. ಚಲ್ ಚಯ್ಯ ಚಯ್ಯಾ ಹಾಡಿನ ಖ್ಯಾತಿಯ ಮಲೈಕಾ ಅರೋರ ಮುನ್ನಿಯಾಗಿ ಪಡ್ಡೆಗಳ ನಿದ್ದೆ ಕದ್ದಿದ್ದರು. ರಿಲೀಸ್ ಆಗಿ 11 ವರ್ಷಗಳ ಬಳಿಕ ಈ ಸಾಂಗ್ ಮತ್ತೆ ಸುದ್ದಿಯಲ್ಲಿದೆ.


  ಮುನ್ನಿ ಸಾಂಗ್ ರಿಲೀಸ್ ಆದಾಗ ಸಖತ್ ಕ್ರೇಜ್ ಹುಟ್ಟುಹಾಕಿತ್ತು. ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದ ಮಲೈಕಾ ಆಗ ಮೈದುನನಾಗಿದ್ದ ಸಲ್ಮಾನ್ ಖಾನ್ ಜೊತೆ ಸೊಂಟ ಬಳುಕಿಸಿದ್ದರು. ಮುನ್ನಿ ಬದ್ನಾಮ್ ಮಾತ್ರವಲ್ಲ ಜಂಡುಬಾಂಬ್ ಎಂದು ಹಾಡಿನಲ್ಲಿ ನುಲಿದಿದ್ದು ಸಿನಿಪ್ರಿಯರಿಗೆ ಸಖತ್ ಕಿಕ್ ಕೊಟ್ಟಿತ್ತು. ಹಾಡಿನಲ್ಲಿ ಸಲ್ಮಾನ್ ಮಾತ್ರವಲ್ಲ ನಟ ಸೋನು ಸೂದ್ ಕೂಡ ಇದ್ದಾರೆ.


  ಇದನ್ನು ಓದಿ: ನಾನು ಸಿನಿಮಾ ಇಂಡಸ್ಟ್ರಿ ತೊರೆಯಲು ನಿರ್ಧರಿಸಿದ್ದೆ, ಆದರೆ ಅಪ್ಪನ ಮಾತು ನನ್ನ ಬದುಕು ಬದಲಿಸಿತು: ಅಭಿಷೇಕ್ ಬಚ್ಚನ್


  ಇಂಥ ಸೂಪರ್ ಹಿಟ್ ಸಿನಿಮಾದ ಸೂಪರ್ ಹಿಟ್ ಸಾಂಗ್ ಸದ್ಯ ಮತ್ತೆ ಸುದ್ದಿಯಾಗಿರೋದು ಲಂಡನ್​ನಲ್ಲಿ ಅಂದರೆ ನೀವು ನಂಬಲೇಬೇಕು. ಅಲ್ಲಿನ ಮ್ಯೂಸಿಕ್ ಸ್ಕೂಲ್ ಅಕಾಡೆಮಿಯೊಂದು ಮುನ್ನಿ ಬದ್ನಾಮ್ ಹುಯಿ ಹಾಡನ್ನು ತಮ್ಮ ಪಠ್ಯದಲ್ಲಿ ಸೇರಿಸಿದ್ದಾರಂತೆ. ಬಾಲಿವುಡ್​ನ ಐಟಂ ಸಾಂಗೇ ಅವರಿಗೆ ಬೇಕಿತ್ತಾ ಅಂತ ಮೂಗು ಮುರಿಯಬೇಡಿ. ಇದೊಂದೇ ಹಾಡಲ್ಲ ಸ್ಲಂ ಡಾಗ್ ಮಿಲಿಯನೇರ್ ಚಿತ್ರದ ಜೈಹೋ ಹಾಗೂ ಕಿಶೋರಿ ಅಮೋನ್ಕರ್ ಅವರ ಸಹೇಲಿ ರೇ ಹಾಡನ್ನೂ ಪಠ್ಯದಲ್ಲಿ ಸೇರಿಸಿದ್ದಾರೆ.
  ನಮ್ಮಲ್ಲಿನ ಸಂಗೀತ ಶಾಲೆಗಳಲ್ಲಿ ಶಾಸ್ತ್ರೀಯ ಸಂಗೀತ, ಜಾನಪದ, ಸಿನಿಮಾ ಗೀತೆಗಳಂತೆ ಲಂಡನ್​ನ ಸಂಗೀತ ಶಾಲೆಯನ್ನು ಹಲವು ವಿಧದ ಹಾಡುಗಳನ್ನು ಕಲಿಸಲಾಗುತ್ತೆ. ಭಾರತೀಯ ಸಂಗೀತ ವಿಭಾಗದಲ್ಲಿ ಮುನ್ನಿ ಬದ್ನಾಮ್ ಸೇರಿದಂತೆ ಹಲವು ಹಾಡುಗಳು ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಸಂಗೀತ ಪದವಿಯಲ್ಲಿ ಉತ್ತಮ ಅಂಕಗಳು ಬೇಕಾದಲ್ಲಿ ಅಲ್ಲಿನ ಬ್ರಿಟನ್ನಿಗರು ಮುನ್ನಿ ಬದ್ನಾಮ್ ಹುಯಿ ಹಾಡನ್ನು ಕಲಿಯಲೇಬೇಕು.


  ತಮ್ಮ ಐಟಂ ಸಾಂಗ್ ಲಂಡನ್ ಮ್ಯೂಸಿಕ್ ಶಾಲೆಯ ಪಠ್ಯವಾಗಿರೋದಕ್ಕೆ ನಟಿ ಮಲೈಕಾ ಅರೋರ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಇಸ್ಟಾಗ್ರಾಂನಲ್ಲಿ ವಾವ್ಹ್ ಎಂದು ಬರೆದುಕೊಂಡಿದ್ದಾರೆ.

  • ವರದಿ: ಕಾವ್ಯಾ ವಿ

  Published by:HR Ramesh
  First published: