ಲಾಕ್​ಡೌನ್ ಮುಗಿದ ಬೆನ್ನಲ್ಲೆ ತೆರೆಗೆ ಬರಲು ಸಜ್ಜಾಗಿದೆ ಮುಂದುವರೆದ ಅಧ್ಯಾಯ

ಲಾಕ್​ಡೌನ್ ಪೂರ್ವದಲ್ಲೇ ಈ ಸಿನಿಮಾ ಸೆನ್ಸಾರ್​ ಆಗಲಿದೆ. ಸೆನ್ಸಾರ್ ಮಂಡಳಿ ಕಾರ್ಯ ನಿರ್ವಹಿಸಲು ಆರಂಭಿಸಿದ ಕೂಡಲೆ ಚಿತ್ರವನ್ನು ವೀಕ್ಷಿಸುವ ಭರವಸೆಯಲ್ಲಿದೆ ಚಿತ್ರತಂಡ.

news18-kannada
Updated:May 28, 2020, 4:02 PM IST
ಲಾಕ್​ಡೌನ್ ಮುಗಿದ ಬೆನ್ನಲ್ಲೆ ತೆರೆಗೆ ಬರಲು ಸಜ್ಜಾಗಿದೆ ಮುಂದುವರೆದ ಅಧ್ಯಾಯ
ಮುಂದುವರೆದ ಅಧ್ಯಾಯ ಚಿತ್ರದ ಪೋಸ್ಟರ್.
  • Share this:
ಕೊರೋನಾ ಅಟ್ಟಹಾಸ ತಡೆಯಲು ಥಿಯೇಟರ್​ಗಳನ್ನ ಮುಚ್ಚಲಾಗಿದೆ. ಬೆಳ್ಳಿತೆರೆಯ ಮೇಲಿನ ಸಿನಿಮಾ ಆಟ ನಿಂತು ಈಗಾಗಲೇ ಸುಮಾರು ಮೂರು ತಿಂಗಳು ಕಳೆದಿವೆ. ಶೀಘ್ರದಲ್ಲಿಯೇ ಸಿನಿಮಾ ಮಂದಿರಗಳ ಅಜ್ಞಾತವಾಸ ಕೊನೆಯಾಗಲಿದ್ದು, ಸಿನಿಮಾ ಪ್ರದರ್ಶನಕ್ಕೆ ಸರ್ಕಾರ ಅನುಮತಿ ಕೊಡಲಿದೆ ಎಂಬ ಭರವಸೆಯಲ್ಲಿದೆ ಚಿತ್ರರಂಗ. ಹೀಗಾಗಿ ಚಿತ್ರಮಂದಿರ ತೆರೆದರೆ ಬಿಡುಗಡೆಯಾಗಲು ಸಾಲು ಸಾಲು ಸಿನಿಮಾಗಳಿವೆ. ಈ ಪೈಕಿ 'ಮುಂದುವರೆದ ಅಧ್ಯಾಯ' ಕೂಡ ಒಂದು.

ಕಣಜ ಎಂಟರ್ ಪ್ರೈಸಸ್ ಲಾಂಛನ ದಡಿಯಲ್ಲಿ ನಿರ್ಮಾಣವಾಗಿರುವ, ಬಾಲು ಚಂದ್ರಶೇಖರ್ ನಿರ್ದೇಶನದಲ್ಲಿ ಆದಿತ್ಯ ನಾಯಕರಾಗಿ ನಟಿಸಿರುವ 'ಮುಂದುವರೆದ ಅಧ್ಯಾಯ' ಚಿತ್ರ ಲಾಕ್​ಡೌನ್ ಮುಗಿದು, ಚಿತ್ರ ಬಿಡುಗಡೆಗೆ ಅನುಮತಿ ಸಿಕ್ಕ ಕೂಡಲೆ ತೆರೆಗೆ ಬರಲಿದೆ.

Mahesh Babu: ರಟ್ಟಾಯಿತು ಮಹೇಶ್​ ಬಾಬು ಫಿಟ್ನೆಸ್ ಗುಟ್ಟು: ಇಲ್ಲಿದೆ ವಿಡಿಯೋ

ಲಾಕ್​ಡೌನ್ ಪೂರ್ವದಲ್ಲೇ ಈ ಸಿನಿಮಾ ಸೆನ್ಸಾರ್​ ಆಗಲಿದೆ. ಸೆನ್ಸಾರ್ ಮಂಡಳಿ ಕಾರ್ಯ ನಿರ್ವಹಿಸಲು ಆರಂಭಿಸಿದ ಕೂಡಲೆ ಚಿತ್ರವನ್ನು ವೀಕ್ಷಿಸುವ ಭರವಸೆಯಲ್ಲಿದೆ ಚಿತ್ರತಂಡ. ಈಗಾಗಲೇ ಸಿದ್ದವಾಗಿರುವ ಚಿತ್ರವನ್ನು ಇತ್ತೀಚೆಗೆ ಮಂಜರಿ ಸ್ಟುಡಿಯೋದಲ್ಲಿ ನಾಯಕ ಆದಿತ್ಯ, ನಿರ್ದೇಶಕ ಬಾಲು ಚಂದ್ರಶೇಖರ್, ಹಿನ್ನೆಲೆ ಸಂಗೀತ ನೀಡಿರುವ ಅನೂಪ್ ಸೀಳಿನ್, ಸಂಗೀತ ನೀಡಿರುವ ಜಾನಿ - ನಿತಿನ್, ಛಾಯಾಗ್ರಾಹಕ ದಿಲೀಪ್ ಚಕ್ರವರ್ತಿ, ಸಂಕಲನಕಾರ ಶ್ರೀಕಾಂತ್ ಮತ್ತು ಎಫೆಕ್ಟ್ ರಜನ್ ಅವರು ವೀಕ್ಷಿಸಿದ್ದಾರೆ.

ಚಿತ್ರ ನೋಡಿ ಅಪಾರ ಸಂತಸಪಟ್ಟಿರುವ ಚಿತ್ರತಂಡ, ಲಾಕ್​ಡೌನ್ ಮುಗಿದು, ಯಾವಾಗ ನಮ್ಮ ಚಿತ್ರ ತೆರೆಗೆ ಬರುತ್ತದೊ ಎಂಬ ಕಾತುರದಲಿದ್ದಾರೆ‌.KGF Chapter 2: ಕೆ.ಜಿ.ಎಫ್​ 2 ಚಿತ್ರದ ಕ್ಲೈಮ್ಯಾಕ್ಸ್​ ಲೀಕ್​: ದುಃಖಾಂತ್ಯ ಕಾಣಲಿದೆಯಂತೆ ರಾಕಿಭಾಯ್​ ಕತೆ..!ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಹಾಗೂ ಟ್ರೇಲರ್ ನೋಡುಗರ ಮನ ಗೆದ್ದಿದೆ. ಆದಿತ್ಯ, ಆಶಿಕ ಸೋಮಶೇಖರ್, ಜೈಜಗದೀಶ್, ಮುಖ್ಯಮಂತ್ರಿ ಚಂದ್ರು, ಅಜಯ್ ರಾಜ್, ವಿನಯ್ ಕೃಷ್ಣಸ್ವಾಮಿ, ಸಂದೀಪ್ ಕುಮಾರ್, ಚಂದನ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
First published: May 28, 2020, 4:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading